ಭಾರತೀಯ ಪೊಲೀಸ್ ಸೇವೆ ಮಗಳು ಐಶ್ವರ್ಯಾ ಸಿಂಗ್ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಿಂದ ಉತ್ತೀರ್ಣರಾಗುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ.
ಹೈದರಾಬಾದ್ (ಫೆಬ್ರವರಿ 12, 2023): ತಮ್ಮ ಮಗು ಜೀವನದಲ್ಲಿ ಯಶಸ್ವಿಯಾಗಬೇಕೆಂದು ಮತ್ತು ಅವರ ಕನಸುಗಳನ್ನು ನನಸಾಗಿಸಲು ಎಲ್ಲ ತಂದೆ ತಾಯಿ ಬಯಸುತ್ತಾರೆ. ತಮ್ಮ ಮಗು ಅಭಿವೃದ್ಧಿ ಹೊಂದುವುದನ್ನು ನೋಡುವುದು ಪೋಷಕರಿಗೆ ಮತ್ತು ಅವರ ದೊಡ್ಡ ಹೆಮ್ಮೆಯ ಅಂತಿಮ ಸಾಧನೆಯಾಗಿದೆ. ಇದೇ ರೀತಿ, ಇತ್ತೀಚೆಗೆ, ಅಸ್ಸಾಂನ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಜ್ಞಾನೇಂದ್ರ ಪ್ರತಾಪ್ ಸಿಂಗ್ ಅಂತಹ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದರು. ಅದೇನು ಅಂತಹ ಕ್ಷಣ ಅಂತೀರಾ..? ಮುಂದೆ ಓದಿ..
ಜ್ಞಾನೇಂದ್ರ ಪ್ರತಾಪ್ ಸಿಂಗ್ ಅವರು ಶನಿವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು, ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಭಾರತೀಯ ಪೊಲೀಸ್ ಸೇವೆ (IPS) ಮಗಳು ಐಶ್ವರ್ಯಾ ಸಿಂಗ್ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಿಂದ ಉತ್ತೀರ್ಣರಾಗುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ.ಇಬ್ಬರೂ ಒಬ್ಬರಿಗೊಬ್ಬರು ಸಲ್ಯೂಟ್ ಹೊಡೆಯುವುದನ್ನು ವಿಡಿಯೋ ತೋರಿಸುತ್ತದೆ ಮತ್ತು ನಂತರ ಇಬ್ಬರೂ ನಗುತ್ತಾ ಅಕ್ಕ ಪಕ್ಕ ನಿಂತುಕೊಂಡು ಫೋಟೋಗೆ ಪೋಸ್ ನೀಡುತ್ತಾರೆ.
ಇದನ್ನು ಓದಿ: Viral Video: ಮದುವೆಯ ದಿನವೇ ವೈಟ್‌ಕೋಟ್, ಸ್ಟೆತಾಸ್ಕೋಪ್ ಧರಿಸಿ ಎಕ್ಸಾಂಗೆ ಬಂದ ವಧು!
ಈ ವಿಡಿಯೊವನ್ನು ಹಂಚಿಕೊಂಡ ಡಿಜಿಪಿ, ''ಪದಗಳು ನನಗೆ ವಿಫಲವಾಗಿವೆ. ಇಂದು @svpnpahyd ನಿಂದ ಹೊರಬಂದಾಗ ಮಗಳು @aishwarya_ips ಅವರಿಂದ ಸೆಲ್ಯೂಟ್ ಸ್ವೀಕರಿಸಲಾಗಿದೆ. ಚಿತ್ರ ಕೃಪೆ @lrbishnoiips.''
ವಿಡಿಯೋವನ್ನು ಇಲ್ಲಿ ವೀಕ್ಷಿಸಿ:
Words fail me. Received the salute from daughter as she passed out of today. Picture courtesy pic.twitter.com/aeHoj9msYG
— GP Singh (@gpsinghips)ಈ ಮಧ್ಯೆ, ಅಸ್ಸಾಂ ಪೊಲೀಸ್ ಮುಖ್ಯಸ್ಥ ಹಾಗೂ ಹೆಮ್ಮೆಯ ತಂದೆ ಪಾಸಿಂಗ್ ಔಟ್ ಪರೇಡ್‌ನ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ ಮತ್ತು ‘’ಕನಸುಗಳಿಂದ ಮಾಡಲ್ಪಟ್ಟಿದೆ. 74 RR @aishwarya_ips ನ ಪಾಸಿಂಗ್ ಔಟ್ ಪರೇಡ್‌ನಲ್ಲಿ’’ ಎಂದು ಬರೆದಿದ್ದಾರೆ.
ಇದನ್ನೂ ಓದಿ: ಮಗುವಿನ ಜನನ ಪತ್ರದಲ್ಲಿ ತಂದೆ ಎಂದು ನಮೂದಿಸಿ ಮಗು ಹೆತ್ತ ಝಹದ್ ಮನವಿ
Stuff dreams are made of. At Passing Out Parade of 74 RR pic.twitter.com/qAm6hpWtzP
— GP Singh (@gpsinghips)ಇನ್ನು, ಈ ಟ್ವೀಟ್‌ಗಳು ವೈರಲ್ ಆಗಿದ್ದು, ತಂದೆ-ಮಗಳ ಜೋಡಿಯನ್ನು ಹಲವು ನೆಟ್ಟಿಗರು ಅಭಿನಂದಿಸಿದ್ದಾರೆ. ಅಲ್ಲದೆ, ಐಪಿಎಸ್ ಐಶ್ವರ್ಯಾ ಸಿಂಗ್ ಅವರಿಗೆ ಹಲವರು ಶುಭ ಹಾರೈಸಿದ್ದು, ಇನ್ನೂ ಹಲವರು ವಿಭಿನ್ನವಾಗಿ ಕಾಮೆಂಟ್ ಮಾಡಿದ್ದು, ಮನಃಪೂರ್ವಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಳಕೆದಾರರೊಬ್ಬರು ‘’ಎಂತಹ ಕ್ಷಣ!!!!!ಹೃದಯಸ್ಪರ್ಶಿ!!! ರಬ್ ರಖಾ!!!'' ಎಂದು ಬರೆದಿದ್ದಾರೆ. ಮತ್ತೊಬ್ಬರು, ''ತಂದೆ-ಮಗಳ ಜೋಡಿಗೆ ಎಂತಹ ಹೆಮ್ಮೆಯ ದಿನ! ಅಭಿನಂದನೆಗಳು ಸರ್!!'' ಎಂದು ಪೋಸ್ಟ್ ಮಾಡಿದ್ದಾರೆ. ಹಾಗೆ, ಮತ್ತೊಬ್ಬರು ''ಹೃದಯಪೂರ್ವಕ ಅಭಿನಂದನೆಗಳು! ನಿಮ್ಮ ಮತ್ತು ಕುಟುಂಬದ ಬಗ್ಗೆ ಹೆಮ್ಮೆ ಇದೆ. ಜೈ ಹಿಂದ್.'' ಎಂದಿದ್ದಾರೆ. ಮತ್ತು ನಾಲ್ಕನೆಯವರು, ''ಹೃದಯ ಸ್ಪರ್ಶಿಸಿದೆ! ಹಾರ್ಟ್ ವಾರ್ಮಿಂಗ್! ಗೂಸ್‌ಬಂಪ್ಸ್ ಆಯಿತು’’ ಎಂದೂ ಒಬ್ಬರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಅರೆರೆ..ಇದೇನ್ ವಿಚಿತ್ರ, ಜಾತಕ ನೋಡಿ ಅದ್ಧೂರಿಯಾಗಿ ಗಿಳಿ-ಗುಬ್ಬಚ್ಚಿ ಮದುವೇನೆ ಮಾಡ್ಸಿದ್ರು!
ಪಿಟಿಐ ವರದಿಯ ಪ್ರಕಾರ, ಜ್ಞಾನೇಂದ್ರ ಪ್ರತಾಪ್ ಸಿಂಗ್ ಅವರು ಫೆಬ್ರವರಿ 1, 2023 ರಂದು ಅಸ್ಸಾಂನ ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಮಾ ಕಾಮಾಖ್ಯ ಅವರ ಆಶೀರ್ವಾದದೊಂದಿಗೆ, ನಾನು ಅಸ್ಸಾಂನ ಜನರಿಗೆ ಸೇವೆ ಸಲ್ಲಿಸುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ. ಅದ್ಭುತವಾದ ಅಸ್ಸಾಂ ಪೊಲೀಸರನ್ನು ಮುನ್ನಡೆಸಲು ನನ್ನ ಮೇಲೆ ವಿಶ್ವಾಸವಿಟ್ಟಿದ್ದಕ್ಕಾಗಿ ಗೌರವಾನ್ವಿತ ಅಸ್ಸಾಂ ಮುಖ್ಯಮಂತ್ರಿ ಅವರಿಗೆ ಕೃತಜ್ಞತೆಗಳು ಎಂದು ಜ್ಞಾನೇಂದ್ರ ಪ್ರತಾಪ್ ಸಿಂಗ್ ಅವರು ಅಸ್ಸಾಂ ಡಿಜಿಪಿ ಎಂದು ಅಧಿಕೃತವಾದ ಬಳಿಕ ಹೀಗೆ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: Parenting Tips: ಮಕ್ಕಳನ್ನು ಈ ರೀತಿ ಬೆಳೆಸಿದ್ರೆ ಪೋಷಕರು ಯಾವಾಗ್ಲೂ ಟೆನ್ಶನ್ ಫ್ರೀ ಆಗಿರ್ಬೋದು