Dating App ಮೂಲಕ 21 ದಿನದಲ್ಲಿ 15 ಪುರುಷರೊಂದಿಗೆ ಡೇಟಿಂಗ್ ಮಾಡಿದ ಲೇಡಿ..!

Published : Mar 25, 2022, 03:34 PM ISTUpdated : Mar 25, 2022, 03:35 PM IST
Dating App ಮೂಲಕ 21 ದಿನದಲ್ಲಿ 15 ಪುರುಷರೊಂದಿಗೆ ಡೇಟಿಂಗ್ ಮಾಡಿದ ಲೇಡಿ..!

ಸಾರಾಂಶ

ಕೆಲವೊಬ್ರು ಒಬ್ಬರಿಗಿಂತ ಹೆಚ್ಚು ಬಾಯ್‌ಫ್ರೆಂಡ್ (Boyfriend), ಗರ್ಲ್‌ಫ್ರೆಂಡ್‌ನ್ನು ಮೈಂಟೇನ್ ಮಾಡ್ತಾರೆ ನೋಡಿದ್ದೀರಾ. ಕಸಿನ್ ಫೋನ್ ಮಾಡಿದ್ದು, ಅಣ್ಣನ ಜತೆ ಹೋಗಿದ್ದು ಹೀಗೆ ಏನೇನೂ ಸಬೂಬು ಹೇಳಿ ಬಚಾವಾಗ್ತಾರೆ. ಹಾಗೆ ಇಲ್ಲೊಬ್ಳು ಮಹಿಳೆ (Women) ಜಸ್ಟ್‌ 21 ದಿನದಲ್ಲಿ ಬರೋಬ್ಬರಿ 15 ಹುಡುಗರ ಜತೆ ಡೇಟಿಂಗ್ (Dating) ಮಾಡಿದ್ದಾರಂತೆ.

ಹಿಂದೆಲ್ಲಾ ಹುಡುಗ-ಹುಡುಗಿ ಪರಸ್ಪರ ಮುಖ ನೋಡದೆಯೇ ಮದುವೆ (Marriage) ಆಗ್ತಾ ಇದ್ರಂತೆ. ಆದರೆ ಈಗ ಕಾಲ ಬದಲಾಗಿದೆ. ಮದುವೆಯೇ ಮೊದಲೇ ಎಲ್ಲರೂ ಊರೆಲ್ಲಾ ಸುತ್ತಿ ಪರಸ್ಪರ ಅರಿತುಕೊಂಡಿರುತ್ತಾರೆ. ಅದರಲ್ಲೂ ವಿದೇಶಿ ಸಂಸ್ಕೃತಿ ಡೇಟಿಂಗ್ ಅನ್ನೋದು ಭಾರತಕ್ಕೂ ಕಾಲಿಟ್ಟಿದೆ. ಇವತ್ತಿನ ದಿನಗಳಲ್ಲಿ ಡೇಟಿಂಗ್ (Dating) ಎಂಬುದು ತುಂಬಾ ಕಾಮನ್‌ ಆಗಿದೆ. ಜನರು ಸಾಮಾಜಿಕ ಜಾಲತಾಣಗಳು, ಆನ್​ಲೈನ್​ ವೆಬ್​ಸೈಟ್ ಅಥವಾ ಅಪ್ಲಿಕೇಶನ್‌ (Application)ಗಳ ಮೂಲಕ ಅಪರಿಚಿತ ಜನರೊಂದಿಗೆ ಸಂಪರ್ಕ ಪಡೆದುಕೊಳ್ಳುತ್ತಾರೆ. ನಂತರ ಪರಸ್ಪರ ಮಾತನಾಡಿ ಇಷ್ಟ-ಕಷ್ಟವನ್ನು ತಿಳಿದುಕೊಂಡು ಪರಸ್ಪರ ಭೇಟಿಯಾಗಲು ನಿರ್ಧರಿಸುತ್ತಾರೆ. ಹೀಗೆ ಭೇಟಿಯಾಗುವುದನ್ನೇ ಡೇಟಿಂಗ್ ಎನ್ನಲಾಗುತ್ತದೆ.

ಸದ್ಯ ಸಾಕಷ್ಟು ಡೇಟಿಂಗ್​ ಆ್ಯಪ್ (Dating App)​ಗಳು ಬಳಕೆಯಲ್ಲಿವೆ. ಜನರು ಇದರ ಮೂಲಕ ಪರಿಚಯ ಬೆಳೆಸಿಕೊಳ್ಳುತ್ತಾರೆ. ಡೇಟಿಂಗ್ ಸಂಬಂಧ ಮುಂದುವರಿಸಬೇಕೆ, ಬೇಡವೇ ಎಂಬ ಆಪ್ಶನ್ ಆಗಿರುವ ಕಾರಣ ಇದನ್ನು ಮಿಸ್ ಯೂಸ್ ಮಾಡಿಕೊಳ್ಳುವವರೇ ಹೆಚ್ಚು. ಸುಮ್ಮನೇ ಎಲ್ಲರನ್ನೂ ಡೇಟಿಂಗ್‌ಗೆ ಕರೆದು ಸುತ್ತಾಡಿ ಸುಮ್ಮನಾಗಿರುವವರು ಇದ್ದಾರೆ. ಒಂದಕ್ಕಿಂತ ಹೆಚ್ಚು ಜನರ ಮಂದಿ ಜತೆಯಾಗಿ ಡೇಟಿಂಗ್ ಮಾಡುವವರೂ ಇದ್ದಾರೆ. ಆದರೆ ಇಲ್ಲೊಬ್ಬಳು ಮಹಿಳೆ ಕೇವಲ 21 ದಿನಗಳಲ್ಲಿ 15 ಹುಡುಗರೊಂದಿಗೆ ಡೇಟಿಂಗ್ ಮಾಡಿದ್ದಾರೆ.

Dating Scams : ಸಂಗಾತಿ ಹುಡುಕುವ ಆತುರದಲ್ಲಿ ಯಡವಟ್ಟು ಮಾಡ್ಕೊಳ್ಬೇಡಿ

ಆಸ್ಟ್ರೇಲಿಯಾದ (Australia) ಸಿಡ್ನಿ ನಿವಾಸಿ ಹೆಲೆನ್ ಚಿಕ್ ಎಂಬವರು ಲೇಖಕಿ ಮತ್ತು ಡೇಟಿಂಗ್ ತಜ್ಞರಾಗಿದ್ದು, ಅವರು ಡೇಟಿಂಗ್‌ಗೆ ಸಂಬಂಧಿಸಿದ ಪುಸ್ತಕವನ್ನೂ ಬರೆದಿದ್ದಾರೆ. ಅದರಲ್ಲಿ ಅವರು ತಮ್ಮ ಸ್ವಂತ ಅನುಭವಗಳ ಆಧಾರದ ಮೇಲೆ ಹೇಗೆ ಡೇಟಿಂಗ್ ಮಾಡಬೇಕು ಎಂದು ಹೇಳಿದ್ದಾರೆ. ಇದರಲ್ಲಿ ಹೆಲೆನ್ ತಿಳಿಸಿರುವ ಆಶ್ಚರ್ಯಕರ ವಿಷಯವೆಂದರೆ ಅವರು ಕೇವಲ 21 ದಿನಗಳಲ್ಲಿ 15 ಹುಡುಗರೊಂದಿಗೆ ಡೇಟಿಂಗ್ ಮಾಡಿರುವ ಬಗ್ಗೆಯಾಗಿದೆ.

ಇತ್ತೀಚೆಗೆ ಹೆಲೆನ್ ಕಿಂಡಾ ಸೋರ್ಟಾ ಡೇಟಿಂಗ್ ಎಂಬ ಪಾಡ್‌ಕ್ಯಾಸ್ಟ್‌ನಲ್ಲಿ ಅತಿಥಿಯಾಗಿ ಭಾಗವಹಿಸಿದರು. ಅದರಲ್ಲಿ ಅವರು ತಮ್ಮ ಡೇಟಿಂಗ್ ರಹಸ್ಯಗಳನ್ನು ಹೇಳಿಕೊಂಡರು. ನ್ಯೂಯಾರ್ಕ್​ಗೆ ಭೇಟಿ ನೀಡಿದ್ದಾಗ 21 ದಿನಗಳಲ್ಲಿ 15 ಪುರುಷರೊಂದಿಗೆ ಡೇಟಿಂಗ್ ಮಾಡಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.  ಡೇಟಿಂಗ್‌ ಅಪ್ಲಿಕೇಷನ್​ ಮೂಲಕ ವಂಚನೆಗೆ ಸಿಲುಕುವ ಸಾಧ್ಯತೆಗಳ ಬಗ್ಗೆಯೂ ಹೆಲೆನ್ ಹೇಳಿದರು. ಮಾತ್ರವಲ್ಲ. ಡೇಟಿಂಗ್ ಅಪ್ಲಿಕೇಶನ್‌ಗಳ ಮೂಲಕ ಜನರಿಗೆ ಡೇಟಿಂಗ್ ಮಾಡುವ ಸರಿಯಾದ ಮಾರ್ಗವನ್ನು ತಿಳಿಸಿಕೊಟ್ಟರು.

Dating Appನಲ್ಲಿ ಮ್ಯಾಚ್ ಆಗ್ತಿದೆ ಭಾವನ ಪ್ರೊಫೈಲ್, ಅಕ್ಕನಿಗೆ ಹೇಳೋದ್ ಹೇಗೆ ಅನ್ನೋದಿವಳ ಪ್ರಾಬ್ಲಂ!

ಟಿಂಡರ್‌ನ್ನು ಸರಿಯಾಗಿ ಬಳಸುವ ರೀತಿಯಲ್ಲಿ ಹೆಲೆನ್ ತಿಳಿಸಿದ್ದಾರೆ. ನೀವು ಯಾವುದೇ ಪ್ರದೇಶದಲ್ಲಿ ವಾಸಿಸುತ್ತಿದ್ದರೂ, ಅಪ್ಲಿಕೇಶನ್‌ನಲ್ಲಿ ಸರಿಯಾದ ಸೆಟ್ಟಿಂಗ್‌ನ್ನು ಬಳಸುವುದರಿಂದ ಸರಿಯಾದ ವ್ಯಕ್ತಿಯ ಜತೆ ಡೇಟ್ ಮಾಡಬಹುದು ಎಂದು ಅವರು ತಿಳಿಸಿದ್ದಾರೆ. ಹೆಲೆನ್ ಚಿಕ್ ಅವರು ಎರಡು ಬಾರಿ ವಿಚ್ಛೇದನ ಪಡೆದಿದ್ದಾರೆ. ಆದ್ದರಿಂದ ಅವರು ಡೇಟಿಂಗ್ ಅನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಅವರು ಟಿಂಡರ್ ಮೂಲಕ ಮಾತ್ರ ಡೇಟಿಂಗ್ ಮಾಡುತ್ತಾರೆ ಮತ್ತು ಕೆಲವು ವಿಷಯಗಳನ್ನು ನೋಡಿಕೊಳ್ಳುವ ಮೂಲಕ ಇತರ ಜನರು ಟಿಂಡರ್‌ನ ಸಂಪೂರ್ಣ ಲಾಭವನ್ನು ಪಡೆಯಬಹುದು ಎಂದು ಹೇಳಿದ್ದಾರೆ.

ಮಹಿಳೆಯರು ಟಿಂಡರ್ ಮೂಲಕ ಡೇಟಿಂಗ್ ಮಾಡುವ ವಿಶೇಷ ವಿಧಾನಗಳನ್ನು ಹೆಲೆನ್ ಹೇಳಿಕೊಟ್ಟರು. ಯಾರಾದರೂ ಬೇರೆ ಪ್ರದೇಶಕ್ಕೆ ಹೋಗುವಾಗ ಮತ್ತು ಅಲ್ಲಿ ಡೇಟಿಂಗ್ ಮಾಡಲು ಆಲೋಚಿಸಿದಾಗ, ಅಲ್ಲಿಗೆ ಹೋಗುವ ಕೆಲವು ದಿನಗಳ ಮೊದಲು ಸೆಟ್ಟಿಂಗ್ ಅನ್ನು ಬದಲಾಯಿಸುವುದು ಅವಶ್ಯಕ ಎಂದು ಹೆಲೆನ್ ಹೇಳಿದ್ದಾರೆ.

ಜನರು ತಮ್ಮ ಸ್ಥಳವನ್ನು ಬದಲಾಯಿಸುವುದು ಅತ್ಯಂತ ಮುಖ್ಯವಾದ ವಿಷಯ. ಇದರೊಂದಿಗೆ, ಆ ನಗರಕ್ಕೆ ಹೋಗುವ ಕೆಲವು ದಿನಗಳ ಮೊದಲು, ಅವರು ಅಲ್ಲಿನ ಜನರನ್ನು ಹುಡುಕಲು ಆರಂಭಿಸಬೇಕು. ಮತ್ತು ಅವರು ತಮ್ಮ ಇಷ್ಟ-ಅನಿಷ್ಟಗಳ ಆಧಾರದ ಮೇಲೆ ಮುಂಚಿತವಾಗಿ ಜನರನ್ನು ಆಯ್ಕೆ ಮಾಡಬಹುದು. ಇದರ ನಂತರ ಅಲ್ಲಿಗೆ ತಲುಪಿದಾಗ, ಅದೇ ಡೇಟಿಂಗ್ ಮಾಡಬಹುದು ಎಂದು ಹೆಲೆನ್ ತಿಳಿಸುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುರುಷರೇ ನೀವು ಈ 3 ದಿನಾಂಕಗಳಲ್ಲಿ ಹುಟ್ಟಿದ್ದೀರಾ? ಇದು ಖ್ಯಾತಿ ಮತ್ತು ಯಶಸ್ಸನ್ನು ತರುವ ಚಿಹ್ನೆ
ಈ ತಿಂಗಳಲ್ಲಿ ಹುಟ್ಟಿದ ಹುಡುಗಿಗೆ ಈ ರೀತಿಯ ಗಂಡ ಸಿಗುತ್ತಾನೆ