Love Story: ಪ್ರೇಯಸಿ ಅನಾರೋಗ್ಯದಿಂದ ಗಾಲಿಕುರ್ಚಿಯಲ್ಲಿ, ಕೈ ಬಿಡದೆ ಕೈ ಹಿಡಿದ ಪ್ರೇಮಿ

By Vinutha PerlaFirst Published Nov 21, 2022, 10:26 AM IST
Highlights

ಪ್ರೀತಿಯೆಂದರೆ ಹಾಗೆಯೇ. ಅದೊಂದು ಪವಿತ್ರವಾದ, ಸುಂದರ ಭಾವನೆ. ಜಾತಿ, ಧರ್ಮ, ಬಣ್ಣ, ಊರು, ರಾಜ್ಯ ಯಾವುದೂ ಕೂಡಾ ಇಲ್ಲಿ ಅಡ್ಡಿಯಾಗುವುದಿಲ್ಲ. ಅಂಧ, ಕಿವುಡ, ವಿಶೇಷಚೇತರು ಈ ಎಲ್ಲಾ ಅಡೆತಡೆಗಳನ್ನು ಮೀರಿ ಪ್ರೇಮಿಗಳು ಒಂದಾಗುತ್ತಾರೆ. ಹಾಗೆಯೇ ಇಲ್ಲೊಂದೆಡೆ ಯುವತಿ ಅನಾರೋಗ್ಯಕ್ಕೆ ಒಳಗಾಗಿ ನಡೆದಾಡುವ ಸ್ಥಿತಿಯಲ್ಲಿದ್ದರೂ ಯುವಕ ಮದುವೆಯಾಗಿದ್ದಾನೆ. ಲವ್‌ ಸ್ಟೋರಿಯ ಕಂಪ್ಲೀಟ್ ಕಹಾನಿ ಇಲ್ಲಿದೆ.

ಅಪ್ಪಟ ಪ್ರೀತಿ (Love)ಯೆಂದರೆ ಹಾಗೆಯೇ..ಎಂಥಾ ಕಠಿಣ ಪರಿಸ್ಥಿತಿಯಲ್ಲಿಯೂ ಪ್ರೇಮಿ (Lover)ಯನ್ನು ಕೈ ಬಿಡಲು ಅವರು ಸಿದ್ಧರಿರುವುದಿಲ್ಲ. ಕಷ್ಟವೋ, ಸುಖವೋ ಜೀವನುದುದ್ದಕ್ಕೂ ಜೊತೆಯಾಗಿ ಸಾಗುವ ಕನಸು ಕಾಣುತ್ತಾರೆ. ಹಾಗೆಯೇ ಒಡಿಶಾದಲ್ಲೊಂದು ಜೋಡಿ ಎಲ್ಲಾ ಕಷ್ಟಗಳನ್ನು ಹಿಮ್ಮೆಟ್ಟಿಸಿ ದಾಂಪತ್ಯ ಜೀವನಕ್ಕೆ (Married life)ಕಾಲಿಟ್ಟಿದ್ದಾರೆ. ಯಾವ ಲವ್ ಸ್ಟೋರಿಗೂ ಕಮ್ಮಿಯಿಲ್ಲ ಅನ್ನೋ ಹಾಗಿದೆ ಇವ್ರ ಪ್ರೇಮಕಥೆ. ಒಡಿಶಾದ ಡೆಬಾಸ್ಮಿತಾ ಮತ್ತು ಶ್ರುಭಾನ್ಸುಗೆ ಎಂಟು ವರ್ಷಗಳ ಹಿಂದೆ ಪ್ರೀತಿಯಾಗಿತ್ತು. ಎಲ್ಲವು ಚೆನ್ನಾಗಿ ನಡೆದುಕೊಂಡು ಹೋಗುತ್ತಿದ್ದೆ ಎನ್ನುವಷ್ಟರಲ್ಲಿ ಡೆಬಾಸ್ಮಿತಾಳ ಬಾಳಲ್ಲಿ ಅನಿರೀಕ್ಷಿತ ಘಟನೆ ಒಂದು ಜರುಗಿತು. ಒಂದು ವರ್ಷದ ಹಿಂದೆ ಕೆಲವು ಕಾರಣಗಳಿಂದ ದೇಬಸ್ಮಿತಾ ಗಾಲಿಕುರ್ಚಿಯನ್ನು ಅವಲಂಬಿಸಬೇಕಾಯಿತು. ಆದರೆ ಹೀಗಿದ್ದೂ ಸುಭ್ರಾಂಶು ದೇಬಸ್ಮಿತಾಳನ್ನು ಬಿಟ್ಟು ಬೇರೆ ಹುಡುಗಿಯನ್ನು ಮದುವೆಗೆ ಆಯ್ಕೆ ಮಾಡಿಕೊಳ್ಳಲ್ಲಿಲ್ಲ. ಬದಲಿಗೆ, ಅವರು ದೇಬಸ್ಮಿತಾಗೆ ನೀಡಿದ ಭರವಸೆಯನ್ನು ಉಳಿಸಿಕೊಂಡರು. 

8 ವರ್ಷದ ಪ್ರೀತಿಯ ಕಂಪ್ಲೀಟ್ ಕಹಾನಿ
ಪಾರ್ಶ್ವವಾಯು (Paralysis)ವಿನಿಂದಾಗಿ ಡೆಬಾಸ್ಮಿತ ನೆಡೆದಾಡದಂತಾಯಿತು. ಇಂತಹ ಸಂದರ್ಭದಲ್ಲಿ ಯಾವುದೇ ಹುಡುಗನಾದರೂ ಮದುವೆ ಆಗಲು ಹಿಂಜರಿಯುತ್ತಾರೆ. ಆದರೆ, ಸುಭ್ರಾನ್ಶು ಆ ರೀತಿ ಮಾಡಲಿಲ್ಲ. ಬದಲಾಗಿ ಡೆಬಾಸ್ಮಿತರನ್ನೇ ಮದುವೆಯಾಗುವ ಮೂಲಕ ನಿಜವಾದ ಪ್ರೀತಿ ಇನ್ನೂ ಲಭ್ಯವಿದೆ ಎಂಬುದನ್ನು ತೋರಿಸಿಕೊಟ್ಟರು. ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರುಭಾನ್ಸು, 'ಅವಳಿಗೆ ನನ್ನ ಮೇಲಿರುವ ಪ್ರೀತಿಗೆ ಹೋಲಿಸಿದರೆ ನನ್ನ ಪ್ರೀತಿ ಏನೂ ಅಲ್ಲ. ನಿಜವಾಗಿ, ನಿಜವಾದ ಪ್ರೀತಿ ಏನೆಂದು ಅವಳು ನನಗೆ ಕಲಿಸಿದಳು. ಕಳೆದ ಎಂಟು ವರ್ಷಗಳಿಂದ ನಾವು ಸಂಬಂಧ (Relationship) ಹೊಂದಿದ್ದೇವೆ. ಆದರೆ ಅವಳು ಅನಾರೋಗ್ಯಕ್ಕೆ ಒಳಗಾದ ನಂತರವೂ ನಮ್ಮ ಪರಸ್ಪರ ಪ್ರೀತಿ ಕಡಿಮೆಯಾಗಿಲ್ಲ. ಬದಲಾಗಿ, ಪ್ರತಿ ದಿನವೂ ನಮ್ಮ ಪ್ರೀತಿ ಹೆಚ್ಚುತ್ತಲೇ ಇರುತ್ತದೆ' ಎಂದಿದ್ದಾರೆ.

ಇದಪ್ಪ ಲವ್‌ ಅಂದರೆ..! ಗರ್ಲ್‌ಫ್ರೆಂಡ್‌ ಕೊನೆಯಾಸೆ ಈಡೇರಿಸಲು ಆಕೆಯ ಮೃತದೇಹಕ್ಕೆ ತಾಳಿ ಕಟ್ಟಿದ ಪ್ರೇಮಿ..!

ಪ್ರೇಯಸಿಗೆ ಪಾರ್ಶ್ವವಾಯು ತಗುಲಿದ್ದರೂ ಕೈ ಬಿಡದ ಯುವಕ
ಅಂದಹಾಗೆ ಡೆಬಾಸ್ಮಿತಾ ಮತ್ತು ಸುಭ್ರಾನ್ಶು ಒಡಿಶಾದ ಬಾಲಾಸೋರ್​ ಜಿಲ್ಲೆಯ ಖಂದ್ರಪದಾ ಪ್ರದೇಶದವರು. ಮೊದಲ ನೋಟದಲ್ಲೇ ಇಬ್ಬರ ನಡುವೆ ಶುರುವಾದ ಪ್ರೀತಿ 8 ವರ್ಷಗಳನ್ನು ಪೂರೈಸಿದೆ. ಡೇಟಿಂಗ್​, ಮೀಟಿಂಗ್​ ಮೂಲಕ ಇಬ್ಬರೂ ಖುಷಿಯಾಗಿದ್ದರು. ಎರಡು ಕುಟುಂಬವನ್ನು ಒಪ್ಪಿಸಿ 2019ರಲ್ಲಿ ಇಬ್ಬರು ಮದುವೆಯನ್ನು ಖಚಿತಪಡಿಸಿಕೊಂಡಿದ್ದರು. ಆದರೆ, ಇದರ ನಡುವೆ 2019ರಲ್ಲೇ ಡೆಬಾಸ್ಮಿತ್​ಗೆ ಪಾರ್ಶ್ವವಾಯು ತಗುಲಿತು. ಅಂದಿನಿಂದ ಡೆಬಾಸ್ಮಿತ್​ ಕೈಯಲ್ಲಿ ಸ್ವತಂತ್ರವಾಗಿ ಎಲ್ಲಿಗೂ ಹೋಗಲು ಸಾಧ್ಯವಾಗುತ್ತಿಲ್ಲ. ಅಂದಿನಿಂದ ಎಲ್ಲ ಕೆಲಸಗಳಿಗೂ ಬೇರೆಯವರನ್ನೇ ಅವಲಂಬಿಸಿದ್ದಾಳೆ. ಇದೀಗ ಸುಭ್ರಾನ್ಶು ಆಕೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾನೆ. 

'ಕಾಲೇಜಿನಲ್ಲಿ ಒಬ್ಬರನ್ನೊಬ್ಬರು ಭೇಟಿಯಾದೆವು. ಆದರೆ ನಾವು ಮೊದಲ ಬಾರಿಗೆ ಭೇಟಿಯಾದಾಗ ಒಬ್ಬರನ್ನೊಬ್ಬರು ತಪ್ಪಾಗಿ ಅರ್ಥೈಸಿಕೊಂಡೆವು. ಕ್ರಮೇಣ ನಾವು ಪರಸ್ಪರ ಭಾವನೆಗಳನ್ನು ಬೆಳೆಸಿಕೊಳ್ಳುವ ಮೊದಲು ಸ್ನೇಹಿತರಾಗಿದ್ದೇವೆ. ನಾನು ಪದವಿಯನ್ನು ಪೂರ್ಣಗೊಳಿಸಿದಾಗ ನಾನು ಅವಳಿಗೆ ಫೋನ್ ಮೂಲಕ ಪ್ರಸ್ತಾಪಿಸಿದೆ ಮತ್ತು ಅವಳು ನನ್ನ ಬಳಿ ತನ್ನ ಪ್ರೀತಿಯನ್ನು ಒಪ್ಪಿಕೊಂಡಳು. ಗಾಲಿಕುರ್ಚಿಯ ಹುಡುಗಿಯನ್ನು ಮದುವೆಯಾದ ಮಾತ್ರಕ್ಕೆ ಎಲ್ಲರೂ ನನ್ನನ್ನು ಹೊಗಳುತ್ತಾರೆ. ಯಾಕೆಂದರೆ ಅವಳ ಪ್ರೀತಿ ಮತ್ತು ನನ್ನ ಪ್ರೀತಿಯನ್ನು ಯಾರೂ ನೋಡುವುದಿಲ್ಲ. ನಾನು ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ಒಳಗಾಗಿದ್ದರೆ, ನಾನು ಅವಳಿಗೆ ಮಾಡುವುದಕ್ಕಿಂತ ಹೆಚ್ಚಿನ ಕಾಳಜಿ ಮತ್ತು ಪ್ರೀತಿಯನ್ನು ಅವಳು ನನಗೆ ನೀಡುತ್ತಿದ್ದಳು ಎಂದು ನಾನು ಭರವಸೆ ನೀಡಬಲ್ಲೆ' ಎಂದು ಸುಭ್ರಾಂಶು ಹೇಳಿದರು.

ಲೆಫ್ಟ್, ರೈಟ್ ಸಿದ್ಧಾಂತ ಸೈಡಿಗಿಟ್ಟು ಸ್ಟ್ರೈಟ್‌ ಆಗಿ ಹಸೆಮಣೆಯೇರಿದ ಕೇರಳದ ಜೋಡಿ

ದೇಬಸ್ಮಿತಾ ಮಾತನಾಡಿ, 'ಸುಭ್ರಾಂಶು ಯಾವತ್ತೂ ನಾನು ಅನಾರೋಗ್ಯಕ್ಕೆ ಒಳಗಾಗಿದ್ದೇನೆ ಎಂಬ ಭಾವನೆ ಮೂಡಲು ಬಿಡುತ್ತಿಲ್ಲ. ನಾನು ಗಾಲಿಕುರ್ಚಿ ಬಳಸುವವಳು ಎಂದು ಎಂದಿಗೂ ಭಾವಿಸಲು ಬಿಡಲಿಲ್ಲ. ಯಾವುದೇ ಕಾಯಿಲೆ ಅಥವಾ ಯಾವುದೇ ದೈಹಿಕ ಮಿತಿ ನಮ್ಮನ್ನು ಬೇರ್ಪಡಿಸುವುದಿಲ್ಲ' ಎಂದಿದ್ದಾರೆ.

click me!