ಸಿನಿಮಾ ಸ್ಟೈಲ್‌ನಲ್ಲಿ ಮದುವೆ ಹಾಲ್‌ಗೆ ಎಂಟ್ರಿ ಕೊಟ್ಟ ವಧು..

Suvarna News   | Asianet News
Published : Jan 07, 2022, 08:44 PM IST
ಸಿನಿಮಾ ಸ್ಟೈಲ್‌ನಲ್ಲಿ ಮದುವೆ ಹಾಲ್‌ಗೆ ಎಂಟ್ರಿ ಕೊಟ್ಟ ವಧು..

ಸಾರಾಂಶ

ಕುಟುಂಬದೊಂದಿಗೆ ವಧುವಿನ ಸಖತ್‌ ಡಾನ್ಸ್‌ ಸಿನಿಮಾ ಶೂಟಿಂಗ್‌ ಅಲ್ಲ ಇದು ಮದುವೆ

ಗುರುಗ್ರಾಮ(ಜ.7): ಇಂಟಿರಿಯರ್‌ ಡಿಸೈನರ್‌ ವೊಬ್ಬರು ತಮ್ಮ ಮದುವೆಯ ದಿನ ಮಾಡಿದ್ದ ಸಖತ್‌ ಡಾನ್ಸ್‌ ಒಂದು ತಿಂಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ವಿಡಿಯೋವನ್ನು ಒಮ್ಮೆ ನೋಡಿದಾಗ ನಿಮಗೆ ಇದ್ಯಾವುದೂ ಸಿನಿಮಾದ ಹಾಡಿನ ಶೂಟಿಂಗ್‌ ಸೀನ್‌ ತರಹ ಇದೆಯಲ್ಲ ಎಂದು ಅನಿಸದೇ ಇರದು ಅಷ್ಟೊಂದು ಸುಂದರವಾಗಿ ಈ ಕ್ಷಣವನ್ನು ರೂಪಿಸಲಾಗಿದ್ದು, ysdcweddingchoreography ಎಂಬ ಇನ್ಸ್ಟಾಗ್ರಾಮ್‌ ಖಾತೆಯಿಂದ ಈ ವಿಡಿಯೋ ಪೋಸ್ಟ್‌ ಆಗಿದೆ. 

ಸಂಪ್ರದಾಯಬದ್ಧವಾದ ವಧುವಿನ ಆಗಮನದ ಸಂಪ್ರದಾಯವನ್ನು ಮುರಿದ ಈ ಇಂಟಿರಿಯರ್‌ ಡಿಸೈನರ್ ಸಬಾ ಕಪೂರ್‌, ಕೆಳಗೆ ಹಸಿರು ಹಾಸು ಹಾಗೂ ಮೇಲೆ ಹೂವಿನ ಅಲಂಕಾರದ ಚಪ್ಪರದ ಕೆಳಗೆ ಡಾನ್ಸ್‌ ಮಾಡುತ್ತಾ ಮದುವೆ ಸ್ಥಳವನ್ನು ಪ್ರವೇಶಿಸುತ್ತಾರೆ. ಗುರುಗ್ರಾಮದವರಾದ ಸಬಾ ಕಪೂರ್‌ ಹಾಗೂ ಅವರ ಕುಟುಂಬ ಸದಸ್ಯರು  2016 ರ ಬಾರ್‌ ಬಾರ್‌ ದೇಖೋ(Baar Baar Dekho) ಸಿನಿಮಾದ ಸೌ ಅಸ್ಮಾನ್‌ ಹಾಡಿಗೆ ಸಖತ್‌ ಆಗಿ ಡಾನ್ಸ್‌ ಮಾಡಿದ್ದಾರೆ. ವಧು ಬರುತ್ತಿದ್ದಂತೆ ವರ ಇರುವಲ್ಲಿಯವರೆಗೂ ಆಚೆ ಈಚೆ ಎರಡು ಕಡೆಯೂ  ಕುಟುಂಬ ಸದಸ್ಯರು ಸರಿದು ನಿಂತಿದ್ದಾರೆ. ಈ ವೇಳೆ ವಧು ಡಾನ್ಸ್‌ ಮಾಡುತ್ತಾ ಬಂದಿದ್ದು, ಬದಿಗೆ ಸರಿದು ನಿಂತವರೆಲ್ಲರೂ ವಧು ತಮ್ಮ ಬಳಿ ಬರುತ್ತಿದ್ದಂತೆ ಆಕೆಯೊಂದಿಗೆ ಸೇರಿ ಡಾನ್ಸ್ ಮಾಡಿದ್ದಾರೆ. ವಧುವಿನ ಸರ್‌ಪ್ರೈಸ್ ಎಂಟ್ರಿ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಅಲ್ಲದೇ ಕೊನೆವರೆಗೆ ವಿಡಿಯೋ ನೋಡಿ ಅಲ್ಲೇನೋ ಸ್ಪೆಷಲ್‌ ಇದೆ ಎಂದು ಬರೆದಿದ್ದರು. 

ಕಳೆದ ತಿಂಗಳು ಇದನ್ನು Instagram ನಲ್ಲಿ ಪೋಸ್ಟ್ ಮಾಡಲಾಗಿದ್ದು,  2 ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ಇತ್ತೀಚೆಗೆ ಈ ವಿಡಿಯೋವನ್ನು ಟ್ವಿಟರ್‌ನಲ್ಲೂ ಪೋಸ್ಟ್ ಮಾಡಿದ ನಂತರ ವೀಡಿಯೊ ವೈರಲ್ ಆಗಲು ಪ್ರಾರಂಭಿಸಿತು. ನನ್ನ ಕಾಲ್ಪನಿಕ ವಿವಾಹದಲ್ಲಿ ನನ್ನ ಇಡೀ ಕುಟುಂಬವು ಇದನ್ನು ಮರುಸೃಷ್ಟಿಸದಿದ್ದರೆ, ನಾನು ದುಃಖಿತ ಹುಡುಗಿಯಾಗಿ ಸಾಯುತ್ತೇನೆ, ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದು ಈ ವೀಡಿಯೊವನ್ನು ಟ್ಟಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನು 6.7 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 

 

Cute Video: ಮೆರವಣಿಗೆ ಬರುತ್ತಿದ್ದ ವರನ ನೋಡಿ ಕಿಟಕಿಯಿಂದಲೇ ವಧುವಿನ ಡಾನ್ಸ್‌...

ಭಾರತೀಯ ಮದುವೆಗಳು ಹಾಡು ಹಾಗೂ ಸಂಗೀತಾ ಇವುಗಳಿಲ್ಲದೇ ಎಂದಿಗೂ ಕೊನೆಗೊಳ್ಳುವುದೇ ಇಲ್ಲ. ನಾವು ಬೇರೆಯವರ ಮದುವೆಗೆ ಅತಿಥಿಗಳಾಗಿ ಹೋಗುವುದಾದರೆ ಅದೊಂದು ಎಲ್ಲಾ ಚಿಂತೆಗಳನ್ನು ಮರೆತು ಆರಾಮವಾಗಿ ಸಂಭ್ರಮಿಸಲು ಇರುವ ಒಂದು ಉತ್ತಮ ಅವಕಾಶ. ಮದುವೆಯಲ್ಲಿ ಜನರು ಡಾನ್ಸ್‌ ಮಾಡುವ ದೃಶ್ಯಾವಳಿಗಳನ್ನು ನಾವು ಈಗಾಗಲೇ ಬೇಕಾದಷ್ಟು ನೋಡಿದ್ದೇವೆ. ಆದರೆ ಇತೀಚೆಗೆ ಮದುವೆಯ ಕೇಂದ್ರ ಬಿಂದುವಾಗಿರುವ ವಧು ಹಾಗೂ ವರರೇ ಬಿಂದಾಸ್ ಆಗಿ ಸ್ಟೆಪ್‌ ಹಾಕುವ ಮೂಲಕ ಮದುವೆ ಮಂಟಪ ಪ್ರವೇಶಿಸಿ ತಮ್ಮ ಮದುವೆಯನ್ನು ಸ್ಮರಣೀಯವಾಗಿಸುತ್ತಿದ್ದಾರೆ. ಎಲ್ಲಕ್ಕೂ ಹೆಚ್ಚು ಇದು ಅವರ ಬದುಕಿನ ವಿಶೇಷ ದಿನವಾಗಿರುತ್ತದೆ. ಇದೇ ರೀತಿ ವಧು ಹಾಗೂ ವರ ಬಿಂದಾಸ್‌ ಆಗಿ ತಮ್ಮ ಮದುವೆ ದಿನ ಮಾಡಿದ ಡಾನ್ಸ್‌  ಇನ್ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗಿದೆ. ಬಾಲಿವುಡ್‌ (Bollywood)ನ ಸೇ ಶವ ಶವ ಹಾಡಿಗೆ  ಈ ಹಿಂದೆ ಜೋಡಿಯೊಂದು ಡಾನ್ಸ್‌ ಮಾಡಿತ್ತು. 

Bride Groom Dance: ಇನ್ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಯ್ತು ವಧು ವರನ ಜಬರ್‌ದಸ್ತ್‌ ಡಾನ್ಸ್‌

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌