ಮಗುವನ್ನು ಕಸಿಯಲೆತ್ನಿಸಿದ ಬಾಲಕಿ: ತಾಯಿ ಕೋತಿಯ ರಿಯಾಕ್ಷನ್ ನೋಡಿ

Published : Jul 07, 2022, 12:16 PM IST
ಮಗುವನ್ನು ಕಸಿಯಲೆತ್ನಿಸಿದ ಬಾಲಕಿ: ತಾಯಿ ಕೋತಿಯ ರಿಯಾಕ್ಷನ್ ನೋಡಿ

ಸಾರಾಂಶ

ಕೋತಿಯೊಂದಿಗೆ ಮಗುವೊಂದು ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್‌ ಆಗಿದೆ. ಪ್ರಾಣಿಗಳಾದರೂ ಮನುಷ್ಯರಾದರೂ ತಾಯಿ ಎಂದಿಗೂ ತಾಯಿಯೇ ಎಂಬುದನ್ನು ಈ ವಿಡಿಯೋ ಪುನರುಚ್ಚರಿಸುವಂತಿದೆ.

ಕೋತಿಯೊಂದಿಗೆ ಮಗುವೊಂದು ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್‌ ಆಗಿದೆ. ಪ್ರಾಣಿಗಳಾದರೂ ಮನುಷ್ಯರಾದರೂ ತಾಯಿ ಎಂದಿಗೂ ತಾಯಿಯೇ ಎಂಬುದನ್ನು ಈ ವಿಡಿಯೋ ಪುನರುಚ್ಚರಿಸುವಂತಿದೆ. ವಿಡಿಯೋದಲ್ಲಿ ಕಾಣಿಸುವಂತೆ ಪುಟ್ಟ ಬಾಲಕಿಯೊಬ್ಬಳು ಕೋತಿಗಳ ಗುಂಪಿಗೆ ಆಹಾರ ಹಾಕುತ್ತಾಳೆ. ಜೊತೆಗೆ ತನ್ನ ಮರಿಯನ್ನು ಎತ್ತಿಕೊಂಡಿರುವ ತಾಯಿ ಕೋತಿಯ ಕೈಯಿಂದ ಕೋತಿ ಮರಿಯನ್ನು ಸೆಳೆದುಕೊಳ್ಳಲು ಪ್ರಯತ್ನಿಸುತ್ತಾಳೆ. ಆದರೆ ತಾಯಿ ಮರಿಯನ್ನು ಅಕೆಗೆ ನೀಡಲು ಇಷ್ಟಪಡುವುದಿಲ್ಲ. 

ಆದರೆ ಇತ್ತ ಅಪರೂಪಕ್ಕೆ ಸಿಗುವ ಅಹಾರವನ್ನು ಕಳೆದುಕೊಳ್ಳಲು ಕೋತಿಗೂ ಇಷ್ಟವಿಲ್ಲ. ಹೀಗಾಗಿ ಅನಿವಾರ್ಯವಾಗಿ ಸ್ವಲ್ಪ ಹೊತ್ತು ಬಾಲಕಿಯ ಕೈಗೆ ತನ್ನ ಮರಿಯನ್ನು ನೀಡುವ ಕೋತಿ ಸ್ವಲ್ಪ ಹೊತ್ತಿನಲ್ಲೇ ತನ್ನ ಮಗುವನ್ನು ಕೊಡು ಎಂದು ಕೇಳುತ್ತದೆ. ಆದರೆ ಬಾಲಕಿ ಕೋತಿ ಮರಿಯನ್ನು ಎದೆಗೊತ್ತಿಕೊಂಡು ಮುದ್ದಾಡುತ್ತಿದ್ದು, ಸ್ವಲ್ಪ ಕಾಲ ತಾಯಿ ಕೋತಿಗೆ ಆಟವಾಡಿಸುತ್ತಾಳೆ.  ಮಗುವಿಗಾಗಿ ಬಾಲಕಿ ಹಿಂದೆ ಮುಂದೆ ಸುತ್ತಾಡುವ ಕೋತಿ ಕೆಲ ಕಾಲ ನೋಡಿ ಬಾಲಕಿಯ ಹೆಗಲಿಗೆ ನಿಧಾನವಾಗಿ ತನ್ನ ಎರಡು ಕೈಗಳನ್ನು ಇಟ್ಟು ತನ್ನ ಮರಿಯನ್ನು ಬಾಲಕಿ ಕೈಯಿಂದ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾಳೆ. 

ತಾಯಿಯರಿಬ್ಬರ ಅಪೂರ್ವ ಸಮ್ಮಿಲನ... ಮನುಷ್ಯರಲ್ಲೂ ಇಲ್ಲದ ಅನುಬಂಧವಿದು: ವಿಡಿಯೋ

ಕಲ್ಚರ್ ಆಫ್ ರಾಜಸ್ತಾನ ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವಿಡಿಯೋ ಪೋಸ್ಟ್ ಆಗಿದೆ.   ಐದು ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಆದರೆ ಅನೇಕರು ಈ ವಿಡಿಯೋಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಮ್ಮಲ್ಲಿಗೆ ನಾನು ಬಂದು ಒತ್ತಾಯಪೂರ್ವಕವಾಗಿ ನಿಮ್ಮ ಮಗುವನ್ನು ನಿಮ್ಮಿಂದ ಕಸಿದುಕೊಂಡರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಒಬ್ಬರು ಬಳಕೆದಾರರು ಪ್ರಶ್ನಿಸಿದ್ದಾರೆ. ಇದು ಯಾವುದೇ ಕಾರಣಕ್ಕೂ ಸುಂದರವಾದುದಲ್ಲ. ಇದು ನನ್ನ ಪಾಲಿಗೆ ಭಯಾನಕವಾಗಿದೆ. ಪುಟ್ಟ ಬಾಲಕಿ ಕೋತಿಯ ಮರಿಯನ್ನು ಸಂಪೂರ್ಣವಾಗಿ ಕಸಿದುಕೊಳ್ಳಲು ಯತ್ನಿಸುತ್ತಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ. ಕೋತಿಗಳಿಗೆ ಆಹಾರ ನೀಡುವುದು ಒಳ್ಳೆಯದೇ ಆದರೆ ಅವುಗಳ ಮರಿಗಳನ್ನು ಕಸಿದುಕೊಳ್ಳಲು ಯತ್ನಿಸಬಾರದು ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ. 

 

ಕೆಲ ದಿನಗಳ ಹಿಂದೆ ಕಲಬುರಗಿ ಜಿಲ್ಲೆಯ ಮಾಲಗತ್ತಿ ಗ್ರಾಮದಲ್ಲಿ ಮಹಿಳೆಯ ಶವದ ಮುಂದೆ ಮಂಗವೊಂದು ಸುಮಾರು 20 ಗಂಟೆಗಳ ಕಾಲ ಕದಲದೇ ಕುಳಿತುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿರುವ ಘಟನೆ ನಡೆದಿದೆ. ಜನರ ಗದ್ದಲದ ನಡುವೆ ಕೋತಿಗಳು ಇರೋದಿಲ್ಲ. ಆದರೆ, ಈ ಮಂಗ ಮಾತ್ರ ಶವದ ಮುಂದೆ ಕಣ್ಣೀರು ಹಾಕುತ್ತ ಕುಳಿತವರ ಮಧ್ಯೆ ತಾನೂ ಸಹ ಕುಳಿತು ಶೋಕದಲ್ಲಿ ಮುಳುಗುವ ಮೂಲಕ ವಿಚಿತ್ರ ವರ್ತನೆ ತೋರಿತ್ತು. ಮಹಿಳೆಯ ಶವದ ಪಕ್ಕದಲ್ಲಿ ಕುಳಿತ ಕೋತಿಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿ ಎಲ್ಲರೂ ಬೆರಗಾಗುವಂತೆ ಮಾಡಿತ್ತು. 

ನಿನ್ನೆ ಮಧ್ಯಾಹ್ನ ಮಾಲಗತ್ತಿ ಗ್ರಾಮದ ಶಾಮಲಾ ಎಂಬುವರು ಕಾಯಿಲೆಯಿಂದ ಮೃತಪಟ್ಟಿದ್ದರು. ಮನೆಯಲ್ಲಿ ಶಾಮಲಾ ಅವರ ಶವವಿಟ್ಟು ಸಂಬಂಧಿಕರು ಅಳುತ್ತಾ ಕುಳಿತಿದ್ದರು. ಮಹಿಳೆ ಮೃತಪಟ್ಟಒಂದು ಗಂಟೆಗೆ ಪ್ರತ್ಯಕ್ಷವಾದ ಕೋತಿ ಸ್ಥಳ ಬಿಟ್ಟು ಕದಲದೇ ಜನರ ಮಧ್ಯೆ ತಾನೂ ಕೂಡ ಕುಳಿತಿತ್ತು. ಕೋತಿ ಓಡಿಸೋದಕ್ಕೆ ಎಷ್ಟೇ ಪ್ರಯತ್ನಪಟ್ಟರೂ ಸಹ ಅದು ಆ ಜಾಗದಿಂದ ಕದಲೇ ಇಲ್ಲ.

ಗಾಯಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದ ತಾಯಿ ಕೋತಿ: ವಿಡಿಯೋ ವೈರಲ್
 

ಅಂತ್ಯ ಸಂಸ್ಕಾರದ ವಿಧಿ ವಿಧಾನಕ್ಕೂ ಅಡ್ಡಿಪಡಿಸಿದ ಕೋತಿ, ಶವಕ್ಕೆ ಮುಂದಿನ ಕಾರ್ಯ ನಡೆಸಲು ಬಿಡಲಿಲ್ಲ. ಇದರಿಂದ ಭಯಭೀತರಾದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಕೋತಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಕರೆದೊಯ್ದಿದ್ದಾರೆ. ಇದೇ ಮೊದಲ ಬಾರಿ ಕೋತಿ ಕಾಣಿಸಿಕೊಂಡು ಈ ರೀತಿ ವಿಚಿತ್ರ ವರ್ತನೆ ತೋರಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿತ್ತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು