ಸ್ನೇಹಿತೆ ಪತಿ ಇನ್ನೊಬ್ಬಳ ಜೊತೆ ಕಂಡ್ರೆ ಏನು ಮಾಡ್ತೀರಾ? ನೇರವಾಗಿ ಹೋಗಿ ಆಕೆಗೆ ಹೇಳ್ತೇನೆ ಎನ್ನಬಹುದು ನೀವು. ಆದ್ರೆ ಹೇಳಿದ್ರೆ ಏನಾಗುತ್ತೆ ಎಂಬುದನ್ನು ಮತ್ತೆ ಹೇಗೆ ಹೇಳಬೇಕು ಎಂಬುದನ್ನೂ ನೀವು ತಿಳಿದಿರಬೇಕು. ನಿಮ್ಮ ಒಂದು ಮಾತು,ಸ್ನೇಹಿತೆ ಬಾಳನ್ನು ಹಾಳು ಮಾಡ್ಬಾರದು.
ಸ್ನೇಹ (Friendship) ಸಂಬಂಧ ಬಹಳ ಪವಿತ್ರವಾದದ್ದು. ಈ ಸಂಬಂಧ (Relationship) ದಲ್ಲಿ ಇಬ್ಬರು ತಮ್ಮ ಮನಸ್ಸಿನ ಪ್ರತಿಯೊಂದು ವಿಷ್ಯವನ್ನೂ ಆರಾಮವಾಗಿ ಹಂಚಿಕೊಳ್ತಾರೆ. ಸ್ನೇಹದಲ್ಲಿ ದ್ವೇಷ ಬಹಳ ಅಪರೂಪ. ಅನೇಕರು ಸ್ನೇಹದಲ್ಲಿ ಎಂದೂ ಕೆಟ್ಟದನ್ನು ಬಯಸುವುದಿಲ್ಲ. ತಮಗೆ ಕಷ್ಟ ಬಂದ್ರೂ ಸ್ನೇಹಿತರಿಗೆ ಬರಬಾರದು ಎನ್ನುವವರಿದ್ದಾರೆ. ಸ್ನೇಹಿತರು ಸದಾ ಖುಷಿಯಾಗಿರಬೇಕೆಂದು ಬಯಸುತ್ತಾರೆ. ಅದಕ್ಕಾಗಿ ತಮ್ಮ ಕೈಲಾದಷ್ಟು ಸಹಾಯ ಮಾಡ್ತಾರೆ. ಕೆಲವೊಂದು ಪರಿಸ್ಥಿತಿ ನಮ್ಮ ಕೈ ಮೀರಿರುತ್ತದೆ. ಸತ್ಯದಲ್ಲಿ ಎರಡು ವಿಧವಿದೆ. ಒಂದು ಕಹಿ ಸತ್ಯವಾದ್ರೆ ಇನ್ನೊಂದು ಪ್ರಿಯವಾದ ಸತ್ಯ. ಸಂದರ್ಭಕ್ಕೆ ತಕ್ಕಂತೆ ನಾವು ಇದನ್ನು ಬಳಸ್ತೇವೆ. ಸ್ನೇಹಿತರಿಗೆ ನೋವು ನೀಡಬಾರದು ಎನ್ನುವ ಕಾರಣಕ್ಕೆ ನಾವು ಕೆಲ ವಿಷ್ಯಗಳನ್ನು ಮುಚ್ಚಿಡುತ್ತೇವೆ. ಇದ್ರ ಹಿಂದೆ ಬೇರೆ ಯಾವುದೇ ದುರುದ್ದೇಶವಿರುವುದಿಲ್ಲ. ಸ್ನೇಹಿತೆಗೆ ದುಃಖವಾಗಬಾರದು ಎನ್ನುವ ಕಾರಣಕ್ಕೆ ಮಹಿಳೆಯೊಬ್ಬಳು ಕಠು ಸತ್ಯವನ್ನು ಮುಚ್ಚಿಟ್ಟಿದ್ದಾಳೆ. ಈ ಬಗ್ಗೆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.
ಇದು ಇಬ್ಬರು ಸ್ನೇಹಿತೆಯರ ವಿಷ್ಯ. ರಾಚೆಲ್ ಮತ್ತು ಜೆನ್ ಇಬ್ಬರು ಸ್ನೇಹಿತೆಯರು. ಇಬ್ಬರು ಮಕ್ಕಳ ಶಾಲೆಯಲ್ಲಿ ಮೊದಲು ಭೇಟಿಯಾಗಿದ್ದರು. ಆರಂಭದಲ್ಲಿ ಇಬ್ಬರು ಅಷ್ಟು ಹತ್ತಿರವಾಗಿರಲಿಲ್ಲ. ನಿಧಾನಕ್ಕೆ ಇಬ್ಬರು ಸ್ನೇಹಿತೆಯರಾದ್ರು. ಮಕ್ಕಳ ಶಾಲೆಗೆ ಇಬ್ಬರು ಒಟ್ಟಿಗೆ ಹೋಗ್ತಿದ್ದರು. ಆದ್ರೆ ಜೆನ್ ಬಾಳಿನಲ್ಲಿ ಬಿರುಗಾಳಿ ಎದ್ದಿತ್ತು. ಜೆನ್ ಗೆ ಕ್ಯಾನ್ಸರ್ ಎಂಬ ವಿಷ್ಯ ಎಲ್ಲರನ್ನು ಆಘಾತಗೊಳಿಸಿತ್ತು. ರಾಚೆಲ್ ಕೂಡ ಶಾಕ್ ಆಗಿದ್ದಳು. ಆದ್ರೆ ಯಾರೂ ಈ ಬಗ್ಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ಶಾಲೆಯಲ್ಲಿ ಈ ಬಗ್ಗೆ ಎಂದೂ ಗಾಸಿಪ್ ಮಾಡಲಿಲ್ಲ. ಜೆನ್ ನೋಡಿದ ವೇಳೆ ಸಹಾನುಭೂತಿಯ ನಗು ಮಾತ್ರ ಎಲ್ಲರ ಮುಖದಲ್ಲಿ ಕಾಣ್ತಾಯಿತ್ತು. ಇಬ್ಬರ ಮಧ್ಯೆ ಮಾತನಾಡಲು ವಿಷ್ಯವೇ ಇರಲಿಲ್ಲ. ಇಬ್ಬರೂ ಶಾಕ್ ನಲ್ಲಿದ್ದರು.
RELATIONSHIP TIPS : ನಿಮ್ಮ ಪ್ರೀತಿ ಈಗಷ್ಟೇ ಶುರುವಾಗಿದ್ರೆ, ಈ ತಪ್ಪುಗಳನ್ನು ಮಾಡಲೇಬೇಡಿ
ಜೆನ್ ವಯಸ್ಸು ಕೇವಲ 30 ವರ್ಷ. ಆಕೆ ಎಲ್ಲದರಲ್ಲೂ ಗಟ್ಟಿಯಾಗಿದ್ದಳು. ಕೀಮೋಥೆರಪಿ ನಂತ್ರ ಬಂದ ಜೆನ್ ತುಂಬಾ ದುರ್ಬಲವಾಗಿ ಕಾಣ್ತಿದ್ದಳಂತೆ. ವಯಸ್ಸಾದಂತೆ ಕಾಣ್ತಿದ್ದಳಂತೆ. ಆದ್ರೆ ಜೆನ್ ಕ್ಯಾನ್ಸರ್ ಶಾಕ್ ನಿಂದ ಹೊರ ಬರುವ ಪ್ರಯತ್ನ ಮಾಡ್ತಿದ್ದಂತೆ ರಾಚೆಲ್ ಗೆ ಮತ್ತೊಂದು ಆಘಾತವಾಗಿತ್ತಂತೆ.
ಜೆನ್ ಪತಿಯನ್ನು ರಾಚೆಲ್ ಕೆಲ ಬಾರಿ ಶಾಲೆಯಲ್ಲಿ ನೋಡಿದ್ದಳಂತೆ. ಅವನು ಎತ್ತರವಾಗಿದ್ದನಂತೆ. ತುಂಬಾ ಸುಂದರವಾಗಿದ್ದನಂತೆ. ಗುಂಗುರು ಕೂದಲಿನ ವ್ಯಕ್ತಿ ಆತ. ಆದ್ರೆ ಆ ದಿನ ರಾಚೆಲ್, ಜೆನ್ ಪತಿಯನ್ನು ಅದೇ ಸ್ಕೂಲಿನಲ್ಲಿ ಓದುತ್ತಿರುವ ಮಗುವಿನ ತಾಯಿ ಜೊತೆ ನೋಡಿದ್ದಳಂತೆ. ಕೆಫೆಯಲ್ಲಿ ಇಬ್ಬರೂ ಒಟ್ಟಿಗಿದ್ದರಂತೆ. ಆಕೆಗೆ ಕೆಲ ತಿಂಗಳ ಹಿಂದಷ್ಟೆ ವಿಚ್ಛೇದನವಾಗಿತ್ತಂತೆ. ಹೊಂಬಣ್ಣದ ಕೂದಲನ್ನು ಆಕೆ ಹೊಂದಿದ್ದಳಂತೆ. ಆಕೆ ಕೆಲ ದಿನಗಳ ಹಿಂದಷ್ಟೆ ಯೋಗ ಶಿಕ್ಷಕನ ಜೊತೆ ಓಡಿ ಹೋಗಿದ್ದಳು ಎಂಬ ಸುದ್ದಿ ಅನೇಕರಿಗೆ ತಿಳಿದಿತ್ತು ಎನ್ನುತ್ತಾಳೆ ರಾಚೆಲ್.
Relationship Tips : ಪತಿ ಮುಂದೆ ಖುಷಿ ನಾಟಕವಾಡೋದೇ ದುಬಾರಿಯಾಗ್ತಿದೆ
ಇಬ್ಬರನ್ನು ಒಟ್ಟಿಗೆ ನೋಡಿದ್ದರೂ ರಾಚೆಲ್ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದ್ರೆ ಮತ್ತೊಂದು ದಿನ ಇಬ್ಬರನ್ನು ಒಟ್ಟಿಗೆ ನೋಡಿದ್ದಳು. ಅಂದು ಅವ್ರ ಮುಂದೆ ಬರದ ರಾಚೆಲ್, ತುಂಬಾ ದಿನ ಸ್ಕೂಲಿಗೆ ಹೋಗಿರಲಿಲ್ಲವಂತೆ. ಸ್ನೇಹಿತೆಗೆ ಆಕೆ ಪತಿ ಮೋಸ ಮಾಡ್ತಿದ್ದಾನೆ ಎಂಬುದನ್ನು ಆಕೆಗೆ ನಂಬಲಾಗ್ತಿರಲಿಲ್ಲವಂತೆ. ಕೆಲ ದಿನಗಳ ನಂತ್ರ ಮತ್ತೆ ಆತ, ಆಕೆ ಜೊತೆ ಕಾಣಿಸಿಕೊಂಡಿದ್ದಾನಂತೆ. ಪಾರ್ಕ್ ನಲ್ಲಿ ಆಕೆ ಕೈ ಹಿಡಿದು ಮುತ್ತಿಡುತ್ತಿದ್ದನಂತೆ. ಪತ್ನಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರೆ ಪತಿ ಪಾರ್ಕ್ ನಲ್ಲಿ ಕುಳಿತು ಬೇರೆ ಮಹಿಳೆಗೆ ಮುತ್ತಿಡುವುದು ನನಗೆ ಆಘಾತವನ್ನುಂಟು ಮಾಡಿತ್ತು. ಈ ವಿಷ್ಯವನ್ನು ಸ್ನೇಹಿತೆಗೆ ಹೇಳಿಲ್ಲ. ಇದು ಗೊತ್ತಾದ್ರೆ ಆಕೆ ಮತ್ತಷ್ಟು ನೊಂದುಕೊಳ್ತಾಳೆ. ಆಕೆ ಆರೋಗ್ಯ ಮತ್ತಷ್ಟು ಹದಗೆಡುತ್ತದೆ. ಆದ್ರೆ ತುಂಬಾ ದಿನ ಇದನ್ನು ಮುಚ್ಚಿಟ್ಟು ಬದುಕಲು ನನಗೆ ಸಾಧ್ಯವಾಗ್ತಿಲ್ಲ ಎನ್ನುತ್ತಿದ್ದಾಳೆ ರಾಚೆಲ್.