ಅಪ್ಪನಾಗುವ ಸಂಭ್ರಮದಲ್ಲಿ Bigg Boss ವಿನ್ನರ್​ ಶಶಿ: ಸೀಮಂತದ ​ವಿಡಿಯೋ ಶೇರ್​ ಮಾಡಿಕೊಂಡ ನಟ

Published : Nov 02, 2026, 03:51 PM IST
Shashi kumar and Swathi

ಸಾರಾಂಶ

ಬಿಗ್ ಬಾಸ್ ಕನ್ನಡ ಸೀಸನ್ 6ರ ವಿಜೇತ ಹಾಗೂ ಮಾಡರ್ನ್ ರೈತ ಶಶಿ ಕುಮಾರ್ ಮತ್ತು ಪತ್ನಿ ಸ್ವಾತಿ ಅವರು ಶೀಘ್ರದಲ್ಲೇ ಅಪ್ಪ-ಅಮ್ಮನಾಗುತ್ತಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಕೃಷಿ ಮತ್ತು ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ಶಶಿ, ವಿಡಿಯೋ ಮೂಲಕ ಅಭಿಮಾನಿಗಳಿಗೆ ಈ ಸಂತಸದ ವಿಚಾರವನ್ನು ತಿಳಿಸಿದ್ದಾರೆ.

ಬೆಂಗಳೂರು: ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ ಸೀಸನ್ 6ರ ವಿನ್ನರ್​, ಮಾಡರ್ನ್​ ರೈತ ಎಂದೇ ಫೇಮಸ್​ ಆಗಿರೋ ಶಶಿ ಕುಮಾರ್ ಮತ್ತು ಸ್ವಾತಿ 2022ರ ಆಗಸ್ಟ್‌ 7ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅವರು ಅಪ್ಪ-ಅಮ್ಮನಾಗುವ ಸಂಭ್ರಮದಲ್ಲಿದ್ದು, ಇದರ ವಿಡಿಯೋ ಅನ್ನು ಶಶಿ ಅವರು ಶೇರ್​ ಮಾಡಿಕೊಂಡಿದ್ದಾರೆ. 2018-19ರಲ್ಲಿ ನಡೆದ 'ಬಿಗ್‌ ಬಾಸ್‌ ಕನ್ನಡ ಸೀಸನ್ 6' ರಲ್ಲಿ ಸಾಮಾನ್ಯ ಸ್ಪರ್ಧಿಯಾಗಿ (Commoner) ಎಂಟ್ರಿ ಕೊಟ್ಟು ಟ್ರೋಫಿ ಗೆದ್ದುಕೊಂಡವರು ಶಶಿ ಕುಮಾರ್​. ಅವರಿಗೆ 50 ಲಕ್ಷ ರೂ. ಬಹುಮಾನ ಸಿಕ್ಕಿತ್ತು. ಎಲ್ಲಾ ಕಳೆದು 36 ಲಕ್ಷ ರೂ. ಕೈಸೇರಿತ್ತು. ಇದೀಗ ಅವರು ಅಪ್ಪನಾಗುವ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ನಟನ ಹಿನ್ನೆಲೆ

ಕಿರುತೆರೆ, ಸಿನಿಮಾ ಮತ್ತು ಕೃಷಿಯಲ್ಲಿ ತೊಡಗಿಸಿಕೊಂಡಿರುವ ಶಶಿ ಕುಮಾರ್ ಮೂಲತಃ ಚಿಕ್ಕಬಳ್ಳಾಪುರದವರು. ಬೆಂಗಳೂರಿನ ಪ್ರತಿಷ್ಠಿತ ಜಿಕೆವಿಕೆಯಲ್ಲಿ ಕೃಷಿ ವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. ಬಿಗ್ ಬಾಸ್ ಶೋ ನಂತರ ಶಶಿ ಕುಮಾರ್ ಶುಗರ್ ಫ್ಯಾಕ್ಟರಿ, ಮೆಹಬೂಬ ಸಿನಿಮಾದಲ್ಲಿ ನಟಿಸಿದ್ದಾರೆ. ಮೆಹಬೂಬ ಚಿತ್ರಕ್ಕೆ 6 ಪ್ಯಾಕ್‌ ಕೂಡ ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಶಶಿ ಕುಮಾರ್ ಆರೋಗ್ಯದ ಬಗ್ಗೆ ಸುಲಭ ಕೃಷಿ ಮತ್ತು ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿ ಮಾಡುವುದರ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾರೆ.

ಪತ್ನಿ ಯಾರು?

ಆಗಸ್ಟ್ 6 ರಂದೇ ‘ಬಿಗ್ ಬಾಸ್ ಕನ್ನಡ ಓಟಿಟಿ 1’ ರಿಯಾಲಿಟಿ ಶೋ ಪ್ರೀಮಿಯರ್ ಸಂಚಿಕೆ ಪ್ರಸಾರವಾಯ್ತು. ಅಂದೇ, ‘ಬಿಗ್ ಬಾಸ್’ ವಿನ್ನರ್ ಶಶಿ ಕುಮಾರ್ ಅವರ ಆರತಕ್ಷತೆ ನಡೆದಿದ್ದು ವಿಶೇಷ. ಅಂದ್ಹಾಗೆ, ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕರ್ಟನ್ ರೇಸರ್ ಕಾರ್ಯಕ್ರಮದಲ್ಲೂ ಶಶಿ ಕುಮಾರ್ ಭಾಗವಹಿಸಿದ್ದರು. ಅಂದಹಾಗೆ, ಅವರ ಪತ್ನಿ ಸ್ವಾತಿ ಅವರು ಎಂಜಿನಿಯರಿಂಗ್ ಪದವೀಧರೆಯಾಗಿದ್ದು, ಮೂಲತಃ ದೊಡ್ಡಬಳ್ಳಾಪುರದವರು. ಇವರ ಕುಟುಂಬವು ಕೃಷಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಸ್ವಾತಿ ಅವರಿಗೂ ಬಣ್ಣದ ಬದುಕಿಗೂ ಯಾವುದೇ ನಂಟಿಲ್ಲ. ಶಶಿ ಕುಮಾರ್ ಅವರ ಜೊತೆ ಕೃಷಿ ಉದ್ಯಮವನ್ನು ಬೆಳೆಸಬೇಕು ಅನ್ನೋದು ತಮ್ಮ ಆಸೆ ಎಂದಿದ್ದರು.

ಕೃಷಿಯಲ್ಲಿ ಪದವಿ ಪಡೆದಿರುವ ಶಶಿಕುಮಾರ್​ ರೈತ ಎಂಬ ಮಾನದಂಡದ ಮೇಲೆಯೇ ಬಿಗ್​ಬಾಸ್​ಗೆ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದರು. ಶೋನಿಂದ ಹೊರ ಬಂದ ಮೇಲೆ ರೈತನಾಗಿ ಮುಂದುವರೆಯುತ್ತೇನೆ ಎಂದಿದ್ದರು. ರಿಯಾಲಿಟಿ ಕಾರ್ಯಕ್ರಮದಲ್ಲಿ ಖ್ಯಾತಿ ಪಡೆದ ಬಳಿಕ ಶಶಿಕುಮಾರ್, ನಟ ಸುದೀಪ್ ಅವರನ್ನು ಟೀಕಿಸಿ ವಿವಾದಕ್ಕೊಳಗಾಗಿದ್ದರು. ಬಳಿಕ ತಮ್ಮದೇ ಆದ ಸ್ವಂತ ಬ್ಯುಸಿನೆಸ್ ಆರಂಭಿಸಿದ್ದರು. ಜೊತೆಗೆ ಒಂದು ಸಿನಿಮಾ ಕೂಡ ಪ್ರಕಟ ಮಾಡಿದ್ದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಿಕ್ಷಕಿಯಾಗಿ ತಿಂಗಳಿಗೆ ₹800 ಸಂಬಳ ಪಡೆಯುತ್ತಿದ್ದ ನೀತಾ ಅಂಬಾನಿ; ಮುಖೇಶ್‌ ಅಂಬಾನಿ ಮದುವೆಗೆ ಮುನ್ನ ನೀತಾ ಹಾಕಿದ್ದ ಖಡಕ್ ಕಂಡೀಷನ್ ಏನು?
ದೀಪಾವಳಿ ಕ್ಲೀನಿಂಗ್ ವೇಳೆ ಸಿಕ್ತು ಕೋಟಿ ಮೌಲ್ಯದ ವಸ್ತು ! ಆಸ್ತಿಯಲ್ಲ, ಬಂಗಾರವಲ್ಲ ಮತ್ತೇನು?