ಸೆಲೆಬ್ರಿಟಿಗಳು ಸದಾ ಬ್ಯಸಿ ಇರ್ತಾರೆ. ಅವರು ಮಕ್ಕಳನ್ನು ಹೇಗೆ ನೋಡಿಕೊಳ್ತಾರೆ, ಮಕ್ಕಳ ಓದು ಹೇಗೆ ಎನ್ನುವ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತದೆ. ಇದಕ್ಕೆ ಐಶ್ವರ್ಯ ರೈ ಉತ್ತರ ನೀಡಿದ್ದಾರೆ.
ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅಧ್ಬುತ ನಟಿ, ಬ್ಯೂಟಿ ಕ್ವೀನ್ ಮಾತ್ರವಲ್ಲ. ಶ್ರೀಮಂತ ಕುಟುಂಬದ ಸೊಸೆ, ಒಂದು ಮಗುವಿನ ತಾಯಿ. ಅಮ್ಮನಾದ್ಮೇಲೆ ಬಣ್ಣ ಹಚ್ಚೋದನ್ನು ಕಡಿಮೆ ಮಾಡಿರುವ ಐಶ್ವರ್ಯ ತನ್ನ ಮಗಳನ್ನು ನೋಡಿಕೊಳ್ಳೋದ್ರಲ್ಲಿ ಬ್ಯೂಸಿಯಾಗಿದ್ದಾರೆ. ಮಗಳ ವಿಷ್ಯದಲ್ಲಿ ನಾನು ತಲೆ ಹಾಕೋದಿಲ್ಲ. ಎಲ್ಲವನ್ನೂ ಐಶ್ವರ್ಯ ನೋಡಿಕೊಳ್ತಾಳೆ ಎಂದು ಕೆಲ ದಿನಗಳ ಹಿಂದೆ ಅಭಿಷೇಕ್ ಬಚ್ಚನ್ ಹೇಳಿದ್ರು. ಸದಾ ಐಶ್ವರ್ಯ ಜೊತೆ ಇರುವ ಆರಾಧ್ಯ ನೋಡಿದ್ರೆ ಅಭಿಷೇಕ್ ಮಾತಲ್ಲಿ ಸುಳ್ಳೇನಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಐಶ್ವರ್ಯ ಎಲ್ಲೆ ಹೋದರೂ ನೀವು ಆರಾಧ್ಯಳನ್ನು ನೋಡ್ಬಹುದು. ವಿಮಾನ ನಿಲ್ದಾಣವಿರಲಿ, ಸೆಲೆಬ್ರಿಟಿಗಳ ಪಾರ್ಟಿ ಇರಲಿ ಇಲ್ಲವೆ ಬೇರೆ ಯಾವುದೇ ಇವೆಂಟ್ ಇರಲಿ ಐಶ್ವರ್ಯ ಜೊತೆ ಆರಾಧ್ಯ ಇರುತ್ತಾಳೆ. ಹಾಗೆ ಮಗಳು ಆರಾಧ್ಯಳ ಕೈ ಹಿಡಿದೇ ಐಶ್ ಹೋಗೋದನ್ನು ನಾವು ನೋಡ್ಬಹುದು. ಅನೇಕ ಬಾರಿ, ಮಗಳನ್ನು ಪ್ರೊಟೆಕ್ಟ್ ಮಾಡುವ ಐಶ್ವರ್ಯ ಸ್ವಭಾವ ನೋಡಿ ಅಭಿಮಾನಿಗಳು ಕಾಲೆಳೆದಿದ್ದಿದೆ. ಅದೇನೇ ಇರಲಿ ಐಶ್ ಜೊತೆ ಸದಾ ಸುತ್ತಾಡುವ ಆರಾಧ್ಯ ಶಾಲೆಗೆ ಹೋಗಲ್ವಾ? ಹೇಗೆ ಓದುತ್ತಾಳೆ ಎಂಬ ಪ್ರಶ್ನೆ ಮೂಡೋದು ಸಹಜ. ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಐಶ್ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಆರಾಧ್ಯ ಶಾಲೆ ಹಾಗೂ ಇವೆಂಟ್ಸ್, ಫಾರೆನ್ ಟ್ರಿಪ್ ಗಳನ್ನು ಹೇಗೆ ಸಂಬಾಳಿಸ್ತೇನೆ ಎಂಬುದನ್ನು ಹೇಳಿದ್ದಾರೆ.
ಐಶ್ವರ್ಯಾ (Aishwarya) ಪ್ರಕಾರ ಅವರು ಯಾವಾಗ್ಲೂ ವೀಕೆಂಡ್ ನಲ್ಲಿ ಟ್ರಿಪ್ (Trip) ಪ್ಲಾನ್ ಮಾಡ್ತಾರೆ. ಶಾಲೆ ಹಾಗೂ ಆರಾಧ್ಯ ಓದಿಗೆ ಯಾವುದೇ ಸಮಸ್ಯೆ ಆಗದಂತೆ ಅವರು ನೋಡಿಕೊಳ್ತಾರಂತೆ. ಪ್ಲಾನಿಂಗ್ ಹಾಗೂ ಟೈಮಿಂಗ್ ಗೆ ಮಹತ್ವ ನೀಡ್ತೆನೆ ಎನ್ನುತ್ತಾರೆ ಐಶ್ವರ್ಯ. ಜನರು ನನ್ನ ಟ್ರಿಪ್ ಶೆಡ್ಯುಲ್ ನೋಡಿದ್ರೆ ಅರ್ಥವಾಗುತ್ತೆ. ನಾನು ಸಾಮಾನ್ಯವಾಗಿ ಯಾವಾಗ್ಲೂ ವೀಕೆಂಡ್ ನಲ್ಲೇ ಟ್ರಿಪ್ ಗೆ ಹೋಗ್ತೇನೆ ಎನ್ನುತ್ತಾರೆ ಐಶ್ವರ್ಯ.
ಮರುಜನ್ಮ ಪಡೆದ ಪತ್ನಿಗೆ ಜೋಡಿ ನಂ.1 ವೇದಿಕೆಯಲ್ಲಿ ಸೀರೆ ಕೊಟ್ಟು ಕಣ್ಣೀರು ತರಿಸಿದ 'ಅಮೃತಧಾರೆ' ಆನಂದ್
ನಾನು ಒಳ್ಳೆ ಫ್ಲೈಟ್ (Flight) ಮ್ಯಾನೇಜರ್ ಆಗಿದ್ದೇನೆ ಎನ್ನುವ ಐಶ್ವರ್ಯ, ಯಾವ ಫ್ಲೈಟ್ ಯಾವಾಗ ಹೋಗುತ್ತೆ ಎಂಬುದನ್ನು ನನಗೆ ಕೇಳ್ಬಹುದು ಎನ್ನುತ್ತಾರೆ. ಪ್ಲೇನ್ ಟೇಕ್ ಆಫ್, ಲ್ಯಾಂಡಿಂಗ್, ಯಾವ್ ಯಾವ್ ಫ್ಲೈಟ್ ಮಧ್ಯೆ ಎಷ್ಟು ಟೈಂ ಡಿಫರೆನ್ಸ್ ಇರುತ್ತೆ ಎಲ್ಲವೂ ನನಗೆ ಗೊತ್ತಿರುತ್ತೆ ಎನ್ನುತ್ತಾರೆ ಐಶ್. ವೀಕೆಂಡ್‌ನಲ್ಲಿ ವಿದೇಶಕ್ಕೆ ಹೋಗಿ ಬಂದಿದ್ದು ಸಾಕಷ್ಟಿದೆ. ನಿದ್ರೆಗೆಟ್ಟು ನಾನು ಈ ಕೆಲಸ ಮಾಡಿಲ್ಲ. ಆರಾಧ್ಯ ಸೋಮವಾರ ಶಾಲೆಗೆ ಹೋಗುವಂತೆ ಪ್ಲಾನ್ ಮಾಡ್ತೇನೆ. ಆರಾಧ್ಯ ಶಾಲೆ ಮಿಸ್ ಮಾಡಿ ಕೊಳ್ಳೋದಿಲ್ಲ ಎನ್ನುತ್ತಾರೆ ಐಶ್ವರ್ಯ. ಕೆಲ ದಿನಗಳ ಹಿಂದಷ್ಟೆ ಐಶ್ವರ್ಯ, ಆರಾಧ್ಯ ಜೊತೆ ಪ್ಯಾರಿಸ್ ಗೆ ತೆರಳಿದ್ದರು. ಅಲ್ಲಿ ಫ್ಯಾಷನ್ ವೀಕ್ 2023ರಲ್ಲಿ ಪಾಲ್ಗೊಂಡಿದ್ದ ಐಶ್ವರ್ಯ ರೈ ರ್ಯಾಂಪ್ ವಾಕ್ ಮಾಡಿದ್ದರು.
ದೈಹಿಕ ಸಂಬಂಧದ ಬಳಿಕ ರಕ್ತಸ್ರಾವವಾಗೋದು ಸಾಮಾನ್ಯವೇ? ತಜ್ಞರು ಏನು ಹೇಳ್ತಾರೆ?
ಫ್ಯಾರಿಸ್ ನಲ್ಲಿ ಐಶ್ ಹಾಗೂ ಆರಾಧ್ಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಗಳಿಗೆ ಹೆಚ್ಚು ಆದ್ಯತೆ ನೀಡುವ ಐಶ್ವರ್ಯ, ಮಗಳಿಗೆ ತೊಂದರೆ ಆಗುತ್ತೆ ಅಂದ್ರೆ ಟ್ರಾವೆಲ್ ಕ್ಯಾನ್ಸಲ್ ಮಾಡ್ತಾರೆ. ಐಶ್ವರ್ಯ, ಪೆರೆಂಟಿಂಗ್ ವಿಧಾನವನ್ನು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಇಷ್ಟಪಡುತ್ತಾರೆ. ಅಂಬಾನಿ ಶಾಲೆಯಲ್ಲಿ ಆರಾಧ್ಯ ಓದುತ್ತಿದ್ದಾಳೆ. ಸಮಾರಂಭವೊಂದರಲ್ಲಿ ಆರಾಧ್ಯ ಬಚ್ಚನ್ ತನ್ನ ಸ್ನೇಹಿತರೊಂದಿಗೆ ಸಲ್ಮಾನ್ ಖಾನ್ ಹಾಡಿಗೆ ಡಾನ್ಸ್ ಮಾಡಿದ್ದಾಳೆ. ಆರಾಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಗಳ ಡಾನ್ಸ್ ಗೆ ಐಶ್ ಪ್ರೋತ್ಸಾಹ ನೀಡ್ತಿರೋದನ್ನು ನೀವು ಈ ವಿಡಿಯೋದಲ್ಲಿ ನೋಡ್ಬಹುದು.