ಒಂಭತ್ತು ಹೆಂಡ್ತಿಯರ ಜೊತೆ ಸುಖೀ ಸಂಸಾರ, ಆಕೆಗೆ ಮಾತ್ರ ಅವನೊಬ್ಬನೇ ಬೇಕಂತೆ..!

Published : Apr 06, 2022, 03:49 PM ISTUpdated : Apr 06, 2022, 03:50 PM IST
ಒಂಭತ್ತು ಹೆಂಡ್ತಿಯರ ಜೊತೆ ಸುಖೀ ಸಂಸಾರ, ಆಕೆಗೆ ಮಾತ್ರ ಅವನೊಬ್ಬನೇ ಬೇಕಂತೆ..!

ಸಾರಾಂಶ

ಇವತ್ತಿನ ದಿನಗಳಲ್ಲಿ ಒಬ್ಬಳು ಹೆಂಡ್ತಿ (Wife) ಜೊತೇನೆ ನೆಟ್ಟಗೆ ಸಂಸಾರ ಮಾಡೋರಿಲ್ಲ. ಆದ್ರೆ ಇಲ್ಲೊಬ್ಬಾತ ಭರ್ತಿ 9 ಹೆಂಡ್ತೀರ ಜತೆ ಸುಖೀ ಸಂಸಾರ ನಡೆಸ್ತಿದ್ದಾನೆ. ಆದ್ರೆ ಯಾರೋ ದೃಷ್ಟಿ ಹಾಕಿದ್ರೆ ಅನ್ಸುತ್ತೆ ಪಾಪ. ಒಬ್ಬಾಕೆ ಅವನನ್ನು ಬಿಟ್ಟು ಗಂಟುಮೂಟೆ ಕಟ್ಟಿ ಹೊರಟಿದ್ದಾಳೆ. ಅವ್ನು 8 ಮಂದಿ ಹೆಂಡ್ತಿದಿರು ಸಾಕು ಅವಳೊಬ್ಬಳಂತೂ ಬೇಡ್ವೇ ಬೇಡ ಅಂತಿದ್ದಾನೆ.

ಬ್ರೆಜಿಲಿಯನ್ ಮಾಡೆಲ್ (Model) ಆರ್ಥರ್ ಒ ಉರ್ಸೊ, ಭರ್ತಿ 9 ಹೆಂಡ್ತಿಯರ (Wife) ಮುದ್ದಿನ ಗಂಡ (Husband). ಈತ ತನ್ನ 9 ಹೆಂಡತಿಯರೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾನೆ. ಅಷ್ಟೂ ಹೆಂಡತಿಯರಿದ್ದರೂ ಜಗಳವಿಲ್ಲದ ಅನ್ಯೋನ್ಯ ಸಂಸಾರ ಅವರದಾಗಿತ್ತು. ಆರ್ಥರ್ ಒ ಉರ್ಸೊಗೆ 10 ಹೆಂಡ್ತಿಯರನ್ನು ಪಡೆಯೋ ಗುರಿಯಿತ್ತು. ಆದರೆ ಈತನ ಬಗ್ಗೆ ಇತ್ತೀಚಿಗೆ ಕೇಳಿ ಬಂದಿರುವ ಸುದ್ದಿಯಿಂದ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಯಾಕೆಂದರೆ ಆರ್ಥರ್ ಅವರ ಪತ್ನಿಯೊಬ್ಬರು ವಿಚ್ಛೇದನಕ್ಕೆ (Divorce) ನಿರ್ಧರಿಸಿದ್ದಾರಂತೆ. ಖುಷಿಯಾಗಿದ್ದ ಕುಟುಂಬದಲ್ಲಿ ವಿಚ್ಛೇದನಕ್ಕೆ ಕಾರಣವಾಗಿದ್ದೇನು ಎಂಬುದು ಹಲವರಲ್ಲಿ ಕುತೂಹಲ ಮೂಡಿಸಿದೆ.

ಬ್ರೆಜಿಲ್‌ (Brazil)ನಲ್ಲಿ ಬಹುಪತ್ನಿತ್ವವು ಕಾನೂನುಬಾಹಿರವಾಗಿರುವುದರಿಂದ ವಿವಾಹವು ಕಾನೂನುಬದ್ಧವಾಗಿಲ್ಲದಿದ್ದರೂ ಆರ್ಥರ್ ಕಳೆದ ವರ್ಷ ಒಂಬತ್ತು ಮಹಿಳೆಯರನ್ನು ಒಟ್ಟಿಗೆ ವಿವಾಹವಾದರು. ಇದೀಗ ಆತನ ಹೆಂಡತಿಯಯೊಬ್ಬರ ವಿಚ್ಛೇದನದ ಸುದ್ದಿ ಕೇಳಿ ಬಂದಿದೆ.  ಸುದ್ದಿ ಸಂಸ್ಥೆ ಜಾಮ್ ಪ್ರೆಸ್‌ನೊಂದಿಗೆ ಮಾತನಾಡುತ್ತಾ, ಮಾಡೆಲ್ ಆರ್ಥರ್ ಒ ಉರ್ಸೊ ಅವರು, ಹೆಂಡತಿಯ ನಿರ್ಧಾರದಿಂದ ತಾನು ದುಃಖ ಮತ್ತು ಆಘಾತಕ್ಕೊಳಗಾಗಿದ್ದೇನೆ ಎಂದು ಹೇಳಿದರು.

Relationship Problems : ಶಂಕ್ರಣ್ಣ–ಮೇಘನಾ ನೀವಾಗ್ಬಾರದೆಂದ್ರೆ ಇದನ್ನೋದಿ

ಮೂಲಗಳ ಪ್ರಕಾರ ಅಗಾಥಾ ಮದುವೆ (Marriage)ಯೆಂದರೆ ಏಕಪತ್ನಿತ್ವವನ್ನು ನಂಬುತ್ತಿದ್ದಾಳೆ. ಮದುವೆಯೆಂಬ ಬಂಧನದಲ್ಲಿ ಆ ಸಂಬಂಧಕ್ಕೆ ಮಾತ್ರ ಅರ್ಥವಿದೆ ಎನ್ನುತ್ತಿದ್ದಾಳೆ. ಹೀಗಾಗಿ ಬಹು ಪತ್ನಿತ್ವ ಅವಳ ಪಾಲಿಗೆ ತಪ್ಪು. ಹೀಗಾಗಿ ವಿಚ್ಛೇದನೆ ನೀಡಲು ನಿರ್ಧರಿಸಿದ್ದಾಳೆ ಎಂದು ತಿಳಿದುಬಂದಿದೆ. ಮಾಡೆಲ್  ಆರ್ಥರ್ ಒ ಉರ್ಸೊ ಬಹುಪತ್ನಿತ್ವವನ್ನು ಬೆಂಬಲಿಸುತ್ತಿದ್ದು ಸದ್ಯದಲ್ಲೇ ಹತ್ತನೇ ಮದುವೆಯಾಗಲು ನಿರ್ಧರಿಸಿದ್ದರು. ಹೀಗಾಗಿ ಹೆಂಡತಿಯ ನಿಲುವಿಗೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಡೈವೋರ್ಸ್‌ಗೆ ಸಹಮತ ಸೂಚಿಸಿದ್ದಾರೆ.

ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಅಗಾಥಾ ಅವರು ಆರ್ಥರ್​ ಅವರಿಂದ ವಿಚ್ಚೇಧನ ಪಡೆಯಲು ಮುಂದಾಗಿದ್ದಾರೆ. ಹೆಂಡತಿಯ ಬೇಡಿಕೆಯಿಂದಾಗಿ ಮಾಡೆಲ್ ಆರ್ಥರ್ ಸಹ ಹೆಂಡತಿಯನ್ನು ಬಿಟ್ಟು ಬಿಡಲು ಸಮ್ಮತಿ ಸೂಚಿಸಿದ್ದಾರೆ. ಆರ್ಥರ್​ ಇತರ ಎಂಟು ಮಹಿಳೆಯರೊಂದಿಗೆ ಜೀವನವನ್ನು ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಆರ್ಥರ್,'ಅವಳು ನನ್ನನ್ನು ತನ್ನೊಂದಿಗೆ ಉಳಿಸಿಕೊಳ್ಳಲು ಬಯಸಿದ್ದಳು. ಆದರೆ ಇದರಲ್ಲಿ ಯಾವುದೇ ಪ್ರಯೋಜನವಿಲ್ಲ, ಕುಟುಂಬದವರೊಂದಿಗೆ ಎಲ್ಲವನ್ನೂ ಹಂಚಿಕೊಳ್ಳಬೇಕು. ಆಕೆ ವಿಚ್ಛೇದನ ನೀಡಲು ಮುಂದಾಗುತ್ತಿರುವುದು ನನಗೆ ತುಂಬಾ ಬೇಸರವಾಯಿತು. ಆದರೆ ಆಕೆ ಕೊಟ್ಟ ಕಾರಣ ನನ್ನನ್ನು ಹೆಚ್ಚು ಆಶ್ಚರ್ಯಗೊಳಿಸಿತು ಎಂದಿದ್ದಾರೆ ಆರ್ಥರ್​.

ಅಗಾಥಾಳ ವರ್ತನೆ ತಪ್ಪು ಎಂದು ಅವನ ಇತರ ಹೆಂಡತಿಯರು ಭಾವಿಸಿದ್ದಾರೆ. ಮಾತ್ರವಲ್ಲ ಅಗಾಥಾಗೆ ನಿಜವಾಗಿಯೂ ಆರ್ಥರ್ ಮೇಲೆ ಪ್ರೀತಿಯಲ್ಲ, ಆಕೆ ಕೇವಕಲ ಥ್ರಿಲ್​ಗಾಗಿ ಮದುವೆಯನ್ನು ಒಪ್ಪಿಕೊಂಡಳು, ಜವಾದ ಭಾವನೆಗಳಿಗಾಗಿ ಅಲ್ಲ ಎಂದು ದೂರಿದ್ದಾರೆ. ನಾನು ಹೆಂಡತಿಯನ್ನು ಕಳೆದುಕೊಂಡಿದ್ದೇನೆ ಎಂದು ನನಗೆ ತಿಳಿದಿದೆ, ಆದರೆ ನಾನು ಈ ಸಮಯದಲ್ಲಿ ಅವಳ ಸ್ಥಾನವನ್ನು ಯಾರಿಗೂ ನೀಡಲು ಹೋಗುವುದಿಲ್ಲ ಎಂದಿದ್ದಾರೆ ಆರ್ಥರ್​. 

ಹೆಂಡ್ತಿಗೆ ಮೂವರು ಬಾಯ್‌ಫ್ರೆಂಡ್ಸ್ ಇದ್ರಂತೆ, ಏನೆಲ್ಲಾ ಮಾಡ್ತಿದ್ರೋ ! ವಿಷ್ಯ ಗೊತ್ತಾದ್‌ ಮೇಲೆ ಗಂಡನಿಗೆ ನಿದ್ದೇನೆ ಇಲ್ಲ

ಉರ್ಸೊ ಅವರ ಬಹುಪತ್ನಿತ್ವವನ್ನು ಬೆಂಬಲಿಸುತ್ತಾರೆ. ಹೆಸರಾಂತ ಮಾಡೆಲ್ Instagram ನಲ್ಲಿ50,000 ಅನುಯಾಯಿಗಳನ್ನು ಹೊಂದಿದ್ದಾರೆ. 10 ಹೆಂಡತಿಯರೊಟ್ಟಿಗೆ ಜೀವಿಸುವುದು ಆರ್ಥರ್​ ಕನಸು ಮತ್ತು ಶೀಘ್ರದಲ್ಲೇ ಅದನ್ನು ಪೂರೈಸುವ ಭರವಸೆ ಇದೆಯಂತೆ. ಡೈಲಿ ಮೇಲ್ ಪ್ರಕಾರ ಶೀಘ್ರದಲ್ಲೇ ಅದನ್ನು ಪೂರೈಸಲು ಅವರು ಆಶಿಸುತ್ತಿದ್ದಾರೆ. ಯುವ ಮಾಡೆಲ್ ಅವರು ತಮ್ಮ ಪ್ರತಿಯೊಬ್ಬ ಹೆಂಡತಿಯ ಮೇಲೆ ಅದೇ ಪ್ರಮಾಣದ ಪ್ರೀತಿಯನ್ನು ಹೊಂದಿದ್ದಾರೆ ಎಂದು ತಿಳಿಸಿದೆ. ಅದೇನೆ ಇರ್ಲಿ  9 ಹೆಂಡ್ತಿಯರ ಮುದ್ದಿನ ಗಂಡ ಸದ್ಯವಂತೂ ಉಳಿದ ಎಂಟು ಮಂದಿಯ ಜೊತೆ ಕಾಲಕಳೆಯಬೇಕಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅತ್ತೆ ಮನೆಯವರು ಒರಟಾಗಿ ವರ್ತಿಸಿದರು ಎಂದು ಗಂಡನ ಮನೆಗೆ ಬಂದ 20 ನಿಮಿಷದಲ್ಲಿ ಮದುವೆ ಮುರಿದ ಯುವತಿ
ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!