ತಾಳಿ ಕಟ್ಟುವ ಶುಭ ವೇಳೆ ಬಯಲಾಯ್ತು ವಧುವಿನ ಲೀಲೆ: ಮಂಟಪದಿಂದ ಹೊರ ನಡೆದ ವರ

By Anusha Kb  |  First Published Jul 12, 2024, 2:11 PM IST

ವರ ಇನ್ನೇನು ತಾಳಿ ಕಟ್ಟಿ ವಧುವನ್ನು ತನ್ನೊಂದಿಗೆ ಕರೆದೊಯ್ಯಬೇಕು ಅನ್ನುವಷ್ಟರಲ್ಲಿ ವರನ ಮೊಬೈಲ್‌ಗೆ ಬಂದ ಫೋನ್ ಕರೆಯೊಂದು ಮದುವೆಯನ್ನೇ ನಿಲ್ಲಿಸುವಂತೆ ಮಾಡಿದೆ. ಉತ್ತರ ಪ್ರದೇಶದ ಅಮ್ರೊಹ್‌ನಲ್ಲಿ ಈ ಘಟನೆ ನಡೆದಿದೆ. 


ಲಕ್ನೋ: ವರ ಇನ್ನೇನು ತಾಳಿ ಕಟ್ಟಿ ವಧುವನ್ನು ತನ್ನೊಂದಿಗೆ ಕರೆದೊಯ್ಯಬೇಕು ಅನ್ನುವಷ್ಟರಲ್ಲಿ ವರನ ಮೊಬೈಲ್‌ಗೆ ಬಂದ ಫೋನ್ ಕರೆಯೊಂದು ಮದುವೆಯನ್ನೇ ನಿಲ್ಲಿಸುವಂತೆ ಮಾಡಿದೆ. ಉತ್ತರ ಪ್ರದೇಶದ ಅಮ್ರೊಹ್‌ನಲ್ಲಿ ಈ ಘಟನೆ ನಡೆದಿದೆ. ಮದುವೆ ಎಂದು ಅಲ್ಲಿ ವರ ಹಾಗೂ ವಧುವಿನ ಕಡೆಯವರೆಲ್ಲರೂ ಸೇರಿದ್ದರು. ಬಂದಿದ್ದಂತಹ ಅತಿಥಿಗಳಿಗೆ ಭೋಜನ ನೀಡುವುದಕ್ಕೂ ಶುರು ಮಾಡಲಾಗಿತ್ತು. ಇನ್ನೇನು ವಧು ಹಾಗೂ ವರ ತಾಳಿ ಕಟ್ಟಿ ಸಪ್ತಪದಿ ತುಳಿಯುವುದೊಂದೇ ಬಾಕಿ ಇತ್ತು. ಅಷ್ಟರಲ್ಲಿ ವರನ ಮೊಬೈಲ್‌ಗೆ ಫೋನ್ ಕರೆಯೊಂದು ಬಂದಿದೆ.

ವರನಿಗೆ ಕರೆ ಮಾಡಿದ ವಧುವಿನ ಲವರ್
ವರನಿಗೆ ಕರೆ ಮಾಡಿ ತಾನು ವಧುವಿನ ಲವರ್ ಎಂದು ಹೇಳಿಕೊಂಡ ಯುವಕ ಆ ಯುವತಿ ಹಾಗೂ ತಾನು ಪ್ರೇಮಿಸುತ್ತಿದ್ದು, ಆ ವಧುವನ್ನು ಮದ್ವೆಯಾಗದಂತೆ ವರನಿಗೆ ಹೇಳಿದ್ದಾನೆ. ಮದುವೆಯಾದಲ್ಲಿ ಪರಿಸ್ಥಿತಿ ಚೆನ್ನಾಗಿರುವುದಿಲ್ಲವೆಂದು ಬೆದರಿಕೆಯೊಡಿದ್ದಾನೆ. ಈ ವೇಳೆ ವರ ತಮ್ಮ ಪ್ರೇಮಕ್ಕೇನು ಸಾಕ್ಷಿ ಎಂದು ಕೇಳಿದ್ದಾನೆ. ಇದಕ್ಕೆ ಪ್ರತಿಯಾಗಿ ವಧುವಿನ ಲವರ್ ಆತನಿಗೆ ವಧು ಹಾಗೂ ತಾನು ಜೊತೆಗಿರುವ ಹಲವು ಫೋಟೋ ವೀಡಿಯೋಗಳನ್ನು ವರನ ಮೊಬೈಲ್‌ ಫೋನ್‌ಗೆ ಕಳುಹಿಸಿದ್ದಾನೆ. ಇದೆಲ್ಲವನ್ನು ನೋಡಿದ ನಂತರ ವರ ಮದುವೆಯಾಗಲು ನಿರಾಕರಿಸಿದ್ದು, ಮದ್ವೆ ಕ್ಯಾನ್ಸಲ್ ಮಾಡಿ ಮಂಟಪದಿಂದ ಹೊರ ನಡೆದಿದ್ದಾನೆ. ಹೀಗೆ ವರನಿಗೆ ಕರೆ ಮಾಡಿ ಮದುವೆ ನಿಲ್ಲಿಸಿದವನನ್ನು ಕಮಲ್ ಸಿಂಗ್ ಎಂದು ಗುರುತಿಸಲಾಗಿದ್ದು,  ಆತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ವರದಿ ಆಗಿದೆ. 

Latest Videos

ಕೊಡಗಿನಲ್ಲಿ ಸಿಹಿ ತಿಂಡಿಯಿಂದ ಎದುರಾಯ್ತು ವಿಘ್ನ, ಮಂಟಪದಲ್ಲೇ ಮುರಿದು ಬಿತ್ತು ಲಗ್ನ!

ವಧು ಅದಾಮ್‌ಪುರ ನಿವಾಸಿಯಾಗಿದ್ದು, ಅಮ್ರೋಹ್‌ನ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಮದುವೆ ಮಂಟಪದಲ್ಲಿ ಎರಡು ಕಡೆಯವರು ಕೂಡ ಸೇರಿದ್ದು, ಬಂದ ಅತಿಥಿಗಳಿಗೆ ಊಟವನ್ನು ಕೂಡ ನೀಡಲು ಶುರು ಮಾಡಿ ಆಗಿತ್ತು. ಇದಾದ ನಂತರ ವರದ ಮೊಬೈಲ್‌ಗೆ ವಧುವಿನ ಪ್ರೇಮಿಯ ಕರೆ ಬಂದಿದೆ. ವರನ ಮೊಬೈಲ್‌ಗೆ ವಧುವಿನ ಪ್ರೇಮಿ ಕಳುಹಿಸಿದ ಸಾಕ್ಷ್ಯಗಳಲ್ಲಿ ಅವರಿಬ್ಬರೂ ವಿವಿಧ ಪ್ರದೇಶಗಳಲ್ಲಿ ಜೊತೆಗೆ ತೆಗೆದಿದ್ದ ಫೋಟೋಗಳು, ಹೊಟೇಲ್ ರೂಮ್‌ನಲ್ಲಿ ಉಳಿದ ವೀಡಿಯೋಗಳು ಇದ್ದವು ಎಂದು ವರದಿ ಆಗಿದೆ. ಇದೆಲ್ಲವನ್ನು ನೋಡಿದ ವರ ಮದುವೆ ಬೇಡವೆಂದು ಹೇಳಿ ಮಂಟಪದಿಂದ ಹೊರ ನಡೆದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. 

ಮಟನ್ ಸಾರು ಕೊಟ್ಟಿಲ್ಲ, ಉಂಗುರ ಬದಲಾಯಿಸಿದ ಬೆನ್ನಲ್ಲೇ ವರನ ಕುಟುಂಬದಿಂದ ಮದುವೆ ರದ್ದು!

click me!