ಸಮಗ್ರ ಅಧಿಕಾರ ಬಳಸಿ ಸಲಿಂಗ ವಿವಾಹಕ್ಕೆ ಮನ್ನಣೆ ನೀಡಿ: ಸುಪ್ರೀಂಕೋರ್ಟ್‌ಗೆ ಸಲಿಂಗಿಗಳ ಪರ ವಕೀಲರ ಮನವಿ

Published : Apr 20, 2023, 10:04 AM IST
ಸಮಗ್ರ ಅಧಿಕಾರ ಬಳಸಿ ಸಲಿಂಗ ವಿವಾಹಕ್ಕೆ ಮನ್ನಣೆ ನೀಡಿ: ಸುಪ್ರೀಂಕೋರ್ಟ್‌ಗೆ ಸಲಿಂಗಿಗಳ ಪರ ವಕೀಲರ ಮನವಿ

ಸಾರಾಂಶ

ಸುಪ್ರೀಂಕೋರ್ಟು ತನ್ನ ಸಮಗ್ರ ಅಧಿಕಾರ, ಪ್ರತಿಷ್ಠೆ ಹಾಗೂ ನೈತಿಕ ಅಧಿಕಾರ ಬಳಸಿ ಸಲಿಂಗ ವಿವಾಹಕ್ಕೆ ಮಾನ್ಯತೆ ದೊರಕಿಸಿಕೊಡಬೇಕು. ಈ ಮೂಲಕ ಸಲಿಂಗಿಗಳು ಸಮಾಜದಲ್ಲಿ ಗೌರವಯುತ ಬಾಳ್ವೆ ನಡೆಸುವಂತೆ ಮಾಡಬೇಕು ಎಂದು ನ್ಯಾಯಾಲಯಕ್ಕೆ ಬುಧವಾರ ಸಲಿಂಗಿಗಳ ಪರ ವಕೀಲರು ಮನವಿ ಮಾಡಿದ್ದಾರೆ.

ನವದೆಹಲಿ: ಸುಪ್ರೀಂಕೋರ್ಟು ತನ್ನ ಸಮಗ್ರ ಅಧಿಕಾರ, ಪ್ರತಿಷ್ಠೆ ಹಾಗೂ ನೈತಿಕ ಅಧಿಕಾರ ಬಳಸಿ ಸಲಿಂಗ ವಿವಾಹಕ್ಕೆ ಮಾನ್ಯತೆ ದೊರಕಿಸಿಕೊಡಬೇಕು. ಈ ಮೂಲಕ ಸಲಿಂಗಿಗಳು ಸಮಾಜದಲ್ಲಿ ಗೌರವಯುತ ಬಾಳ್ವೆ ನಡೆಸುವಂತೆ ಮಾಡಬೇಕು ಎಂದು ನ್ಯಾಯಾಲಯಕ್ಕೆ ಬುಧವಾರ ಸಲಿಂಗಿಗಳ ಪರ ವಕೀಲರು ಮನವಿ ಮಾಡಿದ್ದಾರೆ.

ಮುಖ್ಯ ನ್ಯಾಯಾಧೀಶ ನ್ಯಾ. ಡಿ.ವೈ. ಚಂದ್ರಚೂಡ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠದ ಮುಂದೆ ಸತತ 2ನೇ ದಿನ ವಾದ ಮಂಡಿಸಿದ ಸಲಿಂಗಿಗಳ ಪರ ವಕೀಲ ಮುಕುಲ್‌ ರೋಹಟ್ಗಿ, ಸರ್ಕಾರವು ತಾನಾಗಿಯೇ ಮುಂದೆ ಬಂದು ಸಲಿಂಗ ವಿವಾಹಕ್ಕೆ ಮನ್ನಣೆ ನೀಡಬೇಕು ಎಂದು ಕೋರಿದರು ಹಾಗೂ ಇದೇ ವೇಳೆ ವಿಧವಾ ವಿವಾಹಕ್ಕೆ ಸಿಕ್ಕ ಮನ್ನಣೆಯನ್ನು ಉದಾಹರಿಸಿದರು. ಸಮಾಜವು ಹೇಗೆ ವಿಧವಾ ವಿವಾಹಕ್ಕೆ ಮಾನ್ಯತೆ ನೀಡಿದೆಯೋ ಅದೇ ರೀತಿ ಈಗಲೂ ಸಲಿಂಗ ವಿವಾಹವನ್ನು ಮಾನ್ಯ ಮಾಡಬೇಕು ಎಂದರು.

ಸಂವಿಧಾನದ 142ನೇ ಪರಿಚ್ಛೇದದ (Article 142 of the Constitution) ಪ್ರಕಾರ, ಸುಪ್ರೀಂಕೋರ್ಟಿಗೆ ನೈತಿಕ ಅಧಿಕಾರವಿದೆ ಹಾಗೂ ಸಾರ್ವಜನಿಕರ ವಿಶ್ವಾಸವನ್ನೂ ಇದರ ಮೂಲಕ ಸಂಪಾದಿಸಬಹುದು/ ಏಕೆಂದರೆ ಈ ಪರಿಚ್ಛೇದವು ಸುಪ್ರೀಂ ಕೋರ್ಟ್‌ಗೆ, ನ್ಯಾಯ ಒದಗಿಸಬಲ್ಲ ಯಾವುದೇ ಅಗತ್ಯ ಆದೇಶ ಹೊರಡಿಸುವ ಸಮಗ್ರ ಅಧಿಕಾರ ನೀಡುತ್ತದೆ. ಹೀಗಾಗಿ ನಾವು ಕೋರ್ಟಿನ ಪ್ರತಿಷ್ಠೆ ಹಾಗೂ ನೈತಿಕ ಅಧಿಕಾರದ ಮೇಲೆ ಅವಲಂಬಿತರಾಗಿದ್ದು, ಈ ಮೂಲಕ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.

ಧರ್ಮಗಳ ವಿವಾಹ ಕಾಯ್ದೆ ಅನ್ವಯ ಸಲಿಂಗ ವಿವಾಹ ವಿಚಾರಣೆ ನಡೆಸಲ್ಲ: ಸುಪ್ರೀಂ

ಎಲ್ಲ ರಾಜ್ಯಗಳೂ ಪಕ್ಷಗಾರರಾಗಲಿ- ಕೇಂದ್ರ:

ಈ ನಡುವೆ, ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ (Solicitor General Tushar Mehta), ಎಲ್ಲ ರಾಜ್ಯಗಳನ್ನೂ ಈ ಪ್ರಕರಣದಲ್ಲಿ ಪಕ್ಷಗಾರ ಮಾಡಬೇಕು ಎಂಬ ಹೊಸ ಅರ್ಜಿ ಸಲ್ಲಿಸಿದರು.   ಏ.18ರಂದು ಎಲ್ಲ ರಾಜ್ಯ ಸರ್ಕಾರಗಳಿಗೆ (state governments) ಕೇಂದ್ರ ಸರ್ಕಾರ ಪತ್ರ ಬರೆದಿದ್ದು, ಸಲಿಂಗ ವಿವಾಹಕ್ಕೆ ಮನ್ನಣೆ ನೀಡುವ ಬೇಡಿಕೆ ಸಂಬಂಧ ಅಭಿಪ್ರಾಯ ಕೋರಲಾಗಿದೆ. ಹೀಗಾಗಿ ರಾಜ್ಯಗಳನ್ನೂ ಪಕ್ಷಗಾರರನ್ನಾಗಿ ಮಾಡಬೇಕು. ಆಗ ಎಲ್ಲ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿ ಬಳಿಕ ಸಮಗ್ರ ಅಭಿಪ್ರಾಯವನ್ನು ಕೋರ್ಟಿಗೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಅಫಿಡವಿಟ್‌ ಮೂಲಕ ಮೆಹ್ತಾ ಕೋರಿದರು. ಆದರೆ ರಾಜ್ಯಗಳು ಪಕ್ಷಗಾರ ಆಗುವುದು ಅಗತ್ಯವಿಲ್ಲ ಎಂದು ಸಲಿಂಗಿಗಳ ಪರ ವಕೀಲ ರೋಹಟಗಿ ಆಕ್ಷೇಪಿಸಿದರು.

ಸಲಿಂಗ ವಿವಾಹ ಮನ್ನಣೆಗೆ ಕೇಂದ್ರ ವಿರೋಧ: ಇಂದು ಸಾಂವಿಧಾನಿಕ ಪೀಠದಿಂದ ವಿಚಾರಣೆ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗಂಡ ಹೆಂಡತಿಗೆ ಮುಳ್ಳಾದ ಈರುಳ್ಳಿ ಬೆಳ್ಳುಳ್ಳಿ, 11 ವರ್ಷದ ದಾಂಪತ್ಯ ಜೀವನ ಡಿವೋರ್ಸ್‌ನಲ್ಲಿ ಅಂತ್ಯ
ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!