Happy State: ಖುಷಿಯಾಗಿರೋಕೆ ಏನ್‌ ಬೇಕು? ಮಿಜೋರಾಂ ಜನರನ್ನ ಕೇಳ್ಬೇಕು!

By Sumana Lakshmeesha  |  First Published Apr 19, 2023, 8:17 PM IST

ಹೆಚ್ಚು ಸಂತಸದಿಂದ ಕೂಡಿರಲು, ಖುಷಿಯಾಗಿರಲು ಏನು ಮಾಡಬೇಕು ಎಂದು ಕೇಳಿದರೆ ಉತ್ತರ ಹೇಳುವುದು ಕಷ್ಟವಾಗುತ್ತದೆ. ಏಕೆಂದರೆ, ಖುಷಿಗೆ ಎಲ್ಲವೂ ಬೇಕು. ಆದರೂ ಸಂತೃಪ್ತ ಮನಸ್ಸು ಇಲ್ಲವಾದರೆ ಖುಷಿ ಇರುವುದಿಲ್ಲ. ಆ ತೃಪ್ತಿ ಮನಸ್ಸನ್ನು ತುಂಬಿಕೊಳ್ಳಲು ಸಮಾಜದ ಧೋರಣೆ, ವರ್ತನೆ, ಅಭ್ಯಾಸಗಳು ಬಹುಮುಖ್ಯ ಕೊಡುಗೆ ನೀಡುತ್ತವೆ. ಇಂತಹ ಸಮಾಜವನ್ನೊಳಗೊಂಡ ಮಿಜೋರಾಂ ದೇಶದಲ್ಲೇ ಹೆಚ್ಚು ಖುಷಿ ಹೊಂದಿರುವ ರಾಜ್ಯವಾಗಿದೆ. 
 


ನಿಮಗೆ ಖುಷಿಯಾಗಿರೋಕೆ ಏನು ಬೇಕು? ಹಣ, ಸಂಬಂಧ, ಪ್ರೀತಿ, ನೆಮ್ಮದಿ, ವ್ಯವಸ್ಥೆ, ಉತ್ತಮ ಸರ್ಕಾರ ಹಾಗೂ ಆಡಳಿತ ಅಥವಾ ಇವೆಲ್ಲವೂ? ಆದರೆ, ಎಲ್ಲವೂ ಪರಿಪೂರ್ಣವಾಗಿರುವ ಸಮಾಜ ಅಸ್ತಿತ್ವದಲ್ಲಿರುವುದು ಬಹುಶಃ ಕಷ್ಟ. ಆದರೂ ಜನ ಖುಷಿಯಾಗಿದ್ದಾರೆ ಅಂದರೆ ಏನೋ ವಿಶೇಷ ಅಲ್ಲಿರುತ್ತದೆ. ನಮ್ಮ ದೇಶದ ಮಿಜೋರಾಂ ರಾಜ್ಯ ಕೂಡ ಹೀಗೆಯೇ. ಇಲ್ಲೂ ಅದೆಷ್ಟೋ ಸಮಸ್ಯೆಗಳಿವೆ. ಆದರೂ ಇದು ಇಡೀ ದೇಶದಲ್ಲಿ ಅತ್ಯಂತ ಖುಷಿಯಾಗಿರುವ ಜನರಿಂದ ಕೂಡಿರುವ ರಾಜ್ಯ ಎನ್ನುವುದಾಗಿ ಪರಿಗಣಿಸಲ್ಪಟ್ಟಿದೆ. ಗುರುಗ್ರಾಮದಲ್ಲಿರುವ ಮ್ಯಾನೇಜ್‌ ಮೆಂಟ್‌ ಡೆವಲಪ್‌ ಮೆಂಟ್‌ ಇನ್‌ ಸ್ಟಿಟ್ಯೂಷನ್‌ ನಲ್ಲಿ ಪ್ರಾಧ್ಯಾಪಕರಾಗಿರುವ ರಾಜೇಶ್‌ ಕೆ.ಪಿಳ್ಳನಿಯ ಅವರ ನೇತೃತ್ವದಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ, ನಮ್ಮ ದೇಶದಲ್ಲಿ ಹೆಚ್ಚು ಸಂತೋಷವಾಗಿರುವ ರಾಜ್ಯ ಮಿಜೋರಾಂ. ಸಂತೋಷದ ಸೂಚ್ಯಂಕ ಇಲ್ಲಿ ಗರಿಷ್ಠವಾಗಿದೆ. ಕುಟುಂಬ, ಕೆಲಸ ಸಂಬಂಧಿತ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳು, ಪರೋಪಕಾರ, ಧರ್ಮ, ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಗೂ ಸಂತೋಷದ ಮೇಲೆ ಕೋವಿಡ್‌ ಪರಿಣಾಮಗಳನ್ನು ಮಾನದಂಡವನ್ನಾಗಿ ಇಟ್ಟುಕೊಳ್ಳಲಾಗಿತ್ತು ಎನ್ನುವುದು ವಿಶೇಷ.

ಮಿಜೋರಾಂನಲ್ಲಿ (Mizoram) ಸಾಕ್ಷರತೆ (Literacy) ಅಧಿಕ
ಕೇರಳದ ಬಳಿಕ ನೂರರಷ್ಟು ಸಾಕ್ಷರತೆ ಸಾಧಿಸಿರುವ ಎರಡನೇ ರಾಜ್ಯವಾಗಿದೆ (State) ಮಿಜೋರಾಂ. ಇಲ್ಲಿನ ವಿಶಿಷ್ಟ ಸಾಮಾಜಿಕ ವ್ಯವಸ್ಥೆಯಿಂದಾಗಿ (Social Structure) ಯುವ ಜನತೆಯ ಖುಷಿಗೆ ಬಹುದೊಡ್ಡ ಕೊಡುಗೆ ದೊರೆಯುತ್ತಿದೆ. ಇಲ್ಲಿನ ಶಾಲೆ-ಕಾಲೇಜಿನ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಧೋರಣೆ (Positive Attitude) ಹೆಚ್ಚು ಕಂಡುಬರುತ್ತದೆ. ಬಹಳಷ್ಟು ವಿದ್ಯಾರ್ಥಿಗಳು ಲೆಕ್ಕಪರಿಶೋಧನೆ, ನಾಗರಿಕ ಸೇವೆ ಮತ್ತು ರಾಷ್ಟ್ರೀಯ ಭದ್ರತಾ ಅಕಾಡೆಮಿಯ ಪರೀಕ್ಷೆ (Exam) ಬರೆಯಲು ಉತ್ಸುಕರಾಗಿದ್ದಾರೆ. ತಾಯಿ-ತಂದೆಯರಿಲ್ಲದ ಅನಾಥ ಮಕ್ಕಳು ಸಹ ಧನಾತ್ಮಕ ಧೋರಣೆ ಹೊಂದಿರುವುದು ಕಂಡುಬಂದಿದೆ. 

Latest Videos

undefined

ಜೀವನದಲ್ಲಿ ಈ 7 ವಿಷಯಗಳ ಬಗ್ಗೆ ನಿರಂತರ ಗಮನ ಹರಿಸಿದ್ರೆ ನಮ್ಮ ಬೆಸ್ಟ್ ವರ್ಶನ್ ಕಾಣಬಹುದು!

ಮಿಜೋರಾಂ ಖುಷಿಯಾಗಿರಲು ಬಹುದೊಡ್ಡ ಕಾರಣವೆಂದರೆ, ಇಲ್ಲಿನ ಸಮಾಜದಲ್ಲಿ ಮತಭೇದ ಇಲ್ಲ. ಇದು ಜಾತಿರಹಿತವಾದ (Casteless) ಸಮಾಜವನ್ನು ಒಳಗೊಂಡಿದೆ. ಹಾಗೂ ಪಾಲಕರಿಂದ (Parents) ಮಕ್ಕಳ (Child) ಮೇಲೆ ಶಿಕ್ಷಣಕ್ಕೆ (Education) ಯಾವುದೇ ರೀತಿಯ ಒತ್ತಡ (Stress) ಕಂಡುಬರುವುದಿಲ್ಲ. ವಿದ್ಯಾರ್ಥಿಗಳು ಎದುರಿಸುವ ಚಿಕ್ಕದೊಂದು ಸಮಸ್ಯೆಯನ್ನು ಶಿಕ್ಷಕರು, ಪಾಲಕರು ಕೂಡಿಯೇ ನಿಭಾಯಿಸುತ್ತಾರೆ. 

ಸಣ್ಣ ವಯಸ್ಸಿಗೇ ದುಡಿಮೆ (Work) ಆರಂಭ
ಮಿಜೋ (Mizo) ಸಮುದಾಯದ ಪ್ರತಿಯೊಂದು ಮಗುವೂ ಸಣ್ಣ ವಯಸ್ಸಿನಲ್ಲೇ ದುಡಿಮೆಯನ್ನು ಆರಂಭಿಸುತ್ತದೆ ಎನ್ನುವುದು ಅಚ್ಚರಿಯ ಸಂಗತಿ. ಹುಡುಗನಾಗಿರಲಿ, ಹುಡುಗಿಯಾಗಿರಲಿ ಅವರು ಬಹುಬೇಗ ತಮ್ಮ ದುಡಿಮೆ ಆರಂಭಿಸುತ್ತಾರೆ. ಸರಿಸುಮಾರು 16-17ನೇ ವಯಸ್ಸಿಗೇ ಅವರು ತಮ್ಮದಾದ ಹಣ ಗಳಿಕೆಯ (Earning Money) ಮಾರ್ಗ ಕಂಡುಕೊಳ್ಳುತ್ತಾರೆ. ಅದು ಎಷ್ಟು ಚಿಕ್ಕದಾದರೂ ಸರಿ. ಅದಕ್ಕೆ ಉತ್ತೇಜನ ನೀಡಲಾಗುತ್ತದೆ. ಅಲ್ಲದೆ, ಹುಡುಗ (Boy) ಮತ್ತು ಹುಡುಗಿ (Girl) ಎನ್ನುವ ಲಿಂಗಾಧಾರಿತ (Gender Biased) ತಾರತಮ್ಯ ಸಮಾಜದಲ್ಲಿಲ್ಲ ಎನ್ನುವುದು ಸಹ ಮುಖ್ಯ ಅಂಶ.

ಈ ರೀತಿಯೆಲ್ಲಾ ಇದ್ರೆ…. ನಿಮ್ಮ ವೈವಾಹಿಕ ಜೀವನ ಪರ್ಫೆಕ್ಟ್ ಆಗಿದೆ ಎಂದರ್ಥ

ಮಿಜೋರಾಂನಲ್ಲಿ ಒಡೆದ ಕುಟುಂಬಗಳು, ಸಿಂಗಲ್‌ ಮದರ್‌ ಕುಟುಂಬಗಳು ಎಲ್ಲೆಡೆಯಂತೆ ಸಾಕಷ್ಟಿವೆ. ಆದರೂ, ಅಲ್ಲಿನ ಯುವಕರು (Youth) ಧನಾತ್ಮಕವಾಗಿ ಕೆಲಸ ಮಾಡುವುದು ಕಾಣುತ್ತದೆ. ಹಣಕಾಸು (Financial) ಸ್ವಾತಂತ್ರ್ಯಕ್ಕೆ ಅಲ್ಲಿನ ಜನ ಭಾರೀ ಬೆಲೆ ನೀಡುತ್ತಾರೆ. ಹೀಗಾಗಿ, ದಾಂಪತ್ಯದಲ್ಲಿ ಯಾರಿಗೂ ಮತ್ತೊಬ್ಬರು ಹೊರೆಯಾಗದೆ ಬದುಕಬೇಕು ಎನ್ನುವ ನಿಲುವು ಹೊಂದಿರುತ್ತಾರೆ. ಅನಾರೋಗ್ಯಕರ ಸಂಬಂಧ (Unhealthy Relation) ಮುಂದುವರಿಸಬೇಕಾದ ಅನಿವಾರ್ಯತೆ ಇಲ್ಲ ಎನ್ನುವುದನ್ನು ಮುಕ್ತವಾಗಿ ಒಪ್ಪಿಕೊಳ್ಳಲಾಗುತ್ತದೆ. 

ಯಾವುದೇ ಸಮಾಜದ, ದೇಶದ ಪ್ರಗತಿಗೆ ಆರ್ಥಿಕತೆ ಮುಖ್ಯವಾದ ಕೊಡುಗೆ ನೀಡುತ್ತದೆ. ಜನರ ದುಡಿಯುವ ಧೋರಣೆಯೇ ಪ್ರಗತಿಗೆ ಪೂರಕವಾಗಿರುತ್ತದೆ. ಇದೊಂದೇ ಜನರ ಸಂತಸದ ಮಟ್ಟವನ್ನು ನಿರ್ಧರಿಸದೇ ಇರಬಹುದು. ಆದರೆ, ಖಂಡಿತವಾಗಿ ಚಿಕ್ಕ ವಯಸ್ಸಿನಲ್ಲೇ ದುಡಿಯುವುದು ಯುವಜನತೆಯನ್ನು ಹೆಚ್ಚು ಜವಾಬ್ದಾರಿಯುತವಾಗಿಸುತ್ತದೆ. ಜತೆಗೆ, ಸಾಮಾಜಿಕ ವ್ಯವಸ್ಥೆ, ಸಾಂಸ್ಕೃತಿಕ ಪರಂಪರೆ, ಅವಕಾಶಗಳ ಹೆಚ್ಚಳವೂ ಮುಖ್ಯ ಕೊಡುಗೆ ನೀಡುತ್ತದೆ. 

click me!