ಬಂಗಾರ, ಬೆಳ್ಳಿ, ಹಣ ಕಳ್ಳತನವಾಗುತ್ತೆ. ಶಾಲೆಗಳಲ್ಲಿ ಪೆನ್ಸಿಲ್, ಪೆನ್ ಕದಿಯುವವರಿರಬಹದು. ಆದ್ರೆ ಈ ವ್ಯಕ್ತಿ ಕದ್ದ ವಿಷ್ಯ ವಿಚಿತ್ರವಾಗಿದೆ. ಎಲ್ಲ ಕಳೆದುಕೊಂಡ ಚೀನಾದ ವ್ಯಕ್ತಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾನೆ.
ಮನೆಯ ಸಾಮಾನು, ಬಂಗಾರ, ಬ್ಯಾಂಕ್ ನ ಹಣ, ದೇವಸ್ಥಾನದಲ್ಲಿ ಚಪ್ಪಲಿ ಸೇರಿದಂತೆ ಅನೇಕ ವಸ್ತುಗಳು ಕಳ್ಳತನವಾಗೋದನ್ನು ನೀವು ಕೇಳಿರ್ತೀರಿ. ಆದ್ರೆ ಮನೆ ಹಾಗೂ ಮನೆಯಲ್ಲಿರುವ ವ್ಯಕ್ತಿಗಳೂ ಕಳ್ಳತನವಾಗೋದನ್ನು ನೀವು ಕೇಳಿದ್ದೀರಾ? ಹೀಗೂ ಆಗಿದೆ ಅಂದ್ರೆ ನೀವು ನಂಬ್ಲೇಬೇಕು. ವ್ಯಕ್ತಿಯೊಬ್ಬ ಕೆಲಸದ ಕಾರಣಕ್ಕೆ ತುಂಬಾ ದಿನ ಮನೆಯಿಂದ ಹೊರಗಿದ್ದ. ಮನೆಗೆ ಬರ್ತಿದ್ದಂತೆ ಕಂಗಾಲಾಗಿದ್ದಾನೆ. ಆತನ ಮನೆ ಜೊತೆ ಮನೆಯಲ್ಲಿದ್ದ ಹೆಂಡತಿ ಹಾಗೂ ಮಗನನ್ನು ಪಕ್ಕದ ಮನೆ ವ್ಯಕ್ತಿ ತನ್ನ ವಶಕ್ಕೆ ತೆಗೆದುಕೊಂಡಿದ್ದಾನೆ.
ಎಲ್ಲಿ ನಡೆದಿದೆ ಈ ಘಟನೆ?: ದಕ್ಷಿಣ ಚೀನಾ (South China) ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಘಟನೆ ಚೀನಾದಲ್ಲಿ ನಡೆದಿದೆ. ಗಾಂಗ್ ಎಂಬ ವ್ಯಕ್ತಿ ಮನೆ ಹಾಗೂ ಪತ್ನಿ, ಮಗನನ್ನು ಪಕ್ಕದ ಮನೆಯ ವ್ಯಕ್ತಿ ತನ್ನದಾಗಿಸಿಕೊಂಡಿದ್ದಾನೆ. ಗಾಂಗ್ ಮಧ್ಯ ಚೀನಾದ ಹುಬೈ (Hubei) ಪ್ರಾಂತ್ಯದ ಎಝೌ ನಗರದಲ್ಲಿ ಕೆಲಸ ಮಾಡುತ್ತಿದ್ದ. ಗಾಂಗ್ ಫೆಬ್ರವರಿ 2023 ರಲ್ಲಿ ತನ್ನ ಮನೆಗೆ ವಾಪಸ್ ಆಗಿದ್ದಾನೆ. ಆತನ ಮನೆ ಅದೇ ಪ್ರಾಂತ್ಯದ ಗ್ರಾಮೀಣ ಪ್ರದೇಶದಲ್ಲಿದೆ. ಮನೆ ಆತನ ಪತ್ನಿ ಹಾಗೂ ಮಗನ ಹೆಸರಿಗೆ ಇತ್ತು ಎನ್ನಲಾಗಿದೆ. ಈಗ ಮನೆ ಪಕ್ಕದ ಮನೆಯವನ ಹೆಸರಿಗಾಗಿದೆ.
ಮಂತ್ಲೀ 'ಎಕ್ಸ್' ಖರ್ಚು, ಗಂಡನ ತಿಂಗಳ ಲಿಸ್ಟ್ ನೋಡಿ ಹೆಂಡ್ತಿಗೆ ಡೌಟ್; ಪೋಸ್ಟ್ ವೈರಲ್
ತನ್ನ ಪತ್ನಿ ಮತ್ತು ಮಗನ ಮನೆಯ ದಾಖಲಾತಿಯನ್ನು ಬೇರೆಯವರಿಗೆ ವರ್ಗಾಯಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಗಾಂಗ್ ಗೆ ಮಾಹಿತಿ ನೀಡ್ತಿದ್ದಂತೆ ಆತ ದಂಗಾಗಿದ್ದಾನೆ. ಗಾಂಗ್ ಗೆ ಇದ್ರ ಬಗ್ಗೆ ಅನುಮಾನ ಬಂದಿದೆ. ಹಾಗಾಗಿ ತನಿಖೆ (investigation) ಶುರು ಮಾಡಿದ್ದಾನೆ. ಪ್ರಕರಣದ ವಿಚಾರಣೆ ವೇಳೆ ಸತ್ಯ ಹೊರಬಿದ್ದಿದೆ. ಭೂಸ್ವಾಧೀನ ಮತ್ತು ನಿರ್ವಣ ಕಚೇರಿಯಲ್ಲಿ ತನಿಖೆ ನಡೆಸಿದಾಗ ಪಕ್ಕದ ಮನೆ ವ್ಯಕ್ತಿ ನಕಲಿ ದಾಖಲೆಗಳನ್ನು ಬಳಸಿ ದಾಖಲೆ ಬದಲಾವಣೆ ಮಾಡಿರುವುದು ಕಂಡು ಬಂದಿದೆ. ಗಾಂಗ್ ಪತ್ನಿ ಮತ್ತು ಮಗನ ಮನೆಯ ನೋಂದಣಿಯನ್ನು ನೆರೆಯವರಿಗೆ ವರ್ಗಾಯಿಸಲಾಗಿದೆ. ಗಾಂಗ್ ಪತ್ನಿ ಮತ್ತು ನೆರೆಹೊರೆಯವರ ನಡುವೆ ಎರಡನೇ ಮಗುವಿನ ಜನನ ಪ್ರಮಾಣಪತ್ರವನ್ನು ಸಹ ಮೋಸದಿಂದ ನೋಂದಾಯಿಸಲಾಗಿದೆ ಎಂದು ನಕಲಿ ದಾಖಲೆಗಳು ಗಾಂಗ್ ಗೆ ಸಿಕ್ಕಿವೆ. ನೆರೆಯ ವ್ಯಕ್ತಿ ನಕಲಿ ದಾಖಲೆ ತೋರಿಸಿ ಸರ್ಕಾರದಿಂದ ಪರಿಹಾರ ಕೂಡ ಪಡೆದಿದ್ದಾನೆ.
ಕ್ಯಾನ್ಸರ್ ಪೀಡಿತ 10 ವರ್ಷದ ಬಾಲಕಿಗೆ ಕೊನೆಯ ಆಸೆಯಂತೆ ಬಾಯ್‌ಫ್ರೆಂಡ್ ಜೊತೆ ಅದ್ದೂರಿ ಮದುವೆ!
ನೆರೆಯ ವ್ಯಕ್ತಿ, ಗಾಂಗ್ ಪತ್ನಿಯ ಐಡಿ ಕಾರ್ಡನ್ನು ದಾಖಲೆಗೆ ಬಳಸಿಕೊಂಡಿದ್ದಾನೆ. ಆದ್ರೆ ಫೋಟೋವನ್ನು ತಪ್ಪಾಗಿ ನೀಡಿದ್ದಾನೆ. ತಪ್ಪು ಫೋಟೋ ಬಳಸಿಕೊಂಡು ಗೃಹ ನೋಂದಣಿ ಹಾಗೂ ಮದುವೆ ಮಾಹಿತಿಯಲ್ಲಿ ಫೋರ್ಜರಿ ಮಾಡಿದ್ದಾನೆ. ಮನೆ ಹಾಗೂ ಕುಟುಂಬಸ್ಥರನ್ನು ಪಕ್ಕದ ಮನೆ ವ್ಯಕ್ತಿ ಕಳ್ಳತನ ಮಾಡಿದ್ದಾನೆ ಎಂದು ಗಾಂಗ್ ಆರೋಪ ಮಾಡಿದ್ದಾನೆ. ಪಕ್ಕದ ಮನೆಯ ವ್ಯಕ್ತಿಗೆ ಮದುವೆಯಾಗಿರಲಿಲ್ಲ. ಆತ ಮಾನಸಿಕ ಅಸ್ವಸ್ಥ. ಹಾಗಾಗಿಯೇ ಈ ಕೆಲಸ ಮಾಡಿದ್ದಾನೆ ಎಂದು ಗಾಂಗ್ ದೂರಿದ್ದಾನೆ.
ಗಾಂಗ್, ಸಾಮಾಜಿಕ ಜಾಲತಾಣದಲ್ಲಿ (Social Media) ಈ ವಿಷ್ಯ ಹಂಚಿಕೊಳ್ಳುತ್ತಿದ್ದಂತೆ ಜನರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ವೈಫೈ, ಏರ್ ಕಂಡಿಶನರಿಂಗ್ ಕದಿಯೋದನ್ನು ನಾನು ಕೇಳಿದ್ದೇನೆ. ಆದ್ರೆ ಪತ್ನಿ ಹಾಗೂ ಮಗುವನ್ನು ಕದ್ದ ವಿಷ್ಯ ಇದೇ ಮೊದಲ ಬಾರಿ ಕೇಳ್ತಿದ್ದೇನೆ ಎಂದು ಒಬ್ಬ ವ್ಯಕ್ತಿ ಕಮೆಂಟ್ ಮಾಡಿದ್ದಾನೆ. ಇನ್ನು ಕೆಲವರು ಸರ್ಕಾರದ ಅಧಿಕಾರಿಗಳು, ದಾಖಲೆ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. ವ್ಯಕ್ತಿ ಜೊತೆ ಸೇರಿ ಕೆಲವರು ಮೋಸ ಮಾಡಿದ್ರೆ ಸರ್ಕಾರಿ ಅಧಿಕಾರಿಗಳು ಕರ್ತವ್ಯ ಲೋಪ ಮಾಡಿದ್ದಾರೆ. ಸೂಕ್ತ ತನಿಖೆಯಾಗಿ ಎಲ್ಲರಿಗೂ ಶಿಕ್ಷೆ ಆಗ್ಬೇಕು ಎಂದು ಬಳಕೆದಾರರು ಆಗ್ರಹಿಸಿದ್ದಾರೆ.