
ಫೆಬ್ರವರಿ 14. ಪ್ರೇಮಿಗಳ ದಿನ (Valentine's Day). ಈ ದಿನಕ್ಕೆ ಪ್ರೇಮಿಗಳು ಕಾದಿರ್ತಾರೆ. ಪ್ರೇಮಿಗಳು ವ್ಯಾಲೆಂಟೈನ್ಸ್ ಡೇಯನ್ನು ಹಬ್ಬ (Festival)ದ ರೀತಿಯಲ್ಲಿ ಆಚರಿಸುತ್ತಾರೆ. ಮೊದಲ ಬಾರಿ ಪ್ರೇಮ ನಿವೇದನೆ ಮಾಡುವವರು ಹೃದಯ ಕೈನಲ್ಲಿ ಹಿಡಿದು ಪ್ರಪೋಸ್ ( Propose )ಮಾಡಿದ್ರೆ ಈಗಾಗಲೇ ಪ್ರೀತಿಯಲ್ಲಿ ಬಿದ್ದವರು ಪರಸ್ಪರ ಉಡುಗೊರೆ ನೀಡಿಕೊಂಡು ಸಂಭ್ರಮಿಸುತ್ತಾರೆ. ಪ್ರೇಮಿಗಳ ದಿನಕ್ಕೆ ಇನ್ನೊಂದು ತಿಂಗಳಿದೆ. ಆ ದಿನವನ್ನು ವಿಶೇಷವಾಗಿ ಆಚರಿಸಲು ತಯಾರಿ ನಡೆದಿದೆ. ಪ್ರೇಮಿಗೆ ಈ ಬಾರಿ ಏನು ಉಡುಗೊರೆ (Gift) ನೀಡಬೇಕು ಎಂಬ ಆಲೋಚನೆಯಲ್ಲಿದ್ದರೆ ಈ ಲೇಖನ ಓದಿ. ಇದ್ರಲ್ಲಿ ಯಾವ ಯಾವ ಉಡುಗೊರೆಯನ್ನು ನಿಮ್ಮ ಪ್ರೇಮಿಗೆ ನೀಡ್ಬಹುದು ಎಂಬ ವಿವರವಿದೆ. ನಿಮಗೆ ಇಷ್ಟವಾದ ಉಡುಗೊರೆಯನ್ನು ನೀವು ಪ್ರೇಮಿಗೆ ನೀಡಿ,ಅವರನ್ನು ಖುಷಿಪಡಿಸಬಹುದು.
ಗೆಳತಿಗಾಗಿ ಅತ್ಯುತ್ತಮ ವ್ಯಾಲೆಂಟೈನ್ ಉಡುಗೊರೆ :
ಪ್ರೇಮಿಗಳ ದಿನದಂದು ಗೆಳತಿಗೆ ನೀಡಿ ಕಾಫಿ ಮಗ್ : ಈ ವರ್ಷದ ಪ್ರೇಮಿಗಳ ದಿನದಂದು ನೀವು ನಿಮ್ಮ ಗೆಳತಿಗೆ ಕಾಫಿ ಮಗ್ ನೀಡುವ ಮೂಲಕವೂ ಅವರ ಮನಸ್ಸು ಗೆಲ್ಲಬಹುದು. ಕಾಫಿ ಮಗ್ ಅತ್ಯುತ್ತಮ ಕೊಡುಗೆ ಎಂದು ಪರಿಗಣಿಸಲಾಗುತ್ತದೆ. ಕಾಫಿ ಮಗ್ ಮೇಲೆ ನಿಮ್ಮ ಅಥವಾ ನಿಮ್ಮ ಪ್ರೇಮಿಯ ಫೋಟೋ,ಹೆಸರು ಅಥವಾ ಪ್ರೀತಿಯ ಸಂದೇಶವನ್ನು ಮುದ್ರಿಸಿ ನೀಡಿದ್ರೆ ಅದು ಮತ್ತಷ್ಟು ವಿಶೇಷವಾಗಿರುತ್ತದೆ.
ಸುಂದರ ಡ್ರೆಸ್ : ಹುಡುಗಿಯರ ಅಚ್ಚುಮೆಚ್ಚಿನ ಪಟ್ಟಿಯಲ್ಲಿ ಡ್ರೆಸ್ ಕೂಡ ಸೇರಿದೆ. ಗೆಳತಿ ಜೀನ್ಸ್ ಮತ್ತು ಟೀ ಶರ್ಟ್ ಇಷ್ಟಪಡ್ತಿದ್ದರೆ ಅದನ್ನು ನೀವು ಉಡುಗೊರೆ ನೀಡಬಹುದು. ಇಲ್ಲವೆ ಸೀರೆ,ಡ್ರೆಸ್ ಕೂಡ ನೀಡಿ ನೀವು ಅವರ ಮನಸ್ಸು ಕದಿಯಬಹುದು. ನೀವು ಮಾಡುವ ಗಿಫ್ಟ್ ಪ್ಯಾಕ್ ಕೂಡ ಇಲ್ಲಿ ಮಹತ್ವ ಪಡೆಯುತ್ತದೆ.
ಹೃದಯ ಗೆದ್ದವಳಿಗೆ ಉಂಗುರ : ಹುಡುಗಿಯರು ಬಗೆ ಬಗೆಯ ಉಂಗುರ ಧರಿಸಲು ಇಷ್ಟಪಡ್ತಾರೆ. ಹಾರ್ಟ್ ಆಕಾರದ ಉಂಗುರವನ್ನು ನೀವು ಗಿಫ್ಟ್ ಮಾಡಬಹುದು. ಚಿನ್ನ,ಬೆಳ್ಳಿ ಉಂಗುರ ಮಾತ್ರವಲ್ಲ ಆರ್ಟಿಫಿಶಿಯಲ್ ಉಂಗುರವನ್ನೂ ನೀವೂ ನೀಡಬಹುದು.
ಪ್ರೇಮಿಗಳ ದಿನದಂದು ಗೆಳತಿಗೆ ನೀಡಿ ಫೋಟೋ ಫ್ರೇಮ್ : ಫೋಟೋ ಫ್ರೇಮ್ ಒಂದು ವಿಶೇಷ ರೀತಿಯ ಉಡುಗೊರೆಯಾಗಿದೆ. ಅದು ಯಾವಾಗಲೂ ನೆನಪಿನಲ್ಲಿರುವ ಉಡುಗೊರೆ. ಪ್ರೇಮಿಗಳ ದಿನದಂದು ನಿಮ್ಮ ಗೆಳತಿಗೆ ನೀವು ಫೋಟೋ ಫ್ರೇಮ್ ಅನ್ನು ಉಡುಗೊರೆಯಾಗಿ ನೀಡಿದರೆ, ಅವಳು ಖಂಡಿತವಾಗಿಯೂ ಸಂತೋಷಪಡ್ತಾಳೆ. ಆ ಫೋಟೋಫ್ರೇಮ್‌ನಲ್ಲಿ ನಿಮ್ಮ ಮತ್ತು ಅವರ ಯಾವುದೇ ಸ್ಮರಣೀಯ ಕ್ಷಣಗಳ ಫೋಟೋವನ್ನು ಹಾಕಬಹುದು.
ಸುಂದರ ವಾಚ್ : ಪ್ರೇಮಿಗಳ ದಿನದ ಉಡುಗೊರೆಯಾಗಿ ನಿಮ್ಮ ಗೆಳತಿಗೆ ವಾಚ್ ಕೂಡ ನೀವು ನೀಡಬಹುದು. ವಾಚ್ ಮೇಲೆ ಮಹಿಳೆಗೆ ವಿಶೇಷ ಮೋಹವಿರುತ್ತದೆ. ಡ್ರೆಸ್ ಗೆ ತಕ್ಕಂತೆ ವಾಚ್ ಧರಿಸಲು ಇಷ್ಟಪಡ್ತಾರೆ. ನಿಮ್ಮ ಹುಡುಗಿ ಕೂಡ ಇದೇ ಸ್ವಭಾವದವಳಾಗಿದ್ದಳೆ ಸುಂದರ ವಾಚ್ ಗಿಫ್ಟ್ ನೀಡಬಹುದು. ಮಾರುಕಟ್ಟೆಯಲ್ಲಿ ಸಾಕಷ್ಟು ಫ್ಯಾಷನ್ ವಾಚ್ ಲಭ್ಯವಿದೆ.
Love And Crush: ನಿಮ್ಮ ಕ್ರಶ್‌ಗೂ ನೀವಿಷ್ಟ ಆಗಿದ್ರೆ ಹೀಗೆಲ್ಲ ಮಾಡ್ತಾರೆ..
ಹ್ಯಾಂಡ್ ಬ್ಯಾಗ್ : ಹ್ಯಾಂಡ್ ಬ್ಯಾಗ್ ಉತ್ತಮ ವ್ಯಾಲೆಂಟೈನ್ ಉಡುಗೊರೆಯಾಗಿದೆ. ಮಾರುಕಟ್ಟೆಯಲ್ಲಿ ವೆರೈಟಿ ವೆರೈಟಿ ಹ್ಯಾಂಡ್ ಬ್ಯಾಗ್ ಸಿಗುವುದ್ರಿಂದ ಅದರ ಆಯ್ಕೆ ಸುಲಭ.
ಮೇಕಪ್ ಕಿಟ್ : ಈ ಬಾರಿ ವ್ಯಾಲೆಂಟೈನ್ ಗಿಫ್ಟ್ ಆಗಿ ಮೇಕಪ್ ಕಿಟ್ ನೀಡಬಹುದು. ಪ್ರತಿಯೊಬ್ಬ ಹುಡುಗಿಯೂ ಡ್ರೆಸ್ ಅಪ್ ಆಗಲು ಇಷ್ಟಪಡುತ್ತಾಳೆ. ಉತ್ತಮ ಕಂಪನಿಯ ಸೌಂದರ್ಯವರ್ಧಕ ಉತ್ಪನ್ನಗಳನ್ನು ಹೊಂದಿರುವ ಮೇಕಪ್ ಕಿಟ್ ಉಡುಗೊರೆಯಾಗಿ ನೀಡಿ.
Birth Control: ಅನಗತ್ಯ ಗರ್ಭಧಾರಣೆ ತಪ್ಪಿಸಲು ಇಲ್ಲಿವೆ ಉಪಾಯ
ಆಭರಣ ಉಡುಗೊರೆ : ಎಲ್ಲಾ ಹುಡುಗಿಯರು ಆಭರಣಗಳನ್ನು ಧರಿಸಲು ಇಷ್ಟಪಡುತ್ತಾರೆ. ಹಾಗಾಗಿ ಅವರಿಗೆ ಕಿವಿಯೋಲೆ, ಚೈನ್ ಸೇರಿದಂತೆ ಆಭರಣವನ್ನು ಗಿಫ್ಟ್ ನೀಡಬಹುದು. ಮಾರುಕಟ್ಟೆಯಲ್ಲಿ ಜರ್ಮನ್ ಬೆಳ್ಳಿ ಆಭರಣಗಳು ಸಾಕಷ್ಟು ಟ್ರೆಂಡ್ ಆಗಿದ್ದು, ಹುಡುಗಿಯರು ಇದನ್ನು ತುಂಬಾ ಇಷ್ಟಪಡುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.