ಮದುವೆಯೆಂದ್ಮೇಲೆ ಸಣ್ಣಪುಟ್ಟ ಸಮಸ್ಯೆ ಇದ್ದಿದ್ದೆ. ಮದುವೆಯಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿರಬೇಕೆಂದ್ರೆ ಕಷ್ಟವಾಗುತ್ತದೆ. ಆದ್ರೆ ಈ ಮಹಿಳೆಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ಮದುವೆ ನಿಲ್ಲಿಸಿದ್ದಾಳೆ. ಕೊನೆಯಲ್ಲಿ ಅಂತೂ ಮದುವೆಯಾಗಿದೆ.
ಮದುವೆ (Marriage) ಜೀವನದಲ್ಲಿ ಒಮ್ಮೆ ಆಗುವಂತಹದ್ದು. ಆ ಮದುವೆ ಕ್ಷಣ, ದಿನಗಳು ಸದಾ ನೆನಪಿನಲ್ಲಿರಬೇಕು. ಮದುವೆಗಾಗಿ ಜನರು ತಿಂಗಳ ಮೊದಲೇ ತಯಾರಿ ನಡೆಸುತ್ತಾರೆ. ಮದುವೆಗೆ ಥೀಮ್ ಸಿದ್ಧಪಡಿಸಿ, ಅದಕ್ಕೆ ತಕ್ಕಂತೆ ಡ್ರೆಸ್ (Dress) ಧರಿಸುತ್ತಾರೆ. ಮದುವೆ ಡ್ರೆಸ್ ಎಲ್ಲರ ಗಮನ ಸೆಳೆಯುವುದು ಮಾತ್ರವಲ್ಲ ದುಬಾರಿ (Expensive) ಕೂಡ ಹೌದು ಎಂಬುದನ್ನು ನಾವು ಪ್ರತ್ಯೇಕವಾಗಿ ಕೇಳ್ಬೇಕಾಗಿಲ್ಲ. ಮದುವೆ ದಿನ ಏನು ಸಮಸ್ಯೆಯಾದ್ರೂ ಹುಡುಗಿಯರು ಸಹಿಸ್ತಾರೆ. ಆದ್ರೆ ಡ್ರೆಸ್ ನಲ್ಲಿ ಸಮಸ್ಯೆಯಾದರೆ ಸಹಿಸೋದು ಕಷ್ಟ. ಸರಿಯಾದ ಫಿಟ್ಟಿಂಗ್ ಜೊತೆ ಅದಕ್ಕೆ ತಕ್ಕಂತೆ ಆಭರಣಗಳನ್ನು ಧರಿಸಲು ಹುಡುಗಿಯರು ಆದ್ಯತೆ ನೀಡ್ತಾರೆ. ಸಾಮಾಜಿಕ ಜಾಲತಾಣಗಳು ಈಗ ಎಲ್ಲರ ಫೆವರೆಟ್. ಸಾಮಾಜಿಕ ಜಾಲತಾಣದಲ್ಲಿ ಅನೇಕ ಚಿತ್ರ – ವಿಚಿತ್ರ ವಿಡಿಯೋಗಳು ಹರಿದಾಡ್ತಿರುತ್ತವೆ. ಜನರು ತಮ್ಮ ಸಂತೋಷದ ಕ್ಷಣದಿಂದ ಹಿಡಿದು ದುಃಖದ ಸಮಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಅದನ್ನು ಹಂಚಿಕೊಳ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಮದುವೆ ವೀಡಿಯೊಗಳು ಅಥವಾ ವೈರಲ್ ಫೋಟೋಗಳನ್ನು ನಾವು ಪ್ರತಿ ದಿನ ನೋಡ್ತಿರುತ್ತೇವೆ. ಮದುವೆ ಮಂಟಪದಲ್ಲಿ ವಧು-ವರರು ಚೇಷ್ಟೆ ಮಾಡಿದ ಸುದ್ದಿಗಳು, ಘಟನೆಗಳು ಆಗಾಗ ವೈರಲ್ ಆಗ್ತಿರುತ್ತವೆ. ಇತ್ತೀಚಿನ ದಿನಗಳಲ್ಲಿ ಜನರು ಮದುವೆಯನ್ನು ತಮ್ಮಿಷ್ಟದಂತೆ ಮಾಡಿಕೊಳ್ತಾರೆ. ಮೊದಲೇ ಹೇಳಿದಂತೆ ಮದುವೆಯ ಸಾಂಪ್ರದಾಯಕ್ಕಿಂತ ಫ್ಯಾಷನ್, ಫೋಟೋಗ್ರಾಫಿ ಮಹತ್ವ ಪಡೆಯುತ್ತಿದೆ. ಹಾಗಾಗಿಯೇ ಮದುವೆ ಸಂದರ್ಭದಲ್ಲಿ ಪರ್ಫೆಕ್ಟ್ ಕಾಣ್ಬೇಕೆಂದು ಎಲ್ಲರೂ ಬಯಸ್ತಾರೆ. ದುಬೈನಲ್ಲಿ ವಧುವೊಬ್ಬಳು ವಿಶೇಷ ಕಾರಣಕ್ಕೆ ತನ್ನ ಮದುವೆ ನಿಲ್ಲಿಸಿದ್ದಾಳೆ. ಆಕೆ ಮದುವೆ ನಿಲ್ಲಿಸಿದ ಕಾರಣ ಕೇಳಿದ್ರೆ ನೀವೂ ದಂಗಾಗ್ತಿರಾ. ಆಕೆ ಮದುವೆ ನಿಲ್ಲಿಸಿದ್ದು ಏಕೆ ಎಂಬುದನ್ನು ನಾವಿಂದು ಹೇಳ್ತೇವೆ.
ದುಬೈ ಮದುವೆಯಲ್ಲಿ ನಡೆದಿದ್ದು ಏನು? : ಈ ಘಟನೆ ದುಬೈನ ಮದುವೆ ಮಂಟಪದಲ್ಲಿ ನಡೆದಿದೆ. ವರದಿಗಳ ಪ್ರಕಾರ, ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಕಂಪನಿಯ ಮಾಲೀಕೆ ಮದುವೆಯಾಗ್ತಿದ್ದಳು. ಆಕೆ ವಧುವಿನ ಬಟ್ಟೆ ಧರಿಸಿದ್ದಳು. ಮಂಟಪ ಸಿಂಗಾರಗೊಂಡಿತ್ತು. ಮದುವೆ ಸಮಾರಂಭಕ್ಕೆ ನೂರಾರು ಮಂದಿ ಬಂದಿದ್ದರು. ಎಲ್ಲರೂ ಮದುವೆ ಕ್ಷಣವನ್ನು ಕಣ್ತುಂಬಿಕೊಳ್ಳುವ ಕಾತುರದಲ್ಲಿದ್ದರು. ಇನ್ನೇನು ಮದುವೆ ಪೂರ್ಣಗೊಳ್ಳಬೇಕು ಆದ್ರೆ ವಧು ಮದುವೆ ನಿಲ್ಲಿಸಿದ್ದಳು.
RELATIONSHIP TIPS : ನಿಮ್ಮ ಪ್ರೀತಿ ಈಗಷ್ಟೇ ಶುರುವಾಗಿದ್ರೆ, ಈ ತಪ್ಪುಗಳನ್ನು ಮಾಡಲೇಬೇಡಿ
ಮದುವೆ ನಿಲ್ಲಿಸಲು ಡ್ರೆಸ್ ಕಾರಣ : ಮದುವೆ ಮಂಟಪಕ್ಕೆ ಬರ್ತಿದ್ದಂತೆ ವಧುವಿನ ಗಮನ ಡ್ರೆಸ್ ಮೇಲೆ ಹೋಗಿದೆ. ತನ್ನ ಡ್ರೆಸ್ ಅಪೂರ್ಣವಾಗಿದೆ ಎಂಬುದು ಅದಕ್ಕೆ ಗೊತ್ತಾಗಿದೆ. ತಕ್ಷಣ ಗೆಳತಿಗೆ ವಿಷ್ಯ ತಿಳಿಸಿದ್ದಾಳೆ. ಸರಿಯಾದ ಡ್ರೆಸ್ ವ್ಯವಸ್ಥೆ ಮಾಡುವಂತೆ ಹೇಳಿದ್ದಾಳೆ. ಪಕ್ಕದಲ್ಲಿದ್ದ ಮೈಕ್ ತೆಗೆದುಕೊಂಡ ವಧು, ಮದುವೆ ನಿಲ್ಲಿಸುವ ನಿರ್ಧಾರ ತೆಗೆದುಕೊಂಡಿದ್ದಾಳೆ. ಅದನ್ನು ಮೈಕ್ ನಲ್ಲಿ ಹೇಳಿದ್ದಾಳೆ. ನಂತ್ರ ಪಕ್ಕಕ್ಕೆ ಹೋಗಿ ಡ್ರೆಸ್ ಧರಿಸಿದ್ದಾಳೆ.
ಮತ್ತೆ ಶುರುವಾಯ್ತು ಮದುವೆ : ಮದುವೆ ಡ್ರೆಸ್ ಧರಿಸಿದ ವಧು ಮತ್ತೆ ಮಂಟಪಕ್ಕೆ ಬಂದಿದ್ದಾಳೆ. ನಂತ್ರ ಮದುವೆ ಸಮಾರಂಭಕ್ಕೆ ಚಾಲನೆ ಸಿಕ್ಕಿದೆ. ಮದುವೆ ಸುಸೂತ್ರವಾಗಿ ನಡೆದಿದೆ.
ಲೈಂಗಿಕ ಕ್ರಿಯೆ ಮಾಡದಿದ್ದರೆ ಹೀಗೆಲ್ಲಾ ಆಗುತ್ತೆ ಅನ್ನೋದು ನಿಮ್ಗೆ ಗೊತ್ತಿತ್ತಾ ?
ವಧು ಹೇಳೋದೇನು ? : ಈ ಘಟನೆಯನ್ನು ಉಲ್ಲೇಖಿಸಿದ ವಧು, ಆ ಸಮಯದಲ್ಲಿ ನಾನು ಮೈಕ್ ಹಿಡಿದು ನನ್ನ ಮದುವೆ ಸಮಾರಂಭವನ್ನು ನಿಲ್ಲಿಸಬೇಕಾಗಿತ್ತು. ಡ್ರೆಸ್ ಬದಲಾವಣೆಗೆ ಸಿದ್ಧನಾಗಬೇಕಾಗಿತ್ತು. ಇದು ನನಗೆ ದುಃಸ್ವಪ್ನದಂತಿತ್ತು. ನನ್ನ ಮದುವೆ ಹೀಗೆ ನಡೆಯುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಆದ್ರೆ ನನಗೆ ಎಲ್ಲರೂ ಬೆಂಬಲ ನೀಡಿದ್ದರು. ಮದುವೆ ಸಮಾರಂಭಕ್ಕೆ ಬಂದ ಜನರು ಯಾವುದೇ ರೀತಿಯಲ್ಲಿ ಇದನ್ನು ವಿರೋಧಿಸಲಿಲ್ಲ. ನನಗೆ ಸಂಪೂರ್ಣ ಬೆಂಬಲ ನೀಡಿದರು. ಇದ್ರಿಂದ ಮದುವೆ ಯಾವುದೇ ಸಮಸ್ಯೆಯಿಲ್ಲದೆ ನಡೆಯಿತು. ಆ ಕ್ಷಣ ಮೋಜಿನಿಂದ ಕೂಡಿತ್ತು ಎಂದು ವಧು ಹೇಳಿದ್ದಾಳೆ.