
ಇಂದಿನ ಈ ತಂತ್ರಜ್ಞಾನದ ಯುಗದಲ್ಲಿಯೂ ಗಂಡ ಹೆಂಡತಿ ಅಥವಾ ಹೆಂಡತಿ ಗಂಡನಿಗೆ ಮೋಸ ಮಾಡೋದು ಬಾಯ್‌ಫ್ರೆಂಡ್ ಗರ್ಲ್‌ಫ್ರೆಂಡ್‌ಗೆ ಗರ್ಲ್‌ಫ್ರೆಂಡ್ ಬಾಯ್‌ಫ್ರೆಂಡ್‌ಗ ಮೋಸ ಮಾಡುವುದು ಸಹಜ ಎನ್ನುವಷ್ಟು ಸಾಮಾನ್ಯವಾಗಿದೆ. ದಿನಂಪ್ರತಿ ಸುದ್ದಿಗಳಲ್ಲಿ ಈ ಅನೈತಿಕ ಸಂಬಂಧದ ಕಾರಣಕ್ಕೆ ವಿಚ್ಚೇದನಗಳು, ಕೌಟುಂಬಿಕ ಕಲಹಗಳು ಹಾಗೂ ಕೊಲೆ ಅಪರಾಧಗಳು ನಡೆಯುತ್ತಿರುವುದು ವರದಿಯಾಗುತ್ತಿವೆ. ಗಂಡ ಅಥವಾ ಹೆಂಡತಿ ಮೋಸ ಮಾಡುವುದನ್ನು ಯಾರೊಬ್ಬರು ಸಹಿಸುವುದಿಲ್ಲ, ಬಹುತೇಕರು ವಿಚಾರ ತಿಳಿದಾಗ ವಿಚ್ಛೇದನಕ್ಕೆ ಮುಂದಾಗುತ್ತಾರೆ. ಮದುವೆಯಾಗದೇ ಇದ್ದರೆ ಬ್ರೇಕಾಫ್ ಆಗುತ್ತದೆ. ಇನ್ನು ಕೆಲವು ಸಹಿಸಿಕೊಂಡು ಸುಮ್ಮನಾಗುವವರು ಇದ್ದಾರೆ. ಆದರೆ ತಮ್ಮ ಗೆಳೆಯ ತಮ್ಮನಲ್ಲದೇ ಬೇರೊಬ್ಬ ಮಹಿಳೆಯನ್ನು ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ಅವರ ಸಾವಿನವರೆಗೂ ತಿಳಿಯದೇ ಹೋದರೆ ಹೇಗಿರುತ್ತದೆ. ಇಂತಹದೊಂದು ವಿಚಿತ್ರವಾದ ಘಟನೆಯೊಂದು ಮೆಕ್ಸಿಕೋದಲ್ಲಿ ನಡೆದಿದ್ದು, ಆತನ ಸಾವಿನ ನಂತರ ಆತನ ಮತ್ತೊಂದು ಸಂಬಂಧದ ವಿಚಾರ ಬೆಳಕಿಗೆ ಬಂದಿದ್ದು, ಸಾವಿನ ಮನೆಯಲ್ಲಿ ಆತನ ಇಬ್ಬರು ಗರ್ಲ್‌ಫ್ರೆಂಡ್‌ಗಳ ಪಾಲಿನ ರಣಾಂಗಣವಾಗಿ ಬದಲಾಗಿದೆ.
ಹೌದು ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ಎರಡು ಹೆಣ್ಣು ಮಕ್ಕಳ ಜೊತೆ ಏಕಕಾಲಕ್ಕೆ ಸಂಬಂಧ ಹೊಂದಿದ್ದ. ಆದರೆ ಆತನ ಸಾವಿನವರೆಗೂ ಆತನಿಗೆ ಬೇರೊಂದು ಸಂಬಂಧವಿದೆ ಎಂಬ ವಿಚಾರ ಆತನ ಮೊದಲ ಗೆಳತಿಗಾಗಲಿ ಹಾಗೂ ಆತನಿಗೆ ಈಗಾಗಲೇ ಗೆಳತಿ ಇದ್ದಾಳೆ ಎಂಬ ವಿಚಾರ 2ನೇ ಗೆಳತಿಗಾಗಲಿ ಗೊತ್ತೆ ಇರಲಿಲ್ಲ. ಆದರೆ ಈ ಅದೃಷ್ಟವಂತ ವ್ಯಕ್ತಿ ಯಾವಾಗ ಉಸಿರು ನಿಲ್ಲಿಸಿದನೋ ಆವಾಗಲೇ ನೋಡಿ ಆತನ ಈ ಎರಡು ಸಂಬಂಧದ ವಿಚಾರ ಆತನ ಇಬ್ಬರು ಗೆಳತಿಯರಿ ತಿಳಿದಿದ್ದು, ಶವಪೆಟ್ಟಿಗೆಯ ಮುಂದೆ ಆತನ ಇಬ್ಬರು ಗೆಳತಿಯರು ಆತ ನನ್ನವನು ಎಂದು ಹೊಡೆದಾಡಿಕೊಂಡು ಶವಪೆಟ್ಟಿಗೆಯನ್ನು ಮೇಲೆ ಕೆಳಗೆ ಮಾಡಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ವರದಿಗಳ ಪ್ರಕಾರ ಮೃತಪಟ್ಟ ವ್ಯಕ್ತಿ ಏಕಕಾಲಕ್ಕೆ ಇಬ್ಬರು ಮಹಿಳೆಯರ ಜೊತೆ ಸಂಬಂಧದಲ್ಲಿದ್ದು ಡೇಟಿಂಗ್ ಮಾಡುತ್ತಿದ್ದ. ಆದರೆ ಒಬ್ಬರಿಗೆ ಮತ್ತೊಬ್ಬರ ವಿಚಾರ ತಿಳಿಯದಂತೆ ಆತ ಬಹಳ ರಹಸ್ಯ ಕಾಯ್ದುಕೊಂಡಿದ್ದ. ಆದರೆ ಆತ ಯಾವಾಗ ಉಸಿರು ನಿಲ್ಲಿಸಿದನೋ ಆಗಲೇ ನೋಡಿ ಆತನ ಇಬ್ಬರು ಗೆಳತಿಯರಿಗೆ ಆತ ತಮ್ಮಿಬ್ಬರನ್ನು ರಹಸ್ಯವಾಗಿ ಡೇಟಿಂಗ್ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಶವಪೆಟ್ಟಿಗೆಯ ಮುಂದೆ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಇವರ ಹೊಡೆದಾಟ ನೋಡಿ ಅಲ್ಲಿಗೆ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಜನ ಶಾಕ್‌ನಿಂದ ನೋಡಿದ್ದಾರೆ.
ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ತನ್ನ ಸಂಬಂಧವನ್ನು ಸಾಯುವವರೆಗೆ ರಹಸ್ಯವಾಗಿ ಕಾಯ್ದುಕೊಂಡ ಮೃತ ವ್ಯಕ್ತಿಯ ಚಾಣಾಕ್ಷತನಕ್ಕೆ ಅನೇಕರು ಶಭಾಶ್ ಎಂದಿದ್ದಾರೆ. ಹಾಗೆಯೇ ಶವಪೆಟ್ಟಿಗೆಯೊಳಗೆ ಮಲಗಿದ್ದ ವ್ಯಕ್ತಿ ಈಗ ಏನು ಹೇಳುತ್ತಿರಬಹುದು ಎಂಬುದನ್ನು ಕಲ್ಪಿಸಿ ಕಾಮೆಂಟ್ ಮಾಡಿದ್ದು, ನೋಡುಗರ ಕಾಮೆಂಟ್‌ಗಳು ನಕ್ಕುನಕ್ಕು ಹೊಟ್ಟೆ ಹುಣ್ಣಾಗುವಂತೆ ಮಾಡುತ್ತಿವೆ. ಸದ್ಯ ಈ ಪರಿಸ್ಥಿತಿಯಲ್ಲಿ ನಾನು ಸತ್ತು ಹೋಗಿದ್ದೇನೆ ಎಂದು ಆತ ಖುಷಿ ಪಡುತ್ತಿರಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸದ್ಯ ಅವನು ಅವರನ್ನು ಮದುವೆಯಾಗಿಲ್ಲ, ಆಗಿದ್ದರೆ ಅವರಿಬ್ಬರು ಸೇರಿ ಅವನಿಗೆ ಜೀವಂತವಾಗಿ ಸಮಾಧಿ ಕಟ್ಟುತ್ತಿದ್ದರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇವರು ನೆಮ್ಮದಿಯಾಗಿ ಸಾಯುವುದಕ್ಕೂ ಬಿಡಲಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಆದರೆ ಈ ವೀಡಿಯೋದ ಸತ್ಯಾಸತ್ಯತೆ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಇಂಟರ್‌ನೆಟ್‌ನಲ್ಲಿ ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.