
ಅಮಿತಾಭ್ ಬಚ್ಚನ್ (Amitabh Bachchan) ಮತ್ತು ಜಯಾ ಬಾಧುರಿ (Jaya Badhuri) ಅವರು ಜೊತೆಯಾಗಿ ನಟಿಸಿದ ಚಲನಚಿತ್ರಗಳಂತೆಯೇ, ಅವರ ಪ್ರೇಮಕಥೆಯೂ (Love Story) ಸಿನಿಮೀಯತೆ, ಏರಿಳಿತಗಳು, ತಿರುವುಗಳನ್ನೆಲ್ಲ ಹೊಂದಿತ್ತು. ಹಾಗೇ ಪ್ರೀತಿ ಪ್ರೇಮ ಪ್ರಣಯದಿಂದಲೂ ತುಂಬಿತ್ತು.
ಬಾಲಿವುಡ್‌ನ 'ಶಹೆನ್‌ಶಾ' (ShahanShah) 1973ರ ಜೂನ್‌ನಲ್ಲಿ ತಮ್ಮ ಹಲವಾರು ಚಲನಚಿತ್ರಗಳ ಸಹನಟಿ ಜಯ ಭಾದುರಿ ಅವರನ್ನು ವಿವಾಹವಾದರು. ೪೯ ವರ್ಷಗಳಿಂದ ಅವರು ಜೊತೆಯಾಗಿ ಇದ್ದಾರೆ. 1973ರಲ್ಲಿ ಜಂಜೀರ್ ಫಿಲಂ ಯಶಸ್ವಿಯಾದಾಗ, ಬಚ್ಚನ್- ಜಯಾ ಕೆಲವು ಸ್ನೇಹಿತರ ಜೊತೆಗೆ ಲಂಡನ್‌ಗೆ ಹೊರಟರು. ಆಗ ಬಚ್ಚನ್ ತಂದೆ ಹರಿವಂಶರಾಯ್ (Harivamshroy) ಅವರು, 'ನೀವು ಜೊತೆಯಾಗಿ ಹೋಗುವ ಮೊದಲು ಅವಳನ್ನು ಮದುವೆಯಾಗಬೇಕು.. ಇಲ್ಲದಿದ್ದರೆ ಹೋಗಬಾರದು' ಎಂದರು. ಹಾಗೆ ಮದುವೆಯಾಯಿತು.
ಐದು ದಶಕಗಳ ನಂತರ, ಅವರು ಇನ್ನೂ ಒಟ್ಟಿಗೆ ಪ್ರೀತಿಯಿಂದ ಇದ್ದಾರೆ. ಬಂದ ಅನೇಕ ಅಡೆತಡೆಗಳನ್ನು ದಾಟಿದ್ದಾರೆ. ಅವರ ದಾಂಪತ್ಯದ ಪ್ರೇಮಪಾಠಗಳು ಇಲ್ಲಿವೆ.
1. ಅನಾರೋಗ್ಯದಲ್ಲೂ ಜೊತೆಯಾಗಿರಿ
'ಕೂಲಿ' (Coolie) ಫಿಲಂ ಶೂಟಿಂಗ್‌ನಲ್ಲಿ (Film Shooting) ನಡೆದ ಹೊಡೆದಾಟದ ದೃಶ್ಯದಲ್ಲಿ ಅಮಿತಾಭ್ ಬಚ್ಚನ್ ತೀವ್ರವಾಗಿ ಗಾಯಗೊಂಡರು. 'ಸತ್ತರು' ಎಂದೇ ಘೋಷಿಸಲಾಯಿತು. ಆಗ ಜಯಾ ಇಡೀ ಸಮಯ ಬಚ್ಚನ್ ಜೊತೆಗೆ ಇದ್ದರು. ಪ್ರಾರ್ಥನೆ, ಕಾಳಜಿ ಮತ್ತು ಶುಶ್ರೂಷೆ ಮಾಡುತ್ತಾ ಅಮಿತಾಭ್‌ರನ್ನು ಜೋಪಾನವಾಗಿ ಆರೋಗ್ಯಕ್ಕೆ ಮರಳಿಸಿದರು. ಸಿಮಿ ಗರೆವಾಲ್ ಅವರೊಂದಿಗಿನ ಸಂದರ್ಶನದಲ್ಲಿ ಅವರು, "ನನ್ನ ಕೈಯಲ್ಲಿ ಆಗ ಪ್ರಾರ್ಥನೆ ಪುಸ್ತಕ, ಹನುಮಾನ್ ಚಾಲೀಸಾ ಇತ್ತು. ಡಾ.ದಸ್ತೂರ್ ಅವರು ಆಗ 'ನಿಮ್ಮ ಪ್ರಾರ್ಥನೆಗಳು ಮಾತ್ರ ಸಹಾಯ ಮಾಡುತ್ತವೆ' ಎಂದಿದ್ದರು'' ಎಂದು ಹೇಳಿದ್ದರು.
2. ನಂಬಿಕೆಯೇ ಆಧಾರ ಸ್ತಂಭ (Trust)
ಆಗ ಅಮಿತಾಭ್ ಹಿಂದಿ ಸಿನಿಮಾದ ಹಾರ್ಟ್‌ಥ್ರೋಬ್. ಬಚ್ಚನ್ ಅವರು ಆ ಸಮಯದಲ್ಲಿ ತಾವು ಕೆಲಸ ಮಾಡಿದ ಬಹಳಷ್ಟು ನಟಿಯರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಆದರೆ ಅದು ಅವರ ಹೆಂಡತಿಗೆ ಒಂದು ಸಮಸ್ಯೆಯೆಂದು ಅನಿಸಿರಲಿಲ್ಲ. "ನಾನು ನನ್ನ ಗಂಡನನ್ನು ಸಂಪೂರ್ಣವಾಗಿ ನಂಬುತ್ತೇನೆ ಮತ್ತು ನನಗೆ ಈ ಬಾಲಿವುಡ್ ಉದ್ಯಮ ತಿಳಿದಿದೆ. ಅಮಿತಾಭ್ ಬಗ್ಗೆ ನನಗೆ ಎಂದಿಗೂ ಅಸುರಕ್ಷಿತ ಭಾವನೆ ಇಲ್ಲ” ಎಂದಿದ್ದರು.
Sex and Divorce: ಲೈಂಗಿಕ ಅತೃಪ್ತಿಯಿಂದಲೇ ಡೈವೋರ್ಸ್ ಹೆಚ್ಚು, ಯುವಜನರೇ ಹುಷಾರ್
3. ಮನೆ ಕೆಲಸ ಹಂಚಿಕೊಳ್ಳುವಿಕೆ (Sharing work)
ಅಮಿತಾಭ್ ಮತ್ತು ಜಯಾ ಬಚ್ಚನ್ ತಮ್ಮ ಕೆಲಸಗಳನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಅಮಿತಾಭ್ ಆಕೆ ಸಂಪೂರ್ಣ ಕುಳಿತುಕೊಳ್ಳಲು ಮತ್ತು ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಡುತ್ತಾರೆ. ಸಂಪೂರ್ಣ ದೀಪಾವಳಿ ಅಲಂಕಾರಗಳನ್ನು ಒಳಗೊಂಡಂತೆ ಮನೆಯ ಸುತ್ತಲಿನ ಕೆಲಸಗಳನ್ನು ಸ್ವತಃ ಮಾಡುತ್ತಾರೆ.
4. ತ್ಯಾಗ ಮತ್ತು ಬೆಂಬಲ (Supprot)
ಅಮಿತಾಭ್ ತನ್ನ ಹೆಂಡತಿಗೆ ನಿಷ್ಠಾವಂತ ಪತಿ. ಹಾಗೇ ಮದುವೆಯಾದ ಕೂಡಲೇ ಕುಟುಂಬ ನಿರ್ವಹಣೆಗಾಗಿ ಜಯಾ ತಮ್ಮ ವೃತ್ತಿಜೀವನವನ್ನು ಪೂರ್ತಿಯಾಗಿ ತ್ಯಜಿಸಿದರು. ಅವರಿಗೆ ಇಬ್ಬರು ಮಕ್ಕಳಾದ ಶ್ವೇತಾ ಮತ್ತು ಅಭಿಷೇಕ್ ಬಚ್ಚನ್ ಹುಟ್ಟಿದ ಬಳಿಕ ಜಯಾ ಅವರನ್ನು ನೋಡಿಕೊಳ್ಳುತ್ತ ಉಳಿದರು. ನಂತರ 2000ರ ದಶಕದಲ್ಲಿ ಜಯಾ ರಾಜಕೀಯಕ್ಕೆ ಪ್ರವೇಶಿಸಲು ನಿರ್ಧರಿಸಿದಾಗ, ಅಮಿತಾಭ್ ನಟನೆಯಿಂದ ಸ್ವಲ್ಪ ಹಿಂದೆ ಉಳಿದು ಜಯಾರ ನಿರ್ಧಾರವನ್ನು ಬೆಂಬಲಿಸಿದರು.
Best colleague: ಎಲ್ಲರೂ ಬಯಸುವ ಅದ್ಭುತ ಸಹೋದ್ಯೋಗಿಯಾಗೋದು ಹೇಗೆ?
5. ಕುಡಿಮಿಂಚು ಜೀವಂತ (Spark)
ಮದುವೆಯಾದ 48 ವರ್ಷಗಳ ನಂತರವೂ ಅವರು ಈಗತಾನೇ ಪ್ರೀತಿಸಲು ಮುಂದಾಗಿರುವ ಯುವ ಜೋಡಿಯಂತೆ ಕಾಣುತ್ತಾರೆ. ಬಿಗ್ ಬಿ ಆಗಾಗ ತಮ್ಮ ಹುಟ್ಟುಹಬ್ಬದ ಪೋಸ್ಟ್‌ಗಳು ಮತ್ತು ಸಾಮಾಜಿಕ ಮಾಧ್ಯಮದ ಫೋಟೋಗಳ ಮೂಲಕ ಜಯಾ ಮೇಲಿನ ಪ್ರೀತಿಯನ್ನು ತೋರಿಸುತ್ತಾರೆ. ಅವರ ಹಿಂದಿನ ದಿನಗಳ ಪ್ರೀತಿಯ ಮುದ್ದಾದ ಕಥೆಗಳನ್ನು ಹಂಚಿಕೊಳ್ಳುತ್ತಾರೆ. ತಮ್ಮಿಬ್ಬರ ಜೀವನಪ್ರೀತಿ ಸದಾ ಜೀವಂತವಾಗಿರುವಂತೆ ನೋಡಿಕೊಳ್ಳುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.