ಪ್ರತಿದಿನ ಅವಮಾನವಾಗುತ್ತಿದೆ, ಭಾರತಕ್ಕೆ ಬರುವ ಮನಸ್ಸಾಗಿದೆ ಎಂದ ಅಂಜು!

By Santosh Naik  |  First Published Aug 10, 2023, 4:11 PM IST

ಪತಿ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಿರುವ ಅಂಜು ಈಗ ಭಾರತಕ್ಕೆ ಮರಳಲು ಬಯಸಿರುವುದಾಗಿ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಪ್ರತಿದಿನ ನನಗೆ ಅವಮಾನವಾಗುತ್ತಿದೆ. ಹಗಲೂ-ರಾತ್ರಿ ನನಗೆ ಮಕ್ಕಳೇ ನೆನಪಾಗುತ್ತಿದ್ದಾರೆ. ನನ್ನ ಪುಟ್ಟ ಮಗುವನ್ನು ಭೇಟಿಯಾಗಬೇಕು. ಭಾರತಕ್ಕೆ ಮರಳಲಿದ್ದೇನೆ ಎಂದಿದ್ದಾರೆ.


ನವದೆಹಲಿ (ಆ.10): ಪ್ರೀತಿಯನ್ನು ಹುಡುಕಿಕೊಂಡು ರಾಜಸ್ಥಾನದ ಅಲ್ವಾರ್ ನಿಂದ ಪಾಕಿಸ್ತಾನಕ್ಕೆ ಹೋಗಿದ್ದ ಅಂಜು ಅವರ ಧ್ವನಿ ಈಗ ಬದಲಾಗಿದೆ. ಈಗ ಹೇಗಾದರೂ ಮಾಡಿ ಭಾರತಕ್ಕೆ ವಾಪಾಸಾಗಬೇಕು ಎನ್ನುವ ಇಚ್ಛೆ ವ್ಯಕ್ತಪಡಿಸಿದ್ದಾಳೆ. ನಾನೇನು ಅಂದುಕೊಂಡು ಇಲ್ಲಿಗೆ ಬಂದಿದ್ದೆನೋ ಅದು ಆಗಲಿಲ್ಲ. ನನಗೆ ಬಹಳ ದುಃಖವಾಗಿದೆ. ನಾನು ಹಗಲೂರಾತ್ರಿ ನನ್ನ ಮಕ್ಕಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ನನ್ನಿಂದಾಗಿ ಭಾರತದಲ್ಲಿ ನನ್ನ ಕುಟುಂಬ ಅವಮಾನಕ್ಕೆ ಒಳಗಾಗಬೇಕಾಯಿತು ಎಂದು ಹೇಳಿದ್ದಾರೆ. ಬಿಬಿಸಿ ಮಾಡಿರುವ ವರದಿಯ ಪ್ರಕಾರ, ಆಕೆ ಈಗ ಪಾಕಿಸ್ತಾನದಲ್ಲಿ ಸಂತೋಷವಾಗಿಯೇನೋ ಇದ್ದಾಳೆ. ಎಲ್ಲರೂ ಆಕೆಯನ್ನು ಬಹಳ ಕಾಳಜಿ ವಹಿಸಿ ನೋಡಿಕೊಳ್ಳತ್ತಿದ್ದಾರೆ. ಆದರೆ, ಭಾರತದಲ್ಲಿ ಇರುವ ನನ್ನ ಮಕ್ಕಳನ್ನು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ. ನನಗೆ ನನ್ನ ಮಕ್ಕಳನ್ನು ನೋಡದೇ ಹುಚ್ಚು ಹಿಡಿದಂತಾಗಲಿದೆ. ಇದಕ್ಕಾಗಿ ನಾನು ಬಹಳ ಬೇಸರವಾಗಿದ್ದು, ಮಕ್ಕಳನ್ನು ಭೇಟಿಯಾಗಲು ಭಾರತಕ್ಕೆ ಬರುವ ಇಚ್ಛೆಯಿದೆ ಎಂದಿದ್ದಾಳೆ.

ಭಾರತಕ್ಕೆ ಮರಳಿದ ನಂತರ ಎಲ್ಲಾ ಪ್ರಶ್ನೆಗಳನ್ನು ಎದುರಿಸಲು ಬಯಸುವುದಾಗಿ ಅಂಜು ಹೇಳಿದ್ದಾರೆ. ನಾನು ಇಲ್ಲಿಗೆ ಬಂದಿದ್ದೇಕೆ. ನಾನೇನೋ ಅಂದುಕೊಂಡು ಇಲ್ಲಿಗೆ ಬಂದಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. ಸಂತೋಷವಾಗಿದ್ದರೂ ನೆಮ್ಮದಿಯಿಲ್ಲ. ಆತುರದಲ್ಲಿ ನಾನು ತಪ್ಪು ಮಾಡಿದ್ದೇನೆ. ಇಲ್ಲಿ ಏನೇ ನಡೆದರೂ ನನ್ನ ಕುಟುಂಬಕ್ಕೆ ಅಲ್ಲಿ ಅವಮಾನವಾಗಿದೆ. ನನ್ನಿಂದಲೇ ಇದೆಲ್ಲಾ ನಡೆದಿದೆ. ಇದರಿಂದಾಗಿ ನಾನು ತುಂಬಾ ದುಃಖಿತನಾಗಿದ್ದೇನೆ. ಮಕ್ಕಳ ಮನಸ್ಸಿನಲ್ಲಿ ನನ್ನ ಬಗ್ಗೆ ಯಾವ ಚಿತ್ರ ಮೂಡಿರಬೇಕು ಎಂದು ಹೇಳಿದ್ದಾರೆ.

ಹೇಗಾದರೂ ಮಾಡಿ ನಾನು ಭಾರತಕ್ಕೆ ಹೋಗಬೇಕಾಗಿದೆ. ಭಾರತದಲ್ಲಿ ಏನು ಬೇಕಾದರೂ ಎದುರಿಸಲು ಸಿದ್ಧ. ಅಲ್ಲಿನ ಜನರ ಪ್ರಶ್ನೆಗಳನ್ನು ನಾನು ಎದುರಿಸಲು ಸಿದ್ಧಳಾಗಿದ್ದೇನೆ. ನಾನು ನನ್ನ ಸ್ವಂತ ಇಚ್ಛೆಯಿಂದ ಹೋಗಿದ್ದೇನೆ ಎಂದು ಜನರಿಗೆ ಹೇಳುತ್ತೇನೆ. ನನ್ನ ಮೇಲೆ ಯಾವುದೇ ಒತ್ತಾಯ ಇರಲಿಲ್ಲ. ಪಾಕಿಸ್ತಾನದಲ್ಲಿಯೂ ಜನ ನನ್ನನ್ನು ಚೆನ್ನಾಗಿ ನೋಡಿಕೊಂಡರು ಎಂದು ಅಂಜು ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಬರುವುದು ನನ್ನ ವೈಯಕ್ತಿಕ ನಿರ್ಧಾರವಾಗಿತ್ತು ಅಂಜು ಹೇಳಿದ್ದಾರೆ. ಈ ವಿಷಯವು ಎಷ್ಟರಮಟ್ಟಿಗೆ ಬೆಳೆಯಿತು ಎಂದರೆ ಒತ್ತಡದಿಂದಾಗಿ ನಾನು ಬೇಗನೆ ಹಿಂತಿರುಗಲು ಸಾಧ್ಯವಾಗಲಿಲ್ಲ. ಎಲ್ಲವೂ ಸಾಮಾನ್ಯವಾದಾಗ, ನಾನು ಹೋಗುತ್ತೇನೆ. ನಾನು ಭಾರತಕ್ಕೆ ವಾಪಾಸ್‌ ಹೋಗಿ ನನ್ನ ಮಕ್ಕಳನ್ನು ಭೇಟಿಯಾಗಲು ಬಯಸುತ್ತೇನೆ. ಏಕೆಂದರೆ ನಾನು ಹಗಲು ರಾತ್ರಿ ಅವರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಈ ಬಗ್ಗೆ ನನಗೆ ಬಹಳ ಬೇಸರವಾಗಿದೆ. ಈ ಹಿಂದೆ ಕೂಡ ನಾನು ಈ ಮಕ್ಕಳನ್ನು ಒಂಟಿಯಾಗಿ ಬಿಟ್ಟಿದ್ದೆ ಎಂದಿದ್ದಾರೆ.

'ಭಾರತಕ್ಕೆ ಮರಳಿದ ನಂತರ ನಾನು ಏನು ಎದುರಿಸಬೇಕೋ ಎಲ್ಲವನ್ನೂ ಎದುರಿಸುತ್ತೇನೆ: ಈ ಹಿಂದೆ ನಾನು ಮಕ್ಕಳನ್ನು ಒಂದು ವರ್ಷಗಳ ಕಾಲ ಬಿಟ್ಟಿ ಉಳಿದಿದ್ದೆ. ಆದರೆ, ಈಗ ನನ್ನ ಮಕ್ಕಳೊಂದಿಗೆ ಮಾತನಾಡು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈಗ ಹೇಗಾದರೂ ಮಾಡಿ ಅವರನ್ನು ಭೇಟಿ ಮಾಡಬೇಕು. ನನ್ನ ಪುಟ್ಟ ಮಗನೊಂದಿಗೆ ನಾನು ಮಾತನಾಡುವುದು ಹೇಗೆ. ಭಾರತಕ್ಕೆ ಮರಳಿದ ಬಳಿಕ ಏನೆಲ್ಲಾ ಎದುರಿಸಬೇಕೋ ಎಲ್ಲವನ್ನೂ ಎದುರಿಸುತ್ತೇನೆ ಎಂದಿದ್ದಾರೆ.  ಭಾರತದಿಂದ ಪಾಕಿಸ್ತಾನಕ್ಕೆ ತೆರಳಿದ ಅಂಜು ಅವರ ವೀಸಾವನ್ನು ಪಾಕಿಸ್ತಾನ ಸರ್ಕಾರ ವಿಸ್ತರಿಸಿದೆ ಎಂಬ ಸುದ್ದಿ ವರದಿಯಾಗಿತ್ತು. ಆದರೆ ವೀಸಾವನ್ನು ಇನ್ನೂ ವಿಸ್ತರಿಸಿಲ್ಲ ಎಂದು ಬಿಬಿಸಿ ವರದಿ ಮಾಡಿದೆ. ನಸ್ರುಲ್ಲಾ ಅವರು ವೀಸಾ ವಿಸ್ತರಣೆಗೆ ಅರ್ಜಿ ಸಲ್ಲಿಸಿದ್ದರು, ಆದರೆ ಅಂತಹ ಯಾವುದೇ ದಾಖಲೆಗಳು ಇಲ್ಲಿಯವರೆಗೆ ಬಂದಿಲ್ಲ. ಈ ಪ್ರಕ್ರಿಯೆಯು 10-15 ದಿನಗಳನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.

ಸಹೋದರನ ಕೆಲಸಕ್ಕೆ ಕೊಕ್, ಮಕ್ಕಳು ತಬ್ಬಲಿ; ಅಂಜು ಮತಾಂತರ ಬಳಿಕ ಸಂಕಷ್ಠದಲ್ಲಿ ಕುಟುಂಬ!

ಈಗ ವೀಸಾ ಅವಧಿ ಹೆಚ್ಚಾಗುತ್ತದೋ ಇಲ್ಲವೋ ಎಂಬುದು ಸರ್ಕಾರದ ಮೇಲೆ ಅವಲಂಬಿತವಾಗಿದೆ ಎಂದು ನಸ್ರುಲ್ಲಾ ಹೇಳಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ಅಪ್ಪರ್ ದಿರ್ ಪ್ರದೇಶದ ಪೊಲೀಸ್ ಅಧಿಕಾರಿಗಳು ಸಹ, ಇದುವರೆಗೆ ಅಂತಹ ಯಾವುದೇ ದಾಖಲೆಗಳನ್ನು ಪಡೆದಿಲ್ಲ ಎಂದು ಹೇಳಿದ್ದು, ಇದರಿಂದ ಭಾರತದಿಂದ ಬಂದಿರುವ ಅಂಜು ಅವರ ವೀಸಾ ಅವಧಿ ಮುಕ್ತಾಯವಾಗಿದೆ ಎನ್ನಲಾಗಿದೆ. ಅಂಜು ಅವರ ವೀಸಾ ಆಗಸ್ಟ್‌ 21 ರಂದು ಕೊನೆಯಾಗಲಿದೆ.

Tap to resize

Latest Videos

ಪಾಕಿಸ್ತಾನಕ್ಕೆ ತೆರಳಿ ಮದುವೆ -ಮತಾಂತರದಲ್ಲಿ ISI ಷಡ್ಯಂತ್ರ, ಭಾರತದ ಅಂಜು ಪ್ರಕರಣ ತನಿಖೆಗೆ ಆದೇಶ!

ರಾಜಸ್ಥಾನದ ಭಿವಾಡಿಯಿಂದ ತನ್ನ ಪತಿ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಅಂಜು ಪಾಕಿಸ್ತಾನಕ್ಕೆ ಹೋಗಿದ್ದರು.  ಅಂಜು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ನಿವಾಸಿ ನಸ್ರುಲ್ಲಾ ಅವರೊಂದಿಗೆ ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿದ್ದರು. ಇದಾದ ನಂತರ ಇಬ್ಬರೂ ಪ್ರೀತಿಯಲ್ಲಿ ಬಿದ್ದರು. ಎರಡು ವರ್ಷಗಳ ಹಿಂದೆ ಅಂಜು ವಿದೇಶದಲ್ಲಿ ಉದ್ಯೋಗದ ಹೆಸರಿನಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದರು. ಬಳಿಕ ವೀಸಾ ಪಡೆದು ಪಾಕಿಸ್ತಾನಕ್ಕೆ ತೆರಳಿದ್ದಳು. ಅಲ್ಲಿಗೆ ಹೋದ ನಂತರ ಅಂಜು ಇಸ್ಲಾಂಗೆ ಮತಾಂತರಗೊಂಡು ಫಾತಿಮಾಳಾಗಿ ನಸ್ರುಲ್ಲಾನನ್ನು  ಮದುವೆಯಾಗಿದ್ದರು.

click me!