Relationship Tips : ಈ ವಯಸ್ಸಿನಲ್ಲಿ ಸಂಗಾತಿಗೆ ಮೋಸ ಮಾಡ್ತಾರೆ ಹುಡುಗಿಯರು

By Suvarna News  |  First Published Mar 25, 2022, 4:33 PM IST

ಅನೇಕ ಆಣೆ-ಪ್ರಮಾಣಗಳನ್ನು ಮಾಡಿ ದಾಂಪತ್ಯ (Married Life) ಜೀವನಕ್ಕೆ ಕಾಲಿಟ್ಟಿರುತ್ತಾರೆ. ಸದಾ ನಿನ್ನ ಜೊತೆಗಿರ್ತೇನೆಂದು ಪ್ರೀತಿ (Love)ಯ ಮಾತನಾಡಿರುತ್ತಾರೆ. ಆದ್ರೆ ಮದುವೆಯಾಗಿ ಆರೇಳು ವರ್ಷವಾಗ್ತಿದ್ದಂತೆ ಮೊದಲಿದ್ದ ಪ್ರೀತಿ-ಮೋಹ ಕಡಿಮೆಯಾಗುತ್ತದೆ. ಸಂಗಾತಿ (Partner) ಬದಲು ಬೇರೆಯವರು ಇಷ್ಟವಾಗಲು ಶುರುವಾಗ್ತಾರೆ.


ವಯಸ್ಸಿ (Age)ನ ಜೊತೆ ಸ್ವಭಾವ (Nature) ಮಾತ್ರ ಬದಲಾಗುವುದಿಲ್ಲ. ಸಂಗಾತಿ (Partner) ಬಗೆಗಿನ ಅಭಿಪ್ರಾಯ (Opinion) ಕೂಡ ಬದಲಾಗುತ್ತದೆ. ಒಂದು ಸಂಬಂಧದಲ್ಲಿ ದೀರ್ಘಕಾಲದ ವರೆಗೆ ಇದ್ದ ನಂತ್ರ ಸಂಗಾತಿ ಬಗ್ಗೆ ಇರುವ ಭಾವನೆ ಬದಲಾಗುತ್ತದೆ. ಮೊದಲಿನ ಭಾವನೆ ಉಳಿಯುವುದಿಲ್ಲ. ಏಳು ಜನ್ಮದವರೆಗೆ ಜೊತೆಯಾಗಿರ್ತೇವೆಂದು ನೀಡಿದ ಭರವಸೆ ದುರ್ಬಲಗೊಳ್ಳುತ್ತಿದೆ. ಸಾಮಾನ್ಯವಾಗಿ ಮೋಸ ಎಂಬ ವಿಷ್ಯ ಬಂದಾಗ ನಾವು ನೋಡುವುದು ಪುರುಷರನ್ನು. ಪುರುಷರು ವಿವಾಹೇತರ ಸಂಬಂಧವನ್ನು ಹೆಚ್ಚು ಹೊಂದಿರುತ್ತಾರೆ ಇಲ್ಲವೆ ಪ್ರೀತಿಸಿ ವಂಚಿಸುವ ವಿಷ್ಯದಲ್ಲೂ ಪುರುಷರು ಮುಂದು ಎಂದು ನಾವು ನಂಬಿದ್ದೇವೆ. ಆದ್ರೆ ಇತ್ತೀಚೆಗೆ ನಡೆದ ಅಧ್ಯಯನವೊಂದರಲ್ಲಿ ಅಚ್ಚರಿಯ ಸಂಗತಿ ಬಹಿರಂಗವಾಗಿದೆ. ಸಂಗಾತಿಗೆ ಮೋಸ ಮಾಡುವವರಲ್ಲಿ ಪುರುಷರಿಗಿಂತ ಮಹಿಳೆಯರು ಮುಂದಿದ್ದಾರೆ ಎಂಬುದು ಗೊತ್ತಾಗಿದೆ.

ಕೇಳಲು ಇದು ವಿಚಿತ್ರವೆನಿಸುತ್ತದೆ, ಆದರೆ 18 ರಿಂದ 29 ವರ್ಷದೊಳಗಿನ ಮಹಿಳೆಯರು ಪುರುಷರಿಗಿಂತ ಮೋಸ ಮಾಡುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನವೊಂದು ಹೇಳಿದೆ. ಚಂಚಲ ಸ್ವಭಾವ ಹುಡುಗಿರಿಗೆ ಹೆಚ್ಚಿರುತ್ತದೆ. ಅವರು ಸಂಗಾತಿ ಬಗ್ಗೆ ಬಹು ಬೇಗ ಬೇಸರಗೊಳ್ತಾರೆ. ಒಬ್ಬ ಸಂಗಾತಿ ಜೊತೆ ದೀರ್ಘ ಕಾಲ ಇರಲು ಅವರ ಮನಸ್ಸೊಪ್ಪುವುದಿಲ್ಲ. ಹಾಗಾಗಿ ಆ ಸಂಗಾತಿಯನ್ನು ದೂರ ಮಾಡುವುದಲ್ಲದೆ ಆ ಗುಂಗಿನಿಂದ ಬೇಗ ಹೊರ ಬರ್ತಾರೆ. ಅದೇ ಸಮಯದಲ್ಲಿ ಹೊಸ ಪಾಲುದಾರನ ಹುಡುಕಾಟವನ್ನು ಅವರು ಪ್ರಾರಂಭಿಸುತ್ತಾರೆಂದು ಅಧ್ಯಯನದಲ್ಲಿ ಹೇಳಲಾಗಿದೆ. ಅಧ್ಯಯನದಲ್ಲಿ ಕೇವಲ ಹುಡುಗಿಯರು ಮಾತ್ರವಲ್ಲ ವಿವಾಹಿತ ಮಹಿಳೆಯರನ್ನು ಸಹ ಸೇರ್ಪಡೆ ಮಾಡಲಾಗಿತ್ತು. ಅದರ ಫಲಿತಾಂಶ ಕೂಡ ಸ್ವಲ್ಪ ಆಘಾತಕಾರಿಯಾಗಿಯೇ ಇದೆ. ಈ ಅಧ್ಯಯನದ ಪ್ರಕಾರ 29 ನೇ ವಯಸ್ಸಿನಲ್ಲಿ ಮದುವೆಯಾದ ಮಹಿಳೆ  36 ರಿಂದ 37 ವರ್ಷದೊಳಗೆ ತನ್ನ ಪತಿಗೆ ಮೋಸ ಮಾಡುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. 

Tap to resize

Latest Videos

ಈ ವಯಸ್ಸಿನಲ್ಲಿ ಹೆಚ್ಚು ಮೋಸ ಮಾಡ್ತಾರೆ ಹುಡುಗಿಯರು : 
2016 ರಲ್ಲಿ ಐರಿಶ್ ಡೇಟಿಂಗ್ ವೆಬ್‌ಸೈಟ್ ಯಾವ ವಯಸ್ಸಿನಲ್ಲಿ ಹುಡುಗಿಯರು ಮೋಸ ಮಾಡ್ತಾರೆ ಎಂಬುದನ್ನು ಅಧ್ಯಯನ ನಡೆಸಿತ್ತು. ಈ ಅಧ್ಯಯನದ ಪ್ರಕಾರ  ಮೋಸಕ್ಕೆ ಅತ್ಯಂತ ಅಪಾಯಕಾರಿ ವಯಸ್ಸು 39 ವರ್ಷ ಎಂಬುದು ಬಹಿರಂಗವಾಗಿತ್ತು. ಏಕೆಂದರೆ 40 ರ ಸಮೀಪವಿರುವ ಜನರ ಮನಸ್ಸು ಹೆಚ್ಚು  ಚಂಚಲವಾಗುತ್ತದೆಯಂತೆ. ಈ ಅಧ್ಯಯನದ ಪ್ರಕಾರ, 19-29, 39 ಮತ್ತು 49 ವರ್ಷ ವಯಸ್ಸಿನ ಜನರು ತಮ್ಮ ಸಂಗಾತಿಗೆ ಮೋಸ ಮಾಡುವ ಸಾಧ್ಯತೆ ಹೆಚ್ಚು ಮಾತ್ರವಲ್ಲ ಅವರು ತಮಗಿಂತ ಚಿಕ್ಕವರನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬುದು ಗೊತ್ತಾಗಿದೆ. 

ಜಗಳದ ಬಳಿಕ PATCH UP ಆಗೋದೇನಂಥ ಕಷ್ಟವಲ್ಲ!

ತಜ್ಞರು ಹೇಳೋದೇನು ? : ಐರಿಶ್ ಡೇಟಿಂಗ್ ವೆಬ್‌ಸೈಟ್‌ನ ವಕ್ತಾರ ಕ್ರಿಶ್ಚಿಯನ್ ಗ್ರಾಂಟ್ ಪ್ರಕಾರ, 1,000 ಜನರ ಪ್ರೊಫೈಲ್‌ಗಳನ್ನು ಅಧ್ಯಯನ ಮಾಡಿದ ನಂತರ ಈ ಅಧ್ಯಯನವನ್ನು ಸಿದ್ಧಪಡಿಸಲಾಗಿದೆಯಂತೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರು ಸೇರಿದ್ದಾರೆ. ಇದರಲ್ಲಿ ಮಹಿಳೆಯರ ಕೋಟಾವು ಪುರುಷರಿಗಿಂತ ಹೆಚ್ಚಾಗಿದೆ. ವಾಸ್ತವವಾಗಿ  ತಮ್ಮ ಸಂಗಾತಿಗೆ ಮೋಸ ಮಾಡುವ ಮಹಿಳೆಯರ ಸಂಖ್ಯೆ ಶೇಕಡಾ 40 ರಷ್ಟು ಹೆಚ್ಚಿದ್ದರೆ, ಪುರುಷರ ಪ್ರಮಾಣವು ಇನ್ನೂ ಶೇಕಡಾ 21 ರಷ್ಟಿದೆ ಎಂದವರು ಹೇಳಿದ್ದಾರೆ. ಈ ಮೋಸವಾಗದಂತೆ ನೋಡಿಕೊಳ್ಳಬೇಕೆಂದ್ರೆ ಈ ವಯಸ್ಸಿನಲ್ಲಿ ಜಾಗರೂಕರಾಗಿರಬೇಕು ಎಂದು ಅವರು ಜನರಿಗೆ ಸಲಹೆ ನೀಡಿದ್ದಾರೆ. ಈ ಸಮಯದಲ್ಲಿ ಸಂಗಾತಿಯನ್ನು ಪ್ರೀತಿಸುವುದು ಮಾತ್ರವಲ್ಲದೆ ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಆಗ ಮಹಿಳಾ ಸಂಗಾತಿ ನಿಮಗೆ ಮೋಸ ಮಾಡುವ ಬಗ್ಗೆ ಆಲೋಚನೆ ಮಾಡುವುದಿಲ್ಲವೆಂದು ಅವರು ಹೇಳಿದ್ದಾರೆ.  

ಮನೆಯಲ್ಲಿರುವ ಅಜ್ಜ – ಅಜ್ಜಿಯ ಖುಷಿಗೆ ಹೀಗೆ ಮಾಡಿ

ಮದುವೆಯಾಗಿ 7 ವರ್ಷದ ನಂತ್ರ ಬರುತ್ತೆ ಸಮಸ್ಯೆ : 
ಮದುವೆಯಾದ ಏಳು ವರ್ಷಗಳ ನಂತರ ಮಹಿಳೆಯರು ತಮ್ಮ ಗಂಡನಿಗೆ ಮೋಸ ಮಾಡಲು ಯೋಚಿಸುತ್ತಾರೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.  ಮದುವೆಯಾಗಿ ಏಳು ವರ್ಷಗಳ ನಂತರ ಪತಿ-ಪತ್ನಿಯರ ನಡುವಿನ ಪ್ರೀತಿಯ ಮೋಹ ಕಡಿಮೆಯಾಗುತ್ತದೆ. ಅವಳ ಜವಾಬ್ದಾರಿ ಹೆಚ್ಚಾಗುವ ಜೊತೆಗೆ ಪರ ಪುರುಷರ ಮೇಲೆ ಆಕರ್ಷಣೆ ಹೆಚ್ಚಾಗುತ್ತದೆ. ಆದ್ರೆ ಮೋಸವನ್ನು ಅಂಕಿ-ಅಂಶಗಳಿಂದ ವಿವರಿಸಲು ಸಾಧ್ಯವಿಲ್ಲ.  ಹಾಗೆ ಮಹಿಳೆಯರೇ ಮೋಸ ಮಾಡುವುದ್ರಲ್ಲಿ ಮುಂದೆ ಎಂದಲ್ಲ, ಪುರುಷರು ಸಂಬಂಧ ನಿಭಾಯಿಸುವಲ್ಲಿ ತಪ್ಪು ಮಾಡ್ತಾರೆಂದು ಅಧ್ಯಯನದಲ್ಲಿ ಹೇಳಲಾಗಿದೆ.

click me!