ತಾನು ಡೇಟ್‌ ಮಾಡ್ತಿರೋದು 26ರ ಹುಡುಗಿ ಅಲ್ಲ 48ರ ಆಂಟಿ ಅಂತ ತಿಳಿದು ಗೋಳಾಡಿದ ಯುವಕ

Published : Apr 18, 2025, 01:16 PM ISTUpdated : Apr 18, 2025, 01:18 PM IST
ತಾನು ಡೇಟ್‌ ಮಾಡ್ತಿರೋದು 26ರ ಹುಡುಗಿ ಅಲ್ಲ 48ರ ಆಂಟಿ ಅಂತ ತಿಳಿದು ಗೋಳಾಡಿದ ಯುವಕ

ಸಾರಾಂಶ

ಇಲ್ಲೊಬ ವ್ಯಕ್ತಿಗೆ ತಾನು 4 ವರ್ಷಗಳಿಂದ ಡೇಟಿಂಗ್ ಮಾಡುತಿರುವ ಹುಡುಗಿ 27 ವರ್ಷದ ಯುವತಿ ಅಲ್ಲ, 48 ವರ್ಷ ಅಂಟಿ ಎಂಬುದು 4 ವರ್ಷಗಳ ಬಳಿಕ ಗೊತ್ತಾಗಿ ಶಾಕ್ ಆಗಿದ್ದಾನೆ. ಈ ವಿಚಾರವನ್ನು ಆತನೇ ಸ್ವತಃ ರೆಡ್ಡಿಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾನೆ. 

ಇತ್ತೀಚೆಗೆ ಜನ ಹೊರಗೆ ಭೇಟಿಯಾಗುವುದಕ್ಕಿಂತಲೂ ಆನ್‌ಲೈನ್‌ನಲ್ಲಿ ಮೀಟಿಂಗೂ ಡೇಟಿಂಗ್‌ ಮಾಡ್ತಿರ್ತಾರೆ. ಅನೇಕರಿಗೆ ಇತ್ತೀಚೆಗೆ ಬಾಳ ಸಂಗಾತಿಯೂ ಆನ್‌ಲೈನ್‌ ಮೂಲಕ ಪರಿಚಯವಾಗಿ ವಿವಾಹವಾದ ಘಟನೆಗಳು ನಡೆದಿವೆ. ಯುವ ಸಮೂಹವನ್ನೇ ಟಾರ್ಗೆಟ್ ಮಾಡಿಕೊಂಡು ಡೇಟಿಂಗ್ ಆಪ್‌ಗಳು ಹುಟ್ಟಿಕೊಂಡಿದ್ದು, ಯುವ ಸಮೂಹ ಇವುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಹೀಗೆ ಡೇಟಿಂಗ್ ಮಾಡುವ ವೇಳೆ ಸುಳ್ಳು ಹೇಳಿದರೆ ತಿಳಿದುಕೊಳ್ಳುವುದು ಹೇಗೆ ಸಾಮಾನ್ಯವಾಗಿ ಒಂದೇ ಕೋಣೆಯಲ್ಲಿ ಬದುಕು ಹಂಚಿಕೊಂಡವರಿಗೂ ಕೆಲವೊಮ್ಮೆ ತಮ್ಮ ಪಾರ್ಟನರ್ ಮೋಸ ಮಾಡ್ತಿರುವುದು ತಿಳಿಯುವುದಕ್ಕೆ ಬಹಳ ಸಮಯ ಬೇಕಾಗುತ್ತದೆ ಹೀಗಿರುವಾಗ ಈ ಆನ್‌ಲೈನ್ ಡೇಟಿಂಗ್‌ ಕತೆ ಬಿಡಿ ಯಾಕೆ ಇಷ್ಟೊಂದು ಪುರಾಣ ಅಂತನಾ ಇಲ್ಲೊಬ ವ್ಯಕ್ತಿಗೆ ತಾನು 4 ವರ್ಷಗಳಿಂದ ಡೇಟಿಂಗ್ ಮಾಡುತಿರುವ ಹುಡುಗಿ 27 ವರ್ಷದ ಯುವತಿ ಅಲ್ಲ, 48 ವರ್ಷ ಅಂಟಿ ಎಂಬುದು 4 ವರ್ಷಗಳ ಬಳಿಕ ಗೊತ್ತಾಗಿ ಶಾಕ್ ಆಗಿದ್ದಾನೆ. ಈ ವಿಚಾರವನ್ನು ಆತನೇ ಸ್ವತಃ ರೆಡ್ಡಿಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾನೆ. 

ಮಹಿಳೆ ತಾನು ಏಪ್ರಿಲ್‌  1998ರಲ್ಲಿ ಜನಿಸಿದೆ ಎಂದು  ಈತನಿಗೆ ಸುಳ್ಳು ಹೇಳಿದ್ದಳಂತ ಆದರೆ ಇತ್ತೀಚೆಗೆ ಆಕೆಯ ಪಾಸ್ಪೋರ್ಟ್‌ ವಿವರ ನೋಡಿದ ಆತನಿಗೆ ತನ್ನ ಜೊತೆ ಇರೋದು 27 ವರ್ಷದ ಯುವತಿ ಅಲ್ಲ 48 ವರ್ಷದ ಮಹಿಳೆ ಎಂಬುದು ಗೊತ್ತಾಗಿ ಆಘಾತವಾಗಿದೆ. ಆಕೆಯ ಲ್ಯಾಪ್‌ಟ್ಯಾಪ್‌ ನೋಡಿದಾಗ ಅಲ್ಲಿ ಆಕೆಯ ಪಾಸ್ಪೋರ್ಟ್ ಮಾಹಿತಿಯೂ ಸಿಕ್ಕಿದ್ದು, ಅದರಲ್ಲಿ ಆಕೆ 1977ರಲ್ಲಿ ಜನಿಸಿದ್ದಾಳೆ ಎಂಬ ವಿವರ ನೋಡಿ ಆತ ಆಘಾತಗೊಂಡಿದ್ದಾರೆ.

ಮಕ್ಕಳ ಸೈನ್ಯ ಸೃಷ್ಟಿಸುವುದೇ ಪ್ಲಾನ್, ಜಪಾನ್ ಮಹಿಳೆಗೆ ವೀರ್ಯ ಕಳುಹಿಸಿದ ಎಲಾನ್ ಮಸ್ಕ್

ನಾನು ನನ್ನ ಗೆಳತಿಯೊಂದಿಗೆ 4 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದೇನೆ, ಮತ್ತು ಅವಳು ಯಾವಾಗಲೂ ಏಪ್ರಿಲ್ 1998 ರಲ್ಲಿ ಜನಿಸಿದ್ದಾಳೆಂದು ಹೇಳಿಕೊಳ್ಳುತ್ತಿದ್ದಳು, ಆದರೆ ಅವಳ ಲ್ಯಾಪ್‌ಟಾಪ್‌ನಲ್ಲಿ ಅವಳ ಪಾಸ್‌ಪೋರ್ಟ್‌ನ ಫೋಟೋ ನೋಡಿದಾಗ ನಿಜವಾಗಿಯೂ ಅದರಲ್ಲಿ 77 ಎಂದು ಬರೆದಿತ್ತು ಎಂದು ಆತ ಹೇಳಿದ್ದಾನೆ. ಆಕೆ 50ಕ್ಕೆ ಸಮೀಪದಲ್ಲಿರುವಂತೆ ಕಾಣಿಸುತ್ತಿರಲಿಲ್ಲ, ಆಕೆ 27 ವರ್ಷದವಳಂತೆಯೇ ಕಾಣಿಸುತ್ತಿದ್ದಿದ್ದರಿಂದ ಆಕೆಯ ಮೇಲೆ ನನಗೆ ಯಾವುದೇ ಸಂಶಯವಿರಲಿಲ್ಲ. ಆದರೆ ತಮ್ಮ ಈ 4 ವರ್ಷಗಳ ಪಯಣದುದ್ದಕ್ಕೂ ಕೆಲವು ಅಪಾಯಕಾರಿ ಸೂಚನೆಗಳಿದ್ದವು ಎಂಬುದನ್ನು ಆತ ಹೇಳಿಕೊಂಡಿದ್ದಾನೆ. 

ನಾವು ಒಟ್ಟಿಗೆ ಇದ್ದ ಸಮಯದಲ್ಲಿ ಕೆಲವು ಅಡೆತಡೆಗಳು ಇದ್ದವು, ಏಕೆಂದರೆ ನನಗೆ ಈ ವಿಚಾರದಲ್ಲಿ ಅನುಭವ ಇರಲಿಲ್ಲ, ಕಾರಣ ಇದು ನನ್ನ ಮೊದಲ ದೀರ್ಘಾವಧಿಯ ಸಂಬಂಧವಾಗಿತ್ತು. ಆ ಮಹಿಳೆ ತಾನು ಹೇಗೆ ಕಾಣುತ್ತೇನೆ ಎಂಬುದರ ಬಗ್ಗೆ ಬಹಳ ಹೆಮ್ಮೆ ಇತ್ತು. ಮತ್ತು ಅವಳ ಎಲ್ಲಾ ಸ್ನೇಹಿತರು 27 ವರ್ಷಕ್ಕಿಂತ ಮೇಲ್ಪಟ್ಟವರೇ ಆಗಿದ್ದರು ಎಂದು ಹೇಳಿದರು. ಪ್ರತಿಬಾರಿಯೂ ನಾನು ಅವಳಿಗೆ ಪಾಸ್‌ಪೋರ್ಟ್/ಐಡಿ ಮುಂತಾದ ಯಾವುದೇ ದಾಖಲೆಗಳನ್ನು ತೋರಿಸಲು ಕೇಳಿದಾಗಲೆಲ್ಲಾ ಅವಳು ಮೂರ್ಖತನದ ನೆಪಗಳನ್ನು ನೀಡಿ ವಿಷಯವನ್ನು ತಪ್ಪಿಸಲು ಪ್ರಯತ್ನಿಸುತ್ತಾ ನನಗೆ ತೋರಿಸಲು ನಿರಾಕರಿಸುತ್ತಿದ್ದಳು.

ದುಡಿವ ಹೆಣ್ಣುಮಕ್ಕಳಿಗೆ ಅಪ್ಪ-ಅಮ್ಮನೇ ವಿಲನ್​? ಛಿದ್ರವಾಗ್ತಿದೆ ಮದುವೆಯ ಕನಸು...

ಹುಡುಕಾಟದ ಸಮಯದಲ್ಲಿ, ತಾವು ಭೇಟಿಯಾಗಿ ಡೇಟಿಂಗ್ ಪ್ರಾರಂಭಿಸುವ ಕೆಲವೇ ತಿಂಗಳುಗಳ ಮೊದಲು ಕ್ಲಿಕ್ ಮಾಡಿದ ಪಾಸಿಟಿವ್ ಗರ್ಭಧಾರಣೆಯ ಪರೀಕ್ಷೆಯ ಚಿತ್ರವೂ ತನಗೆ ಸಿಕ್ಕಿತು ಎಂದು ಆ ಯುವಕ ಸೋಶಿಯಲ್ ಮೀಡಿಯಾ ರೆಡಿಟ್‌ನಲ್ಲಿ ಗೋಳು ತೋಡಿಕೊಂಡಿದ್ದಾನೆ. 

ಸೋಶಿಯಲ್ ಮೀಡಿಯಾದಲ್ಲಿ ಜನ ಹೇಳಿದ್ದೇನು?
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅನೇಕರು ಆತನಿಗೆ ಈ ಸುಳ್ಳಿನ ಮೇಲಿನ ಸಂಬಂಧವನ್ನು ಕೊನೆಗಳಿಸುವಂತೆ ಸಲಹೆ ನೀಡಿದ್ದಾರೆ. ಇದು ನಿಜವಾಗಿದ್ದರೆ ಬ್ರೇಕ್ ಅಪ್ ಮಾಡಿ. ಅವಳು ನಿನಗೆ ನಿರಂತರವಾಗಿ ಸುಳ್ಳು ಹೇಳುತ್ತಲೇ ಇದ್ದಾಳೆ. ಅವಳು ನಿಮ್ಮಿಂದ ಬೇರೆ ಯಾವ ವಿಷಯಗಳನ್ನು ಮರೆಮಾಡಿದ್ದಾಳೆಂದು ಯಾರಿಗೆ ತಿಳಿದಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಆ ನಾಲ್ಕು ವರ್ಷಗಳ ವಂಚನೆ ನನಗೆ ಅವಳನ್ನು ಎಂದಿಗೂ ನಂಬಬಾರದು ಎಂದು ಹೇಳಲು ಸಾಕಾಗುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಯಾವ ರೀತಿಯಲ್ಲಿ ಆಕೆ ನಿಮ್ಮನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾಳೆ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ಬ್ರೋ ಇದು ನಿಜಕ್ಕೂ ಭಯಾನಕವಾಗಿದೆ. ಇದು ನಿಜವಾಗಿದ್ದರೆ, ಈ ಮಹಿಳೆ ಅಕ್ಷರಶಃ ಮನೋರೋಗಿ ಮತ್ತು ಹೆಚ್ಚು ಆಳವಾದ ಮತ್ತು ಹಾನಿಕಾರಕ ಸುಳ್ಳುಗಳನ್ನು ಹೇಳುವ ಸಾಮರ್ಥ್ಯ ಹೊಂದಿದ್ದಾಳೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Zodiac Love: ನಿಮ್ಮ ಜನ್ಮರಾಶಿಯ ಪ್ರೀತಿಯ ಭಾಷೆ ಇದು!
Karna Serial: ಆ ಒಂದು ಸತ್ಯ ತೇಜಸ್​ಗೆ ಹೇಳಲು ಬಾಯಿ ಬಿದ್ದೋಗಿತ್ತಾ? ಕರ್ಣನ ಮೇಲೆ ಕಿಡಿಕಾರ್ತಿರೋ ವೀಕ್ಷಕರು