
ಪ್ರೀತಿ, ಮದುವೆ, ಸಂಸಾರ ಎಲ್ಲವೂ ಸರಿಯಾಗಿದ್ದರೆ ದಾಂಪತ್ಯ ಜೀವನ ಹಾಲು-ಜೇನು. ಸಂಸಾರದಲ್ಲಿ ಜಗಳ, ಒಡಕು ಮತ್ತೇನೇನೋ ಇದ್ದರೆ ಕಗ್ಗಂಟು. ಅದರಲ್ಲೂ ಅನೈತಿಕ ಸಂಬಂಧ ಅನ್ನೊದು ಇತ್ತೀಚಿಗೆ ದಾಂಪತ್ಯದಲ್ಲಿ ತುಂಬಾ ಸಾಮಾನ್ಯವಾಗಿದೆ. ಗಂಡ-ಹೆಂಡತಿ ಮಧ್ಯೆ ಅವನು, ಅವಳು ಬರೋದು, ದಾಂಪತ್ಯದಲ್ಲಿ ಹುಳಿ ಹಿಂಡೋದು ಸಾಮಾನ್ಯವಾಗಿ ಹೋಗಿದೆ. ಇಲ್ಲೊಬ್ಬನ ಜೀವನದಲ್ಲೂ ಹಾಗೆಯೇ ಆಗಿದೆ. ಹೆಂಡತಿ ಗಂಡನನ್ನು ಬಿಟ್ಟು ಮತ್ತೊಬ್ಬನ ಹಿಂದೆ ಬಿದ್ದಿದ್ದಾಳೆ. ಇದನ್ನು ತಿಳಿದ ಗಂಡ ಅದಕ್ಕೆ ಬೇಸರ ಪಟ್ಕೊಂಡು ಸುಮ್ನಾಗಿಲ್ಲ. ಬದಲಿಗೆ ಹೆಂಡತಿಯೊಂದಿಗೆ ಓಡಿಹೋದ ವ್ಯಕ್ತಿಯ ಹೆಂಡತಿಯನ್ನೇ ಮದುವೆಯಾಗಿದ್ದಾನೆ.
ಇಂಥಹದ್ದೊಂದು ಘಟನೆ ಬಿಹಾರದ ಖಗರಿಯಾ ಜಿಲ್ಲೆಯ ಚೌಥಮ್ ಬ್ಲಾಕ್‌ನ ಹಾರ್ಡಿಯಾ ಎಂಬ ಗ್ರಾಮದಲ್ಲಿ ನಡೆದಿದೆ. ಮಾನಸಿಕ ಖಿನ್ನತೆಗೊಳಗಾದ ಪತಿಯೊಬ್ಬ ಇಲ್ಲಿನ ಖಗರಿಯಾ ಎಂಬಲ್ಲಿ ತನ್ನ ಹೆಂಡತಿಯ ಪ್ರೇಮಿಯ ಪತ್ನಿಯನ್ನೇ ವಿವಾಹವಾಗಿದ್ದಾನೆ.
ವಿವಾಹ ವಾರ್ಷಿಕೋತ್ಸವಕ್ಕೆ ವಿಶ್ ಮಾಡಲು ಮರೆತ ಪತಿಗೆ ಹಿಗ್ಗಾ ಮುಗ್ಗಾ ಗೂಸ,ಪತ್ನಿ ವಿರುದ್ಧ ದೂರು!
ಇಬ್ಬರ ದಾಂಪತ್ಯ ಜೀವನ (Married life) ಚೆನ್ನಾಗಿತ್ತು. ನಾಲ್ಕು ಮಕ್ಕಳು ಸಹ ಇದ್ದರು. ಈ ಮಧ್ಯೆ ಮಹಿಳೆ (Woman) ಗಂಡನನ್ನು ಬಿಟ್ಟು ಇನ್ನೊಬ್ಬ ವ್ಯಕ್ತಿಯ ಜೊತೆ ಓಡಿಹೋಗಿದ್ದಾಳೆ. ಇದರಿಂದ ಮನನೊಂದ ವ್ಯಕ್ತಿ ಹೆಂಡತಿ (Wife) ಓಡಿಹೋದ ವ್ಯಕ್ತಿಯ ಹೆಂಡತಿಯನ್ನೇ ಮದ್ವೆಯಾಗಿದ್ದಾನೆ. ವ್ಯಕ್ತಿ ಈ ರೀತಿಯ ವಿಲಕ್ಷಣ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿ ಹುಟ್ಟಿಸಿದೆ. ಖಗರಿಯಾ ಜಿಲ್ಲೆಯ ಪಟ್ಟಣದಲ್ಲಿ ನಡೆದ ಈ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ. ಇನ್ನೊಂದು ವಿಚಿತ್ರವೆಂದರೆ, ವಿವಾಹವಾದ ಇಬ್ಬರೂ ಮಹಿಳೆಯರ ಹೆಸರು ಕೂಡಾ ಒಂದೇ ಇದೆ. ರೂಬಿ ದೇವಿ ಎಂಬವಳು ಗಂಡನನ್ನು ಬಿಟ್ಟು ಓಡಿ ಹೋಗಿದ್ದಾಳೆ. ಇನ್ನೊಬ್ಬ ರೂಬಿ ದೇವಿಯನ್ನು ವ್ಯಕ್ತಿ ಮದುವೆಯಾಗಿದ್ದಾನೆ. ಇಡೀ ಕುಟುಂಬದ ಒಪ್ಪಿಗೆಯೊಂದಿಗೆ ಈ ವಿವಾಹ (Marriage) ನೆರವೇರಿಸಲಾಗಿದೆ.
ಘಟನೆಯ ವಿವರ ಹೀಗಿದೆ ?
ಬಿಹಾರ ಜಿಲ್ಲೆಯ ಚೌಥಮ್ ಬ್ಲಾಕ್‌ನ ಹಾರ್ಡಿಯಾ ಗ್ರಾಮದ ನಿವಾಸಿ ನೀರಜ್ 2009ರಲ್ಲಿ ರೂಬಿ ದೇವಿ ಎಂಬವರನ್ನು ವಿವಾಹವಾಗಿದ್ದರು. ದಂಪತಿಗೆ ನಾಲ್ಕು ಮಕ್ಕಳೂ (Children) ಇದ್ದಾರೆ, ಆದರೆ, ಇತ್ತೀಚೆಗೆ ರೂಬಿ, ಮುಖೇಶ್ ಎಂಬವನ ಜೊತೆಗೆ ಪ್ರೇಮ ಸಂಬಂಧ ಬೆಳೆಸಿಕೊಂಡಿದ್ದಳು. ಈತ ಇದೇ ಜಿಲ್ಲೆಯ ಪಾಸ್ರಾಹಾ ಗ್ರಾಮದ ನಿವಾಸಿಯಾಗಿದ್ದಾನೆ. ಮದುವೆಗೂ ಮುನ್ನ ರೂಬಿ ಪಾಸ್ರಾಹಾ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಆತನ ಜೊತೆಗೆ ದೀರ್ಘಕಾಲದವರೆಗೆ ಸಂಬಂಧ (Relationship) ಹೊಂದಿದ್ದಳು ಎಂದು ತಿಳಿದುಬಂದಿದೆ.
ವಿವಾಹ ಸಮಾರಂಭ ಟೈಮಲ್ಲೇ ಹೃದಯಾಘಾತದಿಂದ ಮೃತಪಟ್ಟ ವಧು: ತಂಗಿಯ ಜತೆ ಮದ್ವೆ ಮಾಡಿಕೊಟ್ಟ ಕುಟುಂಬ
ಹಾರ್ಡಿಯಾ ಗ್ರಾಮದ ನಿವಾಸಿ ನೀರಜ್ ಪತ್ನಿ ಮುಖೇಶ್ ಜೊತೆ ಓಡಿಹೋಗಿರುವ ವಿಷಯ ತಿಳಿದು ತಕ್ಷಣವೇ, ನೀರಜ್ ಮುಖೇಶ್ ವಿರುದ್ಧ ಪಸ್ರಾಹಾ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲು ಮಾಡಿದ್ದಾನೆ. ಈ ಸಮಸ್ಯೆಯನ್ನು ಪರಿಹರಿಸಲು ಗ್ರಾಮದಲ್ಲಿ ಪಂಚಾಯತಿ ಕೂಡಾ ನಡೆಸಲಾಗಿದೆ. ಆದರೆ ಮುಖೇಶ್ ಇದಕ್ಕೆ ಒಪ್ಪಲಿಲ್ಲ. ಹೀಗಿರುವಾಗ ಓಡಿಹೋಗಿರುವ ಜೋಡಿಯ (Couple) ಮೇಲೆ ಸೇಡು ತೀರಿಸಿಕೊಳ್ಳಲು ನೀರಜ್ ಪ್ಲಾನ್ ಮಾಡಿದ್ದಾನೆ.
ಮುಕೇಶ್ ಹೆಂಡತಿಯೊಂದಿಗೆ ಅಂದ್ರೆ, ಮಾನ್ಸಿ ಬ್ಲಾಕ್‌ನ ಆಮ್ನಿ ಗ್ರಾಮದ ರೂಬಿ ಎಂಬ ಮಹಿಳೆಯನ್ನು ಮದುವೆಯಾಗಲು ನಿರ್ಧರಿಸಿದ್ದಾನೆ. ನೀರಜ್ ಫೆಬ್ರವರಿ 18ರಂದು ಸ್ಥಳೀಯ ದೇವಾಲಯವೊಂದರಲ್ಲಿ ವಿವಾಹವಾಗಿದ್ದಾನೆ. ಈ ವಿಚಿತ್ರ ಮದುವೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಅದೇನೆ ಇರ್ಲಿ, ಹೆಂಡ್ತಿ ಓಡಿಹೋದಾಗ ಮುಂದೇನೆಂದು ತಿಳಿಯದೆ ಕಂಗಾಲಾಗುವವರ ಮಧ್ಯೆ ವ್ಯಕ್ತಿಯ ನಡೆ ಎಲ್ಲರ ಹುಬ್ಬೇರುವಂತೆ ಮಾಡಿದ್ದಂತೂ ಸುಳ್ಳಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.