ಬೇಬಿ ಶವರ್ ದಿನವೇ ಪತ್ನಿಯ ಹೊಟ್ಟೆಯಲ್ಲಿರೋ ಮಗು ತನ್ನದಲ್ಲ ಎಂದು ಪ್ರೂವ್ ಮಾಡಿದ ಪತಿ

Suvarna News   | Asianet News
Published : Nov 05, 2020, 11:56 AM ISTUpdated : Nov 05, 2020, 12:16 PM IST
ಬೇಬಿ ಶವರ್ ದಿನವೇ ಪತ್ನಿಯ ಹೊಟ್ಟೆಯಲ್ಲಿರೋ ಮಗು ತನ್ನದಲ್ಲ ಎಂದು ಪ್ರೂವ್ ಮಾಡಿದ ಪತಿ

ಸಾರಾಂಶ

ಬೇಬಿ ಶವರ್ ದಿನವೇ ಪತ್ನಿಯ ಹೊಟ್ಟೆಯಲ್ಲಿರೋ ಮಗು ತನ್ನದಲ್ಲ ಎಂದು ಪ್ರೂವ್ ಮಾಡಿದ ಪತಿ | ಅಲ್ಲಿಯೇ ಇದ್ದ ನಿಜವಾದ ತಂದೆ

ಗ್ರ್ಯಾಂಡ್‌ ಆಗಿ ಪತ್ನಿಯ ಬೇಬಿ ಶವರ್ ಮಾಡಿದ ಪತಿ ಅದೇ ಫಂಕ್ಷನ್‌ನಲ್ಲಿ ಪತ್ನಿಯ ಹೊಟ್ಟೆಯಲ್ಲಿರೋ ಮಗು ತನ್ನದಲ್ಲ ಎಂಬುದನ್ನು ಪ್ರೂಫ್ ಸಮೇತ ರಿವೀಲ್ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಅನೌನ್ಸ್ ಮಾಡಿದ ಪತಿ, ಪತ್ನಿಯ ವಂಚನೆಯನ್ನೂ, ಆಕೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ವ್ಯಕ್ತಿಯ ಗುರುತನ್ನೂ ರಿವೀಲ್ ಮಾಡಿದ್ದಾರೆ.

ಬೇಬಿ ಶವರ್‌ನಲ್ಲಿ ಪತ್ನಿಯ ಅಕ್ರಮ ಸಂಬಂಧದ ವಿಡಿಯೋವನ್ನು ಪತಿ ರಿಲೀಸ್ ಮಾಡಿದ್ದಾರೆ. ತನ್ನ ಪತ್ನಿ ತನ್ನ ಮಗುವಿಗೆ ಗರ್ಭಿಣಿಯಾಗಿದ್ದಲ್ಲ ಎಂಬುದನ್ನು ಪತಿ ತಿಳಿಸಿದ್ದಾರೆ. ಇದು ನನ್ನ ಲಾಯ್, ನಾವಿಲ್ಲಿ ಒಂದು ಡಾಕ್ಯುಮೆಂಟ್ ರಿಲೀಸ್ ಮಾಡಲಿದ್ದೇವೆ. ನಾನು ಮಗುವನ್ನು ನಿರೀಕ್ಷಿಸುತ್ತಿದ್ದೇನೆ. ನನ್ನಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಇದೆ. ನಾನು ತಂದೆಯಾಗಲಿದ್ದೇನೆ. ಇದಕ್ಕಿಂತಲೂ ಮುಖ್ಯ ವಿಚಾರವೊಂದಿದೆ ಎಂದಿದ್ದಾರೆ.

ಮನೆ ಮಾಲೀಕನ ಹುಡುಕಿ 2 ವಾರ ನಡೆದ ನಾಯಿ..! ಈ ಪ್ರೀತಿಗೆಲ್ಲಿದೆ ಸಾಟಿ

ಆಕೆ 4 ತಿಂಗಳ ಗರ್ಭಿಣಿಯಲ್ಲ, 6 ತಿಂಗಳ ಗರ್ಭಿಣಿ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿ ಎಂದಿದ್ದಾರೆ ಪತಿ. ತಕ್ಷಣ ಪತ್ನಿ ಎಚ್ಚೆತ್ತುಕೊಂಡು ಇದನ್ನು ಖಾಸಗಿಯಾಗಿ ಮಾತಾಡೋಣ ಎಂದರೂ ಪತಿ ಇದನ್ನು ರಿವೀಲ್ ಮಾಡಿದ್ದಾನೆ.

ಇದು ನನ್ನ ಮಗುವಲ್ಲ. ಈ ಪಾರ್ಟಿ ಇವರಿಬ್ಬರಿಗಾಗಿ ಎಂದು ಪತ್ನಿ ಹಾಗೂ ಆಕೆಯ ಬಾಯ್‌ಫ್ರೆಂಡ್‌ನ್ನು ತೋರಿಸಿದ್ದಾನೆ ಪತಿ. ಪತಿ ಪಾರ್ಟಿ ಬಿಟ್ಟು ಹೋದರೆ, ಗರ್ಭಿಣಿ ಮಹಿಳೆಯ ಬಾಯ್‌ಫ್ರೆಂಡ್‌ಗೆ ಅಲ್ಲಿ ನೆರೆದಿದ್ದ ಜನ ಹೊಡೆದಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?
ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!