ಜನರ ಆಲೋಚನೆಗಳು ಬದಲಾಗ್ತಿವೆ. ಮನೆಯಲ್ಲಿ ಅತ್ತೆ – ಮಾವ ಇರದ ಕುಟುಂಬ ಬೇಕು ಎನ್ನುವ ಹೆಣ್ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ಅತ್ತೆ, ಮಾವ,ಮೈದುನ, ನಾದಿನಿ ಹೀಗೆ ಎಲ್ಲರೂ ಇರುವ ದೊಡ್ಡ ಕುಟುಂಬಕ್ಕೆ ಹೋಗಲು ಯುವತಿಯರು ಭಯಪಡ್ತಾರೆ. ಆದ್ರೆ ಅದ್ರ ಲಾಭ ಕೇಳಿದ್ರೆ ನಿಮ್ಮ ಆಲೋಚನೆ ಬದಲಾಗ್ಬಹುದು.
ಇಡೀ ದಿನ ಹೊರಗೆ ಕೆಲಸ (Work) ಮಾಡಿ ಬಂದವರು ಮನೆಯಲ್ಲಿ ನೆಮ್ಮದಿ ಅರಸುತ್ತಾರೆ. ಕುಟುಂಬ (Family) ದಲ್ಲಿ ಸದಾ ಸಂತೋಷವಿರಬೇಕೆಂದು ಎಲ್ಲರೂ ಬಯಸ್ತಾರೆ. ಕುಟುಂಬದ ಸಂತೋಷಕ್ಕೆ ಎಲ್ಲರೂ ಪ್ರಯತ್ನ ನಡೆಸ್ತಾರೆ. ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬ (Joint family) ಸಾಮಾನ್ಯವಾಗಿತ್ತು. ಆದ್ರೀಗ ಇತ್ತೀಚಿನ ದಿನಗಳಲ್ಲಿ ವಿಭಕ್ತ ಕುಟುಂಬದ ಫ್ಯಾಷನ್ ಹೆಚ್ಚಾಗಿದೆ. ತಂದೆ – ತಾಯಿಯನ್ನು ದೂರ ಮಾಡಿ ಮಕ್ಕಳು ಪ್ರತ್ಯೇಕವಾಗಿ ವಾಸ ಮಾಡ್ತಿದ್ದಾರೆ. ಅಣ್ಣ –ತಮ್ಮಂದಿರುವ ಬೇರೆ ವಾಸ ಶುರು ಮಾಡಿದ್ದಾರೆ. ಚಿಕ್ಕ ಕುಟುಂಬ ಸಂತೋಷದ ಕುಟುಂಬ ಎಂದು ಅನೇಕರು ನಂಬಿದ್ದಾರೆ. ಆದ್ರೆ ಇದು ಸಂಪೂರ್ಣ ಸತ್ಯವಲ್ಲ. ಅವಿಭಕ್ತ ಕುಟುಂಬದಲ್ಲೂ ಸಮಸ್ಯೆ ಸಾಮಾನ್ಯ. ಸಣ್ಣಪುಟ್ಟ ಗಲಾಟೆಗಳು ಇದ್ದೇ ಇರುತ್ವೆ. ಆದ್ರೆ ಅವಿಭಕ್ತ ಕುಟುಂಬದಲ್ಲಿ ಅನೇಕ ಪ್ರಯೋಜನವಿದೆ. ಇಂದು ನಾವು ಅವಿಭಕ್ತ ಕುಟುಂಬದಿಂದಾಗುವ ಪ್ರಯೋಜನಗಳನ್ನು ಹೇಳ್ತೇವೆ.
ಅವಿಭಕ್ತ ಕುಟುಂಬದಿಂದಾಗುವ ಪ್ರಯೋಜನಗಳು :
ಕೌಟುಂಬಿಕ ಮೌಲ್ಯದ ಮಹತ್ವ : ಅವಿಭಕ್ತ ಕುಟುಂಬದಲ್ಲಿ ಕೌಟುಂಬಿಕ ಮೌಲ್ಯಗಳ ಬಗ್ಗೆ ಜನರಿಗೆ ಅರ್ಥವಾಗುತ್ತದೆ. ಹಿರಿಯರು – ಮಕ್ಕಳ ಮಧ್ಯೆ ಇರುವ ಸಂಬಂಧವೇನು ಎಂಬುದು ಗೊತ್ತಾಗುತ್ತದೆ. ಮಕ್ಕಳು ತಮ್ಮ ತಂದೆ – ತಾಯಿ,ಅವರ ತಂದೆ ತಾಯಿಯನ್ನು ನೋಡಿಕೊಳ್ಳುವ ರೀತಿಯನ್ನು ಗಮನಿಸ್ತಾರೆ. ಅದನ್ನೇ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ತಾರೆ. ಅಜ್ಜ –ಮೊಮ್ಮಕ್ಕಳು, ಚಿಕ್ಕಪ್ಪ, ಚಿಕ್ಕಮ್ಮ, ಅತ್ತೆ, ಮಾವ ಹೀಗೆ ಎಲ್ಲ ಸಂಬಂಧಗಳು ಮಕ್ಕಳಿಗೆ ಅರ್ಥವಾಗುತ್ತವೆ.
ಮಾಜಿ ಗರ್ಲ್ ಫ್ರೆಂಡ್ ಜೊತೆ ಬಾಯ್ ಫ್ರೆಂಡ್ ಕೆಲಸ ನೋಡಿ ಯುವತಿ ದಂಗು!
ಕೆಲಸ ಮಾಡುವ ದಂಪತಿಗೆ ಅನುಕೂಲ : ಮನೆ, ಕೆಲಸ ಹಾಗೂ ಮಕ್ಕಳು ಈ ಎಲ್ಲವನ್ನೂ ನೋಡಿಕೊಳ್ಳುವುದು ಬಹಳ ದೊಡ್ಡ ಸಮಸ್ಯೆ. ಗಂಡ –ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗ್ತಿದ್ದರೆ ಮಕ್ಕಳನ್ನು ಎಲ್ಲಿ ಬಿಡಬೇಕೆಂಬ ಸಮಸ್ಯೆ ಕಾಡುತ್ತದೆ. ಅವಿಭಕ್ತ ಕುಟುಂಬವಿದ್ದರೆ ಮಕ್ಕಳನ್ನು ನೋಡಿಕೊಳ್ಳಲು ಮನೆಯಲ್ಲಿ ಜನರಿರ್ತಾರೆ. ಅದ್ರ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿರುವುದಿಲ್ಲ. ಹಾಗೆ ಮನೆ ಕೆಲಸದ ಜವಾಬ್ದಾರಿ ಕೂಡ ಹೆಚ್ಚಿರುವುದಿಲ್ಲ. ಆಗ ಸುಲಭವಾಗಿ ಕಚೇರಿ ಕೆಲಸದ ಮೇಲೆ ನೀವು ಗಮನ ನೀಡಬಹುದಾಗಿದೆ.
ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ : ಅವಿಭಕ್ತ ಕುಟುಂಬದಲ್ಲಿ ವಾಸಿಸುವವರು ಯಾವುದಕ್ಕೂ ಭಯಪಡುವುದಿಲ್ಲ. ಅವರಿಗೆ ಕುಟುಂಬಸ್ಥರು ಸದಾ ಬೆಂಬಲವಾಗಿ ನಿಲ್ತಾರೆ. ಯಾವುದೇ ಸಮಸ್ಯೆ ಬಂದ್ರೂ ಎಲ್ಲರೂ ಒಟ್ಟಾಗಿ ಎದುರಿಸುತ್ತಾರೆ. ಇದ್ರಿಂದಾಗಿ ಸಾಮಾಜಿಕ ಹಾಗೂ ಆರ್ಥಿಕ ಎರಡೂ ಭದ್ರತೆ ಅವಿಭಕ್ತ ಕುಟುಂಬದಲ್ಲಿರುತ್ತದೆ.
ಕೆಲಸ ಕಡಿಮೆ : ಸಾಮಾನ್ಯವಾಗಿ ಚಿಕ್ಕ ಕುಟುಂಬವಿದ್ದರೆ ಮನೆಯ ಎಲ್ಲ ಜವಾಬ್ದಾರಿ ದಂಪತಿ ಮೇಲೆ ಬೀಳುತ್ತದೆ. ಮನೆಯಲ್ಲಿ ಹೆಚ್ಚಿನ ಜನವಿದ್ದರೆ ಕೆಲಸ ಹಂಚಿ ಹೋಗುತ್ತದೆ. ಜವಾಬ್ದಾರಿಯನ್ನು ಎಲ್ಲರೂ ಪಾಲು ಮಾಡಿಕೊಳ್ಳುವ ಕಾರಣ ಕೆಲಸ ಕಡಿಮೆಯಾಗುತ್ತದೆ.
ಪ್ರತಿ ಕ್ಷಣವೂ ಹಬ್ಬವೇ : ಸಣ್ಣ ಕುಟುಂಬದಲ್ಲಿ ಒಂದು ಹಬ್ಬವಿರಲಿ ಇಲ್ಲ ಪಾರ್ಟಿಯಿರಲಿ ಮೂರು ಇಲ್ಲ ನಾಲ್ಕು ಮಂದಿ ಆಚರಣೆ ಮಾಡ್ತಾರೆ. ಆದ್ರೆ ಅವಿಭಕ್ತ ಕುಟುಂಬದಲ್ಲಿ ಜನರ ಸಂಖ್ಯೆ ಹೆಚ್ಚಿರುವ ಕಾರಣ ಪ್ರತಿ ದಿನವೂ ಅವರಿಗೆ ಹಬ್ಬದ ರೀತಿಯಲ್ಲಿಯೇ ಇರುತ್ತದೆ. ಅದ್ರಲ್ಲೂ ಹುಟ್ಟುಹಬ್ಬದ ಪಾರ್ಟಿ, ಹಬ್ಬಗಳನ್ನು ಎಲ್ಲರೂ ಅದ್ಧೂರಿಯಾಗಿ, ಖುಷಿಯಾಗಿ ಆಚರಣೆ ಮಾಡುವುದ್ರಿಂದ ಮನೆಯವರೆಲ್ಲರಲ್ಲಿ ಪಾಸಿಟಿವ್ ಶಕ್ತಿ ಹೆಚ್ಚಾಗುತ್ತದೆ.
Real Story: ಗಂಡನಿಗೆ ಅಡುಗೆ ಮಾಡಿ ಬಡಿಸ್ತಿಲ್ಲ, ಹಾಗಾದ್ರೆ ಆ ಹೆಣ್ಣು ಕೆಟ್ಟವಳಾ?
ಸೆಲೆಬ್ರಿಟಿಗಳೂ ಸ್ಪೂರ್ತಿ : ಚಿತ್ರರಂಗದ ಅನೇಕರು ಅವಿಭಕ್ತ ಕುಟುಂಬದಲ್ಲಿ ವಾಸವಾಗಿದ್ದಾರೆ. ಕಪೂರ್ ಕುಟುಂಬದಿಂದ ಬಚ್ಚನ್ ಕುಟುಂಬದವರೆಗೆ, ಗೋವಿಂದ, ಅನಿಲ್ ಕಪೂರ್ ಮತ್ತು ಶತ್ರುಘ್ನ ಸಿನ್ಹಾ ಅವರಂತಹ ತಾರೆಯರು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದು, ಅನೇಕ ಬಾರಿ ಅವರು ಅದ್ರ ಪ್ರಾಮುಖ್ಯತೆಯನ್ನು ಹೇಳಿದ್ದಾರೆ. ಈಗಾಗಲೇ ನೀವು ಅವಿಭಕ್ತ ಕುಟುಂಬದಲ್ಲಿದ್ದರೆ ದಯವಿಟ್ಟು ಆ ಸಂತೋಷವನ್ನು ದೂರ ಮಾಡಿಕೊಳ್ಳಬೇಡಿ. ವಿಭಕ್ತ ಕುಟುಂಬದ ಗುಂಗಿನಲ್ಲಿ ಸಂತೋಷವನ್ನು ಹಾಳು ಮಾಡಿಕೊಳ್ಳಬೇಡಿ.