
ನವದೆಹಲಿ(ಜ.17) ಐ ಲವ್ ಯೂ ಪದದಲ್ಲಿ ಇರು ಶಕ್ತಿ, ಸ್ಪೂರ್ತಿ, ಉತ್ಸಾಹ ಅತೀವ. ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಕರಿಗೂ ಐ ಲವ್ ಯೂ ಪದ ಅತ್ಯಂತ ಹಿತ ಹಾಗೂ ಅಪ್ತತೆ ಅನುಭವ ನೀಡುತ್ತದೆ. ಪ್ರೀತಿಯನ್ನು ಪದಗಳಲ್ಲಿ ಕಟ್ಟಿಕೊಡಬಲ್ಲ ಈ ಪದ, ಅದೆಷ್ಟೋ ಹೊಸ ಬದುಕಿಗೆ ಕಾರಣವಾಗಿದೆ. ಆದರೆ ಐ ಲವ್ ಯೂ ಅನ್ನೋ ಮೂರು ಅ ಪದಗಳಿಗಿಂತ ಹಿತವಾದ ಪದ ಯಾವುದು ಅನ್ನೋ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗಿದೆ. ಹಲವರು ಸಾಕಷ್ಟು ಉತ್ತರಗಳನ್ನು ನೀಡಿದ್ದಾರೆ. ಐ ಟ್ರಸ್ಟ್ ಯು ಸೇರಿದಂತೆ ಹಲವು ಉತ್ತರ ಬಂದಿದೆ. ಆದರೆ ಭಾರತದ ಜನಪ್ರಿಯ ಅರಣ್ಯಾಧಿಕಾರಿ ಪ್ರವೀಣ್ ಕಸ್ವಾನ್ ನೀಡಿದ ಫನ್ನಿ ಉತ್ತರ ಇದೀಗ ಭಾರಿ ವೈರಲ್ ಆಗಿದೆ. ಪ್ರವೀಣ್ ಕಸ್ವಾನ್ ಪ್ರಕಾರ ಐ ಲವ್ ಯೂ ಗಿಂತ ಹಿತವಾದ ಮೂರು ಪದ ಎಂದರೆ ಸ್ಯಾಲರಿ ಈಸ್ ಕ್ರೆಡಿಟೆಡ್.
ಭಾರತದ IFS ಅಧಿಕಾರಿ ಪ್ರವೀಣ್ ಕಸ್ವಾನ್ ನೀಡಿದ ಈ ಉತ್ತರ ಭಾರಿ ವೈರಲ್ ಆಗಿದೆ. ನಾನು ನಿನ್ನ ಪ್ರೀತಿಸುತ್ತೇನೆ ಅನ್ನೋ ಪದಕ್ಕಿಂತ ಈಗಿನ ಕಾಲದಲ್ಲಿ ವೇತನ ಖಾತೆಗೆ ಜಮೆ ಆಗಿದೆ ಅನ್ನೋ ಪದಗಳೇ ಆಪ್ತವೆನಿಸುತ್ತದೆ ಎಂದು ಪ್ರವೀಣ್ ಕಸ್ವಾನ್ ಹೇಳಿದ್ದಾರೆ. ಉದ್ಯೋಗಿಗಳು ತಿಂಗಳ ಮಧ್ಯದಿಂದಲೇ ಸ್ಯಾಲರಿಗಾಗಿ ಕಾಯುತ್ತಾರೆ. ಸ್ಯಾಲರಿ ಈಸ್ ಕ್ರೆಡಿಟೆಡ್ ಅನ್ನೋ ಸಂದೇಶ ನೋಡಿದ ಮರುಕ್ಷಣಣದಲ್ಲೆ ನಿಟ್ಟುಸಿರು ಬಿಡುತ್ತಾರೆ. ಆದರೆ ಅಷ್ಟೇ ವೇಗದಲ್ಲಿ ಮುಂದಿನ ಸ್ಯಾಲರಿಗಾಗಿ ಬಕ ಪಕ್ಷಿಯಂತೆ ಕಾಯುವುದು ಸಾಮಾನ್ಯ.
I Love You ಅಂತ ಹೇಳಿದ್ರೆ ಮಾತ್ರ ಪ್ರೀತಿನಾ? ಇವರ ಕಥೆ ಕೇಳಿ
ಪ್ರವೀಣ್ ಕಸ್ವಾನ್ ಫನ್ನಿ ಉತ್ತರಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಹಾಸ್ಯವಾಗಿ ಉತ್ತರಿಸಿದ್ದರೂ ವೇತನ ಪಡೆಯುವ ಎಲ್ಲಾ ಉದ್ಯೋಗಿಗಳಿಗೆ ಇದಕ್ಕಿಂತ ಹಿತವಾದ ಪದವಿಲ್ಲ ಎಂದಿದ್ದಾರೆ. ಮತ್ತೆ ಕೆಲವರು ಇದು ಗುಲಾಮಗಿರಿ ಸಂಕೇತ ಎಂದು ಟೀಕಿಸಿದ್ದಾರೆ. ಬಹುತೇಕರು ಪ್ರವೀಣ್ ಕಸ್ವಾನ್ ಪ್ರತಿಕ್ರಿಯೆಗೆ ಬೆಂಬಲ ನೀಡಿದ್ದಾರೆ. ಮತ್ತೆ ಕೆಲವರು ಐ ಮಿಸ್ ಯೂ, ಮೀಟಿಂಗ್ ಕ್ಯಾನ್ಸಲ್ ಸೇರಿದಂತೆ ಹಲವು ಪದಗಳನ್ನು ಹೇಳಿದ್ದಾರೆ.
ಆಹಾರ ಪ್ರಿಯರು, ಊಟ ರೆಡಿ ಇದೆ, ತಂದೂರಿ ಚಿಕನ್ ರೈಸ್ ಸೇರಿದಂತೆ ಒಂದು ಮೂರು ಪದಗಳನ್ನು ಹೇಳಿದ್ದಾರೆ. ಇನ್ನು ಮದ್ಯಪ್ರಿಯರ್ ಒಲ್ಡ್ ಮೊಂಕ್ ರಮ್ ಸೇರಿದಂತೆ ಹಲವು ಮದ್ಯದ ಹೆಸರುಗಳನ್ನು ಹೇಳಿ ತಮ್ಮ ಹಿತವಾದ ಪದಗಳನ್ನು ಮೆಲುಕು ಹಾಕಿದ್ದಾರೆ. ಸ್ಯಾಲರಿ ಈಸ್ ಕ್ರೆಡಿಟೆಡ್ ಜೊತೆಗೆ ಉದ್ಯೋಗಿಗಳಿಗೆ ಇಂದು ಭಾನುವಾರ ( ಟುಡೆ ಈಸ್ ಸಂಡೆ) ಅನ್ನೋ ಪದ ಕೂಡ ಹಿತವೆನಿಸುತ್ತದೆ ಎಂದಿದ್ದಾರೆ.
I LOVE YOU ಹೇಳಲು 14 ತಾಸು ನೀರಲ್ಲಿ ಮುಳುಗಿದ್ದ ನಟಿ ರಾಕುಲ್ ಪ್ರೀತ್ ಸಿಂಗ್
ಒಂದು ಹಂತಕ್ಕೆ ಆರ್ಥಿಕತ ಸ್ಥಿತಿಗತಿ ಉತ್ತಮವಾದ ಬಳಿಕ ಸ್ಯಾಲರಿ ಸಂದೇಶ, ಬ್ಯಾಲೆನ್ಸ್ ಪರಿಶೀಲಿಸುವುದು ಹಿತವೆನಿಸುವುದಿಲ್ಲ. ಈಗ ಐ ಲವ್ ಯೂ ಅನ್ನೋ ಪದಕ್ಕಿಂತ ಉತ್ತಮ ಪದ ಮತ್ತೊಂದಿಲ್ಲ ಎಂದು ಕೆಲವರು ವಾದ ಮಂಡಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.