ಡಿವೋರ್ಸ್ ಜೀವನಾಂಶ ಹೇಗೆ ನಿರ್ಧಾರವಾಗುತ್ತೆ? ಪುರುಷರಿಗೂ ಸಿಗುತ್ತಾ ಹಣ?

ದಂಪತಿಗೆ ಡಿವೋರ್ಸ್ ನೀಡುವ ಸಮಯದಲ್ಲಿ ಕೋರ್ಟ್ ಜೀವನಾಂಶದ ಮೊತ್ತವನ್ನು ನಿರ್ಧರಿಸುತ್ತದೆ. ಯಾರು, ಎಷ್ಟು ಹಣವನ್ನು ಯಾರಿಗೆ ನೀಡಬೇಕು ಎಂಬುದನ್ನು ಹೇಳುತ್ತದೆ. ಜೀವನಾಂಶ ನಿರ್ಧರಿಸುವ ಮಾನದಂಡ ಯಾವುದು? 
 

How Alimony is Decided in Divorce Cases

ಹಾಲಿವುಡ್ ಇರಲಿ ಇಲ್ಲ ಬಾಲಿವುಡ್ ಇರಲಿ, ಯಾವುದೇ ಸೆಲೆಬ್ರಿಟಿ ಜೋಡಿ ಡಿವೋರ್ಸ್ (Celebrity couple divorces) ತೆಗೆದುಕೊಳ್ತಿದ್ದಾರೆ ಎನ್ನುವ ಸುದ್ದಿ ಬರ್ತಿದ್ದಂತೆ ಮುಖ್ಯವಾಗಿ ಚರ್ಚೆಗೆ ಬರೋದು ಜೀವನಾಂಶ. ಎಷ್ಟು ಜೀವನಾಂಶ (alimony)ವನ್ನು ಪತಿ, ಪತ್ನಿಗೆ ನೀಡಿದ್ದಾನೆ ಎಂಬ ಬಗ್ಗೆ ಸುದ್ದಿಯಾಗುತ್ತದೆ. ಸದ್ಯ ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಜೀವನಾಂಶದ ವಿಷ್ಯ ಚರ್ಚೆಯಲ್ಲಿದೆ. ಮಾರ್ಚ್ 20ರಂದು ಇಬ್ಬರೂ ಅಧಿಕೃತವಾಗಿ ಬೇರೆ ಆಗಿದ್ದಾರೆ. ಚಹಲ್, ಧನಶ್ರೀಗೆ 4.75 ಕೋಟಿ ಹಣವನ್ನು ಜೀವನಾಂಶದ ರೂಪದಲ್ಲಿ ನೀಡಲಿದ್ದಾರೆ. ಸೆಲೆಬ್ರಿಟಿಗಳು ಕೋಟಿ ಲೆಕ್ಕದಲ್ಲಿ ಸಂಗಾತಿಗೆ ಜೀವನಾಂಶ ನೀಡ್ತಾರೆ.  ಕೋರ್ಟ್ ಜೀವನಾಂಶ ಹೇಗೆ ನಿರ್ಧಾರ ಮಾಡುತ್ತೆ ಎನ್ನುವ ಪ್ರಶ್ನೆಗೆ ಇಂದು ಉತ್ತರ ನೀಡ್ತೇವೆ.

ಹೇಗೆ ನಿರ್ಧಾರವಾಗುತ್ತೆ  ಡಿವೋರ್ಸ್ ಜೀವನಾಂಶ? : ಭಾರತೀಯ ಕಾನೂನಿನಲ್ಲಿ ವಿಚ್ಛೇದನದ ಸಂದರ್ಭದಲ್ಲಿ ಜೀವನಾಂಶ ಪಾವತಿಸಲು ಯಾವುದೇ ಸ್ಥಿರ ಸೂತ್ರವಿಲ್ಲ. ಜೀವನಾಂಶವನ್ನು ನಿರ್ಧರಿಸುವಾಗ ಅನೇಕ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅದರ ಆಧಾರದ ಮೇಲೆ ನ್ಯಾಯಾಲಯವು ಮೊತ್ತವನ್ನು ನಿರ್ಧರಿಸುತ್ತದೆ. ಜೀವನಾಂಶವನ್ನು ನಿರ್ಧರಿಸುವಾಗ, ಪತಿ ಮತ್ತು ಪತ್ನಿಯ ಆರ್ಥಿಕ ಸ್ಥಿತಿ, ಅವರ ಗಳಿಕೆಯ ಸಾಮರ್ಥ್ಯ ಮುಂತಾದ ಹಲವಾರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. 

Latest Videos

7 ತಿಂಗಳು ಆನ್ಲೈನ್‌ ಡೇಟಿಂಗ್‌ ಮಾಡಿದ್ದ ಯುವಕನಿಗೆ ಗೊತ್ತಾಯ್ತು ಘೋರ ಸತ್ಯ, ಚಾಟ್‌ ಮಾಡಿದ್ದು ಅವಳು !

ಉದಾಹರಣಗೆ ಒಬ್ಬ ಮಹಿಳೆ 15 ವರ್ಷದಿಂದ ಗೃಹಿಣಿಯಾಗಿದ್ದು, ಆಕೆ ಯಾವುದೇ ಉದ್ಯೋಗ ಮಾಡ್ತಿಲ್ಲ, ತನ್ನ ಮಕ್ಕಳಿಗಾಗಿ ವೃತ್ತಿ ಜೀವನದಿಂದ ದೂರವಿದ್ದಾಳೆ. ಆಕೆ ಪತಿ ಬ್ಯುಸಿನೆಸ್ ಮಾಡ್ತಿದ್ದಾನೆ ಎಂದಾಗ, ಪತಿಯ ಆದಾಯ ಹಾಗೂ ಪತ್ನಿಗೆ ಜೀವನ ನಡೆಸಲು ಎಷ್ಟು ಹಣದ ಅಗತ್ಯವಿದೆ ಎಂಬುದನ್ನು ಲೆಕ್ಕ ಹಾಕಿ ಜೀವನಾಂಶದ ಮೊತ್ತ ಘೋಷಿಸುತ್ತದೆ. 

ನ್ಯಾಯಾಲಯವು ಎರಡೂ ಪಕ್ಷಗಳ ಆದಾಯ,  ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ, ವೈಯಕ್ತಿಕ ವೆಚ್ಚಗಳು ಮತ್ತು ಅವಲಂಬಿತರ ಜವಾಬ್ದಾರಿಗಳು ಸೇರಿದಂತೆ ಹಲವಾರು ಅಂಶಗಳನ್ನು ಪರಿಗಣಿಸುತ್ತದೆ. ಮದುವೆಯ ಸಮಯದಲ್ಲಿ ಹೆಂಡತಿ ಅನುಭವಿಸುವ ಜೀವನದ ಗುಣಮಟ್ಟವನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.  ಉದಾಹರಣೆಗೆ, ಒಬ್ಬ ಪತಿ ತಿಂಗಳಿಗೆ  1,00,000 ಗಳಿಸ್ತಿದ್ದಾನೆ,  ಪತ್ನಿ ಕೂಡ ತಿಂಗಳಿಗೆ 1,00,000 ರೂಪಾಯಿ ಗಳಿಸ್ತಿದ್ದಾಳೆ. ಅಂದ್ರೆ ಇಬ್ಬರೂ ಒಂದೇ ರೀತಿಯ ಆರ್ಥಿಕ ಸ್ಥಿತಿಯನ್ನು ಹೊಂದಿದ್ದಾರೆ. ಈ ಸಂದರ್ಭದಲ್ಲಿ ಜೀವನಾಂಶದ ಅಗತ್ಯವಿರುವುದಿಲ್ಲ. ಆದಾಗ್ಯೂ, ಒಬ್ಬ ಸಂಗಾತಿಯು ಮಕ್ಕಳನ್ನು ನೋಡಿಕೊಳ್ಳುವಂತಹ ಹೆಚ್ಚಿನ ಆರ್ಥಿಕ ಹೊರೆಯನ್ನು ಹೊಂದಿದ್ದರೆ, ನ್ಯಾಯಾಲಯವು ಹಣಕಾಸಿನ ಸಹಾಯವನ್ನು ಸೂಚಿಸುತ್ತದೆ. ಈ ವೇಳೆ ಇಬ್ಬರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಏನು, ಹೆಂಡತಿ ಮತ್ತು ಅವಲಂಬಿತ ಮಕ್ಕಳ ಅಗತ್ಯತೆಗಳೇನು, ಇಬ್ಬರೂ ಉದ್ಯೋಗದಲ್ಲಿದ್ದಾರೆಯೇ ಎಂಬುದನ್ನು ನೋಡಲಾಗುತ್ತದೆ. ಅವರ ಅರ್ಹತೆಗಳು ಏನೆಂಬುದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದಲ್ಲದೆ, ಅರ್ಜಿದಾರರ ಸ್ವತಂತ್ರ ಆದಾಯ ಎಷ್ಟು, ಅವರು ಈಗಾಗಲೇ ಎಷ್ಟು ಆಸ್ತಿಯನ್ನು ಹೊಂದಿದ್ದಾರೆ. ಜೀವನಾಂಶವನ್ನು ನಿರ್ಧರಿಸುವಾಗ ಕೆಲಸ ಮಾಡದ ಸಂಗಾತಿಯು ಕಾನೂನು ಪ್ರಕ್ರಿಯೆಗೆ ಖರ್ಚು ಮಾಡಿದ ಮೊತ್ತ ಎಷ್ಟು ಎಂಬುದನ್ನು ಕೂಡ ಲೆಕ್ಕ ಹಾಕಲಾಗುತ್ತದೆ. ಗಂಡನಿಗೆ ಸಾಲವಿದ್ದರೆ, ಇದನ್ನು ಸಹ ಕಾನೂನು ನಿರ್ಧಾರದ ಭಾಗವಾಗಿ ಸೇರಿಸಬಹುದು.

ಸರ್ಕಾರಿ ಉದ್ಯೋಗ ಕೊಡಿಸೋದಾಗಿ ಪತಿಗೇ ನಾಮ ಹಾಕಿದ್ಲು: ಸಿಕ್ಕಿಬೀಳ್ತೇನೆಂದು ವರದಕ್ಷಿಣೆ ಕೇ

ಪುರುಷರೂ ಜೀವನಾಂಶಕ್ಕೆ ಅರ್ಹರು? : ಹೆಚ್ಚಿನ ವಿಚ್ಛೇದನ ಪ್ರಕರಣಗಳಲ್ಲಿ, ಹೆಂಡತಿಯರು ಆರ್ಥಿಕ ಬೆಂಬಲವನ್ನು ಪಡೆಯುತ್ತಾರೆ. ಆದರೆ ಭಾರತೀಯ ಕಾನೂನು ಪುರುಷರಿಗೂ ಜೀವನಾಂಶವನ್ನು ಪಡೆಯುವ ಹಕ್ಕನ್ನು ನೀಡುತ್ತದೆ. 1955 ರ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24 ಮತ್ತು 25 ರ ಅಡಿಯಲ್ಲಿ, ಪತಿ ಜೀವನಾಂಶವನ್ನು ಕೇಳಬಹುದು. ಆದ್ರೆ ಬೆರಳೆಣಿಕೆ ಸಂದರ್ಭದಲ್ಲಿ ಮಾತ್ರ ಪತಿಗೆ ಜೀವನಾಂಶ ಸಿಗುತ್ತದೆ. ಇದಕ್ಕಾಗಿ, ಪತಿಯು ಕೆಲವು ನಿರ್ದಿಷ್ಟ ಕಾರಣಕ್ಕಾಗಿ ಹೆಂಡತಿಯ ಮೇಲೆ ಆರ್ಥಿಕವಾಗಿ ಅವಲಂಬಿತನಾಗಿದ್ದನೆಂದು ಸಾಬೀತುಪಡಿಸಬೇಕಾಗುತ್ತದೆ.  

vuukle one pixel image
click me!