ಪ್ರೀತಿ ಸಂಬಂಧ ತುಂಬಾ ಸೂಕ್ಷ್ಮ. ಇಬ್ಬರ ಮಧ್ಯೆ ಪ್ರೀತಿ ಚಿಗುರಿ ಅದು ಬಲ ಪಡೆದು, ದೀರ್ಘಕಾಲ ಹಾಗೆ ಇರಬೇಕೆಂದ್ರೆ ಪ್ರತಿ ದಿನ ಪ್ರಯತ್ನ ನಡೆಸಬೇಕು. ಆರಂಭದಲ್ಲೇ ನೀವು ತಪ್ಪು ಮಾಡಿದ್ರೆ ಸಂಬಂಧ ಮುಂದುವರೆಯಲು ಸಾಧ್ಯವೇ ಇಲ್ಲ.
ಡೇಟಿಂಗ್ ಈಗ ಮಾಮೂಲಿ ಆದ್ರೂ ಮೊದಲಿನಷ್ಟು ಸುಲಭವಲ್ಲ. ಜನರ ಜೀವನಶೈಲಿ ಬದಲಾದಂತೆ ಜನರು ಸಂಗಾತಿ ಆಯ್ಕೆ ವಿಷ್ಯದಲ್ಲೂ ಬದಲಾಗಿದ್ದಾರೆ. ಬರೀ ಪ್ರೀತಿ ಮಾಡುವ ವ್ಯಕ್ತಿಯ ಅವಶ್ಯಕತೆ ಜನರಿಗಿಲ್ಲ. ಎಲ್ಲದರಲ್ಲೂ ಪರ್ಫೆಕ್ಟ್ ಆಗಿರುವ ಜನರನ್ನು ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುವ ಗುರಿಯನ್ನು ಜನರು ಹೊಂದಿರುತ್ತಾರೆ. ಇದೇ ಕಾರಣಕ್ಕೆ ಡೇಟಿಂಗ್ ಟಫ್ ಆಗ್ತಿದೆ. ಸಾಮಾಜಿಕ ಜಾಲತಾಣಗಳು ಕೂಡ ಜನರ ಆಲೋಚನೆ ಬದಲಾಯಿಸುವಲ್ಲಿ ಮಹತ್ವದ ಪಾತ್ರವಹಿಸಿವೆ ಎಂದ್ರೆ ತಪ್ಪಾಗೋದಿಲ್ಲ.
ಒಂದು ಸಂಬಂಧ (Relationship) ಶುರುವಾಗ್ತಿದೆ ಅಂದ್ರೆ ಅಲ್ಲಿ ಉತ್ಸಾಹ ಹಾಗೂ ಆತಂಕ ಎರಡೂ ಇರುತ್ತದೆ. ನಮ್ಮ ಮುಂದಿರುವ ಸಂಗಾತಿಯ ಆಸೆ, ಸ್ವಭಾವವನ್ನು ಅರ್ಥ ಮಾಡಿಕೊಳ್ಳುವ ಸಮಯ ಅದು. ಈ ಸಮಯದಲ್ಲಿ ಇಬ್ಬರ ಮಧ್ಯೆ ಕನೆಕ್ಷನ್ ಆಗಷ್ಟೆ ಶುರುವಾಗಿರುತ್ತದೆ. ಸಂಬಂಧ ಶುರುವಾಗುವ ಆರಂಭದಲ್ಲಿಯೇ ನೀವು ಕೆಲ ತಪ್ಪುಗಳನ್ನು ಮಾಡಿದ್ರೆ, ಸಂಬಂಧ ಮೊಳಕೆಯೊಡೆದು ಚಿಗುರೊಡೆಯೋದೇ ಇಲ್ಲ. ನಿಮ್ಮಿಬ್ಬರ ಸಂಬಂಧ ಅಲ್ಲಿಗೆ ಮುರಿದು ಬಿದ್ದಿರುತ್ತದೆ. ಹಾಗಾಗಿ ಡೇಟಿಂಗ್ (Dating) ಸಮಯದಲ್ಲಿ ಕೆಲ ತಪ್ಪುಗಳನ್ನು ಮಾಡಬಾರದು. ಮೊದಲ ಡೇಟಿಂಗ್ ಹೇಗಿರಬೇಕು ಎಂಬುದು ನಿಮಗೆ ತಿಳಿದಿರಬೇಕು.
ನಾಗಚೈತನ್ಯ - ಸಮಂತಾ ಪ್ಯಾಚ್ ಅಪ್? ಜೋಡಿಯನ್ನು ಮತ್ತೆ ಒಂದು ಮಾಡಿದ ಫ್ಯಾನ್ಸ್!
ಫಸ್ಟ್ ಡೇಟ್ ವೇಳೆ ಈ ತಪ್ಪು ಮಾಡ್ಬೇಡಿ :
ಆತುರ (Rush) : ಕೆಲವರು ಮೊದಲ ಡೇಟಿಂಗ್ ನಲ್ಲಿಯೇ ಅನವಶ್ಯಕ ವಿಷ್ಯಗಳ ಆಲೋಚನೆಗೆ ಬೀಳ್ತಾರೆ. ತಲೆಯಲ್ಲಿ ನಾನಾ ವಿಷ್ಯಗಳು ಓಡ್ತಿರುತ್ತವೆ. ಅವರು ಆಗಿನ ಕ್ಷಣದ ಬಗ್ಗೆ ಆಲೋಚನೆ ಮಾಡುವ ಬದಲು ಮುಂದಿನ ದಿನಗಳು, ತಮ್ಮಿಬ್ಬರ ಭವಿಷ್ಯದ ಬಗ್ಗೆ ಪ್ಲಾನ್ ಮಾಡಲು ಆರಂಭಿಸುತ್ತಾರೆ. ಸರಿಯಾಗಿ ಒಬ್ಬರಿಗೊಬ್ಬರು ಅರ್ಥವಾಗದ ಕಾರಣ ರೋಮ್ಯಾನ್ಸ್ ಶುರುವಾಗುವ ಮೊದಲೇ ಹಾಳಾಗುತ್ತದೆ.
ದೈಹಿಕ ಸಂಬಂಧ (Physical Relationship): ಡೇಟಿಂಗ್ ಶುರುವಾದ ಆರಂಭದ ದಿನಗಳಲ್ಲಿಯೇ ದೈಹಿಕ ಸಂಬಂಧ ಬೆಳೆಸುವುದು ಸೂಕ್ತವಲ್ಲ. ಇದ್ರಿಂದ ನೀವಿಬ್ಬರು ದೈಹಿಕವಾಗಿ ಮುಂದುವರೆಯಬಹುದು ಆದ್ರೆ ಮಾನಸಿಕವಾಗಿ ಇಬ್ಬರ ಮಧ್ಯೆ ಕನೆಕ್ಷನ್ ಇರೋದಿಲ್ಲ. ಇದ್ರಿಂದ ಬೇಗ ನಿಮ್ಮ ಸಂಬಂಧ ಮುರಿದುಬೀಳುತ್ತದೆ.
ಡಿಟೆಕ್ಟಿವ್ : ನಿಮ್ಮ ಸಂಗಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಡಿಟೆಕ್ಟಿವ್ ಕೆಲಸ ಮಾಡೋದು ತಪ್ಪಲ್ಲ. ಆದ್ರೆ ಡೇಟಿಂಗ್ ಶುರುವಾದ ಆರಂಭದಲ್ಲೇ ನೀವು ಹೀಗೆ ಮಾಡಿದ್ರೆ ನಿಮ್ಮ ಸಂಗಾತಿ ಮುಂದೆ ಸಣ್ಣವರಾಗ್ತೀರಿ. ನಿಮ್ಮ ಮೇಲಿನ ನಂಬಿಕೆಯನ್ನು ಸಂಗಾತಿ ಕಳೆದುಕೊಳ್ತಾರೆ.
ಈ ಮಹಿಳೆಯರು ಸಂಗಾತಿಗೆ ಬದ್ಧರಾದ್ರೆ ಮುಗೀತು, ಎಂದಿಗೂ ಕಡಿಮೆಯಾಗೋಲ್ಲ
ಆರಂಭದಲ್ಲಿಯೇ ಅತಿ ಹೆಚ್ಚು ನಿರೀಕ್ಷೆ : ಯಾವುದಕ್ಕೂ ಆತುರಪಡುವುದು ಒಳ್ಳೆಯದಲ್ಲ. ಎಲ್ಲವೂ ನಿಧಾನವಾಗಿ ಸಾಗಬೇಕು. ಅದ್ರಲ್ಲೂ ಒಂದು ಸಂಬಂಧ ಬಲಗೊಳ್ಳಲು ಅನೇಕ ವರ್ಷಗಳು ಬೇಕಾಗುತ್ತದೆ. ಡೇಟಿಂಗ್ ಶುರುವಾದ ಆರಂಭದಲ್ಲಿಯೇ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳುವುದು, ಹಾಗೆ ಅದನ್ನು ಅವರು ಪೂರೈಸಲೆಂದು ಬಯಸುವುದು ತಪ್ಪು. ಇದ್ರಿಂದ ನಿಮ್ಮಿಬ್ಬರ ಮನಸ್ಥಿತಿ ಹಾಳಾಗುತ್ತದೆ. ನಿಮ್ಮ ಮನಸ್ಸು ಹದಗೆಡುತ್ತದೆ.
ಅತಿ ಎನ್ನಿಸುವಷ್ಟು ಮೆಸೇಜ್ : ಡೇಟಿಂಗ್ ಆರಂಭದ ದಿನಗಳು ಅತ್ಯಂತ ಸಂತೋಷಕರವಾಗಿರುತ್ತವೆ. ಜನರು ಸದಾ ಸಂಗಾತಿ ಬಗ್ಗೆ ಆಲೋಚನೆ ಮಾಡ್ತಿರುತ್ತಾರೆ. ಹೊಸ ಪ್ರಪಂಚದಲ್ಲಿ ತೇಲುತ್ತಿರುತ್ತಾರೆ ನಿಜ. ಹಾಗಂತ ನಿಮ್ಮ ಸಂಗಾತಿಗೆ ತೊಂದರೆಕೊಡುವುದು ತಪ್ಪು. ಇಬ್ಬರು ಪ್ರತಿ ದಿನ ಸಂದೇಶ ರವಾನೆ ಮಾಡಿಕೊಳ್ಳುವುದು, ಫೋನ್ ಮಾಡಿ ಮಾತನಾಡುವುದು, ವಿಡಿಯೋ ಕರೆಗಳನ್ನು ಮಾಡುವುದು ಅವಶ್ಯಕ. ಆದ್ರೆ ಅದು ಅತಿಯಾದ್ರೆ ಸಂಗಾತಿಗೆ ಕಿರಿಕಿರಿಯಾಗುತ್ತದೆ. ಅವರಿಗೆ ವೈಯಕ್ತಿಕ ಜಾಗವನ್ನು ನೀವು ನೀಡ್ಬೇಕು. ಅವರು ಮಾಡುವ, ಹೋಗುವ ಪ್ರತಿಯೊಂದು ಕೆಲಸ, ಜಾಗದ ಬಗ್ಗೆ ನಿಮಗೆ ಮಾಹಿತಿ ನೀಡ್ಬೇಕು, ಎಲ್ಲವನ್ನೂ ನಿಮ್ಮ ಬಳಿ ಹಂಚಿಕೊಳ್ಳಬೇಕೆಂಬ ಅತಿಯಾದ ನಿಯಮ ರೂಪಿಸಿಕೊಳ್ಳಬೇಡಿ. ಇದು ಸಂಬಂಧವನ್ನು ಉಸಿರುಗಟ್ಟಿಸುತ್ತದೆ.