ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಕ್ರಿಕೆಟರ್ ಶೋಯೇಬ್ ಮಲಿಕ್ ವಿಚ್ಛೇದನ ಪಡೆದಿದ್ದಾರೆ ಎಂಬ ಗಾಳಿ ಸುದ್ದಿ ಕಳೆದ ಕೆಲ ವರ್ಷದಿಂದಲೂ ವ್ಯಾಪಕವಾಗಿ ಹರಿದಾಡುತ್ತಿದೆ. ಇದರ ಮಧ್ಯೆ ಈಗ ಸಾನಿಯಾ ಮಿರ್ಜಾ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬದುಕಿನಲ್ಲಿರುವ ಕಷ್ಟಗಳ ಬಗ್ಗೆ ಪೋಸ್ಟ್ ಮಾಡಿದ್ದು, ಇದರಿಂದ ಮತ್ತೆ ಅವರ ವಿವಾಹ ವಿಚ್ಛೇದನ ಸುದ್ದಿ ಮುನ್ನೆಲೆಗೆ ಬಂದಿದೆ.
ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಕ್ರಿಕೆಟರ್ ಶೋಯೇಬ್ ಮಲಿಕ್ ವಿಚ್ಛೇದನ ಪಡೆದಿದ್ದಾರೆ ಎಂಬ ಗಾಳಿ ಸುದ್ದಿ ಕಳೆದ ಕೆಲ ವರ್ಷದಿಂದಲೂ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಗಾಸಿಪ್‌ಗಳ ನಡುವೆಯೇ ಕಳೆದ ವರ್ಷ ಜೊತೆಯಾಗಿಯೇ ಇಬ್ಬರೂ ದುಬೈನಲ್ಲಿ ತಮ್ಮ ಪ್ರೀತಿಯ ಮಗನ ಹುಟ್ಟುಹಬ್ಬ ಆಚರಿಸಿ ನಾವು ಜೊತೆಯಾಗಿದ್ದೇವೆ ಎಂಬ ಸಂದೇಶ ನೀಡಿದ್ದರು. ಇದರ ಮಧ್ಯೆ ಈಗ ಸಾನಿಯಾ ಮಿರ್ಜಾ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬದುಕಿನಲ್ಲಿರುವ ಕಷ್ಟಗಳ ಬಗ್ಗೆ ಪೋಸ್ಟ್ ಮಾಡಿದ್ದು, ಇದರಿಂದ ಮತ್ತೆ ಅವರ ವಿವಾಹ ವಿಚ್ಛೇದನ ಸುದ್ದಿ ಮುನ್ನೆಲೆಗೆ ಬಂದಿದೆ.
ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಸ್‌ನಲ್ಲಿ ಸ್ವಲ್ಪ ಒಳಾರ್ಥವಿರುವ ಪೋಸ್ಟೊಂದನ್ನು ಟೆನಿಸ್ ತಾರೆ ಮಾಡಿದ್ದು, ಇದು ಅವರ ಅಭಿಮಾನಿಗಳು ಹಾಗೂ ನೆಟ್ಟಿಗರಲ್ಲಿ ಮತ್ತೆ ವಿಚ್ಛೇದನದ ಊಹಾಪೋಹಾ ಸೃಷ್ಟಿಸುವುದಕ್ಕೆ ಕಾರಣವಾಗಿದೆ. ಹಾಗಾದರೆ ಆ ಪೋಸ್ಟ್‌ನಲ್ಲಿ ಏನಿದೆ ಇಲ್ಲಿದೆ ನೋಡಿ..
ಮದುವೆಯೂ ಕಷ್ಟ ವಿಚ್ಛೇದನವೂ ಕಷ್ಟ, ನಿಮ್ಮ ಕಷ್ಟ ಏನು ಎಂಬುದನ್ನು ಆಯ್ಕೆ ಮಾಡಿ, ಬೊಜ್ಜುತನವೂ ಕಷ್ಟ, ಫಿಟ್ ಆಗಿ ಇರೋದು ಕಷ್ಟ, ನಿಮ್ಮ ಕಷ್ಟ ಏನು ಎಂಬುದನ್ನು ಆಯ್ಕೆ ಮಾಡಿ, ಸಾಲ ಹೊಂದಿರುವುದು ಕೂಡ ಕಷ್ಟ ಅರ್ಥಿಕವಾಗಿ ಸುಸ್ಥಿರವಾಗಿರುವುದು ಕೂಡ ಕಷ್ಟ, ನಿಮ್ಮ ಕಷ್ಟ ಏನು ಎಂಬುದನ್ನು ಆಯ್ಕೆ ಮಾಡಿ, ಮಾತನಾಡಿದರೂ ಕಷ್ಟ ಮಾತನಾಡದೇ ಇದ್ದರೂ ಕಷ್ಟ, ನಿಮ್ಮ ಕಷ್ಟ ಏನು ಎಂಬುದನ್ನು ಆಯ್ಕೆ ಮಾಡಿ, ಜೀವನ ಎಂದಿಗೂ ಸುಲಭವಾಗಿರುವುದಿಲ್ಲ, ಅದು ಯಾವಾಗಲೂ ಕಷ್ಟಕರವಾಗಿರುತ್ತದೆ. ಆದರೆ ನಾವು ಬುದ್ಧಿವಂತಿಕೆಯಿಂದ ನಮ್ಮ ಕಷ್ಟ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬಂತಹ ಟಿಪ್ಪಣಿಯನ್ನು ಪೋಸ್ಟ್ ಮಾಡಿದ್ದಾರೆ ಟೆನ್ನಿಸ್ ತಾರೆ.
ದುಬಾರಿ ಕಾರು, ಐಷಾರಾಮಿ ಮನೆ... ಕ್ರೀಡಾಲೋಕದ ಸ್ಟೈಲಿಶ್ ಐಕಾನ್ ಸಾನಿಯಾ ಮಿರ್ಜಾ ಆಸ್ತಿ ಮೌಲ್ಯ ಎಷ್ಟು ಕೋಟಿ?
2022ರಲ್ಲಿ ಸಾನಿಯಾ ಹಾಗೂ ಶೋಯೇಬ್ ವಿಚ್ಛೇದನದ ಸುದ್ದಿ ಮೊದಲ ಬಾರಿ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸಿತ್ತು. ಆದರೆ ಇಬ್ಬರೂ ಕೂಡ ಬಗ್ಗೆ ಬಾಯ್ತೆರೆದಿಲ್ಲ, ಶೊಯೆಬ್ ಪಾಕಿಸ್ತಾನದ ನಟಿ ಆಯೇಶಾ ಒಮರ್ ಜೊತೆ ತಿರುಗಾಡುತ್ತಿರುವುದೇ ಈ ದಂಪತಿಗಳ ನಡುವಿನ ವಿರಸಕ್ಕೆ ಕಾರಣ ಎಂಬ ಸುದ್ದಿಗಳು ಸಾಕಷ್ಟು ಹರಿದಾಡಿದ್ದವು. ಆದರೆ ಇದಕ್ಕೆ ಟಿವಿ ಶೋವೊಂದರಲ್ಲ ಮಾತನಾಡುತ್ತಾ ಪ್ರತಿಕ್ರಿಯಿಸಿದ ಆಯೇಶಾ ನಾನು ಎಂದಿಗೂ ವಿವಾಹಿತ ಅಥವಾ ಕಮಿಟೆಡ್ ಪುರುಷನತ್ತ ಆಕರ್ಷಿತನಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. 2021 ರ ಫೋಟೋಶೂಟ್‌ನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಾಗಿನಿಂದ ಆಯೇಶಾ ಒಮರ್ ಮತ್ತು ಶೋಯೆಬ್ ಮಲಿಕ್ ಅವರ ಹೆಸರನ್ನು ಲಿಂಕ್ ಮಾಡಲಾಗಿತ್ತು.
ಶೋಯೇಬ್ ಮಲಿಕ್ ಹಾಗೂ ಸಾನಿಯಾ ಮಿರ್ಜಾ ಭಾರತದಲ್ಲಿ ಹಲವರ ವಿರೊಧ ನಡುವೆ 2010ರಲ್ಲಿ ಮದುವೆಯಾಗಿದ್ದರು. ಮದುವೆಯ ನಂತರ ಈ ಜೋಡಿ ದುಬೈನಲ್ಲಿ ವಾಸವಾಗಿದ್ದಾರೆ. ಇತ್ತೀಚೆಗೆ ಮಗ ಶಾಲೆಯೊಂದರಲ್ಲಿ ಟೂರ್ನಿಯೊಂದರಲ್ಲಿ ಭಾಗಿಯಾಗಿ ಚಿನ್ನದ ಪದಕ ಗಳಿಸಿದ್ದ ಫೋಟೋವನ್ನು ಈ ದಂಪತಿ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಮಗನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು.
ಡಿವೋರ್ಸ್ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ವೈಯುಕ್ತಿಕ ವಿಚಾರ ಹಂಚಿ ಕಣ್ಣೀರಿಟ್ಟ ಶೊಯೆಬ್ ಮಲಿಕ್!