ಕ್ಯಾಲಿಫೋರ್ನಿಯಾ(ಜ. 7): ನಿಜ ಪ್ರೀತಿಯನ್ನು ಹುಡುಕುವುದು ಇಂದಿನ ದಿನಗಳಲ್ಲಿ ಸುಲಭದ ಮಾತಲ್ಲ. ಹೊಸ ವರ್ಷ ಆರಂಭವಾಗುತ್ತಿದ್ದಂತೆ ಜನ ನಿಜವಾದ ಪ್ರೀತಿ ಪಡೆಯಲು ಹೊಸ ಹೊಸ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಲಂಡನ್‌ನಲ್ಲಿ ಓರ್ವ ಪ್ರೀತಿಯನ್ನು ಹುಡುಕಲು ಬಿಲ್ ಬೋರ್ಡ್‌ನಲ್ಲಿ ಜಾಹೀರಾತು ನೀಡಿದ್ದರೆ, ಇಲ್ಲೊಬ್ಬಳು ಮಹಿಳೆ ತನ್ನ 40 ವರ್ಷದ ಪಿಂಕ್ ಪ್ರೀತಿಗೆ ಕೊನೆಗೂ ಮದುವೆಯ ರೂಪ ನೀಡಿದ್ದಾಳೆ.
ಲಾಸ್ ವೇಗಾಸ್‌ನ ಲಿಟಲ್ ವೈಟ್ ವೆಡ್ಡಿಂಗ್ ಹಾಲ್‌ನಲ್ಲಿ ಮಹಿಳೆಯೊಬ್ಬರು, ಒಂದು ಕಾಲದಲ್ಲಿ ಎಲ್ವಿಸ್ ಪ್ರೀಸ್ಲಿ (Elvis Presley)ಯ ಒಡೆತನದಲ್ಲಿದ್ದ ಪಿಂಕ್ ಕ್ಯಾಡಿಲಾಕ್‌ನಲ್ಲಿ ಕುಳಿತು, ಬೇಬಿ ಪಿಂಕ್ ಟ್ಯೂಲ್ ಗೌನ್ ಧರಿಸಿ, ಮದುವೆ ಪ್ರತಿಜ್ಞೆಯ ವಿನಿಮಯ ಮಾಡಿಕೊಂಡರು. ಈ ಮೂಲಕ ಪಿಂಕ್ ಬಣ್ಣದೊಂದಿಗೆ ನಾಲ್ಕು ದಶಕಗಳ ತನ್ನ ಸಂಬಂಧವನ್ನು ಅಧಿಕೃತಗೊಳಿಸಿದರು. ವಧು ಮಾತ್ರವಲ್ಲ, ಮದುವೆಗೆ ಬಂದ ಅತಿಥಿಗಳು ಸಹ ಗುಲಾಬಿಯ ವಿವಿಧ ಬಣ್ಣಗಳ ಧಿರಿಸುಗಳನ್ನೇ ಧರಿಸಿದ್ದರು. ನಿಯಾನ್ ಪಿಂಕ್‌ನಿಂದ ಹಿಡಿದು ಬಬಲ್ಗಮ್ ಮತ್ತು ಮೆಜೆಂಟಾ ಪಿಂಕ್ ಬಣ್ಣದವರೆಗೂ ಎಲ್ಲರ ಬಟ್ಟೆಗಳು ಪಿಂಕ್‌ಮಯವಾಗಿದ್ದವು.
ಲಾಸ್ ವೇಗಾಸ್‌ನಲ್ಲಿ KVVU ಮಾಧ್ಯಮದೊಂದಿಗೆ ಮಾತನಾಡಿದ ಈ ನವವಿವಾಹಿತೆ 1980 ರಿಂದಲೂ ಅವರು ಗುಲಾಬಿ ಬಣ್ಣವನ್ನು ಧರಿಸುತ್ತಿದ್ದರಂತೆ. ಇದು ಅವರ ಇನ್ಸ್ಟಾಗ್ರಾಮ್ (Instagram) ಪ್ರೊಫೈಲ್ ನೋಡಿದಾಗಲೂ ಕಂಡು ಬಂದಿದೆ. ಆಕೆಯ ಬಣ್ಣದ ಪ್ರೀತಿ ಯುಗಯುಗಾಂತರಗಳಿಂದ ಇದ್ದಿದ್ದರಿಂದ ಅವರು ಎರಡು ವರ್ಷಗಳ ಹಿಂದೆ ಮದುವೆಯಾಗುವ ಆಲೋಚನೆ ಮಾಡಿದರು ಎಂದು ವರದಿ ತಿಳಿಸಿದೆ.
ಒಮ್ಮೆ ಸ್ಕೇಟ್‌ಬೋರ್ಡ್‌ನಲ್ಲಿದ್ದ ಒಂದು ಮಗು ನನಗೆ ಹೇಳಿತು, ವಾವ್, ನೀನು ಗುಲಾಬಿಯನ್ನು ಪ್ರೀತಿಸುತ್ತೀಯ ಎಂದು ಆತ ಕೇಳಿದ ಹೌದು ಎಂದ ನಾನು ಅದನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿದೆ. ನಂತರ ಅವನು ಹೊರಟು ಹೋದ. ನಾನು ಅದನ್ನು ತುಂಬಾ ಪ್ರೀತಿಸುತ್ತೇನೆ ಎಂದಾದರೆ ನಾನು ಅದನ್ನು ಏಕೆ ಮದುವೆಯಾಗಬಾರದು ಎಂದು ಯೋಚಿಸಿದೆ ಎಂದು ಆಕೆ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾಳೆ.
Colour Changing Car ಬಟನ್ ಒತ್ತಿದರೆ ಸಾಕು ಬಣ್ಣ ಬದಲಿಸಲಿದೆ ಕಾರು, BMW iX ಅನಾವರಣ!
ಬಣ್ಣವನ್ನು ಮದುವೆಯಾಗುವ ಕಲ್ಪನೆಯು ಸ್ವಲ್ಪ ವಿಲಕ್ಷಣವಾಗಿ ತೋರುತ್ತದೆಯಾದರೂ, ಪ್ರತಿಯೊಬ್ಬರೂ ತಮ್ಮ ಹೃದಯದ ಮಾತನ್ನು ಕೇಳುವಂತೆ ಪ್ರೋತ್ಸಾಹಿಸಲು ಬಯಸುತ್ತೇನೆ ಹಾಗೂ ನಿಮ್ಮ ಹೃದಯದ ಮಾತನ್ನು ಕೇಳಿ ಹಾಗೂ ನಿಮಗೇನು ಇಷ್ಟವೋ ಅದನ್ನು ಮಾಡಿ ಎಂದು ಆಕೆ ಹೇಳಿದ್ದಾಳೆ.
ಇನ್ನು ಈ ವಿವಾಹದಲ್ಲಿ ಎಲ್ಲವೂ ಪಿಂಕ್‌ಮಯವಾಗಿದ್ದವು. ಪಿಂಕ್ ಫ್ಲೆಮಿಂಗೋಗಳಿಂದ ಅಲಂಕರಿಸಲ್ಪಟ್ಟ ಮದುವೆಯ ಕೇಕ್‌ನಿಂದ ಹಿಡಿದು ಹ್ಯಾರಿ ವಿನ್‌ಸ್ಟನ್ ಪಿಂಕ್ ಡೈಮಂಡ್ ರಿಂಗ್‌ವರೆಗೆ ಅವಳ ಕೂದಲು ಸೇರಿ ಎಲ್ಲವೂ ಪಿಂಕ್ ಬಣ್ಣದಿಂದ ಕಂಗೊಳಿಸುತ್ತಿದ್ದವು. ನೀವು ಕೇವಲ ಸ್ವಲ್ಪ ಸಮಯದಷ್ಟು ಕಾಲ ಮಾತ್ರ ಇಲ್ಲಿರಬಹುದು. ಹಾಗಾಗಿ ನಿಮಗನಿಸಿದ್ದನ್ನು ಮಾಡಿ ಅದರಿಂದ ಖುಷಿ ಪಡೆಯಿರಿ ಎಂದು ಆಕೆ ಹೇಳಿದ್ದಾಳೆ.
Tattoo Side Effects : ಯುರೋಪಲ್ಲಿ ಹಚ್ಚೆ ಬಣ್ಣದ ಮೇಲೆ ಕಡಿವಾಣ! ಟ್ಯಾಟೂ ಹಾಕಿಸಿಕೊಳ್ಳೋ ಮುನ್ನ ಇದನ್ನೋದಿ
ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಮದುವೆ ಪ್ರಕಟಣೆಯ ಪೋಸ್ಟ್‌ನ ಪ್ರಕಾರ, ತನ್ನನ್ನು 'ದಿ ಪಿಂಕ್ ಲೇಡಿ ಆಫ್ ಹಾಲಿವುಡ್' ಎಂದು ಕರೆದುಕೊಳ್ಳುವ ಈ ಮಹಿಳೆ, ಈ ವಿಶೇಷ ಕಾರ್ಯಕ್ರಮವನ್ನು ತನ್ನ ಸಿನಿಮಾಕ್ಕಾಗಿ ಚಿತ್ರೀಕರಿಸಲಾಗಿದೆ ಎಂದು ಕೂಡ ಹೇಳಿದ್ದಾಳೆ. ಒಟ್ಟಿನಲ್ಲಿ ಯಾವುದ ಸತ್ಯವೋ ದೇವರೇ ಬಲ್ಲ. ಆದಾಗ್ಯೂ, ವಿಲಕ್ಷಣ ಮದುವೆಯಿಂದಾಗಿ ಈ ಮಹಿಳೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.
ಈ ಹಿಂದೆ 2017 ರಲ್ಲಿ ಚೀನಾದ ವ್ಯಕ್ತಿಯೊಬ್ಬ ಮಹಿಳಾ ರೋಬೋಟ್ ಅನ್ನು ಮದುವೆಯಾಗಿದ್ದ. 2021 ರಲ್ಲಿ ಇಂಡೋನೇಷ್ಯಾದ ವ್ಯಕ್ತಿಯೊಬ್ಬ ತನ್ನ ರೈಸ್ ಕುಕ್ಕರ್‌ನೊಂದಿಗೆ ಮದುವೆಯಾಗಿದ್ದಂತಹ ವಿಚಿತ್ರ ಘಟನೆ ನಡೆದಿತ್ತು.