ಅಸ್ಸಾಂನಲ್ಲಿ ಬಹುಪತ್ನಿತ್ವ ನಿಷೇಧಕ್ಕೆ ಸರ್ಕಾರ ಚಿಂತಿಸುತ್ತಿದೆ. ಈ ಕುರಿತ ಮಸೂದೆಯನ್ನು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ.
ಗುವಾಹಟಿ: ಅಸ್ಸಾಂನಲ್ಲಿ ಬಹುಪತ್ನಿತ್ವ ನಿಷೇಧಕ್ಕೆ ಸರ್ಕಾರ ಚಿಂತಿಸುತ್ತಿದೆ. ಈ ಕುರಿತ ಮಸೂದೆಯನ್ನು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ. ಬಹುಪತ್ನಿತ್ವ ನಿಷೇಧಕ್ಕೆ ಸಲಹೆ ಬಯಸಿ ಸರ್ಕಾರ ತಜ್ಞರ ಸಮಿತಿ ರಚಿಸಿತ್ತು. ಅದರ ವರದಿ ಇನ್ನೂ ಬಾಕಿ ಇದೆ. ಇದರ ನಡುವೆಯೇ ಗುರುವಾರ ಈ ವಿಷಯ ಪ್ರಕಟಿಸಿದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ‘ನಾವು ಸೆಪ್ಟೆಂಬರ್‌ನಲ್ಲಿ ಮುಂಬರುವ ಅಸೆಂಬ್ಲಿ ವಿಭಾಗದಲ್ಲಿ ಮಸೂದೆಯನ್ನು ಮಂಡಿಸಲು ಬಯಸುತ್ತೇವೆ. ಅಸ್ಸಾಂನಲ್ಲಿ ನಾವು ಬಹುಪತ್ನಿತ್ವವನ್ನು ತಕ್ಷಣವೇ ನಿಷೇಧಿಸುವ ಇರಾದೆ ಇದೆ. ಆದರೆ ಕೆಲವು ಕಾರಣಗಳಿಂದ ನಮಗೆ ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಜನವರಿ ಅಧಿವೇಶನದಲ್ಲಿ ಮಾಡುತ್ತೇವೆ’ ಎಂದರು.
ಆದಾಗ್ಯೂ, ‘ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ನಾವು ಈ ಕ್ರಮ ತೆಗೆದುಕೊಳ್ಳಬೇಕಾಗಿಲ್ಲ, ಏಕೆಂದರೆ ಈ ಮಸೂದೆ ಸಂಹಿತೆಯೊಂದಿಗೆ ವಿಲೀನಗೊಳ್ಳುತ್ತದೆ’ ಎಂದರು. ಬಹುಪತ್ನಿತ್ವದ ನಿಷೇಧವನ್ನು ಒಮ್ಮತದ ಮೂಲಕ ಸಾಧಿಸಲಾಗುತ್ತದೆಯೇ ಹೊರತು ಆಕ್ರಮಣದಿಂದಲ್ಲ ಎಂದು ಶರ್ಮಾ ಈ ಹಿಂದೆ ಹೇಳಿದ್ದರು.
ಬಾಲ್ಯವಿವಾಹಕ್ಕೆ ಬ್ರೇಕ್ ಬೆನ್ನಲ್ಲೇ ಬಹುಪತ್ನಿತ್ವ ಬ್ಯಾನ್ ಮಾಡಲು ಮುಂದಾದ ಅಸ್ಸಾಂ ಸಿಎಂ