
ವಯಸ್ಸು ಹೆಚ್ಚಾಗ್ತಾ ಇದ್ದಂತೆ ಮನುಷ್ಯ ತನ್ನ ಅನುಭವದಿಂದ ಸಾಕಷ್ಟು ಕಲಿಯುತ್ತಾನೆ. ಅನುಭವಕ್ಕಿಂತ ದೊಡ್ಡ ಪಾಠ ಯಾವುದೂ ಇಲ್ಲ. ಶಾಲೆ, ಕಾಲೇಜು, ಕೆಲಸ, ಮದುವೆ, ಮಕ್ಕಳ ಗಲಾಟೆಯಲ್ಲಿ 40 ವರ್ಷ ಕಳೆದಿದ್ದು ತಿಳಿಯೋದೇ ಇಲ್ಲ. ಆದ್ರೆ ಈ ಎಲ್ಲ ಹೊಣೆಯನ್ನು ಸರಿಯಾದ ಸಮಯದಲ್ಲಿ ನಿಭಾಯಿಸಿದ ವ್ಯಕ್ತಿ ಒಂದು ದೊಡ್ಡ ಅನುಭವದ ಮೂಟೆಯನ್ನು ತನ್ನ ಹೆಗಲ ಮೇಲೆ ಹೊತ್ತಿರುತ್ತಾನೆ. ಹಾಗಾಗಿಯೇ ಆತನ ವಯಸ್ಸು 40 ದಾಟುತ್ತಿದ್ದಂತೆ ಕೆಲವೊಂದು ಕಟು ಸತ್ಯ ಅವನ ಅರಿವಿಗೆ ಬರುತ್ತದೆ. ನಾವಿಂದು ನಲವತ್ತು ವರ್ಷ ವಯಸ್ಸಾದ್ಮೇಲೆ ವ್ಯಕ್ತಿ ಅರಿವಿಗೆ ಬರುವ ಅಥವಾ ಬರಬೇಕಾದ ಮಹತ್ವದ ವಿಷ್ಯಗಳು ಯಾವುವು ಎಂಬುದನ್ನು ನಿಮಗೆ ತಿಳಿಸ್ತೇವೆ.
ವರ್ಷ ನಲವತ್ತಾಗ್ತಿದ್ದಂತೆ ನೀವು ಇದನ್ನು ತಿಳಿದುಕೊಳ್ಳಿ :
• ಶಾಂತ (Silante) ವಾಗಿರೋದು : ಎಲ್ಲವನ್ನು ಎಲ್ಲರಿಗೂ ಹೇಳುವ ಅಗತ್ಯವಿಲ್ಲ ಎಂಬ ಸತ್ಯ ನಿಮ್ಮ ಅರಿವಿಗೆ ಬರಬೇಕು. ಮಾತು ಬೆಳ್ಳಿ, ಮೌನ ಬಂಗಾರ ಎಂಬುದನ್ನು ನೀವು ಪಾಲನೆ ಮಾಡಬೇಕು.
ಸಂಗಾತಿ ಬಿಟ್ಟು ಮತ್ಯಾರ ಬಳಿಯೂ ಈ ವಿಚಾರ ಹಂಚಿಕೊಳ್ಳದಿರಿ ಅಂತಾನೆ ಚಾಣಾಕ್ಯ!
• ಸುಮ್ಮನಿರೋದು ಅನಾವಶ್ಯಕ ನಾಟಕ (Drama) ಕ್ಕಿಂತ ಉತ್ತಮ : ಸಾಮಾನ್ಯವಾಗಿ ಈ ವಯಸ್ಸಿಗೆ ಬರುವ ಮೊದಲು ಜನರು ತಮ್ಮೆಲ್ಲ ಭಾವನೆಗಳನ್ನು ಕೂಗಾಡ್ತಾ, ಅಳ್ತಾ ಇಲ್ಲವೆ ಜೋರಾಗಿ ತಮ್ಮವರ ಮುಂದೆ ಹೇಳ್ತಿರುತ್ತಾರೆ. ಆದ್ರೆ ಈ ವಯಸ್ಸಿಗೆ ಬರ್ತಿದ್ದಂತೆ ಅದ್ರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ಅವರ ತಿಳುವಳಿಕೆಗೆ ಬರುತ್ತದೆ. ಹಾಗಾಗಿ ಸಣ್ಣಪುಟ್ಟ ಸಮಸ್ಯೆಯನ್ನು ದೊಡ್ಡದು ಮಾಡ್ತಾ, ಅದಕ್ಕೆ ಪ್ರತಿಕ್ರಿಯೆ ನೀಡ್ತಾ, ಎಲ್ಲರ ಕೋಪಕ್ಕೆ ಗುರಿಯಾಗುವ ಬದಲು ಸುಮ್ಮನಿರುವುದೇ ಉತ್ತಮ ಎಂಬುದು ಅವರಿಗೆ ತಿಳಿಯುತ್ತದೆ. ಹಾಗೆ ಮಾಡಿದಲ್ಲಿ ಲಾಭ ಕೂಡ ಹೆಚ್ಚಿದೆ.
ಬಾಯಿ ಕಳ್ಕೊಂಡು ಮಲಗ್ಬೇಡಿ! ಹಾಗೆ ಮಲಗಿದಾಗ ಹಾವೇ ಬಾಯಿಯೊಳಗೆ ಹೋಗಿತ್ತಂತೆ!
• ಉತ್ತಮರೊಂದಿಗೆ ಕೆಲಸ (work) : ರಕ್ತ ಹೆಚ್ಚು ಬಿಸಿಯಾಗಿರುವ ಸಮಯದಲ್ಲಿ ಬೇರೆಯವರು ಸರಿ ಎಂಬುದನ್ನು ಒಪ್ಪಿಕೊಳ್ಳೋದು ಕಷ್ಟ. ಅದೇ ಅನುಭವ ಹೆಚ್ಚಾದಂತೆ, ವಯಸ್ಸು 40 ಆಗ್ತಿದ್ದಂತೆ ನನಗಿಂತ ಆತ ಬುದ್ದಿವಂತ ಎಂಬುದನ್ನು ಜನರು ಒಪ್ಪಿಕೊಳ್ಳಲು ಕಲಿಯುತ್ತಾರೆ. ನೀವೂ ಕಲಿಯಬೇಕು. ಹಾಗೆಯೇ ಆತನ ಜೊತೆ ಕೆಲಸ ಮಾಡುವ ಮನಸ್ಸು ಮಾಡಬೇಕು. ಸ್ಪರ್ಧೆಗೆ ಮಹತ್ವ ನೀಡುವ ಬದಲು ಸ್ಪರ್ಧೆ ನಮ್ಮ ದೌರ್ಬಲ್ಯ. ಅದ್ರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದನ್ನು ಅರಿಯಬೇಕು.
• ಕುಟುಂಬ (Family) : ಕುಟುಂಬದ ಬಗ್ಗೆ ಹೆಚ್ಚು ಅರ್ಥವಾಗುವ ಸಮಯ ಇದು. ಕುಟುಂಬ ನಿಮ್ಮನ್ನು ಹೆಚ್ಚೆಂದು ಪರಿಗಣಿಸುತ್ತದೆ, ಕುಟುಂಬ ನಿಮಗೆ ಮಹತ್ವ ನೀಡುತ್ತದೆ ಎಂಬ ವಿಷ್ಯ ನಿಮ್ಮ ಗಮನಕ್ಕೆ ಬರುತ್ತದೆ. ಈ ಸಮಯದಲ್ಲಿ ಕುಟುಂಬಕ್ಕೆ ಆದ್ಯತೆ ನೀಡಬೇಕು.
• ಕೆಲಸದ ಬಗ್ಗೆ ಮಹತ್ವದ ವಿಷ್ಯ ಬಹಿರಂಗ : ನೀವು ಏನು ಕೆಲಸ ಮಾಡ್ತಿದ್ದೀರಿ ಅದು ನಿಮ್ಮನ್ನು ಕೇರ್ ಮಾಡ್ತಿಲ್ಲ. ನಿಮ್ಮ ಕೆಲಸಕ್ಕೆ ಸಂಭಾವನೆ ನೀಡುವುದು ಮಾತ್ರ ಅದರ ಕೆಲಸ ಎಂಬ ಮಹತ್ವದ ಸಂಗತಿ ನಿಮಗೆ ತಿಳಿಯುತ್ತದೆ. ಇದೇ ಕೆಲಸ ನಿಮ್ಮ ಕನಸನ್ನು ಕೊಂದಿದೆ ಎಂಬ ವಾಸ್ತವ ನಿಮ್ಮ ಗಮನಕ್ಕೆ ಬರುತ್ತದೆ.
• ಸಮಾಜದಿಂದ ಮುಕ್ತ (Free out of Society) : ಸಮಾಜ ಏನು ಹೇಳುತ್ತೆ ಎನ್ನುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳೋಕೆ ನೀವು ಹೋಗಬೇಡಿ. ಅನೇಕರಿಗೆ ನಾವು ಏನು ಮಾಡ್ತಿದ್ದೇವೆ, ಏನು ಹೇಳ್ತಿದ್ದೇವೆ ಅನ್ನೋದೇ ಗೊತ್ತಿರೋದಿಲ್ಲ. ನೀವು ಅವರ ಮಾತಿಗೆ ಬೆಲೆ ನೀಡ್ತಾ ಹೋದ್ರೆ ನಿಮ್ಮ ಭವಿಷ್ಯ ಹಾಳಾಗುತ್ತದೆ.
• ಸಂತೋಷ (Happiness) : ನೀವು ನಿಮ್ಮ ಪಾಲಕರನ್ನು ಬೈತಾ, ಅವರ ಕಾರಣದಿಂದಲೇ ನಾನು ಈ ಸ್ಥಿತಿಗೆ ಬಂದಿದ್ದೇನೆ ಎಂಬ ಭಾವನೆಯಲ್ಲಿದ್ದರೆ, ಅದರಿಂದ ಹೊರಗೆ ಬರಲು ಇದು ಒಳ್ಳೆಯ ಸಮಯ. ಆ ಭಾವನೆಯಿಂದ ನೀವು ಹೊರಗೆ ಬಂದ್ರೆ ನೀವು ಮೊದಲಿಗಿಂತ ಹೆಚ್ಚು ಸಂತೋಷ ಪಡೆಯುತ್ತೀರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.