ಲೈಂಗಿಕ ಜೀವದ ಸುಖಮಯ ಆಗಿರಬೇಕು ಎಂದಾದರೆ ಗಂಡು ಮತ್ತು ಹೆಣ್ಣು ಇಬ್ಬರೂ ಸಕಾಲದಲ್ಲಿ ಸಂಭೋಗ ತೃಪ್ತಿ ಹೊಂದುವುದು ಅವಶ್ಯಕ. ಪುರುಷನಿಗೆ ಎಷ್ಟು ಹೊತ್ತಾದರೂ ಸ್ಖಲನವೇ ಆಗೋದಿಲ್ಲ ಎಂದಾದರೆ ಅದೊಂದು ತೊಂದರೆಯೇ ಸರಿ. ಇದಕ್ಕೂ ಹೆಸರಿದೆ ಮತ್ತು ಪರಿಹಾರವೂ ಇದೆ.
ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತೈದು. ಗಂಡನ ವಯಸ್ಸು ಮೂವತ್ತು. ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ಆರಂಭದ ಒಂದೆರಡು ವರ್ಷ ನಮ್ಮ ಸೆಕ್ಸ್ ಲೈಫ್ ಚೆನ್ನಾಗಿತ್ತು. ನನ್ನ ಗಂಡ ಹಾಗೂ ನಾನು ಲೈಂಗಿಕ ವಿಚಾರಗಳಲ್ಲಿ ಪಳಗಿದವರೇನೂ ಅಲ್ಲದಿದ್ದರೂ ಬಹಳ ಚೆನ್ನಾಗಿ ಹೊಂದಿಕೊಂಡೆವು. ಆದರೆ ಕಳೆದ ಒಂದು ವರ್ಷದಿಂದ ಗಂಡನಿಗೆ ಒಂದು ಸಮಸ್ಯೆ ಶುರುವಾಗಿದೆ. ನಾವಿಬ್ಬರೂ ಸೆಕ್ಸನ್ನು ಎಂದಿನಂತೆ ಆರಂಭಿಸುತ್ತೇವೆ. ಅವರು ನನ್ನೊಳಗೆ ಪ್ರವೇಶಿಸಿ ತುಂಬಾ ಹೊತ್ತು ಘರ್ಷಿಸಿದರೂ ಸ್ಖಲನ ಹೊಂದುವುದೇ ಇಲ್ಲ. ಅಷ್ಟು ಹೊತ್ತಿಗೆ ನಾನು ಉತ್ತುಂಗ ತಲುಪಿ, ದಣಿದಿರುತ್ತೇನೆ. ಕೊನೆಗೂ ಅವರಿಗೂ ನನಗೂ ಇಬ್ಬರಿಗೂ ಸುಸ್ತಾಗಿ ಬೇರೆ ಬೇರೆಯಾಗುತ್ತೇವೆ. ಒಂದು ಬಗೆಯ ಪ್ರತ್ಯೇಕತೆಯ ಭಾವನೆ ನಮ್ಮಲ್ಲಿ ಬಂದುಬಿಡುತ್ತದೆ. ಮೊದಮೊದಲು ಸರಿಯಾದ ಹೊತ್ತಿಗೆ ಸ್ಖಲಿಸುತ್ತಿದ್ದ ಅವರಿಗೆ ಈಗ ಹೀಗೇಕೆ ಆಗಿದೆ ಎಂಬುದು ಅರ್ಥವಾಗುತ್ತಿಲ್ಲ. ಇದರಿಂದಾಗಿ ರತಿಕ್ರೀಡೆಯನ್ನು ಕೂಡ ಅವರು ಅವಾಯ್ಡ್ ಮಾಡಲು ಶುರು ಮಾಡಿದ್ದಾರೆ. ಕೆಲವೊಮ್ಮೆ ಅವರೇ ಗಂಟೆಗಟ್ಟಲೆ ಹಸ್ತಮೈಥುನ ಮಾಡಿಕೊಂಡು ಅಥವಾ ನನ್ನಿಂದ ಮಾಡಿಸಿಕೊಂಡು ತೃಪ್ತಿ ಹೊಂದುತ್ತಾರೆ. ಲೈಂಗಿಕ ತಜ್ಞರಲ್ಲಿ ಹೋಗಲು ಅವರಿಗೆ ನಾಚಿಕೆ. ಪರಿಹಾರ ಸೂಚಿಸಿ.
ಉತ್ತರ: ಇದನ್ನು ಡಿಲೇಯ್ಡ್ ಎಜಾಕ್ಯುಲೇಷನ್ ಅಥವಾ ವಿಳಂಬಿತ ಸ್ಖಲನ ಎನ್ನುತ್ತಾರೆ. ಕೆಲವೊಮ್ಮೆ ಇದರೊಂದಿಗೆ ರೆಟ್ರೊಗ್ರೇಡ್ ಎಜಾಕ್ಯುಲೇಶನ್ ಅಥವಾ ಹಿಮ್ಮರಳು ಸ್ಖಲನ ಕೂಡ ಸೇರಿಕೊಳ್ಳುವುದು ಇದೆ. ವಿಳಂಬಿತ ಸ್ಖಲನ ಎಂದರೆ ತುಂಬಾ ಹೊತ್ತು ಸಂಭೋಗಿಸಿದ ನಂತರ ಸ್ಖಲನವಾಗುವುದು ಅಥವಾ ಸ್ಖಲನವೇ ಆಗದಿರುವುದು. ರೆಟ್ರೊಗ್ರೇಡ್ ಎಜಾಕ್ಯುಲೇಶನ್ ಎಂದರೆ ಒಮ್ಮೆ ಸ್ಖಲನದ ಅಂಚಿನವರೆಗೆ ಬಂದ ವೀರ್ಯ ಮರಳಿ ಹೋಗಿಬಿಡುವುದು. ಇವೆರಡೂ ಸಮಸ್ಯೆಗಳೇ. ಹೇಗೆ ಶೀಘ್ರಸ್ಖಲನದಿಂದ ಗಂಡಸು ಮುಜುಗರ ಹೊಂದುತ್ತಾನೋ ಹಾಗೆಯೇ ಇವೆರಡರಿಂದಲೂ ಮುಜುಗರ ಅನುಭವಿಸುತ್ತಾನೆ.
undefined
ಇದಕ್ಕೆ ಹಲವು ಕಾರಣಗಳಿರಲು ಸಾಧ್ಯ. ದೈಹಿಕ ಕಾರಣಗಳು- ಮಧುಮೇಹ ಅಥವಾ ರಕ್ತದೊತ್ತಡದಂಥ ಕಾಯಿಲೆಗಳು, ಪ್ರಾಸ್ಟೇಟ್ ಗ್ರಂಥಿಯಲ್ಲಿ ಗಡ್ಡೆಯುಂಟಾಗಿ ಅದನ್ನು ತೆಗೆಯಬೇಕಾಗಿ ಬರುವುದರಿಂದ ಈ ಅಂಗಗಳ ಮೇಲೆ ಉಂಟಾಗುವ ಒತ್ತಡ ಇತ್ಯಾದಿ. ಇನ್ನು ಕೆಲವು ಹವ್ಯಾಸದಿಂದಾಗಿ ದೇಹದ ಮೇಲೆ ಉಂಟಾಗುವ ಪರಿಣಾಮಗಳು- ಅತಿಯಾದ ಧೂಮಪಾನ ಅಥವಾ ಮದ್ಯಪಾನದಿಂದಾಗಿ, ಸೆಕ್ಸ್‌ನಲ್ಲಿ ಸಾಕಷ್ಟು ಸರಿಯಾಗಿ ಪರ್‌ಫಾರ್ಮೆನ್ಸ್ ಮಾಡಲು ಸಾಧ್ಯವಾಗದು. ಯಾಕೆಂದರೆ ಲೈಂಗಿಕ ಸ್ರಾವಗಳು ಸೂಕ್ತ ಸಮಯಕ್ಕೆ ಸರಿಯಾಗಿ ಆಗುವುದೇ ಇಲ್ಲ.
ಇನ್ನು ಕೆಲವು ಮಾನಸಿಕ ಕಾರಣಗಳು (Mental Health Issues)- ಕೆಲಸದ ಸ್ಥಳದಲ್ಲಿ ಒತ್ತಡ ಇರಬಹುದು. ತಲೆಯಲ್ಲಿ ಸದಾ ಚಿಂತೆಗಳನ್ನು ತುಂಬಿಕೊಂಡು ಇದ್ದರೆ ಸಂಭೋಗವನ್ನು ಅನುಭವಿಸಲು ಆಗುವುದಿಲ್ಲ. ಹಾಗೇ ಕೌಟುಂಬಿಕ ಚಿಂತೆಗಳು ಕಾಡುತ್ತಿದ್ದರೂ ಸಾಧ್ಯವಾಗದು. ಮುಖ್ಯವಾಗಿ ಒತ್ತಡದಿಂದ ದೂರ ಉಳಿಯಬೇಕು. ಹಿಂದಿನ ಘಟನೆಗಳು ತಪ್ಪಿತಸ್ಥ ಭಾವನೆಗಳು ಅಥವಾ ಪಶ್ಚಾತ್ತಾಪ ಕಾಡುತ್ತಿದ್ದರೂ ಹೀಗಾಗುತ್ತದೆ. ಡಿಪ್ರೆಶನ್ ಅಥವಾ ಖಿನ್ನತೆಯಂಥ ಮಾನಸಿಕ ಸಮಸ್ಯೆಗಳು ಇದ್ದರೆ ಹೀಗೆ ಆಗುವುದುಂಟು. ಲೈಂಗಿಕತೆಯಲ್ಲಿ ಸರಿಯಾಗಿ ನಿರ್ವಹಿಸುತ್ತೇನೋ ಇಲ್ಲವೋ ಎಂಬಂಥ ಪರ್‌ಫಾರ್ಮೆನ್ಸ್ ಆಂಕ್ಸೈಟಿ ಶುರುವಾದರೂ ಹೀಗೆಲ್ಲ ಆಗುತ್ತದೆ.
ಶಾರೀರಿಕ ಸಂಬಂಧ ಬೆಸೆಯುವಂತೆ ಕನಸು ಬಿತ್ತಾ? ಇಂಥ ಕನಸು ಬೀಳೋದ್ಯಾಕೆ
ಇವೆಲ್ಲವೂ ಕಾರಣಗಳು ಸರಿ, ಆದರೆ ಪರಿಹಾರಗಳೇನು? ಕಾರಣಗಳನ್ನು ಅನುಸರಿಸಿ ಪರಿಹಾರಗಳೂ ಇರುತ್ತವೆ. ಹವ್ಯಾಸದಿಂದಾಗಿ ಹೀಗಾಗಿದ್ದರೆ ಹವ್ಯಾಸಗಳನ್ನು ಬಿಡದೆ ಬೇರೆ ದಾರಿ ಇಲ್ಲ. ಬಿಪಿ ಅಥವಾ ಮಧುಮೇಹ ಅಥವಾ ಪ್ರಾಸ್ಟೇಟ್ ಸಮಸ್ಯೆಯಿಂದಾಗಿ ಹೀಗಾಗುತ್ತಿದೆಯೇ ಎಂಬುದನ್ನೂ ಪರೀಕ್ಷಿಸಿ. ನಿಮ್ಮ ಪತಿ ಒಮ್ಮೆ ದೇಹದ ಸಮಗ್ರ ಪರೀಕ್ಷೆ ಮಾಡಿಸಿಕೊಳ್ಳಲಿ. ಪತಿಯ ದೇಹದ ತೂಕ ಎಷ್ಟಿದೆ? ಕೆಲವೊಮ್ಮೆ ಅಗತ್ಯಕ್ಕಿಂತ ತುಂಬಾ ಕಡಿಮೆ ಇದ್ದರೆ, ಅಗತ್ಯಕ್ಕಿಂತ ತುಂಬಾ ಹೆಚ್ಚಿದ್ದರೂ ಸಮಸ್ಯೆ ಉಂಟಾಗುತ್ತದೆ.
ದೇಹದ ಸಮಸ್ಯೆ ಏನೂ ಇಲ್ಲ ಎಂದಾದರೆ ನೀವು ಕೌನ್ಸೆಲಿಂಗ್ ಮಾಡಿಸಿಕೊಳ್ಳುವುದು ಅಥವಾ ಮನೋವೈದ್ಯರ ಬಳಿಗೆ ಹೋಗುವುದು ಅನಿವಾರ್ಯ. ಈ ವಿಚಾರದಲ್ಲಿ ಸಂಕೋಚ ಬೇಡ. ನೀವೇ ಮುಂದಾಳುತ್ವ ವಹಿಸಿ ಗಂಡನನ್ನು ಕರೆದೊಯ್ದು ಪರೀಕ್ಷೆ ಮಾಡಿಸಿ. ನಿಮ್ಮ ಲೈಂಗಿಕ ಜೀವದ ಸುಖಮಯ ಆಗಿರಬೇಕು ಎಂದಾದರೆ ನೀವು ಧೈರ್ಯ ಮಾಡಲೇಬೇಕು.
ವಯಸ್ಸಿನಲ್ಲಿ ಇಷ್ಟೊಂದು ಅಂತರವಿದ್ದರೆ ಗಂಡ ಮತ್ತು ಹೆಂಡತಿಗೆ ಆ ಸುಖ ಇರುವುದಿಲ್ಲ