ಅಮ್ಮ ಮಗ, ಅಪ್ಪ ಮಗಳ ಅನೈತಿಕ ಸಂಬಂಧಕ್ಕೇನು ಕಾರಣ? ಈಗ ಹೆಚ್ಚಾಗುತ್ತಿದ್ಯಾ?

Published : Apr 08, 2025, 12:31 PM IST
ಅಮ್ಮ ಮಗ, ಅಪ್ಪ ಮಗಳ ಅನೈತಿಕ ಸಂಬಂಧಕ್ಕೇನು ಕಾರಣ? ಈಗ ಹೆಚ್ಚಾಗುತ್ತಿದ್ಯಾ?

ಸಾರಾಂಶ

ಅಮ್ಮ-ಮಗ ಮತ್ತು ಅಪ್ಪ-ಮಗಳ ಸಂಬಂಧದಲ್ಲಿ ಕಾಮ ಹೆಚ್ಚಾಗುತ್ತಿರುವುದು ಆತಂಕಕಾರಿ. ಸಮಾಜದಲ್ಲಿ ಇಂತಹ ಸಂಬಂಧಗಳು ಹೆಚ್ಚಾಗುತ್ತಿರುವುದಕ್ಕೆ ಕಾರಣಗಳೇನು ಮತ್ತು ಮನಃಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.

ಮತೆ-ಪ್ರೀತಿ, ವಾತ್ಸಲ್ಯ ತುಂಬಿದ ಅಮ್ಮ-ಮಗ, ಅಪ್ಪ-ಮಗಳ ಸಂಬಂಧದಲ್ಲಿ ದ್ವೇಷ ಹೆಚ್ಚಾಗುತ್ತಿದೆ. ಅಷ್ಟೇ ಆಗಿದ್ದರೆ ಓಕೆ, ಆದರೆ ಈ ಸಂಬಂಧಗಳಲ್ಲಿ ಕಾಮವೂ ಹೆಚ್ಚುತ್ತಿರುವುದು ಹೆಚ್ಚು ಆತಂಕ ಸೃಷ್ಟಿಸುತ್ತಿದೆ. ಅಷ್ಟಕ್ಕೂ ಹೀಗ್ಯಾಕೆ? 

ಇನ್ನೇನು ಕೆಲವೇ ದಿನಗಳಲ್ಲಿ ಲಕ್ಷ್ಮಿ ಬಾರಮ್ಮ ಎನ್ನುವ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್ ಕೊನೆಯಾಗಲಿದೆ. ಅದರಲ್ಲಿ ಕಾವೇರಿ ಎಂಬ ಅಮ್ಮನಿಗೆ ವೈಷ್ಣವ್ ಎಂಬ ಮಗನ ಮೇಲೆ ವಿಪರೀತ ವ್ಯಾಮೋಹ. ಅವನು ತನ್ನನ್ನು ಬಿಟ್ಟು ಹೋಗಿಬಿಡುತ್ತಾನೆಂಬ ಭಯಕ್ಕೆ ಏನೇನೋ ನಾಟಕವಾಡಿ, ಮಗ ಬದುಕನ್ನು ಬಲಿ ಕೊಡಲೂ ಹಿಂದು ಮುಂದು ನೋಡುವುದಿಲ್ಲ. ಇಂಥ ಕ್ಯಾರಕ್ಟರ್ಸ್ ನಿಜ ಜೀವನದಲ್ಲೂ ಇರುತ್ತವೆ. ಅಷ್ಟಕ್ಕೂ ಪ್ರೀತಿ-ವಾತ್ಸಲ್ಯ ಇರಬೇಕಾದ ಅಮ್ಮ-ಮಗನಲ್ಲಿ ಇಂಥದ್ದೊಂದು ಸಮಸ್ಯೆ ಸೃಷ್ಟಿಯಾಗುವುದೇಕೆ? 
 
ಆ ಅಮ್ಮನಿಗೆ ಮೊದಲ ಗಂಡನಿಗೆ ಹುಟ್ಟಿದ ಮಗನೊಟ್ಟಿಗೆ ದೈಹಿಕ ಸಂಬಂಧವಿದೆ. ಎರಡನೇ ಮದುವೆಯಾಗಿದ್ದಾಳೆ. ಆ ಎರಡನೇ ಪತಿರಾಯನಿಗೆ ಮಗುವಾಗ ಸೂಚನೆ ಇಲ್ವಂತೆ. ಆದರೆ ಮಗು ಬೇಕಂತೆ. ಬೇರೆ ಯಾರೊಟ್ಟಿಗೋ ಸಂಬಂಧ ಇಟ್ಟುಕೊಳ್ಳೋದು ಕಷ್ಟ. ಅದಕ್ಕೆ ಮಗನೊಟ್ಟಿಗೇ ಸಂಬಂಧವಿಟ್ಟುಕೊಳ್ಳುತ್ತೇನೆ ಎನ್ನುತ್ತಾಳೆ ಆ ಮಹಿಳೆ. ಅಷ್ಟೇ ಅಲ್ಲ ಮಗನ ಮಗುವಿಗೇ ಅಮ್ಮನಾಗುತ್ತಿದ್ದಾಳೆ ಈ ಮಹಿಳೆ. ಇದೆಂಥ ಸಂಬಂಧ? ಅಸಹ್ಯ ಹುಟ್ಟಿಸುವ ಇಂಥ ಸಂಬಂಧಗಳು ಹೆಚ್ಚುತ್ತಿರುವುದೇಕೆ? 

ಇನ್ನೊಂದು ಸ್ವಲ್ಪ ಹಳೆಯ ಘಟನೆ ಮೆಲಕು ಹಾಕುವುದಾದರೆ? ಜಿಂಬಾಬ್ವೆಯ (Zimbabwe) 40 ವರ್ಷದ ವಿಧವೆ ಬೆಟ್ಟಿ ಎಂಬಾಕೆ ತನ್ನ 23 ವರ್ಷದ ಮಗನೊಂದಿಗೆ ಲವ್ವಲ್ಲಿ ಬಿದ್ದಿದ್ದಳು. ತಾಯಿ ಮಗನ ಪ್ರೀತಿ-ವಾತ್ಸಲ್ಯ ಮೀರಿದ ಮೀರಿದ ಲೈಂಗಿಕ ಆಕರ್ಷಣೆ (Sexual attraction) ಇಬ್ಬರಲ್ಲಿಯೂ ಹುಟ್ಟಿಕೊಂಡಿತ್ತು. ಇಬ್ಬರ ಮಧ್ಯೆ ಸೆಕ್ಸ್ ಬೆಳೆದು ಬೆಟ್ಟಿ ಗರ್ಭಿಣಿ (Pregnent) ಆಗಿದ್ದಳು. ಮಗನಿಗೆ ಇಪ್ಪತ್ತು ವರ್ಷಗಳಾಗುತ್ತಿದ್ದಂತೆ ಅಮ್ಮಂಗೆ ಅವನೇ ಮೇಲೆಯ್ ಅಟ್ರಾಕ್ಟ್ ಆಗಲು ಶುರು ವಾಯಿತಂತೆ. ಗಂಡ ಸತ್ತ ಬಳಿಕ ಮಗನನ್ನು ಬಹಳ ಕಷ್ಟಪಟ್ಟು ಸಾಕಿ, ಓದಿಸಿದ್ದಳು ಬೆಟ್ಟಿ. ಅವನು ಸಂಪಾದಿಸುವ ಹಣದಲ್ಲಿ ಮತ್ತೊಬ್ಬ ಹೆಣ್ಣು ಮಜಾ ಮಾಡೋದು ಈ ತಾಯಿಗೆ ಇಷ್ಟವಿಲ್ಲವಂತೆ. ಮಗ ಬೇರೆ ಯಾರದ್ದೋ ಪಾಲಾಗಬಾರದು. ಕೊನೇವರೆಗೂ ನಾವಿಬ್ಬರೂ ಜೊತೆಯಾಗಿರಬೇಕೆಂಬ ವಿಪರೀತ ವ್ಯಾಮೋಹದಿಂದ ಮಗನೊಂದಿಗೇ ಮದುವೆ ಆದಳಂತೆ!

ಬರೀ ಅಮ್ಮ-ಮಗನೊಂದಿಗೆ ಮಾತ್ರವಲ್ಲ, ಅಪ್ಪ ಮಗಳ ನಡುವೆಯೂ ಲೈಂಗಿಕತೆ ಬೆಳೆದ ಉದಾಹರಣೆಗಳಿವೆ. ಸ್ವಂತ ತಂದೆಯಿಂದಲೇ ಲೈಂಗಿಕ ದೌರ್ಜನ್ಯ ಎದುರಿಸಿ, ಅದನ್ನು ಹೇಳಿಕೊಳ್ಳಲಾಗದೇ, ಮುಚ್ಚಿಡದಲೂ ಆಗದೇ ಅಪಾರ ನೋವು ಅನುಭವಿಸುತ್ತಿರುವ ಅದೆಷ್ಟು ಹೆಣ್ಣು ಮಕ್ಕಳು ನಮ್ಮ ಸಮಾಜದಲ್ಲಿದ್ದಾರೋ, ಬಲ್ಲವರು ಯಾರು? ತಂದೆ ಮಗಳ ನಡುವಿನ ಲೈಂಗಿಕ ಸುದ್ದಿಗಳು ಆಗಾಗ ಸದ್ದು ಮಾಡುವುದಿದೆ. 

ಇದನ್ನೂ ಓದಿ: ಗಂಡ ಟೈಮ್‌ ಕೊಡ್ತಿಲ್ಲ? ಇಂಟರೆಸ್ಟ್‌ ತೋರಸ್ತಿಲ್ವಾ? ಇದನ್ನು ಪಾಲಿಸಿದ್ರೆ ನಿಮ್ಮ ಹಿಂದೆ ಸುತ್ತುತ್ತಾರೆ!

ಹಿಂದೆಯೇ ಹೇಳಿದ್ದ ಸಿಗ್ಮಂಡ್
ಸೈಕಾಲಜಿಸ್ಟ್ ಸಿಗ್ಮಂಡ್ ಈ ಪಾಲಿಮಾರ್ಫಸ್‌ ಸೆಕ್ಸುವಾಲಿಟಿ ಬಗ್ಗೆ ಬಹಳ ಹಿಂದೆಯೇ ಬರೆದು ಜಗತ್ತಿನಾದ್ಯಂತ ಟೀಕೆಗೆ ಗುರಿಯಾಗಿದ್ದರು. ಅವರು ಹೇಳೋ ಪ್ರಕಾರ, ತಾಯಿಯ ಎದೆಹಾಲು ಕುಡಿಯುವಾಗಲೇ ಗಂಡು ಮಗುವಿಗೆ ಲೈಂಗಿಕ ವಾಂಛೆ ಹುಟ್ಟಿರುತ್ತದೆ. ಇದಕ್ಕೆ ಪೂರಕವೆಂಬಂತೆ ಫ್ರಾಯ್ಡ್ ಅನೇಕ ಉದಾಹರಣೆಗಳನ್ನೂ ಕೊಟ್ಟಿದ್ದ. ಹೀಗೆ ಬೆಳೆಯುವ ಗಂಡು ಮಕ್ಕಳು ತಂದೆಯನ್ನು ಪ್ರತಿಸ್ಪರ್ಧಿ ಎಂದೇ ಭಾವಿಸುತ್ತಾರೆ. ಈಡಿಪಸ್ ಕಾಂಪ್ಲೆಕ್ಸ್ ಎಂದೂ ಹೇಳುತ್ತಾರೆ. ಇದಕ್ಕೆ ಗ್ರೀಕ್ ಪುರಾಣಗಳಲ್ಲಿ, ಷೇಕ್ಸ್‌ಪಿಯರ್ ನಾಟಕಗಳಲ್ಲಿಯೂ ಪುರಾವೆಗಳಿವೆ. ಇದೇ ಥರ ಹೆಣ್ಣು ಮಗುವಿನಲ್ಲೂ ಬಾಲ್ಯದಿಂದಲೇ ತಂದೆಯ ಬಗ್ಗೆ ಲೈಂಗಿಕ ಆಕರ್ಷಣೆ ಬೆಳೆಯುತ್ತಂತೆ. ಅದನ್ನು ಎಲೆಕ್ಟ್ರೋ ಕಾಂಪ್ಲೆಕ್ಸ್ ಎನ್ನುತ್ತಾರೆ. ಕಾರ್ಲ್ ಜಂಗ್ ಮನಃಶಾಸ್ತ್ರದಲ್ಲಿ ಈ ವಿವರ ನೀಡಿದ್ದಾನೆ.  ಆದರೆ ಈ ಸಂಬಂಧದಿಂದ ಹುಟ್ಟುವ ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ಅಂಗವಿಕಲತೆ ಹುಟ್ಟುವ ಕಾರಣಕ್ಕೆ ರಕ್ತ ಸಂಬಂಧಿಗಳೊಂದಿಗೆ ಲೈಂಗಿಕತೆ ನಿರ್ಬಂಧಿಸಲಾಗಿದೆ. ಮತ್ತು ಅದನ್ನು ಸಮಾಜ ಘೋರ ಅಪರಾಧವಾಗಿಯೇ ಪರಿಗಣಿಸುತ್ತದೆ. 

ಅಲ್ಲಿ ಇಲ್ಲಿ ಇಂಥ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದನ್ನು ಅಪರಾಧವೆಂದು ಪರಿಗಣಿಸುತ್ತಿದ್ದು, ಇಂಥ ಕೃತ್ಯಗಳು ಬೆಳಕಿಗೆ ಬರುತ್ತಿವೆ. 

ಆದರೆ ಇತ್ತೀಚೆಗೆ ಇಂಥಾ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬರುತ್ತಿವೆ. ಇದನ್ನು ಅಪರಾಧ ಅಂತ ಪರಿಗಣಿಸಿದರೂ ಪ್ರತೀ ವರ್ಷ ಇಂಥಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಪೋ*ರ್ನ್ ವೆಬ್‌ಸೈಟ್‌ಗಳ ಹೆಚ್ಚಳವೂ ಇದಿಕ್ಕರಬಹುದು ಕಾರಣ. ಈ ಸೈಟ್‌ಗಳು ಎಲ್ಲ ವಯಮಾನದವರ ಕೈಗೂ ಸಿಗುತ್ತಿರುವುದು ಅಸಹಜ ಲೈಂಗಿಕ ಆಸಕ್ತಿ ಬೆಳೆಯಲು ಕಾರಣವಾಗುತ್ತವೆ. ಆದರೆ ಹೀಗೆ ಬೆಳೆದ ಸಂಬಂಧವನ್ನು ಮಹಾನ್ ಅಪರಾಧವೆಂದೇ ಸೊಸೈಟಿ ಭಾವಿಸುವುದರಿಂದ ಇಂಥ ಸಂಬಂಧ ಇಟ್ಟುಕೊಂಡವರಲ್ಲಿ ಅಭದ್ರತೆ (Insecurity), ಕೀಳರಿಮೆ, ಖಿನ್ನತೆ (Depression) ಹೆಚ್ಚಿರುತ್ತದೆ. ಇದು ಬದುಕನ್ನೇ ಬಲಿ ಪಡೆಯಬಹುದು. ಇಂಥಾ ಸಮಸ್ಯೆಗಳಿಗೆ ಮನಃಶಾಸ್ತ್ರದಲ್ಲಿ (Psychology) ಚಿಕಿತ್ಸೆಯೂ ಇದೆ.

ಇದನ್ನೂ ಓದಿ: ಸ್ನೇಹಿತರನ್ನೇ ಮದುವೆ ಆಗ್ತೀರಾ? ಆಗಬಹುದಾದ ಈ ದೊಡ್ಡ ಅನಾಹುತ ತಪ್ಪಿಸಬಹುದು! ಯಾವುದು?

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌