Feng Shui Tips: ಪತ್ನಿ ಜತೆ ಜಗಳ ಬೇಡವಾದ್ರೆ ಈ ಫೆಂಗ್‌ ಶುಯಿ ಟಿಪ್ಸ್‌ ಅನುಸರಿಸಿ

By Suvarna News  |  First Published Jul 6, 2022, 5:29 PM IST

ಮನೆಯಲ್ಲಿ ಪ್ರೀತಿ ತುಂಬಿರಬೇಕು, ಪತಿ-ಪತ್ನಿಯರಲ್ಲಿ ಸೌಹಾರ್ದ ಸಂಬಂಧ ನೆಲೆಯಾಗಬೇಕು ಎನ್ನುವುದು ಎಲ್ಲರ ಆಶಯ. ಎಷ್ಟೋ ಬಾರಿ ಅದು ಸಾಧ್ಯವಾಗುವುದಿಲ್ಲ. ಆದರೆ, ಈ ಫೆಂಗ್‌ ಶುಯಿ ಟಿಪ್ಸ್‌ ಅನುಸರಿಸಿ ನೋಡಿ. ದಾಂಪತ್ಯದಲ್ಲಿ ಪ್ರೀತಿ-ರೋಮ್ಯಾನ್ಸ್‌ ಹೆಚ್ಚುತ್ತದೆ.  


ಪತಿ-ಪತ್ನಿಯರಲ್ಲಿ (Couple) ಜಗಳ, ವಾಗ್ವಾದ, ಬಿರುಸಿನ ಚರ್ಚೆ, ಕೆಲವೊಮ್ಮೆ ತಣ್ಣಗಿನ ಯುದ್ಧ, ಕೋಪ (Angry), ಮುನಿಸು, ಮಾತು ಬಿಡುವ ಆಟ ಎಲ್ಲವೂ ಇದ್ದಿದ್ದೇ. ಆದರೆ, ಅದೆಲ್ಲ ಮುಗಿದ ಮೇಲಾದರೂ ಮತ್ತೆ ಒಂದಾಗಬೇಕು, ಒಂದಾಗುತ್ತಾರೆ. ಆದರೆ, ಅಂಥ ಜಗಳಗಳು (Quarrel) ದಿನಗಳ ಕಾಲ ನಡೆದ ಬಳಿಕವೂ ಮನಸ್ಸುಗಳು ಕೂಡದೆ ದೂರವೇ ಇದ್ದರೆ ದುಃಖವಾಗುತ್ತದೆ. ಪರಸ್ಪರರ ಮೇಲೆ ಅವಿಶ್ವಾಸ ಹೆಚ್ಚುತ್ತದೆ. ಸಂಬಂಧ (Relationship) ಕೊನೆಯಾಗುವ ಆತಂಕವೂ ಕಾಡುತ್ತದೆ. “ಇವರ ಸಹವಾಸವೇ ಬೇಡ, ದೂರ ಹೋಗೋಣʼ ಎನ್ನುವಷ್ಟರ ಮಟ್ಟಿಗೆ ಬೇಸರವಾಗುತ್ತದೆ. ಸಾಮಾನ್ಯವಾಗಿ ಇಂತಹ ಸನ್ನಿವೇಶ ಎದುರಾಗದೆ ಇರಲು ನಾವೆಲ್ಲರೂ ಎಚ್ಚರ ವಹಿಸುತ್ತೇವೆ. ಆದರೂ ಪದೇ ಪದೆ ಇಂತಹ ಸನ್ನಿವೇಶಗಳು ಎದುರಾಗುತ್ತಿದ್ದರೆ ಅದಕ್ಕೆ ಬೇರೆ ಇನ್ಯಾವುದೋ ನಾವು ಅರಿಯಲು ಸಾಧ್ಯವಾಗದೆ ಇರುವಂತಹ ಕಾರಣಗಳೂ ಇರಬಹುದು. ಅಂತಹ ಚಿಕ್ಕಪುಟ್ಟ ಕೊರತೆಗಳ ನಿವಾರಣೆಗೆ ಫೆಂಗ್‌ ಶುಯಿ (Feng Shui) ಹಲವಾರು ಪರಿಹಾರಗಳನ್ನು ಹೇಳುತ್ತದೆ. 

ಫೆಂಗ್‌ ಶುಯಿ ಎಂದರೆ ಚೀನಾದ (China) ಸಾಂಪ್ರದಾಯಿಕ ವಾಸ್ತು ಶಾಸ್ತ್ರ. ಮನೆಯಲ್ಲಿ ಪ್ರೀತಿ (Love), ಸೌಹಾರ್ದದ (Harmony) ವಾತಾವರಣ ಇರಬೇಕಾದರೆ ಕೆಲವು ಅಂಶಗಳು ಮನೆಯಲ್ಲಿರಬೇಕು ಎನ್ನುತ್ತದೆ ಫೆಂಗ್‌ ಶುಯಿ. ಅವು ಇರಬೇಕಾದಂತೆ ನೋಡಿಕೊಳ್ಳುವುದು ನಮ್ಮದೇ ಜವಾಬ್ದಾರಿ. ಮನೆಯಲ್ಲಿ ಕೆಲವು ಫೆಂಗ್‌ ಶುಯಿ ಟಿಪ್ಸ್‌ ಅಳವಡಿಕೆ ಮಾಡಿಕೊಂಡರೆ ದಂಪತಿ ನಡುವೆ ಪ್ರೀತಿ ಹೆಚ್ಚುತ್ತದೆ. ಸಂಬಂಧದಲ್ಲಿ ರೋಮ್ಯಾನ್ಸ್‌ ಹೆಚ್ಚುತ್ತದೆ. ಪರಸ್ಪರ ಪೂರಕವಾಗಿ ನಡೆಯಲು ಸಾಧ್ಯವಾಗುತ್ತದೆ. 

Tap to resize

Latest Videos

undefined

•    ಬೆಡ್‌ ರೂಮಿನ (Bedroom) ಕಿಟಕಿ (Window), ಗೋಡೆಯ (Wall) ಬಣ್ಣಗಳು ಕಾಂಟ್ರಾಸ್ಟ್‌ (Contrast) ಆಗಿರಲಿ
ಪ್ರೀತಿಯ ಹರಿವಿಗೆ ಬಣ್ಣಗಳೂ ಕೊಡುಗೆ ನೀಡುತ್ತವೆ. ಹೀಗಾಗಿ, ಮಲಗುವ ಕೋಣೆಯಲ್ಲಿ ಕಿಟಕಿ ಮತ್ತು ಗೋಡೆಯ ಬಣ್ಣಗಳು ವಿರುದ್ಧವಾಗಿರುವಂತೆ ನೋಡಿಕೊಳ್ಳಿ. ಗುಲಾಬಿ (Pink) ಬಣ್ಣ, ಕೆಂಪು (Red), ಕಡುಗೆಂಪು (Crimson) ಬಣ್ಣಗಳು ಇರುವಂತೆ ನೋಡಿಕೊಳ್ಳಬೇಕು. ಇವು ಪ್ರೀತಿ, ರೋಮ್ಯಾನ್ಸ್‌ (Romance) ಸಂಕೇತವಾಗಿದ್ದು, ನಿಮ್ಮ ಬದುಕಲ್ಲೂ ಬದಲಾವಣೆ ತರುತ್ತವೆ. 

ಇದನ್ನೂ ಓದಿ: ಮನೆಯ ಸುಖ ಶಾಂತಿಗಿರಲಿ ಶಂಖಪುಷ್ಪ, ಹೂವಲ್ಲೇನಿದೆ ವಿಶೇಷ!

•    ಪರಿಮಳ ಚಿಕಿತ್ಸೆಯ (Aromatherapy) ಪ್ರಯೋಜನ ಪಡೆಯಿರಿ
ಮನೆಯಲ್ಲಿ ಯಾವತ್ತೂ ಪರಿಮಳ ತುಂಬಿರಲಿ. ಅದಕ್ಕಾಗಿ ಸ್ಪ್ರೇ ಮಾಡುವುದಲ್ಲ. ಮನೆ ಎಷ್ಟೇ ಚಿಕ್ಕದಾಗಿದ್ದರೂ ಪರವಾಗಿಲ್ಲ, ಪುಟ್ಟದೊಂದು ಬೌಲ್‌ ನಲ್ಲಿ ನೀರು ತುಂಬಿ ಅದರಲ್ಲಿ ಮಲ್ಲಿಗೆ (Jasmine) ಅಥವಾ ಸಂಪಿಗೆಯಂತಹ ಪರಿಮಳದ ಹೂವುಗಳನ್ನು (Flower) ಹಾಕಿಡಿ. ಅದರಿಂದ ಮನೆಯೆಲ್ಲ ಖುಷಿಯಾದ ಪರಿಮಳ ಹರಡುತ್ತದೆ. ಇದನ್ನು ಅರೋಮಾಥೆರಪಿ ಎನ್ನಲಾಗುತ್ತದೆ. ಮನೆಯಲ್ಲಿ ಸಂತಸದ ವಾತಾವರಣ ತುಂಬಲು, ಮನಸ್ಸಿನಲ್ಲಿ ಶಾಂತಿ (Peace) ನೆಲೆಸಲು, ಪ್ರೀತಿ ಮೂಡಲು ಇದು ಸಹಕಾರಿ. ಅಲ್ಲದೆ, ದಂಪತಿಯಲ್ಲಿ ಪರಸ್ಪರ ರೋಮ್ಯಾಂಟಿಕ್‌ ಭಾವನೆ ಹೆಚ್ಚಲು ಕೂಡ ಅರೋಮಾಥೆರಪಿ ಕಾರಣವಾಗುತ್ತದೆ.

•    ಮಲಗುವ ಕೋಣೆಯಲ್ಲಿ ಟಿವಿ, ಮೊಬೈಲ್‌ (Mobile) ಬೇಡ
ಟಿವಿ ಹಾಗೂ ಮೊಬೈಲ್‌ ನಿಂದ ನಿದ್ರೆ ಮತ್ತು ರೋಮ್ಯಾನ್ಸ್‌ ಎರಡೂ ದೂರವಾಗುತ್ತವೆ. ಮಲಗುವ ಮುನ್ನ ಟಿವಿ, ಮೊಬೈಲ್‌ ನೋಡುವ ಅಭ್ಯಾಸ ನಿಮಗಿದ್ದರೆ ಅದನ್ನು ಮಲಗುವ ಕೋಣೆಯ ಆಚೆಗಿಡಿ. ಅದೂ ಸಹ ತುಂಬ ಸಮಯವಲ್ಲ. ಗ್ಯಾಜೆಟ್‌ ಗಳಿಂದ ನಿಮ್ಮ ಸನಿಹದಲ್ಲೇ ಇರುವ, ನಿಮ್ಮ ಪ್ರೀತಿ, ಗಮನ (Attention) ಬಯಸುವ ವ್ಯಕ್ತಿಯನ್ನು ನೀವು ದೂರವಿಡಲು ಅರಂಭಿಸುತ್ತೀರಿ. ಇದು ಸಂಬಂಧ ಹದಗೆಡಲು ಪ್ರಮುಖ ಕಾರಣವಾಗಬಲ್ಲದು. ಪರಸ್ಪರ ಸಮೀಪವಾಗುವುದನ್ನು ಇವು ತಡೆಯುತ್ತವೆ. ಸ್ಕ್ರೀನ್‌ ಗಳನ್ನು ಎಷ್ಟು ಸಾಧ್ಯವೋ ಅಷ್ಟು ದೂರವಿಟ್ಟರೆ ಸಂಬಂಧ ಉತ್ತಮವಾಗುತ್ತದೆ ಎನ್ನುವುದು ಫೆಂಗ್‌ ಶುಯಿ ಸಲಹೆ.

ಇದನ್ನೂ ಓದಿ: ASTROLOGY TIPS: ಒಂದು ರೂಪಾಯಿ ನಾಣ್ಯದಲ್ಲಿದೆ ಅದೃಷ್ಟ ಬದಲಿಸುವ ಶಕ್ತಿ

•    ಕುಟುಂಬದ ಯಾವುದೇ ವ್ಯಕ್ತಿಯ ಫೋಟೊ (Photo) ಬೇಡ
ಮಲಗುವ ಕೋಣೆಯಲ್ಲಿ ಕುಟುಂಬದ ಯಾವುದೇ ವ್ಯಕ್ತಿ ಅಥವಾ ಗುಂಪಿನ ಫೋಟೊ ಇಡಬೇಡಿ. ಅದು ಅಪ್ಪ-ಅಮ್ಮ, ಅಜ್ಜ-ಅಜ್ಜಿ ಯಾರದ್ದೇ ಆಗಿರಲಿ. ಹಾಗೆಯೇ ಸಾಕುಪ್ರಾಣಿಯ (Pet) ಫೋಟೊ ಕೂಡ ಬೇಡ. ಬದಲಿಗೆ, ನೀವು ಹಾಗೂ ನಿಮ್ಮ ಸಂಗಾತಿ ಖುಷಿಯಾಗಿರುವ, ಪ್ರೀತಿಯಿಂದ ಇರುವ ಫೋಟೊ ಬೆಡ್‌ ರೂಮಿನಲ್ಲಿರಲಿ.  

click me!