Sexual Wellness Tips : ಲೈಂಗಿಕ ಕ್ರಿಯೆ ವೇಳೆ ಈ ವಿಚಾರ ಪಾಲಿಸಿದ್ರೆ ಸ್ವರ್ಗಕ್ಕೆ ಮೂರೇ ಗೇಣು

Published : Apr 06, 2022, 01:25 PM ISTUpdated : Apr 06, 2022, 03:03 PM IST
Sexual Wellness Tips : ಲೈಂಗಿಕ ಕ್ರಿಯೆ ವೇಳೆ ಈ ವಿಚಾರ ಪಾಲಿಸಿದ್ರೆ ಸ್ವರ್ಗಕ್ಕೆ ಮೂರೇ ಗೇಣು

ಸಾರಾಂಶ

Sexual Health Tips: ಸೆಕ್ಸ್ ಎಂಬ ವಿಷ್ಯ ಕೇಳ್ತಿದ್ದಂತೆ ಜನರ ಕಣ್ಣು ಕೆಂಪಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಇರಲಿ ಸಂಗಾತಿ ಮುಂದೆಯೂ ಇದ್ರ ಬಗ್ಗೆ ಸರಿಯಾಗಿ ಮಾತನಾಡುವುದಿಲ್ಲ. ಜೀವನದ ಒಂದು ಭಾಗವಾಗಿರುವ ಇದ್ರ ಬಗ್ಗೆ ಸಂಗಾತಿ ಜೊತೆ ಮಾತನಾಡ್ಲೇಬೇಕು. ಅದ್ರ ಜೊತೆ ಕೆಲ ಪೋಲಿ ಮಾತುಗಳು ಸೇರಿದ್ರೆ ಬೆಡ್ ಬಿಸಿ ಹೆಚ್ಚುತ್ತದೆ.  

ಸಂಭೋಗ (Intercourse) ದ ವೇಳೆ ಪ್ರತಿ ಕ್ಷಣವನ್ನು ಆನಂದಿಸಬೇಕು. ಸೆಕ್ಸ್ (Sexual encounters) ಕೇವಲ ದೈಹಿಕ ಸುಖಕ್ಕೆ ಮಾತ್ರ ಸೀಮಿತವಾಗಿರಬಾರದು. ಅನೇಕರು ಸಂಭೋಗ ಬೆಳೆಸುವ ವೇಳೆ ಮೌನ (Silence) ವಾಗಿರುತ್ತಾರೆ. ಮತ್ತೆ ಕೆಲವರು ನಿತ್ಯದ ಕ್ರಿಯೆ ಎನ್ನುವ ರೀತಿಯಲ್ಲಿ ಇಂಟರ್ಕೋರ್ಸ್ ಮಾಡಿ ಮುಗಿಸ್ತಾರೆ. ಇದು ಇಬ್ಬರನ್ನು ಎಂದಿಗೂ ಹತ್ತಿರ ತರಲು ಸಾಧ್ಯವಿಲ್ಲ. ಎಷ್ಟೇ ಆಧುನೀಕವಾಗಿದ್ದೇವೆ ಎಂದುಕೊಂಡ್ರೂ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ದಂಪತಿ ಈಗ್ಲೂ ಮುಕ್ತವಾಗಿ ಮಾತನಾಡುವುದಿಲ್ಲ. ಸಂಭೋಗದ ವೇಳೆ ಕೆಲವೊಂದು ಮೋಜು, ಹೊಸ ಹೊಸ ಪ್ರಯೋಗ, ಪ್ರೀತಿ ಹಂಚಿಕೆ ಜೊತೆಗೆ ಮಾತು ಕೂಡ ಮುಖ್ಯವಾಗುತ್ತದೆ. ಸಂಭೋಗದ ವೇಳೆ ನಡೆಸುವ ಮಾತಿಗೆ ಗಡಿಯಿದೆ. ಕಂಡ ಕಂಡಿದ್ದನ್ನು ಮಾತನಾಡಿದ್ರೆ ಅದು ರೋಮ್ಯಾನ್ಸ್ ಹೆಚ್ಚಿಸುವ ಬದಲು ಸಮಸ್ಯೆಯನ್ನುಂಟು ಮಾಡುತ್ತದೆ. ಸೆಕ್ಸ್ ವೇಳೆ ಡರ್ಟಿ ಟಾಕ್ (Dirty Talks) ಇಂಪಾರ್ಟೆಂಟ್ ಆಗುತ್ತದೆ. ಡರ್ಟಿ ಟಾಕ್ ಇಬ್ಬರ ಮಧ್ಯೆ ಉತ್ತೇಜನವನ್ನು ಹೆಚ್ಚಿಸುತ್ತದೆ. ಇಂದ್ರಿಯಗಳನ್ನು ಉದ್ರೇಕಗೊಳಿಸುತ್ತದೆ. ಸಂಭೋಗದ ವೇಳೆ ಡರ್ಟಿ ಟಾಕ್ ಅಂದ್ರೇನು ಹಾಗೆ ಏನೆಲ್ಲ ಮಾತನಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.  

ಡರ್ಟಿ ಟಾಕ್ ನಲ್ಲಿರುತ್ತೆ ಈ ವಿಷ್ಯಗಳು: ಲೈಂಗಿಕ ಆರೋಗ್ಯ, ಜನನ ನಿಯಂತ್ರಣ, ಹೊಸ ಪ್ರಯೋಗಗಳು, ಲೈಂಗಿಕ ಸಮಯದಲ್ಲಿ ಪಾಲುದಾರರ ಇಷ್ಟಗಳು ಹಾಗೂ ಇಷ್ಟವಿಲ್ಲ ವಿಷ್ಯಗಳನ್ನು ಇದು ಒಳಗೊಂಡಿರುತ್ತದೆ.

ಇದನ್ನೂ ಓದಿ: PARENTING TIPS: ಮಕ್ಕಳು ಈ ಕೆಲಸ ಮಾಡಿದ್ರೆ ಖುಷಿಯಲ್ಲಿ ತೇಲಾಡ್ತಾರೆ ಪಾಲಕರು

ಮಹಿಳೆಯರ ಲೈಂಗಿಕ ಆರೋಗ್ಯಕ್ಕೆ ಡರ್ಟಿ ಟಾಕ್ ಬಹಳ ಮುಖ್ಯ : ಮಹಿಳೆಯರಿಗೆ ಲೈಂಗಿಕತೆ ಕೇವಲ ದೈಹಿಕ ಕ್ರಿಯೆಯಲ್ಲ. ಇದು ಭಾವನಾತ್ಮಕ ಕ್ರಿಯೆಯಾಗಿದೆ. ಆದ್ದರಿಂದ ಅವಳು ಸಂಗಾತಿಯೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಹೊಂದಿಲ್ಲದಿದ್ದರೆ ಲೈಂಗಿಕ ತೃಪ್ತಿಯನ್ನು ಪಡೆಯುವುದಿಲ್ಲ. ಮಹಿಳೆಯರು ಸಾಮಾನ್ಯವಾಗಿ ತಮ್ಮ ಲೈಂಗಿಕ ಅಗತ್ಯತೆಗಳ ಬಗ್ಗೆ ತಮ್ಮ ಸಂಗಾತಿಯೊಂದಿಗೆ ಮಾತನಾಡಲು ಹಿಂಜರಿಯುತ್ತಾರೆ. ಆದರೆ ಅವರು ತಮ್ಮ ಅಭಿಪ್ರಾಯವನ್ನು ಹೇಳದೆ ಹೋದ್ರೆ ಅದು ಸಂಗಾತಿಗೆ ತಿಳಿಯುವುದಿಲ್ಲ. ಹಾಗಾಗಿ ಸೆಕ್ಸ್ ಸಂದರ್ಭದಲ್ಲಿ ಮಹಿಳೆಯರು ತಮಗೆ ಯಾವುದು ಇಷ್ಟ, ಯಾವುದ್ರಿಂದ ಹೆಚ್ಚು ತೃಪ್ತಿ ಸಿಗುತ್ತದೆ ಎಂಬುದನ್ನು ಅವರಿಗೆ ಹೇಳ್ಬೇಕು.

ಸೆಕ್ಸಿ ಶಬ್ಧದ ಬಳಕೆ : ಪರಾಕಾಷ್ಠೆ ತಲುಪುವ ಸಂದರ್ಭದಲ್ಲಿ ಸೆಕ್ಸಿ ಶಬ್ಧಗಳನ್ನು ನೀವು ಪ್ರಯೋಗ ಮಾಡಬೇಕು. ಸಂಭೋಗದ ವೇಳೆ ಕೊಳಕು ಪದ ಅಸಹ್ಯವೆನ್ನಿಸುವುದಿಲ್ಲ. ಇದು ಸಂಗಾತಿಯನ್ನು ಮತ್ತಷ್ಟು ಉತ್ತೇಜಿಸುತ್ತದೆ.

ಪರಸ್ಪರ ಹೊಗಳಿಕೆ : ಸಂಭೋಗದ ವೇಳೆ ಪರಸ್ಪರ ಹೊಗಳಿಕೆ ಕೂಡ ಮುಖ್ಯವಾಗುತ್ತದೆ. ಸಂಗಾತಿಯ ದೇಹದ ಬಗ್ಗೆ, ಮುತ್ತು ನೀಡುವು ವಿಧಾನದ ಬಗ್ಗೆ ಅಥವಾ ಅವರು ಪ್ರೀತಿ ವ್ಯಕ್ತಪಡಿಸುವ ರೀತಿಯ ಬಗ್ಗೆ ನೀವು ಹೊಗಳಬೇಕು. ಅವರ ಕಿವಿಯಲ್ಲಿ ಇದು ನನಗೆ ಇಷ್ಟ, ದೇಹದ ಪ್ರತಿ ಭಾಗಕ್ಕೂ ಮುತ್ತಿಡು ಹೀಗೆ ಅನೇಕ ವಿಷ್ಯಗಳನ್ನು ಹೇಳ್ತಿದ್ದರೆ ಅವರು ಮತ್ತಷ್ಟು ಉತ್ಸಾಹಿತರಾಗ್ತಾರೆ. 

ಇದನ್ನೂ ಓದಿ: Relationship Tips : ಸೆಕ್ಸ್ ಸುಖ ಡಬಲ್ ಆಗ್ಬೇಕೆಂದ್ರೆ ಮಹಿಳೆಯರು ಈ ತಪ್ಪು ಮಾಡ್ಬೇಡಿ

ಡರ್ಟಿ ಟಾಕ್ ನಲ್ಲಿ ಯಶಸ್ವಿಯಾಗುವ ಮಂತ್ರ : 
ಸಂಭೋಗದ ವೇಳೆ ಮೃದುವಾದ ಹಾಗೂ ಮಾದಕ ಧ್ವನಿಯಲ್ಲಿ ನೀವು ಸಂಗಾತಿ ಜೊತೆ ಮಾತನಾಡ್ಬೇಕು. ದೊಡ್ಡದಾಗಿ ಕಿರುಚಿದ್ರೆ ಅದು ಅವರಿಗೆ ಕಿರಿಕಿರಿ ಎನ್ನಿಸುತ್ತದೆ. ಜೊತೆಗೆ ನಿಮ್ಮ ಭಾವನೆ ಅವರನ್ನು ತಲುಪಲು ಸಾಧ್ಯವಿಲ್ಲ. ನೀವಿನ್ನೂ ಹೊಸಬರಾಗಿದ್ದು, ಡರ್ಟಿ ಟಾಕ್ ಪ್ರಯತ್ನಕ್ಕೆ ಕೈ ಹಾಕಿದ್ದರೆ ಸಂಗಾತಿ ಕಿವಿಯಲ್ಲಿ ಪಿಸುಗುಟ್ಟಬಹುದು. ಅವರ ಹತ್ತಿರಕ್ಕೆ ಹೋಗಿ ಮಾದಕ ಧ್ವನಿಯಲ್ಲಿ ನಿಮ್ಮ ಭಾವನೆ ಹಂಚಿಕೊಳ್ಳಿ. ಪದಗಳ ಬಳಕೆ ವೇಳೆಯೂ ಗಮನವಿರಲಿ. ನಿಮ್ಮ ಪದಬಳಕೆ ತಮಾಷೆಯಾಗಿರದಂತೆ ನೋಡಿಕೊಳ್ಳಿ. ಇದೆಲ್ಲವೂ ಹೊಸದು, ಸಾಧ್ಯವೇ ಇಲ್ಲ ಎನ್ನುವವರು ಕನ್ನಡಿ ಮುಂದೆ ನಿಂತುಕೊಂಡು ಪ್ರಾಕ್ಟೀಸ್ ಮಾಡ್ಬಹುದು. ನಂತ್ರ ಸಂಗಾತಿ ಮುಂದೆ ಮುಜುಗರವಿಲ್ಲದೆ ಹೇಳ್ಬಹುದು. ನಿಮ್ಮ ದಾಂಪತ್ಯ ಸುಖಕರವಾಗಿರಲು ಈ ಎಲ್ಲವೂ ಮಹತ್ವ ಪಡೆಯುತ್ತದೆ ಎಂಬುದು ನೆನಪಿರಲಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌