Life Story : ಪತ್ನಿ ತವರಿಗೆ ಹೋದಾಗ ಮಗಳ ಜೊತೆ ಸಂಬಂಧ..! ಈಗ ಶುರುವಾಗಿದೆ ಸಂಕಷ್ಟ

Published : Apr 07, 2022, 07:45 PM IST
Life Story : ಪತ್ನಿ ತವರಿಗೆ ಹೋದಾಗ ಮಗಳ ಜೊತೆ ಸಂಬಂಧ..! ಈಗ ಶುರುವಾಗಿದೆ ಸಂಕಷ್ಟ

ಸಾರಾಂಶ

ತಪ್ಪು ಮಾಡಿದ್ಮೇಲೆ ಶಿಕ್ಷೆ ಆಗ್ಲೇಬೇಕು. ತಪ್ಪು ಗೊತ್ತಿದ್ದು ಆಗಿರಲಿ ಇಲ್ಲ ಗೊತ್ತಿಲ್ಲದೆ ಆಗಿರಲಿ ತಪ್ಪು ತಪ್ಪೇ. ಅದ್ರಲ್ಲೂ ಮಗಳ (Daughter) ಜೊತೆ ಸಂಬಂಧ ಬೆಳೆಸುವುದು ಪಾಪದ ಕೆಲಸ. ಯಾವುದೋ ಗುಂಗಿನಲ್ಲಿ ಮಲ ಮಗಳ ಜೊತೆ ಒಂದಾದ ತಂದೆ (Father) ಈಗ ಪಶ್ಚಾತ್ತಾಪ(Guilt) ಪಡ್ತಿದ್ದಾನೆ.  

ತಂದೆ (Father) – ಮಗಳ (Daughter) ಸಂಬಂಧ ಬಹಳ ವಿಶೇಷವಾದದ್ದು. ಇಬ್ಬರ ಮಧ್ಯೆ ಪ್ರೀತಿ (Love) ವಿಶ್ವಾಸದ ಜೊತೆ ಕಾಳಜಿಯಿರುತ್ತದೆ. ಮಗಳ ಬೆಳವಣಿಗೆಯನ್ನು ನೋಡಿ ತಂದೆಯಾದವನು ಖುಷಿಪಡ್ತಾನೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಇವರ ಪವಿತ್ರ ಸಂಬಂಧಕ್ಕೆ ಧಕ್ಕೆಯಾಗುವ ಘಟನೆಗಳು ವರದಿಯಾಗ್ತಿರುತ್ತವೆ. ತಂದೆಯೇ ಮಗಳ ಮೇಲೆ ಅತ್ಯಾಚಾರ ನಡೆಸಿದ ಎಷ್ಟೋ ಪ್ರಕರಣಗಳಿವೆ. ಈ ಎಲ್ಲದರ ಮಧ್ಯೆ ವ್ಯಕ್ತಿಯೊಬ್ಬ ತನ್ನ ಸಂಕಷ್ಟವನ್ನು ಹೇಳಿಕೊಂಡಿದ್ದಾನೆ. ಮಗಳ ಜೊತೆ ಸಂಬಂಧ ಬೆಳೆಸಿ ಈಗ ಉಭಯ ಸಂಕಟಕ್ಕೆ ಸಿಲುಕಿದ್ದಾನೆ. 

ಎರಡನೇ ಮದುವೆ (Second Marriage) : ಆತನಿಗೆ 45 ವರ್ಷವಂತೆ. ಸಹೋದರ ಸಂಬಂಧಿ ಮದುವೆಯಲ್ಲಿ 49 ವರ್ಷದ ಮಹಿಳೆಯನ್ನು ಭೇಟಿಯಾಗಿದ್ದಾನೆ. ಇಬ್ಬರ ಮಧ್ಯೆ ಶುರುವಾದ ಸ್ನೇಹ (Friendship) ಪ್ರೇಮವಾಗಿ ತಿರುಗಿದೆ. ಇದಕ್ಕೆ ಒಂದು ಹೆಸರು ನೀಡಲು ಇಬ್ಬರೂ ದಾಂಪತ್ಯ (Marriage) ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯನ್ನು ಅತ್ಯಂತ ಸರಳವಾಗಿ ಮಾಡಿಕೊಂಡಿದ್ದಾರೆ. ಎರಡನೇ ಪತ್ನಿಗೆ ಮಗಳಿದ್ದಾಳಂತೆ. ಆಕೆ ಓದುತ್ತಿದ್ದು, ಮದುವೆಗೆ ಬಂದಿರಲಿಲ್ಲವಂತೆ. ಆದ್ರೆ ಕೆಲ ದಿನಗಳ ಹಿಂದೆ ಅಮ್ಮನ ಮನೆಗೆ ಬಂದಿದ್ದಳಂತೆ. ನೋಡಲು ತುಂಬಾ ಸುಂದರವಾಗಿರುವ ಹುಡುಗಿ ಎಲ್ಲರನ್ನು ಆಕರ್ಷಿಸುವ ಗುಣ ಹೊಂದಿದ್ದಾಳಂತೆ. ಆಕೆಯನ್ನು ನೋಡ್ತಿದ್ದಂತೆ ಮಲ ತಂದೆ ಕಳೆದು ಹೋಗಿದ್ದನಂತೆ. ವಿಶೇಷ ಕಾಳಜಿ ತೋರಿಸುತ್ತಿದ್ದ ಮಲ ಮಗಳ ಮೇಲೆ ಹೆಚ್ಚು ಗಮನ ಹೋಗ್ತಿತ್ತಂತೆ. 

ಇನ್ಮುಂದೆ ಪರಸ್ಪರ ಆರೋಪಗಳಿಲ್ಲದೆಯೂ ಸಿಗುತ್ತೆ ವಿಚ್ಛೇದನ

ಮಗಳ ಜೊತೆ ಸೆಕ್ಸ್ (Sex) : ಪತ್ನಿ ತವರಿಗೆ ಹೋದ ಸಂದರ್ಭದಲ್ಲಿ ತಂದೆ – ಮಗಳು ಇಬ್ಬರೇ ಇದ್ದರು. ಇಬ್ಬರ ಮನಸ್ಸು ವಿಚಲಿತವಾಗಿತ್ತು. ಇಬ್ಬರು ತುಂಬಾ ಹತ್ತಿರ ಬಂದ್ವಿ. ಮಲ ಮಗಳ ಜೊತೆ ಶಾರೀರಿಕ ಸಂಬಂಧ ಬೆಳೆಸಿದೆ ಎನ್ನುತ್ತಾನೆ ವ್ಯಕ್ತಿ.

ಮಗಳ ಬ್ಲಾಕ್ಲ್‌ಮೇಲ್ (Blackmail) : ಎಲ್ಲವೂ ನಾರ್ಮಲ್ ಎನ್ನುವಂತೆ ವರ್ತಿಸಿದ್ದ ಮಲ ಮಗಳು ಓದಲು ಮತ್ತೆ ಅಮೆರಿಕಾಕ್ಕೆ ತೆರಳಿದ್ದಾಳಂತೆ. ಆದ್ರೆ ತಂದೆಗೆ ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ್ದಾಳೆ. ತಾಯಿಗೆ ವಿಚ್ಛೇದನ (Divorce) ನೀಡು, ಇಲ್ಲವಾದ್ರೆ ಎಲ್ಲ ವಿಷ್ಯ ಹೇಳ್ತೇನೆಂದು ಹಿಂಸೆ ನೀಡ್ತಿದ್ದಾಳಂತೆ. 

ಕಾಮಸೂತ್ರದ ಪ್ರಕಾರ ಚುಂಬಿಸಿದರೆ ಮುತ್ತಿನಿಂದ ಮತ್ತೇರುವುದು ಗ್ಯಾರಂಟಿ

ಹೆಂಡತಿ ಮೇಲೆ ಪ್ರೀತಿ  : ಎರಡನೇ ಪತ್ನಿಯನ್ನು ನಾನು ತುಂಬಾ ಪ್ರೀತಿಸುತ್ತೇನೆ. ಆಕೆಯನ್ನು ನಾನು ಗೌರವಿಸುತ್ತೇನೆ. ನಾನು ದೊಡ್ಡ ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ ಅಂದು ನಡೆದಿದ್ದು ಉದ್ದೇಶ ಪೂರ್ವಕವಾಗಿಯಲ್ಲ. ಇದು ಹೆಂಡತಿಗೆ ತಿಳಿದ್ರೆ ಆಕೆ ನನ್ನನ್ನು ದೂರ ಮಾಡ್ತಾಳೆ ಎಂದು ಗೋಳಾಡ್ತಿದ್ದಾನೆ ತಂದೆ.

ತಜ್ಞರು ಹೇಳೋದೇನು ? : ಅತ್ತ ದರಿ ಇತ್ತ ಪುಲಿ ಎಂಬ ಸ್ಥಿತಿಯಲ್ಲಿರುವ ವ್ಯಕ್ತಿಗೆ ತಜ್ಞರು ಕೆಲ ಸಲಹೆ ನೀಡಿದ್ದಾರೆ. ಮಗಳ ಸಂಪರ್ಕವನ್ನು ಸಂಪೂರ್ಣವಾಗಿ ಬಿಡುವಂತೆ ಹೇಳಿದ್ದಾರೆ. ತಪ್ಪಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದೀರಿ. ಜೊತೆಗೆ ಪತ್ನಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದೀರಿ. ಒಂದು ವೇಳೆ ಪತ್ನಿಗೆ ಈ ವಿಷ್ಯ ಗೊತ್ತಾದ್ರೆ ಅನಾಹುತವಾಗುತ್ತದೆ. ಬರೀ ನಿಮ್ಮಿಂದ ಮಾತ್ರ ನಿಮ್ಮ ಪತ್ನಿ ದೂರವಾಗುವುದಿಲ್ಲ. ಮಗಳ ಮೇಲಿನ ನಂಬಿಕೆಯನ್ನೂ ಆಕೆ ಕಳೆದುಕೊಳ್ತಾಳೆ. ಇದ್ರಿಂದ ಅನೇಕ ಸಂಬಂಧಗಳು ಹಾಳಾಗುತ್ತವೆ ಎನ್ನುತ್ತಾರೆ ತಜ್ಞರು. 

ಯಾವುದೇ ಕಾರಣಕ್ಕೂ ಈ ವಿಷ್ಯವನ್ನು ಪತ್ನಿ ಮುಂದೆ ಹೇಳ್ಬೇಡಿ ಎನ್ನುವ ತಜ್ಞರು, ಸಾಧ್ಯವಾದ್ರೆ ಪತ್ನಿಯಿಂದಲೂ ದೂರವಾಗಿ ಎನ್ನುತ್ತಿದ್ದಾರೆ. ನಿನ್ನ ಜೊತೆ ನಿನ್ನ ಮಗಳ ಹೊಣೆ ನನ್ನ ಮೇಲಿದೆ. ಅದು ಸಾಧ್ಯವಾಗ್ತಿಲ್ಲವೆಂಬ ಕಾರಣ ನೀಡಿ ದೂರವಾಗಲು ಪ್ರಯತ್ನಿಸಿ. ಆಕೆ ಒಲ್ಲೆ ಎಂದ್ರೆ ನಿಮ್ಮ ಮಗಳು ನನ್ನನ್ನು ಇಷ್ಟಪಡ್ತಿಲ್ಲ. ಹಾಗಾಗಿ ಆಕೆ ಜೊತೆ ಯಾವುದೇ ರೀತಿಯ ಸಂಬಂಧ ಇಟ್ಟುಕೊಳ್ಳಲು ಇಚ್ಛಿಸುವುದಿಲ್ಲ ಎಂಬ ಕಾರಣ ನೀಡಿ ನೀವು ದೂರವಾಗಲು ಪ್ರಯತ್ನಿಸಬಹುದು ಎನ್ನುತ್ತಾರೆ ತಜ್ಞರು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!
ಹೊಸ ವರ್ಷಕ್ಕೆ ಈ ರಾಶಿಗೆ ಹೊಸ ಪ್ರೀತಿ, ಸಂಗಾತಿ ಭಾಗ್ಯ