ಮದರಂಗಿ ಹಾಕಿಸಿಕೊಂಡು ಬರುವೆ ಅಂತ ಬ್ಯೂಟಿಪಾರ್ಲರ್‌ಗೆ ಹೋದ ವಧು ನಾಪತ್ತೆ

Published : Apr 18, 2025, 04:03 PM ISTUpdated : Apr 18, 2025, 04:18 PM IST
ಮದರಂಗಿ ಹಾಕಿಸಿಕೊಂಡು ಬರುವೆ ಅಂತ ಬ್ಯೂಟಿಪಾರ್ಲರ್‌ಗೆ ಹೋದ ವಧು ನಾಪತ್ತೆ

ಸಾರಾಂಶ

ಮದುವೆಗೆ ದಿನ ಮೊದಲು ವಧುವೊಬ್ಬಳು ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಮಂಗಳೂರಿನ ಬೋಳಾರ್‌ನಲ್ಲಿ ನಡೆದಿದೆ. 22 ವರ್ಷದ ಪಲ್ಲವಿ ಎಂಬ ವಧುವಿನ ಮದುವೆ ಏಪ್ರಿಲ್ 16 ರಂದು ನಿಗದಿಯಾಗಿತ್ತು.

ಮಂಗಳೂರು: ಮದುವೆಗೆ ದಿನ ಮೊದಲು ವಧುವೊಬ್ಬಳು ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಮಂಗಳೂರಿನ ಬೋಳಾರ್‌ನಲ್ಲಿ ನಡೆದಿದೆ. 22 ವರ್ಷದ ಪಲ್ಲವಿ ಎಂಬ ವಧುವಿನ ಮದುವೆ ಏಪ್ರಿಲ್ 16 ರಂದು ನಿಗದಿಯಾಗಿತ್ತು. ಆದರೆ ಮದರಂಗಿ ಶಾಸ್ತ್ರದ ದಿನವೇ ಆಕೆ ಬ್ಯೂಟಿಪಾರ್ಲರ್‌ಗೆ ಹೋಗಿ ಮೆಹಂದಿ ಹಾಕಿಸಿಕೊಂಡು ಬರುವುದಾಗಿ ತನ್ನ ಅಮ್ಮನಿಗೆ ಹೇಳಿ ಮನೆಯಿಂದ ಒಬ್ಬಳೇ ಹೊರಗೆ ಹೋದವಳು ಮತ್ತೆ ವಾಪಸ್ ಬಂದಿಲ್ಲ. ಇದರಿಂದಾಗಿ ವಧು ಹಾಗೂ ವರನ ಮನೆಯವರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಏಪ್ರಿಲ್ 15ರಂದು ಈ ಘಟನೆ ನಡೆದಿದೆ. 

ಆಕೆಯ ಫೋನ್‌ಗೆ ಕರೆ ಮಾಡಿದರೆ ಫೋನ್ ಸ್ವಿಚ್ಆಫ್ ಎಂದು ಬರುತ್ತಿದೆ. ಪಲ್ಲವಿಯ ಒಪ್ಪಿಗೆಯ ಮೇರೆಗೆಯೇ ಈ ಮದುವೆಯನ್ನು ನಿಗದಿ ಮಾಡಲಾಗಿತ್ತು. ಎಲ್ಲವೂ ಸರಿಯಾಗಿದ್ದರೆ ಏಪ್ರಿಲ್ 16 ರಂದು ಮದುವೆ ನಡೆಯಬೇಕಿತ್ತು. ಆದರೆ ವಧು ಮದುವೆಗೆ ದಿನ ಮೊದಲು ನಾಪತ್ತೆಯಾಗಿರುವುದು ಆಕೆಯ ಕುಟುಂಬದವರು ನೆಂಟರು ಹಾಗೂ ವರನ ಕಡೆಯವರಿಗೆ ತೀವ್ರ ಆಘಾತವುಂಟು ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿದ್ದು, ಆಕೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. 

ಭಾವಿ ಅಳಿಯನ ಜೊತೆ ಓಡಿ ಹೋದ ಅತ್ತೆ ಪೊಲೀಸರಿಗೆ ಶರಣು: ಠಾಣೆಯಲ್ಲಿ ಆಕೆ ಹೇಳಿದ್ದೇನು?

22 ವರ್ಷದ ಯುವತಿ 5 ಅಡಿ ಎತ್ತರವಿದ್ದು, ಶ್ವೇತ ವರ್ಣವನ್ನು ಹೊಂದಿದ್ದಾರೆ. ಉದ್ದನೇಯ ತಲೆಕೂದಲು ಇದ್ದು, ಕನ್ನಡ, ತುಳು, ಇಂಗ್ಲೀಷ್, ಹಿಂದಿ ಭಾಷೆಯನ್ನು ಮಾತನಾಡುತ್ತಾರೆ. ಈಕೆಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಿದರೆ ತಿಳಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಇದು ಅವರ ಸಮುದಾಯವನ್ನು ತೀವ್ರ ಚಿಂತೆಗೀಡು ಮಾಡಿದ್ದು,  ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಆಕೆ ಆಕೆಯ ಇಚ್ಚೆಯಂತೆಯೇ ಹೋಗಿರಬಹುದೇ ಅಥವಾ ಇದರ ಹಿಂದೆ ಬೇರೆನಾದರೂ ಕೈವಾಡ ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. 



ಮದುವೆಗೆ ಕೆಲವೇ ದಿನಗಳಿರುವಾಗ ಭಾವಿ ಅಳಿಯನ ಜೊತೆ ಓಡಿ ಹೋದ ಅತ್ತೆ
ಮದುವೆಗೆ ದಿನಗಳಿರುವಾಗ ಮದುಮಗಳು ಪ್ರಿಯಕರನೊಂದಿಗೆ ಓಡಿ ಹೋದಂತಹ ಹಲವು ಘಟನೆಗಳನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ತದ್ವಿರುದ್ಧವಾದ ಘಟನೆಯೊಂದು ನಡೆದಿದೆ. ಮಗಳ ಮದುವೆಗೆ ಇನ್ನೇನು 10 ದಿನಗಳಿವೇ ಎನ್ನುವಾಗ ವಧುವಿನ ತಾಯಿಯೊಬ್ಬಳು ಭಾವಿ ಅಳಿಯನ ಜೊತೆ ಓಡಿ ಹೋದಂತಹ ವಿಲಕ್ಷಣವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದರಿಂದ ಮಗಳು ಹಾಗೂ ಮನೆಯವರೆಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಶಿವಾನಿ ಎಂಬ ಯುವತಿಯ ಮದುವೆಗೆ ಇನ್ನೇನು 10 ದಿನಗಳಿದ್ದವು. ಮದುವೆಯ ಆಮಂತ್ರಣ ಪತ್ರಿಕೆಯನ್ನು ಎಲ್ಲೆಡೆ ಹಂಚಿಯಾಗಿತ್ತು. ಆದರೆ ಅಷ್ಟರಲ್ಲಿಯೇ ವಧು ಶಿವಾನಿಯ ತಾಯಿ ಕುಟುಂಬದ ಮರ್ಯಾದೆ ಕಳೆಯುವ ಕೆಲಸ ಮಾಡಿದ್ದಾಳೆ. ತನ್ನ ಮಗಳಿಗೆ ಗಂಡನಾಗಬೇಕಿದ್ದ ಭಾವಿ ಅಳಿಯನ ಜೊತೆ ಆಕೆ ಓಡಿ ಹೋಗಿದ್ದಾಳೆ. 

ಉತ್ತರ ಪ್ರದೇಶ ರಾಜ್ಯದ ಅಲಿಘರ್ ಜಿಲ್ಲೆಯ ಮದ್ರಕ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತನ್ನ ತಾಯಿ ಅನಿತಾ ಆಕೆಯ ಭಾವಿ ಪತಿ(ಅಳಿಯ) ಜೊತೆ ಓಡಿ ಹೋಗಿದ್ದಾಳೆ. ಬರೀ ಓಡಿ ಹೋಗಿದ್ದು, ಮಾತ್ರವಲ್ಲ, ಮಗಳ ಮದುವೆಗೆಂದು ಇರಿಸಿದ್ದ ಹಣ ಹಾಗೂ ಜ್ಯುವೆಲ್ಲರಿಯನ್ನು ಸಹ ಆಕೆ ಮನೆಯಿಂದ ಎತ್ತಿಕೊಂಡು ಹೋಗಿದ್ದಾಳೆ ಎಂದು ವಧು ಶಿವಾನಿ ಅವಲೊತ್ತುಕೊಂಡಿದ್ದಾರೆ. ಮನೆಯಲ್ಲಿದ್ದ ಮೂರುವರೆ ಲಕ್ಷಕ್ಕಿಂತಲೂ ಅಧಿಕ ನಗದು ಹಾಗೂ 5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಆಕೆ ಹೊತ್ತೊಯ್ದಿದ್ದಾಳೆ ಎಂದು ಶಿವಾನಿ ದೂರಿದ್ದರು.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ತಿಂಗಳಲ್ಲಿ ಹುಟ್ಟಿದ ಹುಡುಗಿಗೆ ಈ ರೀತಿಯ ಗಂಡ ಸಿಗುತ್ತಾನೆ
ಈ 4 ರಾಶಿ ಜನಗಳೊಂದಿಗೆ ಜಾಗರೂಕರಾಗಿರಿ, ಅವರು ನಿಮ್ಮ ಮನಸ್ಸಿನಲ್ಲಿ ಏನಿದೆ ಎಂದು ಓದುತ್ತಾರೆ