ಅಭಿಷೇಕ್‌ ಬಚ್ಚನ್ ಮದ್ವೆಯಾಗೋ ಮೊದ್ಲೇ ಐಶ್ವರ್ಯಾ ರೈಗೆ ಬೇರೊಂದು ಮದ್ವೆಯಾಗಿತ್ತಂತೆ!

By Vinutha Perla  |  First Published Apr 20, 2024, 11:24 AM IST

ವಿಶ್ವದ ಅತಿ ಸುಂದರ ಮಹಿಳೆ ಎನಿಸಿಕೊಂಡಿರುವ ಐಶ್ವರ್ಯಾ ರೈ ಬಾಲಿವುಡ್‌ನ ಬಹಳ ಸುಂದರ ನಟಿಯರಲ್ಲೊಬ್ಬರು. ಹಿರಿಯ ನಟ ಅಮಿತಾಬ್‌ ಬಚ್ಚನ್‌ ಮಗ ಅಭಿಷೇಕ್‌ ಬಚ್ಚನ್‌ರನ್ನು ಮದುವೆಯಾಗಿದ್ದಾರೆ. ಆದ್ರೆ ಅಭಿಷೇಕ್‌ರನ್ನು ಮದ್ವೆಯಾಗೋ ಮೊದ್ಲೇ ಐಶ್ವರ್ಯಾಗೆ ಬೇರೊಂದು ಮದ್ವೆಯಾಗಿತ್ತು ಅನ್ನೋದು ನಿಮ್ಗೆ ಗೊತ್ತಿದ್ಯಾ?


ಐಶ್ವರ್ಯಾ ರೈ ಬಚ್ಚನ್ ವಿಶ್ವದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು ಮತ್ತು ಭಾರತದ ಶ್ರೀಮಂತ ನಟಿ. ಐಶ್ವರ್ಯಾ ರೈ ಬಚ್ಚನ್ ಹಿಂದಿ ಚಿತ್ರಗಳ ಮೂಲಕ ಮಾತ್ರವಲ್ಲದೆ ಅನೇಕ ಸೌತ್ ಸಿನಿಮಾಗಳಲ್ಲಿಯೂ ಹೆಸರು ಮಾಡಿದ್ದಾರೆ. ಐಶ್ವರ್ಯಾ ರೈ ಅವರು ವಿಶ್ವ ಸುಂದರಿ 1994 ಸ್ಪರ್ಧೆಯಲ್ಲಿ ವಿಜೇತರಾಗಿ ಕಿರೀಟವನ್ನು ಪಡೆದರು. ವರದಿಯ ಪ್ರಕಾರ, 776 ಕೋಟಿ ರೂ ನೆಟ್‌ವರ್ತ್‌ ಹೊಂದಿದ್ದಾರೆ. ಐಶ್ವರ್ಯಾ, ಬಾಲಿವುಡ್‌ನ ಹಿರಿಯ ನಟ ಅಮಿತಾಬ್‌ ಬಚ್ಚನ್‌ ಮಗ ಅಭಿಷೇಕ್‌ ಬಚ್ಚನ್‌ರನ್ನು ಮದುವೆಯಾಗಿದ್ದಾರೆ. ದಂಪತಿಗೆ ಆರಾಧ್ಯ ಎಂಬ ಮಗಳೂ ಇದ್ದಾಳೆ. ಆದ್ರೆ ಅಭಿಷೇಕ್‌ರನ್ನು ಮದ್ವೆಯಾಗೋ ಮೊದ್ಲೇ ಐಶ್ವರ್ಯಾಗೆ ಬೇರೊಂದು ಮದ್ವೆಯಾಗಿತ್ತು ಅನ್ನೋದು ನಿಮ್ಗೆ ಗೊತ್ತಿದ್ಯಾ?

ಐಶ್ವರ್ಯಾ ರೈ ಮತ್ತು ಅಭಿಷೇಕ್‌, ಧೂಮ್ 2 ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಪರಸ್ಪರ ಪ್ರೀತಿಸಲು ಆರಂಭಿಸಿದರು. ಗುರು ಚಿತ್ರೀಕರಣದ ಸಮಯದಲ್ಲಿ, ಅಭಿಷೇಕ್ ಐಶ್ವರ್ಯಾಗೆ ಪ್ರಪೋಸ್ ಮಾಡಿದರು. ನಂತರ ಇಬ್ಬರೂ ಅದ್ಧೂರಿ ಸಮಾರಂಭದಲ್ಲಿ ವಿವಾಹವಾದರು. ದಂಪತಿಗೆ ಆರಾಧ್ಯ ಎಂಬ ಮಗಳೂ ಇದ್ದಾಳೆ. ಆದ್ರೆ ಇತ್ತೀಚಿಗೆ ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಮಾತು ಸಹ ಕೇಳಿ ಬರುತ್ತಿತ್ತು. 

Tap to resize

Latest Videos

ಐಶ್ವರ್ಯಾ ರೈ ದುಬೈನ ಐಷಾರಾಮಿ ಬಂಗಲೆ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು ಇವು!

ಅಭಿಷೇಕ್ ಬಚ್ಚನ್‌ಗೂ ಮೊದಲು ಐಶ್ವರ್ಯಾ ಮದ್ವೆಯಾಗಿದ್ದು ಯಾರನ್ನು?
ಆದರೆ, ಇದಲ್ಲದೆ ಇತ್ತೀಚಿಗೆ ಅಭಿಷೇಕ್‌ ಬಚ್ಚನ್‌ರನ್ನು ಮದ್ವೆಯಾಗೋ ಮೊದ್ಲೇ ಐಶ್ವರ್ಯಾಗೆ ಬೇರೊಂದು ಮದ್ವೆಯಾಗಿತ್ತು ಅನ್ನೋ ಮಾತು ಕೇಳಿ ಬರ್ತಿದೆ. ಹೌದು, ಅಚ್ಚರಿ ಅನಿಸಿದರೂ ಇದು ನಿಜ. ಐಶ್ವರ್ಯಾ ರೈ ಜಾತಕದಲ್ಲಿ ದೋಷವಿದ್ದ ಕಾರಣ ಈಕೆಗೆ ಅಭಿಷೇಕ್‌ ಬಚ್ಚನ್‌ ಜೊತೆ ಮದುವೆಯಾಗುವ ಮೊದಲೇ ಮರವೊಂದರ ಜೊತೆ ಮದುವೆಯಾಗಿತ್ತಂತೆ.

ಐಶ್ವರ್ಯಾ ರೈ 600 ವರ್ಷಕ್ಕೊಮ್ಮೆ ಸಂಭವಿಸೋ ಜಾತಕದಲ್ಲಿ ಹುಟ್ಟಿರೋದಂತೆ. ಐಶ್ವರ್ಯಾ ರೈ ಜಾತಕದಲ್ಲಿ ಕುಜ ದೋಷ ಹಾಗೂ ರಾಜ ಯೋಗ ಎರಡು ಇದೆ. ಹೀಗಾಗಿನೇ ಐಶ್ವರ್ಯಾ ರೈ ವಿಶ್ವ ಸುಂದರಿ ಪಟ್ಟಕ್ಕೇರಿದ್ದಂತೆ. ಮಾತ್ರವಲ್ಲ, ಐಶ್ವರ್ಯ ರೈ ಜಾತಕದಲ್ಲಿ ಸಮಸ್ಯೆ ಇದ್ದ ಕಾರಣ ಮೊದಲು ಒಂದು ಮರದ ಜೊತೆ ಆಕೆ ಮದುವೆ ಮಾಡಿಸಿದ್ದರು ಎನ್ನುವ ಸುದ್ದಿ ಆಗ ಭಾರೀ ಸದ್ದು ಮಾಡಿತ್ತು. ಈ ಸುದ್ದಿಯಿಂದ ಐಶ್ ಬಹಳ ಸಮಸ್ಯೆ ಎದುರಿಸುವಂತಾಯಿತು. ಆದರೆ ಸಂದರ್ಶನವೊಂದರಲ್ಲಿ ಐಶ್ವರ್ಯಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು.

ಐಶ್ವರ್ಯ ರೈ ವಿರುದ್ಧ ಅಮಿತಾಭ್​ ಮೊಮ್ಮಗಳು ನವ್ಯಾ ಹೀಗೆಲ್ಲಾ ಹೇಳಿದ್ರಾ? ಫ್ಯಾನ್ಸ್​ ಶಾಕ್​

ವಿದೇಶಕ್ಕೆ ಹೋದರೂ ಅಲ್ಲಿನ ಸುದ್ದಿ ಮಾಧ್ಯಮಗಳು, ನಿಮ್ಮ ಜಾತಕದಲ್ಲಿ ದೋಷವಿದೆಯಂತೆ, ನೀವು ಮರದೊಂದಿಗೆ ಮೊದಲು ಮದುವೆಯಾಗಿದ್ದರಂತೆ ಹೌದಾ ಕೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು ಐಶ್ವರ್ಯಾ. ಆ ನಂತರ ಹಾಗೇನು ಇಲ್ಲವೆಂದು ಸ್ಪಷ್ಟನೆ ನೀಡಿದ್ದರು. ಅಭಿಷೇಕ್ ಬಚ್ಚನ್ ತಂದೆ ಅಮಿತಾಬ್ ಬಚ್ಚನ್ ಕೂಡಾ ಈ ಬ್ಗೆ ಪ್ರತಿಕ್ರಿಯಿಸಿದ್ದರು. ನನ್ನ ಕುಟುಂಬದಲ್ಲಿ ಯಾರಿಗೂ ಮೂಢನಂಬಿಕೆ ಇಲ್ಲ. ಐಶ್ವರ್ಯಾ ಜಾತಕವನ್ನೂ ನಾವು ನೋಡಿಲ್ಲ. ನೀವು ಹೇಳುವ ಆ ಮರ ಎಲ್ಲಿದೆ ನನಗೆ ಗೊತ್ತಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

ಇತ್ತೀಚಿಗೆ ಅಭಿ-ಐಶ್ ದಾಂಪತ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಅತ್ತೆ ಜಯಾ ಬಚ್ಚನ್‌ ಜೊತೆ ಸರಿ ಹೋಗದೆ ಇಬ್ಬರೂ ಡಿವೋರ್ಸ್ ಪಡೆದು ದೂರಾಗುತ್ತಾರೆ ಎನ್ನುವ ವದಂತಿಗಳು ಸಹ ಕೇಳಿ ಬರುತ್ತಿದೆ. ಆದರೆ ಆ ನಂತರ ಬಚ್ಚನ್ ಫ್ಯಾಮಿಲಿಯ ಹೋಳಿ ಪಾರ್ಟಿಯಲ್ಲಿ ಐಶ್ವರ್ಯಾ ತಮ್ಮ ಮಗಳ ಜೊತೆ ಕಾಣಿಸಿಕೊಂಡಿದ್ದಾರೆ.

click me!