ಡಿವೋರ್ಸ್ ಆಗಬಾರದು ಅಂದ್ರೆ ಯಾವ ವಯಸ್ಸಲ್ಲಿ ಮದ್ವೆಯಾದ್ರೆ ಬೆಸ್ಟ್?

By Suvarna News  |  First Published Aug 9, 2023, 5:09 PM IST

ಮದುವೆ ಡೈವೋರ್ಸ್‌ನಲ್ಲಿ ಅಂತ್ಯಗೊಳ್ಳಲು ಅನೇಕ ಕಾರಣವಿರುತ್ತದೆ. ಅದ್ರಲ್ಲಿ ವಯಸ್ಸು ಕೂಡ ಕಾರಣ ಎನ್ನುವವರಿದ್ದಾರೆ. ಈ ಬಗ್ಗೆ ನಡೆದ ಅಧ್ಯಯನ ಕೂಡ ವಯಸ್ಸನ್ನು ಗಮನಕ್ಕೆ ತೆಗೆದುಕೊಂಡಿದೆ. ಯಾವ ವಯಸ್ಸು ಮದುವೆಗೆ ಬೆಸ್ಟ್ ಎಂಬುದನ್ನು ಹೇಳಿದೆ. 


ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಬಹಳ ಮಹತ್ವದ ಸ್ಥಾನ ನೀಡಲಾಗಿದೆ. ಹಿಂದಿನ ಕಾಲದಿಂದಲೂ ನಮ್ಮಲ್ಲಿ ಹೆಣ್ಣುಮಕ್ಕಳಿಗೆ 18 ವರ್ಷ ವಯಸ್ಸಾದೊಡನೆ ಮದುವೆಯ ಪ್ರಸ್ತಾಪ ಮಾಡುತ್ತಿದ್ದರು. ಮದುವೆಯಾಗಲು ಹೆಣ್ಣಿಗೆ 18 ವರ್ಷ ಗಂಡಿಗೆ 21 ವರ್ಷ ಆಗಿರಬೇಕೆಂಬ ಕಾನೂನನ್ನು ಕೂಡ ಜಾರಿಗೊಳಿಸಲಾಯ್ತು. ಈ ನಿಯಮವನ್ನು ಬದಲಾಯಿಸಬೇಕೆನ್ನುವುದರ ಕುರಿತು ಅನೇಕ ಬಾರಿ ಚರ್ಚೆಗಳು ನಡೆದಿವೆ.

ಕಡಿಮೆ ವಯಸ್ಸಿನಲ್ಲಿ ಮದುವೆ (Marriage) ಯಾಗುವುದು ಆರೋಗ್ಯ (Health ) ದೃಷ್ಟಿಯಿಂದ ಹಾಗೂ ಸಂಬಂಧದ ದೃಷ್ಟಿಯಿಂದ ಒಳ್ಳೆಯದು ಎಂಬ ಭಾವನೆ ಹಿಂದೆ ಇತ್ತು. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಹೆಣ್ಣು ಹಾಗೂ ಗಂಡಿನ ಮದುವೆಯ ವಯಸ್ಸು ಹೆಚ್ಚಿಗೆ ಆಗಿದೆ. ಈಗಿನ ಯುವಕ ಯುವತಿಯರು 25 ವರ್ಷದ ನಂತರ ಮದುವೆಯಾಗುತ್ತಾರೆ. ಅವರು ಶಾರೀರಿಕವಾಗಿ, ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಮದುವೆಗೆ ಸಿದ್ಧವಾದ ನಂತರವೇ ಮದುವೆಯಾಗಲು ಅನುಮತಿ ಸೂಚಿಸುತ್ತಾರೆ. ಮುಂದುವರೆದ ಜಗತ್ತಿನಲ್ಲಿ ಅವರು ಹಾಗೆ ವಿಚಾರ ಮಾಡುವುದು ಸರಿ ಎನ್ನುವುದು ಅನೇಕ ಮಂದಿಯ ಅಭಿಪ್ರಾಯವಾಗಿದೆ. 

Latest Videos

undefined

ಅನಾಥೆಯೊಬ್ಬಳು ಒಳ್ಳೇ ಫ್ರೆಂಡ್ ಆದಾಗ, ಏನೆಂದು ಹೆಸರಿಡಲಿ ಈ ಚೆಂದದ ಸಂಬಂಧಕ್ಕೆ?

ಇತ್ತೀಚೆಗೆ ಎಲ್ಲೆಂದರಲ್ಲಿ ಡೈವೋರ್ಸ್ (Divorce) ಪ್ರಕರಣಗಳು ಕೇಳಿಬರುತ್ತಿವೆ. ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ಸಂಸಾರದ ಜವಾಬ್ದಾರಿಯನ್ನು ಹೊರಲಾಗದೇ ವಿಚ್ಛೇದನ ಪಡೆದುಕೊಳ್ಳುವವರು ಕೆಲವರಿದ್ದಾರೆ. ಇನ್ನೂ ಕೆಲವರು ನಾನು ಒಂಟಿಯಾಗಿ ಜೀವನಮಾಡಬಲ್ಲೆ, ನಾನು ನನ್ನ ಕಾಲಮೇಲೆ ನಿಂತಿದ್ದೇನೆ ,ದುಡಿಯುತ್ತೇನೆ ಎನ್ನುವ ಧೈರ್ಯದಿಂದ ಡೈವೋರ್ಸ್ ತೆಗೆದುಕೊಳ್ಳುತ್ತಾರೆ. ಅನೇಕ ದಂಪತಿ ನಡುವೆ ಸಾಮರಸ್ಯ, ಹೊಂದಾಣಿಕೆಗಳಿಲ್ಲದೇ ಗಂಡ ಹೆಂಡತಿ ಬೇರೆಯಾದ ಉದಾಹರಣೆಗಳೂ ನಮ್ಮಲ್ಲಿವೆ. ಇಂತಹ ಪ್ರಕರಣಗಳು ನಡೆಯಲು ಗಂಡು ಹೆಣ್ಣಿನ ಮದುವೆಯ ವಯಸ್ಸು ಕೂಡ ಕಾರಣವಾಗಿರಬಹುದು. ಕೆಲವು ಅಧ್ಯಯನಗಳು ಕೂಡ ಈ ಮಾತನ್ನು ಸಮರ್ಥಿಸಿದೆ. ಗಂಡು ಹಾಗೂ ಹೆಣ್ಣು 25ರ ವಯಸ್ಸಿನ ನಂತರ ವಿವಾಹವಾದರೆ ವಿಚ್ಛೇದನಗಳು ಕಡಿಮೆಯಾಗುತ್ತವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

ಅಧ್ಯಯನ ಹೀಗೆ ಹೇಳುತ್ತದೆ :  ಉತಾಹ್ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರಜ್ಞ ನಿಕ್ ವೋಲ್ಫಿಂಗರ್ ಅವರ ಪ್ರಕಾರ, 28 ಮತ್ತು 32 ವರ್ಷದೊಳಗಿನ ವಿವಾಹಿತರಲ್ಲಿ ವಿಚ್ಚೇದನಗಳು ತೀರ ಕಡಿಮೆಯಾಗುತ್ತವೆ. ಮದುವೆಯಾದ 5 ವರ್ಷಗಳವರೆಗೆ ಗಂಡ ಹೆಂಡತಿ ಪ್ರತ್ಯೇಕವಾಗುವುದಿಲ್ಲ ಎಂದು ಹೇಳಿದ್ದಾರೆ.

Sex Education: ಗಂಡಸಿಗೆ ತಕ್ಷಣ ಎರಡನೇ ಸಲ ಸೆಕ್ಸ್‌ ಮಾಡೋಕಾಗಲ್ಲ ಯಾಕೆ? ಅದು ಸಾಧ್ಯವೇ?

ಈ ವಯಸ್ಸಲ್ಲಿ ವಿವಾಹವಾದರೆ ಡಿವೋರ್ಸ್ ಹೆಚ್ಚಾಗುತ್ತೆ :  ವೋಲ್ಫಿಂಗರ್ ಅವರು 2006-2010 ಮತ್ತು 2011-2013ರ ಕುಟುಂಬ ಬೆಳವಣಿಗೆಯ ರಾಷ್ಟ್ರೀಯ ಸಮೀಕ್ಷೆಯನ್ನು ನಡೆಸಿದರು. ಸಮೀಕ್ಷೆಯ ಪ್ರಕಾರ ಹದಿಹರೆಯದ ಕೊನೆಯ ವಯಸ್ಸಿನಿಂದ ಇಪ್ಪತ್ತರ ದಶಕದ ಅಂತ್ಯ ಮತ್ತು ಮೂವತ್ತರ ದಶಕದ ಆರಂಭದ ವಯಸ್ಸಿನಲ್ಲಿ ವಿಚ್ಛೇದನದ ಸಾಧ್ಯತೆ ಕಡಿಮೆ ಎನ್ನುವುದು ತಿಳಿದುಬಂದಿದೆ.
30ರ ವಯಸ್ಸಿನ ನಂತರ ಮದುವೆಯಾದರೆ ವಿಚ್ಛೇದನಗಳು ಹೆಚ್ಚಾಗುತ್ತೆ. ಮೂವತ್ತರ  ದಶಕದ ನಂತರ ಅಥವಾ ನಲವತ್ತರ ದಶಕದ ಆರಂಭದಲ್ಲಿ ಡಿವೋರ್ಸ್ ಸಾಧ್ಯತೆ ಪ್ರತಿಶತ 5ರಷ್ಟು ಹೆಚ್ಚಾಗಲು ಪ್ರಾರಂಭಿಸುತ್ತದೆ.

28-32 ವರ್ಷದಲ್ಲಿ ಮದುವೆಯಾಗುವುದರಿಂದ ಆಗುವ ಲಾಭಗಳು : 20ರ ದಶಕದ ಕೊನೆ ಮತ್ತು 30ರ ದಶಕದ ಆರಂಭದ ಸಮಯ ಮದುವೆಯಾಗಲು ಒಳ್ಳೆಯ ಸಮಯ ಎಂದು ಅಧ್ಯಯನ ಹೇಳುತ್ತೆ. ಈ ವಯಸ್ಸಿನ ಜನರಿಗೆ ತಮ್ಮ ಹಾಗೂ ಕುಟುಂಬದ ಜವಾಬ್ದಾರಿ ಮತ್ತು ಅವಶ್ಯಕತೆಗಳನ್ನು ಅರಿತಿರುತ್ತಾರೆ. ಇದರ ಜೊತೆಗೆ ಅವರ ಆರ್ಥಿಕ ಪರಿಸ್ಥಿತಿ ಕೂಡ ಉತ್ತಮವಾಗಿರುತ್ತದೆ.

ಈ ವಯಸ್ಸಿನಲ್ಲಿ ವಿವಾಹವಾದರೆ ವಿಚ್ಛೇದನಗಳು ಆಗೋದಿಲ್ಲ : ಹೆಣ್ಣು ಗಂಡಿನ ಮದುವೆಯ ವಯಸ್ಸಿನ ಕುರಿತು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಫಿಲಿಪ್ ಕೊಹೆನ್  ಕೂಡ ಅಧ್ಯಯನ ಮಾಡಿದ್ದಾರೆ.   ಹೆಚ್ಚು ವಯಸ್ಸಾದ ನಂತರ ಮದುವೆಯಾದರೆ ಆ ಸಂಬಂಧ ಹೆಚ್ಚು ಸಮಯ ಇರೋದಿಲ್ಲ ಎನ್ನುವುದು ಸುಳ್ಳು. ನೀವು ವಿಚ್ಛೇದನದಿಂದ ದೂರವಿರಲು ಬಯಸಿದರೆ 45ರಿಂದ 49 ವರ್ಷ ವಯಸ್ಸಿನೊಳಗೆ ಮದುವೆಯಾಗಬಹುದು ಎಂದು ಫಿಲಿಪ್ ಹೇಳಿದ್ದಾರೆ. 
 

click me!