ಹೆಂಡತಿಗೆ ದಿನಾ ನಾಲ್ಕು ಪೆಗ್ ಬೇಕೇ ಬೇಕು. ಆಕೆ ಕುಡಿಯುವಾಗ ಗಂಡನಿಗ ಒಂದೆರಡು ಪೆಗ್ ಕುಡಿಯುವಂತೆ ಒತ್ತಾಯ. ಈ ಪೆಗ್ ಜೀವನದಿಂದ ಬೇಸತ್ತ ಗಂಡ ಡಿವೋರ್ಸ್ ಕೇಳಿದ್ದಾನೆ. ಇಂತಾ ಪತ್ನಿಯಿಂದ ಡಿವೋರ್ಸ್ ಪಡೆದು ದುಡುಕಬೇಡ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.
ಲಖನೌ(ಜು.11) ಕುಡಿತಾಳೆ, ಬಯ್ತಾಳೆ ನನ್ ಹೆಂಡ್ತಿ, ಪೆಗ್ ಇಲ್ದೆ ಜಗಲ್ಲ ನನ್ ಹೆಂಡ್ತಿ.. ಅರೇ ಕನ್ಫ್ಯೂಸ್ ಆಗ್ಬೇಡಿ. ಪತಿ ಕುಡಿದು ಬಂದು ರಂಪಾಟ ಮಾಡಿದ ಕತೆಯಲ್ಲ. ಇದು ಪತ್ನಿಯ ಕುಡಿತದಿಂದ ನೊಂದ ಪತಿಯ ಕತೆ. ಇಲ್ಲೊಬ್ಬ ಪತ್ನಿ ಪ್ರತಿ ದಿನ ಕುಡಿತಾಳೆ. ನನಗೂ ಕುಡಿಯುವಂತೆ ಒತ್ತಾಯಿಸುತ್ತಾಳೆ ಎಂದು ವಿಚ್ಚೇದನಕ್ಕೆ ಅರ್ಜಿ ಹಾಕಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡಿದಿದೆ. ಸ್ವಲ್ಪ ಭಿನ್ನವಾದರೂ ಪತಿ ಮಾತ್ರ ರೋಸಿ ಹೋಗಿದ್ದಾನೆ. ಪೊಲೀಸ್ ಠಾಣೆ, ಕೌಟುಂಬಿಕ ಸಲಹಾ ಕೇಂದ್ರ, ಮನಶಾಸ್ತ್ರಜ್ಞರ ಕೌನ್ಸಿಲಿಂಗ್ ಎಲ್ಲಾ ನಡೆಸಿದರೂ ಪತ್ನಿ ಜೊತೆ ತಾನಿರಲ್ಲ ಎನ್ನುತ್ತಿದ್ದಾನೆ ಗಂಡ. ಆದರೆ ಈ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ಇಂತಾ ಪತ್ನಿ ಎಲ್ಲೂ ಸಿಗಲ್ಲ, ಡಿವೋರ್ಸ್ ನೀಡಿ ದುಡುಕ ಬೇಡ ಎಂದು ಹಲವರು ಸಲಹೆ ನೀಡಿದ್ದಾರೆ.
ಮದುವೆಯಾಗಿ ಕೆಲ ತಿಂಗಳು ಉರುಳಿದೆ. ನವ ಜೋಡಿಗಳ ನಡುವೆ ರಂಪಾಟ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ನಾಲ್ಕು ಪೆಗ್. ಹೌದು, ಪತ್ನಿಗೆ ಪ್ರತಿ ದಿನ ನಾಲ್ಕು ಪೆಗ್ ಬೇಕೆ ಬೇಕು. ಆಕೆ ಕುಡಿಯುವಾಗ ತನಗೂ ಒತ್ತಾಯಿಸುತ್ತಾಳೆ. ಈ ಕುಡಿತದ ಜೀವನದಿಂದ ಬೇಸತ್ತಿದ್ದೇನೆ. ಇನ್ನು ಸಾಧ್ಯವಿಲ್ಲ ಎಂದು ಗಂಡ ಗಟ್ಟಿ ನಿರ್ಧಾರ ಮಾಡಿದ್ದಾನೆ.
undefined
ಈ ದಿನಾಂಕಗಳಲ್ಲಿ ಮದುವೆಯಾದರೆ ಅನಾಹುತ, ವಿಚ್ಛೇದನ ಗ್ಯಾರಂಟಿ
ಮದುವೆಯಾದ ಆರಂಭದ ದಿನಗಳಲ್ಲಿ ಕಂಟ್ರೋಲ್ ಮಾಡಿದ್ದ ಪತ್ನಿ, ಬಳಿಕ ತನ್ನ ಎಂದಿನ ಚಟ ಮುಂದುವರಿಸಿದ್ದಾಳೆ. ಪ್ರತಿ ದಿನ ಕುಡಿಯದೇ ಈಕೆಯ ದಿನ ಆರಂಭವೇ ಆಗುತ್ತಿರಲಿಲ್ಲ. ಇದರಿಂದ ಕುಟುಂಬದವರ ಮುಂದೆ ಈತ ಹಲವು ಬಾರಿ ಮುಜುಗರಕ್ಕೀಡಾದ ಘಟನೆ ನಡೆದಿದೆ. ಹೀಗಾಗಿ ಪತ್ನಿಯನ್ನು ತವರು ಮನೆಗೆ ಬಿಟ್ಟು ಬಂದ ಪತಿ, ಬಳಿಕ ಕರೆದುಕೊಂಡು ಬಂದಿಲ್ಲ. ಇಷ್ಟೇ ಅಲ್ಲ ಮನೆಗೆ ಬರದಂತೆ ಸೂಚಿಸಿದ್ದಾನೆ.
ಇತ್ತ ಪತಿಯ ನಡೆಯಿಂದ ಕೋಪಗೊಂಡ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇಬ್ಬರನ್ನೂ ಕರೆಸಿದ ಪೊಲೀಸರು ಸಂಧಾನ ಮಾಡಲು ಮುಂದಾಗಿದ್ದಾರೆ. ಆದರೆ ಇವರಿಬ್ಬರ ಆರೋಪ ಪ್ರತ್ಯಾರೋಪ ನೋಡಿದ ಪೊಲೀಸರಿಗೆ ತಲೆನೋವು ಶುರುವಾಗಿದೆ. ಹೀಗಾಗಿ ಕೌಟುಂಬಿಕ ಸಲಹಾ ಕೇಂದ್ರಕ್ಕೆ ತೆರಳಿ ಕೌನ್ಸಿಲಿಂಗ್ ಪಡೆಯಲು ಸೂಚಿಸಿದ್ದಾರೆ. ಇಲ್ಲೂ ಕೂಡ ಇವರ ರಂಪಾಟ ನೋಡಿ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಇದೀಗ ಪತಿ ಡಿವೋರ್ಸ್ ಪಡೆಯಲು ಮುಂದಾಗಿದ್ದಾನೆ.
ಉಪ್ಪಿನಕಾಯಿ ತಿನ್ನಲು ಬಿಡದ ಗಂಡನ ಜೊತೆ ನಾನೇಕೆ ಇರಲಿ; ನನಗೆ ಡಿವೋರ್ಸ್ ಕೊಡಿ ಎಂದ ಪತ್ನಿ
ಆದರೆ ಈ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಇಂತಹ ಪತ್ನಿ ಮತ್ತೆ ಸಿಗಲ್ಲ. ಭವಿಷ್ಯದಲ್ಲಿ 2 ಪೆಗ್ ಹೊಡೆಯುವ ಸಂದರ್ಭ ಹೆಚ್ಚಾಗಿರುತ್ತದೆ. ಹೀಗಾಗಿ ಆಕೆಗೆ ಕಂಪನಿ ನೀಡಿ ಸಂಬಂಧ ಮುಂದುವರಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.