ಅಯ್ಯಯ್ಯೋ..ಜಗಳದಲ್ಲಿ ಗಂಡನ ನಾಲಗೆ ಕಚ್ಚಿದ ಹೆಂಡ್ತಿ, ತುಂಡಾಗಿ ಬಿತ್ತು ನಾಲಗೆ!

By Vinutha Perla  |  First Published Jan 28, 2023, 3:29 PM IST

ಗಂಡ-ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಾರೆ. ಆದ್ರೆ ಈ ವಿಷ್ಯ ಯಾವಾಗ್ಲೂ ನಿಜವಾಗೋದೆ ಇಲ್ಲ. ಕೆಲವೊಮ್ಮೆ ಇಬ್ಬರ ನಡುವಿನ ಜಗಳ ತಿಂಗಳಾನುಗಟ್ಟಲೆ ಮುಗಿಯೋದೆ ಇಲ್ಲ. ಕೆಲವೊಮ್ಮೆ ಸಣ್ಣದಾಗಿ ಆರಂಭವಾದ ಜಗಳ ದೊಡ್ಡ ವಾಗ್ವಾದಕ್ಕೆ ಕಾರಣವಾಗೋದು ಇದೆ. ಹಾಗೆಯೇ ಇಲ್ಲೊಂದೆಡೆ ಗಂಡ-ಹೆಂಡತಿ ಜಗಳದಲ್ಲಿ, ಗಂಡನ ನಾಲಗೆಯೇ ತುಂಡಾಗಿ ಹೋಗಿದೆ.


ಲಕ್ನೋ: ದಾಂಪತ್ಯ ಅಂದಾಗ ಸರಸದ ಜೊತೆಗೆ ವಿರಸವೂ ಇರುತ್ತದೆ. ಇಬ್ಬರ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಜಗಳವಾಗುತ್ತಲೇ ಇರುತ್ತದೆ. ಕೆಲವೊಮ್ಮೆ ಆಸ್ತಿ, ಅಂತಸ್ತು ಎಂಬ ದೊಡ್ಡ ವಿಚಾರಕ್ಕೂ ಜಗಳ ನಡೆಯುತ್ತದೆ. ಕೆಲವೊಮ್ಮೆ ಮಾತಿನಲ್ಲಿ ಬೈದಾಡಿದರೆ, ಇನ್ನು ಕೆಲವೊಮ್ಮೆ ಕೈ ಕೈ ಮಿಲಾಯಿಸುತ್ತಾರೆ. ಇನ್ನೂ ಹಲವು ಬಾರಿ ವಸ್ತುಗಳನ್ನು ಎಸೆದುಕೊಂಡು ಜಗಳವಾಡೋದು ಉಂಟು. ಆದರೆ ಇದೆಲ್ಲವನ್ನೂ ಮೀರಿ ಇಲ್ಲೊಂದು ದಂಪತಿ ಜಗಳವಾಡುತ್ತಾ ನಾಲಗೆಯನ್ನೇ ಕತ್ತರಿಸಿಕೊಂಡಿದ್ದಾರೆ.

ಜಗಳದ ಮಧ್ಯೆ ಗಂಡನ ನಾಲಗೆಯನ್ನೇ ಕಚ್ಚಿ ತುಂಡರಿಸಿದ ಹೆಂಡತಿ
ಗಂಡ-ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಾರೆ. ಆದ್ರೆ ಈ ವಿಷ್ಯ ಯಾವಾಗ್ಲೂ ನಿಜವಾಗೋದೆ ಇಲ್ಲ. ಕೆಲವೊಮ್ಮೆ ಇಬ್ಬರ ನಡುವಿನ ಜಗಳ ತಿಂಗಳಾನುಗಟ್ಟಲೆ ಮುಗಿಯೋದೆ ಇಲ್ಲ. ಕೆಲವೊಮ್ಮೆ ಸಣ್ಣದಾಗಿ ಆರಂಭವಾದ ಜಗಳ ದೊಡ್ಡ ವಾಗ್ವಾದಕ್ಕೆ ಕಾರಣವಾಗೋದು ಇದೆ. ಹಾಗೆಯೇ ಇಲ್ಲೊಂದೆಡೆ ಗಂಡ-ಹೆಂಡತಿ (Husband-wife) ಜಗಳದಲ್ಲಿ, ಗಂಡನ ನಾಲಗೆಯೇ ತುಂಡಾಗಿ ಹೋಗಿದೆ. ಉತ್ತರ ಪ್ರದೇಶದಲ್ಲಿ ಈ ವಿಲಕ್ಷಣ ಘಟನೆ ಸಂಭವಿಸಿದೆ. ಹೆಂಡತಿಯ ತವರಿನಲ್ಲಿದ್ದ ಮಕ್ಕಳನ್ನು ನೋಡಲು ಹೋದಾಗ ಗಂಡ ಹೆಂಡತಿಯ ಮಧ್ಯೆ ಜಗಳ (Quarrel) ಏರ್ಪಟ್ಟಿದೆ. ಕೊನೆಯಲ್ಲಿ ಹೆಂಡತಿ ಗಂಡನ ನಾಲಗೆಯನ್ನೇ (Tongue) ಕಚ್ಚಿ ತುಂಡರಿಸಿದ್ದಾಳೆ. 

Tap to resize

Latest Videos

ಮದುವೆ ಮಂಟಪದಲ್ಲೇ ವಧುವಿನ ಕೆನ್ನೆ ಹಿಂಡಿ ಚುಡಾಯಿಸಿದ ಸ್ನೇಹಿತ, ವರ ಮಾಡಿದ್ದೇನು ನೋಡಿ!

ಪತ್ನಿಯೊಂದಿಗೆ ಜಗಳವಾಡಿದ ವ್ಯಕ್ತಿ ಅಕ್ಷರಶಃ ನಾಲಿಗೆ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋದ ಠಾಕೂರ್‌ಗಂಜ್ ಪ್ರದೇಶದಲ್ಲಿ ನಡೆದಿದೆ. ಶುಕ್ರವಾರ, ಸಲ್ಮಾ ಎಂಬ ಮಹಿಳೆ ತನ್ನ ಮಕ್ಕಳೊಂದಿಗೆ ತನ್ನ ಮನೆಗೆ ಹಿಂತಿರುಗುವಂತೆ ಮನವೊಲಿಸುವಾಗ ತನ್ನ ಗಂಡನ ನಾಲಿಗೆಯನ್ನು ಕಚ್ಚಿದ್ದಾಳೆ.

ನೊಂದ ಪತಿ ಮುನ್ನಾ. ಅವರು ಮತ್ತು ಅವರ ಪತ್ನಿ ಕಳೆದ ಕೆಲವು ವರ್ಷಗಳಿಂದ ವೈವಾಹಿಕ ಜಗಳಗಳನ್ನು ಹೊಂದಿದ್ದರು. ಅವರ ಪತ್ನಿ ಸಲ್ಮಾ ಅವರನ್ನು ತೊರೆದು ಠಾಕೂರ್‌ಗಂಜ್‌ನಲ್ಲಿರುವ ಪೋಷಕರ ಮನೆಯಲ್ಲಿ ನೆಲೆಸಿದ್ದರು. ಮುನ್ನಾ ಶುಕ್ರವಾರ ಠಾಕೂರ್‌ಗಂಜ್ ತಲುಪಿದ್ದರು. ಅವಳನ್ನು ತನ್ನ ಮನೆಗೆ ಹಿಂದಿರುಗಿಸಲು ಅವನು ತುಂಬಾ ಪ್ರಯತ್ನಿಸಿದನು. ಆದರೆ ಅವಳು ಅವನ ಪ್ರಸ್ತಾಪವನ್ನು ಒಪ್ಪಲಿಲ್ಲ ಮತ್ತು ಹಿಂತಿರುಗಲು ನಿರಾಕರಿಸಿದಳು.

ಜಗಳ ಮಾಡ್ಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಅಜ್ಜ-ಅಜ್ಜಿ, ಪೊಲೀಸರು ಸಂಧಾನ ಮಾಡಿದ್ದು ಹೀಗೆ!

ಗಂಡ ಆಸ್ಪತ್ರೆಗೆ ದಾಖಲು, ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು
ದಂಪತಿಗಳ ನಡುವಿನ ತೀವ್ರ ವಾಗ್ವಾದದ ಸಮಯದಲ್ಲಿ, ಸಲ್ಮಾ ಅವನ ನಾಲಿಗೆಯನ್ನು ಕತ್ತರಿಸಿ ತನ್ನ ಹಲ್ಲುಗಳಿಂದ ತುಂಬಾ ಬಲವಾಗಿ ಕಚ್ಚಿದಳು ಮತ್ತು ನಾಲಿಗೆ ತುಂಡಾಗಿ ನೆಲಕ್ಕೆ ಬಿತ್ತು ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡ ಮುನ್ನಾ ಕೂಡ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ (Hospital) ಪೊಲೀಸರು ಚಿಕಿತ್ಸೆಗಾಗಿ ರವಾನಿಸಿದ್ದಾರೆ. ಸಲ್ಮಾ ಈಗ ಪೊಲೀಸರ ವಶದಲ್ಲಿದ್ದಾಳೆ.

ಪಶ್ಚಿಮ ವಿಭಾಗದ ಎಡಿಸಿಪಿ ಚಿರಂಜೀವ್ ನಾಥ್ ಸಿಂಘಾ ಮಾತನಾಡಿ, 'ಈ ದಂಪತಿಯ ಮಧ್ಯೆ ಹಲವಾರು ವರ್ಷಗಳಿಂದ ಜಗಳ ನಡೆಯುತ್ತ ಬಂದಿವೆ. ಹೆಂಡತಿ ತನ್ನ ಗಂಡನಿಂದ ದೂರವಾಗಿ ತನ್ನ ತಂದೆತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಳು. ಶುಕ್ರವಾರ ಗಂಡ ತನ್ನ ಮಕ್ಕಳನ್ನು ಭೇಟಿಯಾಗಲು ಇಲ್ಲಿ ಬಂದಾಗ ಈ ದುರ್ಘಟನೆ ನಡೆದಿದೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪ್ರಕರಣದ ಹಿನ್ನೆಲೆಯಲ್ಲಿ ತನಿಖೆಯನ್ನು ಆರಂಭಿಸಲಾಗಿದೆ. ಆರೋಪಿ ಸಲ್ಮಾಳನ್ನು ಬಂಧಿಸಲಾಗಿದೆ' ಎಂದಿದ್ದಾರೆ.

41 ವರ್ಷಗಳಿಂದ ಜಗಳವಾಡುತ್ತಲೇ ಇದ್ದಾರೆ ದಂಪತಿ.. ಪರಸ್ಪರ 60 ಪ್ರಕರಣ ದಾಖಲು !

click me!