ಸೆಲೆಬ್ರಿಟಿ ಸೆಕ್ಸ್ ಗೊಂಬೆಗಳಿಗೆ ಭಾರಿ ಬೇಡಿಕೆ!

By Suvarna News  |  First Published Jun 29, 2020, 4:01 PM IST

ಸೆಕ್ಸ್ ಅನುಭವ ಕೊಡುವ ರೋಬೋಟ್‌ಗಳು ಐದಾರು ವರ್ಷಗಳಿಂದಲೂ ಬೇಡಿಕೆಯಲ್ಲಿವೆ. ಅದರಲ್ಲೂ ಕೆಲವು ಸೆಲೆಬ್ರಿಟಿಗಳಂತೆ ಕಾಣುವ ಗೊಂಬೆಗಳಿಗೆ ಭಾರಿ ಬೇಡಿಕೆ.


ಕೊರೋನಾ ವೈರಸ್ ಸೋಂಕು ಹರಡುವ ಆತಂಕದ ಹಿನ್ನೆಲೆಯಲ್ಲಿ ವೇಶ್ಯಾಗೃಹಗಳಿಗೆ ಈಗ ಡಿಮಾಂಡ್ ಇಲ್ಲ. ಹೀಗಾಗಿ ಸೆಕ್ಸ್ ಆಟಿಕೆಗಳಿಗೆ ಕಳೆದ ಮೂರು ತಿಂಗಳಿನಿಂದ ಜಗತ್ತಿನ ನಾನಾ ಕಡೆ ಹೆಚ್ಚು ಬೇಡಿಕೆ ಕಂಡುಬಂದಿತ್ತು. ಹಲವು ಲಕ್ಷ ಕೋಟಿ ಡಾಲರ್ ಮೊತ್ತದ ಈ ಮಾರ್ಕೆಟ್‌ನಲ್ಲಿ ಸೆಕ್ಸ್ ರೋಬಾಟ್‌ಗಳೂ ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗ್ತವೆ. ಅಮೆರಿಕದಲ್ಲಿ ಈ ರೋಬೋಗಳ ಮಾರಾಟ ಹೆಚ್ಚು.  
ಇಂಥ ಸೆಕ್ಸ್ ಡಾಲ್ ಮಾರುಕಟ್ಟೆಯಲ್ಲಿ ಮಾದಕವಾದ ಸೆಲೆಬ್ರಿಟಿಗಳಂತೆ ಕಾಣುವ ಡಾಲ್‌ಗಳಿಗೆ ಯಾವಾಗಲೂ ಹೆಚ್ಚು ಬೇಡಿಕೆ.

ಅಮೆರಿಕದಲ್ಲಿ ಹೀಗೆ ಬೇಡಿಕೆಯಲ್ಲಿರುವ ಸೆಲೆಬ್ರಿಟಿ ಎಂದರೆ ಮರ್ಲಿನ್ ಮನ್ರೋ. ಸಿಕ್ಕಾಪಟ್ಟೆ ಮಂದಿ ಗ್ರಾಹಕರು ಆಕೆಯಂತೆ ಕಾಣಿಸುವ ಡಾಲ್‌ಗಳು ಬೇಕೆಂದು ಕೇಳುತ್ತಾರೆ. ಆದರೆ ನೂರಕ್ಕೆ ನೂರು  ಅಂಥದೇ ರೋಬೋಗಳನ್ನು ಈ ಕಂಪನಿಗಳು ಸೇಲ್ ಮಾಡುವಂತಿಲ್ಲ. ಅದಕ್ಕೆ ಕಾನೂನು ನಿರ್ಬಂಧ ಇದೆ. ಅದಕೆ ಆಯಾ ಸೆಲೆಬ್ರಿಟಿಗಳ ಅಥವಾ ಅವರ ಉತ್ತರಾಧಿಕಾರಿಗಳ ಒಪ್ಪಿಗೆ ಪಡೆಯುವುದು ಅಗತ್ಯ. ಇಂಥ ಒಪ್ಪಿಗೆ ಸಿಗುವುದಿಲ್ಲ. 

Tap to resize

Latest Videos

ಅದಕ್ಕೇ ಕಂಪನಿಗಳು ಈ ಸೆಲೆಬ್ರಿಟಿಗಳನ್ನಹ ಸುಮಾರಾಗಿ ಹೋಲುವ, ಮೈಕಟ್ಟು ಅದೇ ರೀತಿ ಇರುವ ಗೊಂಬೆಗಳನ್ನು ಮಾಡಿ ಮಾರುತ್ತಾರೆ.

ಅಮೆರಿಕದ ಸಂಸ್ಕೃತಿಯಲ್ಲಿ ಮರ್ಲಿನ್ ಮನ್ರೋ ಬಗ್ಗೆ ಒಂದು ಎನಿಗ್ಮಾ, ನಿಗೂಢ ಕುತೂಹಲ ಇದೆ. ಅಮೆರಿಕನ್ ಗಂಡಸರು ಮರ್ಲಿನ್ ಬಗ್ಗೆ ಈಗಲೂ ಯಾವುದೇ ಸುದ್ದಿ ಬಂದರೆ ಮೊದಲು ಅದನ್ನೇ ಓದುತ್ತಾರೆ. ಗಂಡಸರು ತಮ್ಮ ಸಂಗಾತಿಗಳಿಗೆ ಮರ್ಲಿನ್ ಧರಿಸಿದಂಥ ಪೋಷಾಕು ತಂದು ತೊಡಿಸಿ ನೋಡಿ ಉದ್ರೇಕಿತರಾಗುತ್ತಾರೆ. ವಿಟಪುರುಷರು ತಮ್ಮ ಸಂಗಾತಿಗಳ ಮೈ ಮರ್ಲಿನ್ ಥರ ಇರಲಿ ಎಂದು ಹಾರೈಸುತ್ತಾರೆ. ಮರ್ಲಿನ್ ಅರೆ ಬೆತ್ತಲೆ ಫೋಟೋ ಎದುರಿಗಿಟ್ಟುಕೊಂಡು ಸ್ವಯಂ ಸುಖ ಪಡೆದುಕೊಳ್ಳುವ ಪುರುಷ ಪುಂಗವರ ಸಂಖ್ಯೆ ಕೋಟಿ. ಇಂಥಲ್ಲಿ ಆಕೆಯ ಡಾಲ್‌ಗೆ ಬೇಡಿಕೆ ಇದ್ದರೆ ಆಶ್ಚರ್ಯವಿಲ್ಲ.
ಭಾರತದಲ್ಲಿ ಸೆಕ್ಸ್ ಆಟಿಕೆಗಳ‌ ಮಾರುಕಟ್ಟೆ ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಇಲ್ಲೂ ಬಾಲಿವುಡ್ ಸೆಲೆಬ್ರಿಟಿಗಳಂತೆ ಕಾಣುವ ಗೊಂಬೆಗಳಿಗೆ ಡಿಮಾಂಡ್ ಇದೆ. ಆದರೆ ಇಲ್ಲೂ ಅದೇ ಸಮಸ್ಯೆ. ಕೆಲವು ಸೆಕ್ಸಿ ಸೆಲೆಬ್ರಿಟಿಗಳ ಡಾಲ್‌ಗಳಿಗೆ ಬೇಡಿಕೆಯಿದೆ. ಆದರೆ ಅವು ಲಭ್ಯವಿಲ್ಲ. ಅದೇ ಥರ ಕಾಣುವ ಗೊಂಬೆಗಳನ್ನು ಶ್ರೀಮಂತ ಕಸ್ಟಮರ್‌ಗಳು ವಿದೇಶದಿಂದ ತರಿಸಿಕೊಳ್ಳುತ್ತಾರೆ.

#Feelfree: ಸೆಕ್ಸ್ ಮಾಡಿದಾಗ ವೀರ್ಯ ಹೊರಚೆಲ್ಲುತ್ತೆ, ಹೀಗ್ಯಾಕೆ? 

ಸೆಲೆಬ್ರಿಟಿಗಳ ಮೇಲಿನ ರಸಿಕರ ಈ ವ್ಯಾಮೋಹಕ್ಕೆ ಕಾರಣ ಏನಿರಬಹುದು? ಹೆಚ್ಚಿನ ಪುರುಷರು ಸೆಕ್ಸ್ ವೇಳೆ ಒಬ್ಬಳಲ್ಲ ಒಬ್ಬ ಮಾದಕ ನಟಿಯನ್ನು ತಮ್ಮ ಸಂಗಾತಿಯಲ್ಲಿ ಕಲ್ಪಿಸಿಕೊಳ್ಳುತ್ತಾರಂತೆ. ಹಾಗಂತ ಮನಶ್ಶಾಸ್ತ್ರಜ್ಞರು ಹೇಳುತ್ತಾರೆ. ಸ್ತ್ರೀಯರೂ ಕಡಿಮೆ ಏನಿಲ್ಲ. ಅವರೂ ಕಟ್ಟುಮಸ್ತಾದ ಹೀರೋಗಳನ್ನು ತಮ್ಮ ಸಂಗಾತಿಗಳಲ್ಲಿ ಕಾಣಲು ಬಯಸುತ್ತಾರೆ. ತೆರೆಯ ಮೇಲೆ ಅವರು ನಡೆಸುವ ಕ್ರಿಯೆಗಳು, ತಮ್ಮ ಅಪೂರ್ಣ ಬಯಕೆಯ ಪೂರ್ಣ ಅಭಿವ್ಯಕ್ತಿಯಾಗಿ ಇಂಥವರಿಗೆ ಕಾಣುತ್ತವೆ.

undefined

#Feelfree: ಆಫೀಸಲ್ಲೂ ಪೋರ್ನ್‌ ನೋಡ್ತೀನಿ, ಪರವಾಗಿಲ್ವಾ? 

ತನ್ನ ಮನದ ನಾಯಕಿಯ ಮೇಲೆ ಅಧಿಕಾರ ಚಲಾಯಿಸುವ ಬಯಕೆಯೂ ಇದರ ಹಿಂದೆ ಇರುತ್ತದೆ. ಗೊಂಬೆಯನ್ನು ತನ್ನ ಬಯಕೆಗೆ ತಕ್ಕಂತೆ ಮಣಿಸಬಹುದಲ್ಲಾ. ಆದರೆ ಹೆಣ್ಣು ಗೊಂಬೆಗಳಿಗೆ ಇರುವ ಬೇಡಿಕೆ ಗಂಡು ಗೊಂಬೆಗಳಿಗೆ ಇಲ್ಲ. ಪುರುಷನಂತೆ ಹೆಣ್ಣು ತನ್ನ ಕಾಮದ ಮೇಲೆ ಹೆಚ್ಚಿನ ಹೂಡಿಕೆ ಮಾಡಬಯಸುವುದಿಲ್ಲ. ಆಕೆ ಇದ್ದುದರಲ್ಲೇ ಸೃಜನಶೀಲವಾಗಿ ತೃಪ್ತಿ ಪಡೆಯಬಲ್ಲಳು. ಆದರೆ ಭಾರತದಲ್ಲಿ ಸ್ತ್ರೀಯರು ಬಳಸುವ ವೈಬ್ರೇಟರ್‌ಗಳಿಗೆ ಸಾಕಷ್ಟು ಬೇಡಿಕೆ ಇದೆ.

ಈ ಹಾಟ್‌ ಯುವತಿಯ ನಗ್ನ ಯೋಗ ಈಗ ಭಾರಿ ಟ್ರೆಂಡ್ ! 

click me!