ಇತ್ತೀಚಿನ ವರ್ಷಗಳಲ್ಲಿ ಮದುವೆ ಅನ್ನೋ ಸಂಬಂಧಕ್ಕೆ ಮಹತ್ವಾನೇ ಇಲ್ಲದಂತಾಗಿದೆ. ಸಣ್ಣಪುಟ್ಟ ಕಾರಣಕ್ಕೆ ಮದ್ವೆ ಕ್ಯಾನ್ಸಲ್ ಆಗೋದು, ವಧು ಮನೆ ಬಿಟ್ಟು ಹೋಗೋದು ನಡೆಯುತ್ತೆ. ಹಾಗೆಯೇ ಇಲ್ಲೊಬ್ಬ ವಧು, ಮದ್ವೆಯಾಗಿ ಕೆಲದಿನದ ನಂತರ ಗಂಡನ ಮನೆಯಿಂದ ಓಡಿಹೋಗಿದ್ದಾಳೆ. ಅಷ್ಟೇ ಅಲ್ಲ, ಉಂಡು ಹೋದ, ಕೊಂಡೂ ಹೋದ ಅನ್ನೋ ಹಾಗೆ ಮನೆಯಲ್ಲಿದ್ದದ್ದನ್ನೆಲ್ಲಾ ಬಾಚಿಕೊಂಡು ಹೋಗಿದ್ದಾಳೆ.
ಮದುವೆ ಅನ್ನೋದು ಎಲ್ಲರ ಜೀವನದಲ್ಲಿಯೂ ಸ್ಪೆಷಲ್ ಡೇ ಆಗಿರುತ್ತದೆ. ಕೇವಲ ಮದುಮಕ್ಕಳು ಮಾತ್ರವಲ್ಲ ಕುಟುಂಬ ಸದಸ್ಯರು, ಬಂಧು ಬಳಗದವರು, ಸ್ನೇಹಿತರು ಎಲ್ಲರೂ ಮದುವೆ ದಿನ ಅಂದ್ರೆ ಖುಷಿ ಪಡುತ್ತಾರೆ. ಆದ್ರೆ ಇತ್ತೀಚಿಗೆ ಕೆಲ ವರ್ಷಗಳಿಂದ ಮದುವೆ ಸುಸೂತ್ರವಾಗಿ ನಡೆಯೋದಕ್ಕಿಂತ ಹೆಚ್ಚಾಗಿ ಸಣ್ಣಪುಟ್ಟ ಕಾರಣಕ್ಕೆ ಕ್ಯಾನ್ಸಲ್ ಆಗೋದೆ ಜಾಸ್ತಿ. ಇನ್ನೂ ಕೆಲವೊಮ್ಮೆ ಮದ್ವೆಯಾದ ಬಳಿಕ ವಧು ಗಂಡನ ಮನೆಯನ್ನು ಬಿಟ್ಟು ಬರೋದಿದೆ. ಒತ್ತಾಯದ ಮದುವೆ, ಅನೈತಿಕ ಸಂಬಂಧ ಹೀಗೆ ನಾನಾ ಕಾರಣಕ್ಕೆ ವಧು, ವರರು ಮನೆ ಬಿಟ್ಟು ಹೋಗುತ್ತಾರೆ. ಸದ್ಯ ಕುಂದಾಪುರದಲ್ಲೂ ಅಂಥಹದ್ದೇ ಘಟನೆಯೊಂದು ನಡೆದಿದೆ.
ಚಿನ್ನಾಭರಣ ತೆಗೆದುಕೊಂಡು ಪ್ರೇಮಿಯೊಂದಿಗೆ ಪರಾರಿಯಾದ ವಧು
ಮದುವೆಯಾದ ಕೆಲವೇ ದಿನಗಳಲ್ಲಿ ವಧು (Bride) ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳೊಂದಿಗೆ ಪ್ರೇಮಿಯೊಂದಿಗೆ ಪರಾರಿಯಾಗಿದ್ದಾಳೆ. ಉಡುಪಿಯಲ್ಲಿ ಈ ಘಟನೆ ನಡೆದಿದೆ. ವರದಿಯ ಪ್ರಕಾರ, ಘಟನೆ ಜೂನ್ 16 ರಂದು ನಡೆದಿತ್ತು ಆದರೆ ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಪತಿ (Husband) ದೂರು ನೀಡಿದ ನಂತರ ಜುಲೈ 12 ರಂದು ಘಟನೆ ಬೆಳಕಿಗೆ ಬಂದಿದೆ. ಕುಂದಾಪುರದ ಉಲ್ಲೂರು-74 ಗ್ರಾಮದಲ್ಲಿ ಈ ಘಟನೆ ನಡೆದಿರೋದಾಗಿ ವರದಿಯಾಗಿದೆ.
ಮಟನ್ ಬೇಕೇ ಬೇಕು, ಇಲ್ಲಾಂದ್ರೆ ತಾಳಿ ಕಟ್ಟಲ್ಲ; ಮದ್ವೆ ಮನೆಯಲ್ಲಿ ವರನ ಕುಟುಂಬದಿಂದ ಗಲಾಟೆ!
ಮನೆ ಮಂದಿಗೆ ಮೊದಲೇ ವಿಷಯ ತಿಳಿದಿತ್ತು ಎಂದು ಆರೋಪಿಸಿದ ವರ
ಕುಂದಾಪುರ ವಡೇರಹೋಬಳಿಯ ನಿವಾಸಿ ವಧು ಮೇ 21 ರಂದು ಉಳ್ಳೂರು-74 ರ ಯುವಕನನ್ನು ವಿವಾಹವಾದರು. ಇದರ ನಂತರ, ವಧು ತನ್ನ ಅತ್ತೆಯ ಮನೆಯಲ್ಲಿ ಕೇವಲ ನಾಲ್ಕು ದಿನ ಮಾತ್ರ ಇದ್ದಳು. ಅವಳು ಆಗಾಗ ತನ್ನ ಹೆತ್ತವರ (Parents) ಮನೆಗೆ ಹೋಗುತ್ತಿದ್ದಳು. ಪ್ರತಿ ದಿನ ತನ್ನ ಪ್ರಿಯಕರನೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದಳು ಎಂದು ಮದುವೆಯಾದ (Marriage) ಯುವಕ ಆರೋಪಿಸಿದ್ದಾನೆ. ಅಷ್ಟೇ ಅಲ್ಲ,ಹೆಂಡತಿಯ ಸಂಬಂಧವನ್ನು (Relationship) ವಿರೋಧಿಸುತ್ತಿದ್ದರೂ ಅವಳು ಸ್ವಲ್ಪವೂ ತಲೆಕೆಡಿಸಿಕೊಳ್ಳಲಿಲ್ಲ ಎಂದು ಯುವಕ ತಿಳಿಸಿದ್ದಾನೆ.
ವರದಿಯ ಪ್ರಕಾರ, ವಧು ತನಗೆ ಅವನನ್ನು ಮದುವೆಯಾಗಲು ಆಸಕ್ತಿಯಿಲ್ಲ ಎಂದು ಮೊದಲೇ ತಿಳಿಸಿದ್ದಳು. ಆದರೆ ಮನೆ ಮಂದಿ ಒತ್ತಾಯದಿಂದ ಮದುವೆ ಮಾಡಿದ್ದರು. ಹೀಗಾಗಿ ವಧು ಮನೆಬಿಟ್ಟು ಹೋಗಿದ್ದಾಳೆ ಎಂದು ತಿಳಿದುಬಂದಿದೆ. ವಧುವಿನ ಪೋಷಕರು ಮತ್ತು ಚಿಕ್ಕಪ್ಪನಿಗೆ ಆಕೆಯ ಸಂಬಂಧದ ಬಗ್ಗೆ ತಿಳಿದಿತ್ತು. ಆದರೆ ಅವರು ಅದನ್ನು ರಹಸ್ಯವಾಗಿಟ್ಟು ತನ್ನೊಂದಿಗೆ ಮದುವೆ ಮಾಡಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ. ವಧು ಓಡಿ ಹೋಗಿರುವುದು ಮಾತ್ರವಲ್ಲದೆ ಲಕ್ಷಗಟ್ಟಲೆ ಚಿನ್ನಾಭರಣವನ್ನು ಸಹ ತೆಗೆದುಕೊಂಡು ಹೋಗಿದ್ದಾಳೆ ಎಂದು ಯುವಕ ದೂರಿನಲ್ಲಿ ಆರೋಪಿಸಿದ್ದಾನೆ.
ಮಂಟಪದಲ್ಲಿ ಇರುವಾಗ್ಲೇ ವರನಿಗೆ ಬಂತು ವಧುವಿನ ಲವರ್ ಕಾಲ್, ಆಮೇಲೆ ಆಗಿದ್ದೇನು?
10 ಲಕ್ಷ ಮೌಲ್ಯದ ವಜ್ರದ ನೆಕ್ಲೇಸ್, ಕಿವಿಯೋಲೆ, ರಿಂಗ್ ಜೊತೆ ಎಸ್ಕೇಪ್
10 ಲಕ್ಷ ಮೌಲ್ಯದ ವಜ್ರದ ನೆಕ್ಲೇಸ್, ವಜ್ರದ ಕಿವಿಯೋಲೆಗಳು, ವಜ್ರದ ಉಂಗುರ, ಚಿನ್ನದ ಸರ, ಚಿನ್ನದ ಬಳೆಗಳು ಮತ್ತು ತಾಯಿಯ ಚಿನ್ನದ ನೆಕ್ಲೇಸ್ ಅನ್ನು ಸಹ ತೆಗೆದುಕೊಂಡು ಹೋಗಿದ್ದಾಳೆ ಎಂದಿದ್ದಾನೆ. ಚಿನ್ನಾಭರಣಗಳನ್ನು (Jewellery) ತೆಗೆದುಕೊಂಡು ಹೋಗುವುದನ್ನು ಅವನು ವಿರೋಧಿಸಿದಾಗ ವಧು ಮತ್ತು ಅವನ ಅತ್ತೆಯ ವಿರುದ್ಧ ಕಿರುಕುಳದ ಪ್ರಕರಣವನ್ನು ದಾಖಲಿಸಿ ಎಲ್ಲರನ್ನು ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಿಣೆಯಾಗಿ ಏರ್ ಕಂಡೀಷನರ್ ಕೊಡದ್ದಕ್ಕೆ ಸಿಟ್ಟು, ವಧುವನ್ನು ಮಂಟಪದಿಂದ ಕೆಳಕ್ಕೆ ತಳ್ಳಿದ ವರ!