Marriage Problems: ಯುವತಿಯನ್ನು ಈ ಕಾರಣಕ್ಕೆ ರಿಜೆಕ್ಟ್ ಮಾಡ್ತಿದ್ದಾರೆ ಹುಡುಗ್ರು

By Suvarna News  |  First Published May 14, 2022, 12:35 PM IST

ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಬೇಗ ಮದುವೆ (Marriage) ಮಾಡ್ಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಸೂಕ್ತ ವರ (Groom) ಸಿಕ್ಕಿ ಮದುವೆಯಾಗೋದು ಸುಲಭವಲ್ಲ. ಸಂಗಾತಿ ಹೀಗಿರಬೇಕೆಂದು ಕನಸು ಕಾಣುವ ಜನರು ಅನೇಕ ಕಾರಣಕ್ಕೆ ಹುಡುಗಿಯರನ್ನು (Girls) ಒಪ್ಪಿಕೊಳ್ಳುವುದಿಲ್ಲ.


ಮನುಷ್ಯ (Human) ನ ಬಣ್ಣ (Color) ಕ್ಕಿಂತ ಸ್ವಭಾವ (Nature) ಬಹಳ ಮುಖ್ಯ. ಈ ವಿಷ್ಯವನ್ನು ಪ್ರತಿಯೊಬ್ಬ ವ್ಯಕ್ತಿ ತಿಳಿದಿರಬೇಕು. ಆದ್ರೆ ಈಗ್ಲೂ ಜನರು ಸೌಂದರ್ಯ (Beauty) ಕ್ಕೆ ಮಹತ್ವ ನೀಡ್ತಿದ್ದಾರೆ. ಕಪ್ಪು – ಬಿಳಿ ಬಣ್ಣದ ಮಧ್ಯೆ ತಾರತಮ್ಯ ನಡೆಯುತ್ತಿದೆ. ಡಾರ್ಕ್ ಸ್ಕಿನ್ ಹೊಂದಿರುವುದು ಈಗ್ಲೂ ಭಾರತದಲ್ಲಿ ಮಹಿಳೆಯರಿಗೆ ಶಾಪವಾಗಿದೆ. ಹೆಣ್ಣು ಮಕ್ಕಳ ಭಾರ ಎಂದುಕೊಳ್ಳುವ ತಂದೆ – ತಾಯಿಗೆ ಬಣ್ಣವೂ ದೊಡ್ಡ ಹೊರೆಯಾಗ್ತಿದೆ. ಕಪ್ಪು ಮೈಬಣ್ಣದ ಮಗು ಹುಟ್ಟಿದ್ರೆ ಪಾಲಕರಿಗೆ ತಲೆನೋವು ಶುರುವಾಗುತ್ತದೆ. ಮದುವೆ ಹೇಗೆ ಎಂಬ ಪ್ರಶ್ನೆ ಕಾಡುತ್ತದೆ. ಅವಿವಾಹಿತ ಯುವತಿಯೊಬ್ಬಳು ತನ್ನ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಂಡಿದ್ದಾಳೆ. ಮದುವೆಯಾಗು ಆಕೆ ಕನಸು ದಿನ ದಿನಕ್ಕೂ ಕಮರುತ್ತಿದೆ. ಹುಡುಗರ ತಾತ್ಸಾರ ಆಕೆಯ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿದೆ. 

ಬಣ್ಣವೇ ಶಾಪವಾಯ್ತಾ? : ಆಕೆ ವಯಸ್ಸು 29 ವರ್ಷ. ಅರ್ಥಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿಯಾಗಿದೆ. ಆರ್ಥಿಕವಾಗಿ ಸದೃಢವಾಗಿದ್ದಾಳೆ. ತಂದೆ – ತಾಯಿಯನ್ನು ನೋಡಿಕೊಳ್ಳುವ ಸಾಮರ್ಥ್ಯ ಆಕೆಗಿದೆ. ಆದ್ರೆ ಕಳೆದ ಕೆಲ ವರ್ಷಗಳಿಂದ ತಂದೆ – ತಾಯಿ ಗಂಡು ಹುಡುಕುವುದೇ ಕೆಲಸವಾಗಿದೆಯಂತೆ. ಯುವತಿ ಕಪ್ಪಗಿದ್ದಾಳೆ ಎಂಬ ಒಂದೇ ಕಾರಣಕ್ಕೆ ಆಕೆಯನ್ನು ಹುಡುಗ್ರು ರಿಜೆಕ್ಟ್ ಮಾಡ್ತಿದ್ದಾರಂತೆ. ಇದ್ರಿಂದ ನನ್ನ ಆತ್ಮವಿಶ್ವಾಸ ಕುಗ್ಗುತ್ತಿದೆ. ನನ್ನ ಮೇಲೆ ನನಗೆ ಬೇಸರವಾಗ್ತಿದೆ. ಧೈರ್ಯವಾಗಿ ಕೆಲಸ ಮಾಡಲು ಸಾಧ್ಯವಾಗ್ತಿಲ್ಲ ಎಂದಿದ್ದಾಳೆ ಆಕೆ.

Tap to resize

Latest Videos

ನಿಮ್ಮ ವೈವಾಹಿಕ ಜೀವನವನ್ನು ಯಶಸ್ವಿಗೊಳಿಸುವ ಸೂತ್ರಗಳಿವು...

ಕಿತ್ತು ತಿನ್ನುತ್ತಿದೆ ಮಾಜಿ ಗೆಳೆಯನ ನೆನಪು : ಈ ನೋವಿನ ಮಧ್ಯೆ ಆಕೆಗೆ ಮಾಜಿ ಗೆಳೆಯನ ನೆನಪು ಕಾಡ್ತಿದೆಯಂತೆ. ಕಾಲೇಜಿನಲ್ಲಿರುವಾಗ ಆಕೆ ಸಂಬಂಧದಲ್ಲಿದ್ದಳಂತೆ. ಇಬ್ಬರು ಒಟ್ಟಿಗಿದ್ದರಂತೆ. ಆತನನ್ನು ಪ್ರೀತಿಸುತ್ತಿದ್ದ ಯುವತಿ, ಶಾರೀರಿಕ ಸಂಬಂಧ ಕೂಡ ಬೆಳೆಸಿದ್ದಳಂತೆ. ಆದ್ರೆ ಕಾಲೇಜು ಮುಗಿಯುತ್ತಿದ್ದಂತೆ ಇಬ್ಬರು ಬೇರೆಯಾಗಿದ್ದರಂತೆ. ಆತನನ್ನು ಹುಡುಕುವ ಸಾಕಷ್ಟು ಪ್ರಯತ್ನವನ್ನು ಯುವತಿ ಮಾಡಿದ್ದಳಂತೆ. ಆದ್ರೆ ಎಷ್ಟು ಹುಡುಕಿದ್ರೂ ಆಕೆಗೆ ಆತ ಸಿಕ್ಕಿರಲಿಲ್ಲವಂತೆ. ಈ ಮಧ್ಯೆ ಆತನ ಸ್ನೇಹಿತ ಯುವತಿಗೆ ಹೇಳಿದ ಮಾತು ಶಾಕ್ ನೀಡಿತ್ತಂತೆ. ನಿನ್ನ ಮೇಲೆ ಪ್ರೀತಿ ಇಲ್ಲದ ವ್ಯಕ್ತಿಯನ್ನು ಏಕೆ ಹುಡುಕುತ್ತೀಯಾ ಎಂದು ಆತ ಕೇಳಿದ್ದನಂತೆ. 

ಇಡೀ ಕಾಲೇಜಿಗೆ ನಿಮ್ಮ ವಿಷ್ಯ ತಿಳಿದಿತ್ತು. ಆತ ನಿನ್ನನ್ನು ಟೈಂ ಪಾಸ್ ಗೆ ಪ್ರೀತಿ ಮಾಡ್ತಿದ್ದ. ನಿನ್ನ ಬಣ್ಣದ ಬಗ್ಗೆ ಆತ ಆಡಿಕೊಳ್ತಿಲ್ಲ. ನಿನ್ನನ್ನು ಆತ ಕಾಲಿ ಎಂದೇ ಕರೆಯುತ್ತಿದ್ದ. ನಿನ್ನ ಬಗ್ಗೆ ಆತನಿಗೆ ಸ್ವಲ್ಪವೂ ಪ್ರೀತಿ ಇರಲಿಲ್ಲ ಎಂದಿದ್ದಾನೆ ಸ್ನೇಹಿತ.  ಆ ದಿನದ ನಂತ್ರ ನನಗೆ ಮತ್ತಷ್ಟು ನೋವಾಯ್ತು ಎಂದಿದ್ದಾಳೆ ಯುವತಿ. ಮದುವೆಯಾಗ್ತಿಲ್ಲವೆಂದು ಕೊರಗುತ್ತಿರುವ ಪಾಲಕರಿಗೆ ಹೇಗೆ ನೆರವಾಗ್ಬೇಕು ಎಂಬುದು ನನಗೆ ಗೊತ್ತಿಲ್ಲವೆಂದು ಆಕೆ ಹೇಳಿದ್ದಾಳೆ.

Extramarital Affairs : ಆಸ್ಪತ್ರೆ ಬೆಡ್ ನಲ್ಲಿ ಹೆಂಡತಿ.. ಪಾರ್ಕ್ ನಲ್ಲಿ ಇನ್ನೊಬ್ಬಳ ಜೊತೆ ಪತಿ

ತಜ್ಞರ ಸಲಹೆ : ನಮ್ಮ ದೇಶ ಎಷ್ಟು ಬದಲಾಗಿದೆ ಎಂದ್ರೂ ಇಂಥ ಸಮಸ್ಯೆ ಇನ್ನೂ ಜೀವಂತವಾಗಿದೆ. ಇಲ್ಲಿ ಬಣ್ಣಕ್ಕೆ ಮಹತ್ವ ನೀಡಲಾಗುತ್ತದೆ. ಬಣ್ಣ ನೋಡಿ ಮದುವೆ ನಿರಾಕರಿಸಿದ್ರೆ ಅದರಲ್ಲಿ ನಿಮ್ಮ ತಪ್ಪಿಲ್ಲ. ಹಾಗೆ ಹಳೆ ವಿಷ್ಯವನ್ನು ಮತ್ತೆ ನೆನಪಿಸುವ ಅಗತ್ಯವಿಲ್ಲ. ಪ್ರೀತಿ ಇಲ್ಲದ ವ್ಯಕ್ತಿ ಹುಡುಕಾಟ ನಡೆಸುವುದು ಪ್ರಯೋಜನವಿಲ್ಲ. ಕಳೆದು ಹೋದ ದಿನಗಳನ್ನು ನೆನಪು ಮಾಡಿಕೊಂಡು ನೋವು ತಿನ್ನುವುದರಿಂದಲೂ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.

ಪಿಎಚ್ಡಿ ಮಾಡುವ ತಯಾರಿ ನಡೆಸಿದ್ದೀರಿ ಎನ್ನುವ ನೀವು ನಿಮ್ಮ ಕುಟುಂಬವನ್ನು ನೋಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದೀರಿ. ನಿಮ್ಮ ತಂದೆ – ತಾಯಿಗೆ ವಿಶ್ವಾಸ ನೀಡಬೇಕು. ಹಾಗೆ ನಿಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ನೀವು ಖುಷಿಯಾಗಿದ್ದರೆ ನಿಮ್ಮ ಕುಟುಂಬದವರೂ ಖುಷಿಯಾಗಿರ್ತಾರೆ. ನೀವು ಒಳ್ಳೆಯ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮನ್ನು ಮನಸ್ಸಿನಿಂದ ಪ್ರೀತಿಸುವ ವ್ಯಕ್ತಿಯನ್ನು ಮದುವೆಯಾಗಲು ಪ್ರಯತ್ನಿಸಿ. ಮದುವೆಯಾಗಿಲ್ಲವೆಂಬುದನ್ನು ಕಾರಣ ಮಾಡಿಕೊಂಡು ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

click me!