ಪ್ರೀವೆಡ್ಡಿಂಗ್ ಶೂಟ್ ವೇಳೆ ವಧುವಿನ ಬೆನ್ನಿಗೆ ಹತ್ತಿಕೊಂಡ ಬೆಂಕಿ: ವೀಡಿಯೋ ವೈರಲ್

Published : Mar 21, 2025, 04:11 PM ISTUpdated : Mar 21, 2025, 04:16 PM IST
ಪ್ರೀವೆಡ್ಡಿಂಗ್ ಶೂಟ್ ವೇಳೆ ವಧುವಿನ ಬೆನ್ನಿಗೆ  ಹತ್ತಿಕೊಂಡ ಬೆಂಕಿ: ವೀಡಿಯೋ ವೈರಲ್

ಸಾರಾಂಶ

ಬೆಂಗಳೂರಿನಲ್ಲಿ ಪ್ರೀವೆಡ್ಡಿಂಗ್ ಶೂಟ್ ವೇಳೆ ಬಣ್ಣದ ಬಾಂಬ್ ಸ್ಫೋಟಗೊಂಡು ವಧು ಗಾಯಗೊಂಡಿದ್ದಾರೆ. ವೀಡಿಯೋದಲ್ಲಿ ವಧುವಿನ ಬೆನ್ನಿಗೆ ಬೆಂಕಿ ತಗುಲಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಮದುವೆ ಫೋಟೋಶೂಟ್‌ಗಳಲ್ಲಿ ವೀಡಿಯೋ ಫೋಟೋ ಚೆನ್ನಾಗಿ ಬರಲಿ ಎಂದು ಏನೇನೋ ಬಳಸುವುದು ಸಾಮಾನ್ಯವಾಗಿದೆ. ಅದೇ ರೀತಿ ಇಲ್ಲೊಂದು ಕಡೆ ಮದುವೆ ದಿನವೇ ಫೋಟೋ/ವೀಡಿಯೋ ಶೂಟ್ ವೇಳೆ ಫೋಟೋ ಚೆನ್ನಾಗಿ ಬರಲಿ ಎಂದು ಇಟ್ಟ ಬಣ್ಣದ ಬಾಂಬ್‌ ಸ್ಪೋಟಗೊಂಡು ವಧು ಗಂಭೀರ ಗಾಯಗೊಂಡಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೆನಡಾ ಮೂಲದ ವಧು ಗಾಯಗೊಂಡವರು. ಇವರು ತಮ್ಮ ಮದುವೆಗಾಗಿ ಕೆನಡಾದಿಂದ ಬೆಂಗಳೂರಿಗೆ ಬಂದಿದ್ದರು. ಆದರೆ ತಮ್ಮ ಮದುವೆಯ ವಿಶೇಷ ದಿನವೇ ಬಣ್ಣದ ಬಾಂಬ್ ಸಿಡಿದು ಗಾಯಗೊಂಡಿದ್ದಾರೆ. 

ಲಂಡನ್‌ನಲ್ಲಿ ನೆಲೆಸಿದ್ದ ಭಾರತೀಯ ಮೂಲದ ಜೋಡಿಯೊಂದು ತಮ್ಮ ಮದುವೆಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ಮದುವೆ ದಿನ ಎಲ್ಲರಂತೆಯೇ ಅವರು ತಮ್ಮ ಮದುವೆಯ ಅದ್ಭುತ ಕ್ಷಣಗಳು ತುಂಬಾ ಸೊಗಸಾಗಿ ಮೂಡಿ ಬರೆಲೆಂದು ಬಣ್ಣದ ಬಾಂಬ್‌ಗಳನ್ನು ಇಟ್ಟಿದ್ದಾರೆ. ಆದರೆ ವೀಡಿಯೋ ಶೂಟ್ ವೇಳೆ ಸ್ಪೋಟಿಸಿದ್ದು, ವಧುವಿನ ಬೆನ್ನಿಗೆ ಬೆಂಕಿ ಬಿದ್ದಿದೆ. ಈ ಘಟನೆಯನ್ನು ವಧು ಹಾಗೂ ವರರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ವೈರಲ್ ಆಗಿದೆ. 

ಹದ್ದು ಮೀರಿದ ಪ್ರಿ ವೆಡ್ಡಿಂಗ್ ಶೂಟ್ ವಿಡಿಯೋಗೆ ಸುಸ್ತಾದ ಸೋಶಿಯಲ್ ಮೀಡಿಯಾ!

ವಿಡಿಯೋದಲ್ಲಿ ವಧುವನ್ನು ಎತ್ತಿಕೊಂಡು ವರ ಪೋಸ್ ಕೊಡುತ್ತಿದ್ದ ವೇಳೆ ಬಣ್ಣದ ಬಾಂಬ್ ಸ್ಫೋಟಿಸಿದ್ದು, ಸೀದಾ ವಧುವಿನ ಬೆನ್ನ ಮೇಲೆ ಕಿಡಿ ಬಿದ್ದು ಗಾಯ ಆಗಿದೆ ಇದರಿಂದ ಮದುವೆಯ ದಿನದ ಬಟ್ಟೆ ಸುಟ್ಟಿದಲ್ಲದೇ ಬೆನ್ನಿಗೂ ಗಾಯವಾಗಿದೆ.  ವೀಡಿಯೋ ನೋಡಿದ ಅನೇಕರು ದಿಗ್ಭ್ರಮೆ ವ್ಯಕ್ತಪಡಿಸಿದ್ದು ಹಲವು ಕಾಮೆಂಟ್ ಮಾಡಿದ್ದಾರೆ. ಒಂದು ಅದ್ಭುತವಾದ ಶಾಟ್‌ಗಾಗಿ ಹಿನ್ನೆಲೆಯಲ್ಲಿ ಈ ಸುಂದರವಾದ ಬಣ್ಣದ ಬಾಂಬ್‌ಗಳನ್ನು ಸಿಡಿಸುವುದು ಯೋಜನೆಯಾಗಿತ್ತು, ಆದರೆ ಅದು ಸರಿಯಾಗಿ ಕೆಲಸ ಮಾಡದೆ ನಮ್ಮ ಮೇಲೆ  ಹಾರಿಸಲ್ಪಟ್ಟಿತ್ತು. ನನ್ನ ಮದುವೆಯ ದಿನವೇ ನನಗೆ ಸುಟ್ಟ ಗಾಯವಾಯ್ತು. ಇವಿಲ್ ಐ ಎಂಬುದು ಇದೆ ಎಂಬುದಕ್ಕೆ ಇದೊಂದು ಸಾಕ್ಷಿ  ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ. 

ಆಕಾಶದಲ್ಲಿ ಬರ್ತ್‌ಡೇಯಂತೆ! ಯೂಟ್ಯೂಬಲ್ಲಿ ವ್ಯೂಸ್ ಬರೋಕೆ ಏನೇನು ಮಾಡ್ತಾರೆ ನೋಡಿ!

viaparadise ಎಂಬ ಇನ್ಸ್ಟಾಗ್ರಾಮ್‌ ಪೇಜ್‌ನಿಂದ ಈ ವೀಡಿಯೋ ಪೋಸ್ಟ್‌ ಮಾಡಲಾಗಿದ್ದು,  ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಬೆಂಕಿಯ ಮೇಲೆ ನಿಂತು ದೃಷ್ಟಿಯ ಬಗ್ಗೆ ಏಕೆ ಮಾತನಾಡುತ್ತೀರಿ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಇದು ದೃಷ್ಟಿ ಅಲ್ಲ ಸುರಕ್ಷಿತವಾದ ಕ್ರಮಗಳನ್ನು ನೀವು ಕೈಗೊಂಡಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಇವಿಲ್ ಐ ಅಲ್ಲ ಮೂರ್ಖತನ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌