ಇಳಿವಯಸ್ಸಿನಲ್ಲಿ ಒಂಟಿ ಜೀವನ ಬಹಳ ಕಷ್ಟ. ವೃದ್ಧಾಪ್ಯದಲ್ಲಿ ಸಂಸಾರ ಬಂಧುಗಳಿಲ್ಲದ ಬಹುತೇಕರು ಒಡನಾಡಿ ಅಥವಾ ಸಂಗಾತಿಗಾಗಿ ಹಾತೊರೆಯುತ್ತಾರೆ.ವೃದ್ಧರೊಬ್ಬರು ತಮ್ಮ 84 ವರ್ಷದ ಸಂಗಾತಿಯನ್ನು ವೃದ್ಧಾಶ್ರಮದಿಂದ ಮುಕ್ತಗೊಳಿಸಿ ಕರೆದೊಯ್ಯಲು ಯತ್ನಿಸಿ 4,800 ಕಿ.ಮೀನಷ್ಟು ದೂರ ವಾಹನ ಚಲಾಯಿಸಿಕೊಂಡು ಬಂದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಯಾವುದೇ ಸಿನಿಮಾಗಳಿಗೂ ಕಡಿಮೆ ಇಲ್ಲದಂತೆ ನಡೆದ ಈ ಸಿನಿಮೀಯ ಘಟನೆಗೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಹೌದು ಚಲನಚಿತ್ರ ಬರಹಗಾರರು ಮತ್ತು ನಿರ್ಮಾಪಕರು ನಿಜ ಜೀವನದ ಪ್ರೇಮ ಕಥೆಗಳಿಂದ ಸ್ಫೂರ್ತಿ ಪಡೆದು ಸಿನಿಮಾ ನಿರ್ಮಿಸಲು ಬಯಸಿ ಹುಡುಕಾಟ ನಡೆಸುತ್ತಿದ್ದರೆ, ಈ ಘಟನೆ ಅವರಿಗೆ ನಿಜವಾದ ಪ್ರೇರಣೆಯಾಗುವುದರಲ್ಲಿ ಎರಡು ಮಾತಿಲ್ಲ.
ಬುದ್ಧಿಮಾಂದ್ಯತೆ ಮತ್ತು ಪಾರ್ಕಿನ್ಸನ್ (Parkinson) ಕಾಯಿಲೆ ಹೊಂದಿರುವ ಕರೋಲ್ ಲಿಸ್ಲೆ(Carol Lisle), ಪರ್ತ್ (Perth) ಬಳಿಯ ನರ್ಸಿಂಗ್ ಹೋಮ್‌ನಲ್ಲಿ ವಾಸ್ತವ್ಯವಿದ್ದರು. ಜನವರಿ 4 ರಂದು ಆಕೆಯ 80 ವರ್ಷದ ಸಂಗಾತಿ ರಾಲ್ಫ್ ಗಿಬ್ಸ್ (Ralph Gibbs)ಇದ್ದಕ್ಕಿದ್ದಂತೆ ಅಲ್ಲಿಗೆ ಬಂದು ಅವರನ್ನು ನೋಡಿಕೊಳ್ಳಲು ಇರುವಂತಹ ಸೌಲಭ್ಯವನ್ನು ತೋರಿಸಿ ಆಕೆಯನ್ನು ಅಲ್ಲಿಂದ ಕರೆದೊಯ್ದರು. ನಂತರ ಅವರು ಆ ಪ್ರದೇಶದಿಂದ ಆಕೆಯನ್ನು ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ ತಮ್ಮ ಮನೆಗೆ ಕರೆದೊಯ್ಯಲು ದೇಶಾದ್ಯಂತ ಸುಮಾರು 4,800 ಕಿ.ಮೀ ದೂರದವರೆಗೆ ವಾಹನ ಚಾಲನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
Old Couple Get Married: 65ರ ಅಜ್ಜಿಯ ವರಿಸಿದ 85ರ ಅಜ್ಜ
ಎರಡು ದಿನಗಳ ನಂತರ ಈ ಜೋಡಿ ಮರುಭೂಮಿಯ ಮಧ್ಯೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಈ ಜೋಡಿ 43 ಡಿಗ್ರಿ ಸೆಲ್ಸಿಯಸ್ ತಾಪಮಾನದ ಮಧ್ಯೆಯೂ ವಾಹನ ಚಲಾಯಿಸುತ್ತಿದ್ದರು ಮತ್ತು ಇದರಿಂದ ಮೊದಲೇ ಅನಾರೋಗ್ಯಪೀಡಿತರಾಗಿರುವ ಲೆಸ್ಲಿ ತೊಂದರೆಗೀಡಾಗಿದ್ದರು. ಪರಿಣಾಮ ಆಕೆಯನ್ನು ಚಿಕಿತ್ಸೆಗಾಗಿ ಪರ್ತ್‌ಗೆ ವಿಮಾನದಲ್ಲಿ ಸಾಗಿಸಲಾಯಿತು ಎಂದು ಪೊಲೀಸರು ಹೇಳಿದರು.
ಘಟನೆಯ ನಂತರ, ಗಿಬ್ಸ್ ವಿರುದ್ಧ ಲಿಸ್ಲೆ ಅವರ ಜೀವಕ್ಕೆ ಅಪಾಯವನ್ನುಂಟುಮಾಡುವ ಆರೋಪ ಹೊರಿಸಿದ್ದು, ಅವರು ತಪ್ಪೊಪಿಕೊಂಡ ಹಿನ್ನೆಲೆಯಲ್ಲಿ ಅವರ ವಿರುದ್ಧದ ಆರೋಪವನ್ನು ಕಡಿಮೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪ್ರಕರಣದ ಬಳಿಕ ನ್ಯಾಯಾಲಯಕ್ಕೆ ಹಾಜರಾಗಿ, 80 ವರ್ಷದ ಅವರು ಲೆಸ್ಲಿಯನ್ನು ಮನೆಗೆ ಕರೆದೊಯ್ಯಲು ಬಯಸಿದ್ದರು ಮತ್ತು ಕೇವಲ ಅವರ ಮೇಲಿನ ಅಪಾರ ಪ್ರೀತಿಯಿಂದಾಗಿ ಹೀಗೆ ವರ್ತಿಸಿದ್ದಾಗಿ ಹೇಳಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ರೇಲೀನ್ ಜಾನ್ಸ್ಟನ್ (Raelene Johnston) ಅವರು, 80 ವರ್ಷ ವಯಸ್ಸಿನ ರಾಲ್ಫ್ ಗಿಬ್ಸ್ ತಮ್ಮ ಸಂಗಾತಿಯೊಂದಿಗೆ 15 ವರ್ಷಗಳ ಕಾಲ ಇರುವುದನ್ನು ಬಿಟ್ಟು ಬೇರೇನೂ ಬಯಸುವುದಿಲ್ಲ ಎಂದು ಹೇಳಿದರು.
Love has no age: ಪ್ರೀತಿಗೆ ವಯಸ್ಸಿನ ಹಂಗೇಕೆ ? 58 ವರ್ಷದ ವಧು, 65 ವರ್ಷದ ವರ..! ಪ್ರೀತಿ ಗೆದ್ದಿತು
ನೀವು ಪ್ರೀತಿಯಿಂದ ವರ್ತಿಸುತ್ತಿದ್ದೀರಿ ಎಂದು ನೀವು ನಂಬುತ್ತೀರಿ ಮತ್ತು ನಿಮ್ಮ ಸಂಗಾತಿಯ ಮೇಲಿನ ಕಾಳಜಿಯಿಂದ ನೀವು ವರ್ತಿಸುತ್ತಿದ್ದೀರಿ ಮತ್ತು ನೀವು ಅವಳೊಂದಿಗೆ ಇರಲು ಬಯಸುತ್ತೀರಿ ಎಂದು ನಾನು ಒಪ್ಪಿಕೊಳ್ಳುತ್ತೇನೆ ಮತ್ತು ಅವಳು ನಿಮ್ಮೊಂದಿಗೆ ಇರಬೇಕೆಂದು ನೀವು ನಂಬಿದ್ದೀರಿ ಎಂದು ಮ್ಯಾಜಿಸ್ಟ್ರೇಟ್ ಜಾನ್ಸ್ಟನ್ ಹೇಳಿದರು.ಆದರೂ ಗಿಬ್ಸ್ ಅವರ ನಡವಳಿಕೆ ಅಪಾಯಕಾರಿ ಎಂದು ಅವರು ಹೇಳಿದರು. ಆದರೆ ವಸ್ತುನಿಷ್ಠವಾಗಿ ನಿಮ್ಮ ನಡವಳಿಕೆಯು ಅತ್ಯಂತ ಅಪಾಯಕಾರಿಯಾಗಿದೆ, ಮತ್ತು ನಿಮ್ಮ ಅಪರಾಧದ ವಸ್ತುನಿಷ್ಠ ಗಂಭೀರತೆಯು ನಿಮ್ಮನ್ನು ಗಮನಿಸಿದ ಜನರ ಪ್ರತಿಕ್ರಿಯೆಗಳಿಂದ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವೂ ಅಂತಿಮವಾಗಿ, 80 ವರ್ಷ ವಯಸ್ಸಿನವರಿಗೆ ಎರಡು ವರ್ಷಗಳ ತಡೆಯಾಜ್ಞೆಯೊಂದಿಗೆ ಏಳು ತಿಂಗಳ ಜೈಲು ಶಿಕ್ಷೆ ಯನ್ನು ವಿಧಿಸಿದೆ. ಸದ್ಯಕ್ಕೆ, ಈ ಆದೇಶವನ್ನು ಮರು ಪರಿಶೀಲಿಸಲಾಗುತ್ತದೆಯೇ ಎಂಬುದು ತಿಳಿದು ಬಂದಿಲ್ಲ. ಆದರೆ ಇದೇ ತೀರ್ಪು ಅಂತಿಮವಾದರೆ ಗಿಬ್ಸ್ ಮತ್ತೆ ಲೆಸ್ಲಿಯನ್ನು ನೋಡಲು ಸಾಧ್ಯವಾಗುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.