ಪ್ರ್ಯಾಂಕ್ ಮಾಡೋಕೆ ಹೋಗಿ ಅನೇಕರು ಕಷ್ಟಕ್ಕೆ ಸಿಲುಕ್ತಾರೆ. ಈ ಯುಟ್ಯೂಬರ್ ಕಥೆಯೂ ಇದೇ ಆಗಿದೆ. ತಮಾಷೆಗೆ ಆತ ಆಯ್ದುಕೊಂಡ ವಿಷ್ಯ ಬಳಕೆದಾರರ ಕೋಪಕ್ಕೆ ಕಾರಣವಾಗಿದೆ. ಟಿಕ್ ಟಾಕ್ ವಿಡಿಯೋ ಟ್ವಿಟರ್ ನಲ್ಲಿ ಬಿರುಗಾಳಿ ಎಬ್ಬಿಸಿದೆ.
ಯುಟ್ಯೂಬ್, ರೀಲ್ಸ್, ಟಿಕ್ ಟಾಕ್, ಶಾರ್ಟ್ಸ್ ಇವೆಲ್ಲ ಗಳಿಕೆಯ ಮಾರ್ಗಗಳಾಗಿವೆ. ಇದ್ರಲ್ಲಿ ಖಾತೆ ತೆರೆದ ನಂತ್ರ ಜನರನ್ನು ಸೆಳೆಯಲು ಬಳಕೆದಾರರು ನಾನಾ ಪ್ರಯತ್ನಗಳನ್ನು ಮಾಡ್ತಾರೆ. ಡಾನ್ಸ್, ಅಡುಗೆ, ನಟನೆ, ಯೋಗ, ಜನರಿಗೆ ಅನುಕೂಲವಾದ ಮಾಹಿತಿಗಳನ್ನು ಅನೇಕರು ಹಂಚಿಕೊಂಡ್ರೆ ಮತ್ತೆ ಕೆಲವರು ಜನರನ್ನು ದಾರಿ ತಪ್ಪಿಸುವ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಸುದ್ದಿಯಾಗ್ತಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕುವ ಮುನ್ನ ನಾಲ್ಕು ಬಾರಿ ಯೋಚಿಸುವ ಅನಿವಾರ್ಯತೆಯಿದೆ. ಯಾಕೆಂದ್ರೆ ಇದನ್ನು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ನೋಡುವ ಕಾರಣ ಮುಜುಗರ ತರಿಸುವ ಅಥವಾ ದಾರಿತಪ್ಪಿಸುವ ವಿಷ್ಯವನ್ನು ಹಾಕದಿರುವುದು ಒಳಿತು.
ಪಾಕಿಸ್ತಾನ (Pakistan) ದ ಯುಟ್ಯೂಬರ್ (YouTuber) ಒಬ್ಬ ತಮಾಷೆಗೆ ಹಾಕಿದ ವಿಡಿಯೋ ಈಗ ವೈರಲ್ ಆಗಿದೆ. ಯುಟ್ಯೂಬ್ ವೀಕ್ಷಕರು, ಯುಟ್ಯೂಬರ್ ಹಾಕಿದ ಟಿಕ್ ಟಾಕ್ ವಿಡಿಯೋ ವಿರುದ್ಧ ಕೆಂಡ ಕಾರಿದ್ದಾರೆ. ಯೂಟ್ಯೂಬರ್, ಕೌಟುಂಬಿಕ (Family) ಹಿಂಸೆಗೆ ಸಂಬಂಧಿಸಿದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾನೆ. ಆತ ಕೌಟುಂಬಿಕ ಹಿಂಸೆಯನ್ನು ಗೇಲಿ ಮಾಡಿದ್ದಾನೆ ಎಂದು ಬಳಕೆದಾರರು ದೂರಿದ್ದಾರೆ. ಯುಟ್ಯೂಬರ್ ಹಾಕಿದ ಟಿಕ್ ಟಾಕ್ ವಿಡಿಯೋವನ್ನು ತೀವ್ರವಾಗಿ ಟೀಕೆ ಮಾಡಲಾಗುತ್ತಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಗೊತ್ತಾ?
ವಿಚ್ಚೇದನದ ಮೇಲ್ಮನವಿ ಅವಧಿಗೂ ಕಾಯದೆ 2ನೇ ಮದುವೆಯಾದ ಮಹಿಳೆಗೆ ಸಂಕಷ್ಟ: ಹೈಕೋರ್ಟ್ ಹೇಳಿದ್ದೇನು..?
ಜನರ ಕೋಪಕ್ಕೆ ಕಾರಣವಾಯ್ತು ಯುಟ್ಯೂಬರ್ ಟಿಕ್ ಟಾಕ್ ವಿಡಿಯೋ : ಮೊದಲೇ ಹೇಳಿದಂತೆ ಇದು ಯುಟ್ಯೂಬರ್ ಶಹವೀರ್ ಎಂಬಾತನ ವಿಡಿಯೋ. ಶಹವೀರ್ ಪಾಕಿಸ್ತಾನ ಮೂಲದವನು. ನಿಶಾತ್ ಎಂಬ ಬಳಕೆದಾರ @nishat218 ಹ್ಯಾಂಡಲ್‌ನೊಂದಿಗೆ ಟ್ವಿಟರ್‌ನಲ್ಲಿ ವೈರಲ್ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.
ಕ್ಲಿಪ್ ನೋಡಿದ ಜನರು ಬೆಚ್ಚಿ ಬಿದ್ದಿದ್ದಾರೆ. ವೈರಲ್ ಕ್ಲಿಪ್‌ನಲ್ಲಿ, ಶಹವೀರ್ ತನ್ನ ಹೆಂಡತಿಯನ್ನು ದಿಂಬಿನಿಂದ ಕತ್ತು ಹಿಸುಕಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ, ವಿಡಿಯೋದಲ್ಲಿ ಪತ್ನಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ.
ಸೋಫಾ ಮೇಲೆ ಮಹಿಳೆ ಕಪ್ಪು ಹೊದಿಕೆ ಹೊದ್ದು ಮಲಗಿರ್ತಾಳೆ. ಅಲ್ಲಿಗೆ ಬರುವ ಪತಿ, ದಿಂಬಿನಿಂದ ಒತ್ತಿ, ಉಸಿರುಗಟ್ಟಿಸುವ ಪ್ರಯತ್ನ ಮಾಡ್ತಾನೆ. ಆಗ ಇನ್ನೊಂದು ಕಡೆಯಿಂದ ಪತ್ನಿ ನಿಧಾನವಾಗಿ ಮುಸುಕು ತೆಗೆಯುತ್ತಾಳೆ. ಪತ್ನಿ ಕಾಲನ್ನು ತಲೆ ಎಂದುಕೊಂಡಿದ್ದ ಪತಿ ತಕ್ಷಣ ಎಚ್ಚೆತ್ತು, ದಿಂಬನ್ನು ಆಕೆಗೆ ನೀಡಿ, ಹಣೆ ಚಚ್ಚಿಕೊಳ್ತಾ ಹೋಗ್ತಾನೆ.
ಒಮ್ಮೆ ಗಂಡ-ಹೆಂಡ್ತಿ ಸಂಬಂಧ ಮುರಿದರೆ ಕಟ್ಟೋದು ಕಷ್ಟ, ಸರಿ ಮಾಡಲು ಹೀಗೂ ಯತ್ನಿಸಬಹುದು!
ಈ ವಿಡಿಯೋ ಹಂಚಿಕೊಂಡ ನಿಶಾತ್, ಈ ವಿಡಿಯೋ ನೋಡಿದ ನಂತರ ನನ್ನ ರಕ್ತ ಕುದಿಯುತ್ತಿದೆ. ತನ್ನ ಪತ್ನಿಯ ಕತ್ತು ಹಿಸುಕಲು ಯತ್ನಿಸಿದ್ದಾರೆ. ಆ ಟಿಕ್ ಟಾಕ್ ವಿಡಿಯೋಕ್ಕೆ 41 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿರುವುದು ಹಾಸ್ಯಾಸ್ಪದವಾಗಿವೆ ಎಂದು ನಿಶಾತ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ವೀಡಿಯೊದಲ್ಲಿ ಕಾಣುವ ವ್ಯಕ್ತಿ ಪಾಕಿಸ್ತಾನಿ ಯೂಟ್ಯೂಬರ್ ಮತ್ತು ಟಿಕ್ ಟಾಕರ್ ಶಹವೀರ್ ಜಾಫ್ರಿ ಎಂದು ನಿಶಾತ್ ಹೇಳಿದ್ದಾರೆ.
ಸೋಲ್ ಸಿಸ್ಟರ್ಸ್ ಪಾಕಿಸ್ತಾನದ ಸಂಸ್ಥಾಪಕ ಮತ್ತು ಚಲನಚಿತ್ರ ನಿರ್ಮಾಪಕ ಕನ್ವರ್ ಅಹ್ಮದ್ ಕೂಡ ಈ ವೀಡಿಯೊವನ್ನು ಹಂಚಿಕೊಂಡಿದ್ದು, ಶಹವೀರ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೌಟುಂಬಿಕ ದೌರ್ಜನ್ಯದಿಂದ ಪ್ರತಿ ವರ್ಷ ಸಾವಿರಾರು ಮಹಿಳೆಯರು ಸಾಯುತ್ತಿರುವ ದೇಶದಲ್ಲಿ ಪ್ರಖ್ಯಾತ ಯೂಟ್ಯೂಬರ್ ತನ್ನ ಹೆಂಡತಿಯನ್ನು ಕತ್ತು ಹಿಸುಕುವುದು ಸ್ವಲ್ಪ ವಿಚಿತ್ರವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ನಾನು ಶಹವೀರ್ ಅವರನ್ನು ಬೆಂಬಲಿಸುವುದಿಲ್ಲ, ಯಾವುದೇ ಸಮರ್ಥನೆ ಇಲ್ಲ. ಆದರೆ ಇಷ್ಟು ವರ್ಷ ನೋಡಿದ ಮಟ್ಟಿಗೆ ಅವರು ಒಬ್ಬ ಒಳ್ಳೆಯ ವ್ಯಕ್ತಿ ಎಂದು ತೋರುತ್ತದೆ. ಆದಾಗ್ಯೂ ಇದು ಗೊಂದಲದ ಸಂಗತಿಯಾಗಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇದು ತುಂಬಾ ಕೆಟ್ಟ ವಿಷ್ಯವೆಂದು ಇನ್ನೊಬ್ಬರು ಯುಟ್ಯೂಬರ್ ಕೆಲಸವನ್ನು ತೆಗಳಿದ್ದಾರೆ.
41.3k likes on a video where tiktoker, Shahveer Jafry, chokes his wife as a joke in a country where domestic violence is rampant, where women ACTUALLY get killed by their husbands! My blood is boiling pic.twitter.com/goDLfwc4DE
— Nishat (@nishat218)