'ಮದುವೆಯಾಗದಿದ್ದರೆ ಕೈ ಕೊಯ್ದುಕೊಂಡು ಸಾಯುತ್ತೇನೆ'; ಮೋಸ ಮಾಡಿದ ಲವರ್ ಮನೆ ಮೇಲ್ಛಾವಣಿ ಏರಿದ ಯುವತಿ! ವಿಡಿಯೋ ವೈರಲ್

Published : Nov 02, 2026, 01:13 PM IST
UP Girl

ಸಾರಾಂಶ

ಉತ್ತರಪ್ರದೇಶದಲ್ಲಿ ಮದುವೆಯಾಗುವುದಾಗಿ ನಂಬಿಸಿ ಯುವತಿಯ ಜತೆ ದೈಹಿಕ ಸಂಪರ್ಕ ಮಾಡಿ ಆ ಬಳಿಕ ಮದುವೆಗೆ ನಿರಾಕರಿಸಿದ್ದ ಯುವಕನಿಗೆ ಪಾಠ ಕಲಿಸಲು ಯುವತಿ ಮುಂದಾಗಿದ್ದಾಳೆ. ಆತನ ಮನೆಯ ಮೇಲ್ಚಾವಣಿ ಏರಿ, ಮದುವೆಗೆ ಡಿಮ್ಯಾಂಡ್ ಇಟ್ಟಿದ್ದಾಳೆ. ಆಮೇಲೆ ಏನೇನು ಅಯ್ತು ಎನ್ನುವುದನ್ನು ನೀವೇ ನೋಡಿ.

ಉತ್ತರ ಪ್ರದೇಶ: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ ಬಳಿಕ ಪ್ರಿಯಕರ ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾನೆ ಎಂದು ಆರೋಪಿಸಿ 21 ವರ್ಷದ ಯುವತಿಯೊಬ್ಬಳು ಆತನ ಮನೆಯ ಮೇಲ್ಛಾವಣಿ ಏರಿ ಹೈಡ್ರಾಮಾ ನಡೆಸಿರುವ ಘಟನೆ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ನಡೆದಿದೆ. ಅಕ್ಟೋಬರ್‌ 31ರ ಶನಿವಾರ ನಡೆದ ಈ ಘಟನೆ ಹಲವು ಗಂಟೆಗಳ ಕಾಲ ಮುಂದುವರಿದಿದೆ. ಯುವತಿ ಮೇಲ್ಛಾವಣಿಯಿಂದ ಕೆಳಗೆ ಜಿಗಿಯುವುದಾಗಿ ಬೆದರಿಕೆ ಹಾಕುತ್ತಿದ್ದಂತೆ ಮನೆಯ ಹೊರಗೆ ಜನರು ಜಮಾಯಿಸಿದ್ದರು. ಕೊನೆಗೆ ಪೊಲೀಸರು ಆಕೆಯ ಮನವೊಲಿಸಿ ಸುರಕ್ಷಿತವಾಗಿ ಕೆಳಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಬಳಿಕ ಯುವತಿ ಮತ್ತು ಆಕೆಯ ಪ್ರಿಯಕರ ಗೋಪಾಲ್‌ ಅವರನ್ನು ವಿಚಾರಣೆಗಾಗಿ ಹಟಾ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದೆ. ಈ ಘಟನೆಯ ವಿಡಿಯೋ ನವೆಂಬರ್‌ 1ರ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಎರಡು ವರ್ಷಗಳ ಪ್ರೀತಿಗೆ ಮದುವೆಯ ವಿಚಾರದಲ್ಲಿ ಬಿರುಕು?

ಯುವತಿ ಸ್ಥಳೀಯ ಪುರಸಭೆಯ ಪರಾಗ್‌ಪುರ ವಾರ್ಡ್‌ನಲ್ಲಿ ತನ್ನ ತಾಯಿಯ ಸಹೋದರನ ಮನೆಯಲ್ಲಿ ವಾಸಿಸುತ್ತಿದ್ದಾಳೆ. ಸುಮಾರು ಎರಡು ವರ್ಷಗಳ ಹಿಂದೆ ಹಟಾ ವಾಣಿಜ್ಯ ಪ್ರದೇಶದಲ್ಲಿ ಶಾಪಿಂಗ್‌ಗೆ ತೆರಳಿದ್ದಾಗ ಗೋಪಾಲ್‌ ಪರಿಚಯವಾಗಿದ್ದ. ಆರಂಭದಲ್ಲಿ ಸ್ನೇಹಿತರಾಗಿದ್ದ ಇಬ್ಬರ ನಡುವೆ ಬಳಿಕ ಪ್ರೇಮ ಸಂಬಂಧ ಬೆಳೆದಿತ್ತು ಎನ್ನಲಾಗಿದೆ.

ಯುವತಿಯ ಆರೋಪದ ಪ್ರಕಾರ, ಮದುವೆಯಾಗುವುದಾಗಿ ಭರವಸೆ ನೀಡಿದ್ದ ಗೋಪಾಲ್‌ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ. ಆದರೆ, ಸಂಬಂಧವನ್ನು ಮದುವೆಯ ಮೂಲಕ ಮುಂದುವರೆಸೋಣ ಎಂದು ಯುವತಿ ಒತ್ತಾಯಿಸಿದಾಗ ಗೋಪಾಲ್‌ ಆಕೆಯಿಂದ ದೂರವಾಗಲು ಆರಂಭಿಸಿದ್ದಾನೆ. ಅಲ್ಲದೆ, ಮದುವೆಯಾಗುವುದಾಗಿ ನೀಡಿದ್ದ ಭರವಸೆಯಿಂದ ಹಿಂದೆ ಸರಿಯುತ್ತಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.

ಎರಡು ವಾರಗಳ ಹಿಂದೆಯೇ ಅ*ತ್ಯಾ*ಚಾ*ರ*ದ ದೂರು ದಾಖಲು

ಮೇಲ್ಛಾವಣಿ ಏರಿ ಹೈಡ್ರಾಮಾ ನಡೆಸುವ ಘಟನೆಗೆ ಸುಮಾರು ಎರಡು ವಾರಗಳ ಮುನ್ನವೇ ಯುವತಿ ಗೋಪಾಲ್‌ ವಿರುದ್ಧ ಪೊಲೀಸರಿಗೆ ಲಿಖಿತ ದೂರು ನೀಡಿದ್ದಳು. ಮದುವೆಯಾಗುವುದಾಗಿ ನಂಬಿಸಿ ಅ*ತ್ಯಾ*ಚಾ*ರ* ಎಸಗಿದ್ದಾನೆ ಎಂದು ಆಕೆ ಆರೋಪಿಸಿದ್ದಳು. ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಇದಾದ ಬಳಿಕ ಶನಿವಾರ ಯುವತಿ ಬಾಗ್‌ಪತ್‌ ತಿರಾಹಾ ಸಮೀಪದಲ್ಲಿರುವ ಗೋಪಾಲ್‌ ಕುಟುಂಬದ ಮನೆಗೆ ತೆರಳಿದ್ದಾಳೆ. ಅಲ್ಲಿ ಆತನ ತಂದೆ ಪ್ರಮುಖ ಬಟ್ಟೆ ವ್ಯಾಪಾರ ನಡೆಸುತ್ತಿದ್ದಾರೆ ಎನ್ನಲಾಗಿದೆ. ಮನೆಗೆ ನುಗ್ಗಿದ ಯುವತಿ ನೇರವಾಗಿ ಮೇಲ್ಛಾವಣಿ ಏರಿ ಗೋಪಾಲ್‌ ತನ್ನನ್ನು ಮದುವೆಯಾಗಬೇಕು ಎಂದು ಪಟ್ಟು ಹಿಡಿದಿದ್ದಾಳೆ.

'ಮದುವೆಯಾಗದಿದ್ದರೆ ಕೈ ಕೊಯ್ದುಕೊಂಡು ಪ್ರಾಣ ಬಿಡುತ್ತೇನೆ!'

ಮೇಲ್ಛಾವಣಿ ಮೇಲೆ ನಿಂತಿದ್ದ ಯುವತಿ, ಕೆಳಗೆ ಜಮಾಯಿಸಿದ್ದ ಕುಟುಂಬಸ್ಥರು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ, “ನನ್ನನ್ನು ಮದುವೆಯಾಗಬೇಕು. ಇಲ್ಲದಿದ್ದರೆ ಕೈ ಮಣಿಕಟ್ಟಿನ ನರ ಕೊಯ್ದುಕೊಂಡು ಅ*ತ್ಯಾ*ಚಾ*ರ* ಮಾಡಿಕೊಳ್ಳುತ್ತೇನೆ,” ಎಂದು ಪದೇಪದೇ ಕೂಗಿದ್ದಾಳೆ ಎನ್ನಲಾಗಿದೆ. ಯುವತಿಯ ಈ ಬೆದರಿಕೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ನೆರೆಹೊರೆಯಲ್ಲಿ ಕೆಲಕಾಲ ಗೊಂದಲ ಉಂಟಾಗಿತ್ತು. ಮೇಲ್ಛಾವಣಿ ಏರಿ ಯುವತಿಯೊಬ್ಬಳು ಅ*ತ್ಯಾ*ಚಾ*ರ* ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಆಕೆಯೊಂದಿಗೆ ಮಾತುಕತೆ ಆರಂಭಿಸಿದರು.

ಯುವತಿಯನ್ನು ಸುರಕ್ಷಿತವಾಗಿ ಕೆಳಗಿಳಿಸಿದ ಪೊಲೀಸರು

ಪೊಲೀಸರು ಯುವತಿಯೊಂದಿಗೆ ಸತತವಾಗಿ ಮಾತನಾಡಿ, ಮೇಲ್ಛಾವಣಿಯ ಅಂಚಿನಿಂದ ದೂರ ಸರಿಯುವಂತೆ ಮನವೊಲಿಸಲು ಪ್ರಯತ್ನಿಸಿದರು. ಹಲವು ಗಂಟೆಗಳ ಮಾತುಕತೆ ಮತ್ತು ಮನವೊಲಿಕೆಯ ಬಳಿಕ ಕೊನೆಗೂ ಯಾವುದೇ ಗಾಯಗಳಾಗದಂತೆ ಆಕೆಯನ್ನು ಸುರಕ್ಷಿತವಾಗಿ ಕೆಳಗೆ ಕರೆತರುವಲ್ಲಿ ಯಶಸ್ವಿಯಾದರು.

ಬಳಿಕ ಗೋಪಾಲ್‌ ಮತ್ತು ಯುವತಿ ಇಬ್ಬರನ್ನೂ ವಿಚಾರಣೆಗಾಗಿ ಹಟಾ ಕೊತ್ವಾಲಿ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಯಿತು. ಈ ಕುರಿತು ಮಾಹಿತಿ ನೀಡಿರುವ ಹಟಾ ಪೊಲೀಸ್‌ ಠಾಣೆಯ ಉಸ್ತುವಾರಿ ಇನ್‌ಸ್ಪೆಕ್ಟರ್‌ ಧರ್ಮೇಂದ್ರ ಸಿಂಗ್‌, “ಯುವಕ ಮತ್ತು ಯುವತಿ ಇಬ್ಬರನ್ನೂ ಪೊಲೀಸ್‌ ಠಾಣೆಗೆ ಕರೆಸಲಾಗಿದೆ. ಈ ಸಂಬಂಧ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತಿದೆ,” ಎಂದು ತಿಳಿಸಿದ್ದಾರೆ. ಸದ್ಯ ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತಿರುಪತಿಯಿಂದ ತಿರುಪತಿವರೆಗೆ... ಹಲ್​ಚಲ್​ ಸೃಷ್ಟಿಸಿದ್ದ ಮಹಾಲಕ್ಷ್ಮಿ- ರವೀಂದರ್​ ಜೋಡಿ ಈಗ ಹೇಗಿದೆ? ನಟಿ ಹೇಳಿದ್ದೇನು
ಮಂಡ್ಯದ ಹುಡುಗಿ ಡಾ. ಶ್ರೀನಿಧಿ ಜೊತೆಗೆ ಶಾಸಕ ದರ್ಶನ್ ಧ್ರುವನಾರಾಯಣ್‌ ನಿಶ್ಚಿತಾರ್ಥ; 4 ವರ್ಷ ಪ್ರೀತಿಸಿ ಒಂದಾದ ಜೋಡಿ!