ಅಣ್ಣ-ತಮ್ಮನ ಒಟ್ಟಿಗೇ ಮದ್ವೆಯಾದಾಕೆ ಈಗ ಮಗುವಿನ ಅಮ್ಮ- ಒಬ್ಬ ಅಪ್ಪ ಸ್ವದೇಶಿ, ಇನ್ನೊಬ್ಬ ವಿದೇಶಿ

Published : Apr 18, 2026, 12:47 PM IST
Marriage Rituals

ಸಾರಾಂಶ

ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಸುನೀತಾ ಚೌಹಾಣ್, 'ಜೋಡಿದಾರ್' ಪದ್ಧತಿಯಂತೆ ಇಬ್ಬರು ಸಹೋದರರನ್ನು ವಿವಾಹವಾಗಿದ್ದರು. ಇದೀಗ ಅವರು ಮಗುವಿಗೆ ಜನ್ಮ ನೀಡಿದ್ದು, ಸಂಪ್ರದಾಯದ ಪ್ರಕಾರ ಈ ಮಗುವಿಗೆ ಇಬ್ಬರೂ ಅಪ್ಪಂದಿರಾಗಿದ್ದಾರೆ.

ಒಂದೇ ಮಂಟಪದಲ್ಲಿ ಅಣ್ಣ-ತಮ್ಮ ಇಬ್ಬರನ್ನೂ ಮದುವೆಯಾಗಿ ಸುದ್ದಿಯಾಗಿದ್ದ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಸುನೀತಾ ಚೌಹಾಣ್ ಇದೀಗ ಮಗುವಿನ ಅಮ್ಮ ಆಗಿದ್ದಾಳೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಂತೋಷ ಹಂಚಿಕೊಂಡಿದ್ದಾಳೆ. ಹಿಮಾಚಲ ಪ್ರದೇಶದ ಕೆಲವು ಸಮುದಾಯದಲ್ಲಿ ಇರುವ ಜೋಡಿದಾರ್​ ಪದ್ಧತಿ ಅನ್ವಯ ಈ ಮದುವೆ ನಡೆದಿತ್ತು. ಸಿರ್ಮೌರ್ ಜಿಲ್ಲೆಯ ಕುಟುಂಬಸ್ಥರು ಅಲ್ಲಿಯ ಸಂಪ್ರದಾಯದಂತೆ ಸಹೋದರರನ್ನು ಒಬ್ಬಳಿಗೇ ಮದುವೆ ಮಾಡಿಸಿದ್ದರು. ಅದರಂತೆಯೇ ಅತ್ಯಂತ ಸಂಭ್ರಮದಿಂದ ಈ ಮದುವೆ ನಡೆದಿತ್ತು.

ಸಂಪ್ರದಾಯವೇ ಹೀಗಿದೆ

ಮಗು ಹುಟ್ಟಿದ್ದರೂ ಅದರ ರಿಯಲ್​ ಅಪ್ಪ ಯಾರು ಎಂದು ಡಿಎನ್​ಎ ಪರೀಕ್ಷೆ ಮಾಡುವ ಸಂಪ್ರದಾಯ ಅಲ್ಲಿಲ್ಲ. ಆದ್ದರಿಂದ ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಈ ಮಗುವಿಗೆ ಈಗ ಇಬ್ಬರು ಅಪ್ಪಂದಿರು, ಒಬ್ಬನ ಹೆಸರು ಪ್ರದೀಪ್ ನೇಗಿ ಮತ್ತು ಇನ್ನೊಬ್ಬನ ಹೆಸರು ಕಪಿಲ್ ನೇಗಿ. ಅಷ್ಟಕ್ಕೂ ಹೀಗೆ ಸಹೋದರರನ್ನು ಮದುವೆಯಾಗಿರುವವಳು ಇವಳೊಬ್ಬಳೇ ಏನಲ್ಲ. ಅಲ್ಲಿಯ ಸಂಪ್ರದಾಯದಂತೆ ಇದಾಗಲೇ ಬಹಳ ಮದುವೆಯಾಗಿದ್ದರೂ, ಸೋಷಿಯಲ್​ ಮೀಡಿಯಾದಲ್ಲಿ ಸುನೀತಾ ಆ್ಯಕ್ಟೀವ್​ ಇರುವ ಕಾರಣ, ಈ ಬಗ್ಗೆ ಆಕೆ ಶೇರ್​ ಮಾಡಿದ್ದ ಕಾರಣ ಇದು ಇಷ್ಟೆಲ್ಲಾ ಸದ್ದು ಮಾಡಿತ್ತು. ಹೆಚ್ಚಾಗಿ ಒಬ್ಬ ಗಂಡು 3-4 ಮದುವೆಯಾಗುವ ಸಂಪ್ರದಾಯ ನೋಡಿರುವ ಎಲ್ಲರಿಗೂ ಇಬ್ಬರು ಪುರುಷರನ್ನು ಮದುವೆಯಾಗುವ ಸಂಪ್ರದಾಯ ಕೇಳಿ ಶಾಕ್​ ಆಗಿತ್ತಷ್ಟೇ. ಆದರೆ ಅಲ್ಲಿ ಇದು ಮಾಮೂಲು.

ವಿದೇಶದಲ್ಲಿರೋ ಒಬ್ಬ ಅಪ್ಪ

ಸದ್ಯ ಈ ಮಗುವಿನ ಅಪ್ಪಂದಿರಲ್ಲಿ ಒಬ್ಬ ಸ್ವದೇಶಿ ಆಗಿದ್ದರೆ, ಇನ್ನೊಬ್ಬ ವಿದೇಶಿ ಆಗಿದ್ದಾನೆ. ಅರ್ಥಾತ್​ ಒಬ್ಬ ತಂದೆ ಮನೆಯಲ್ಲಿಯೇ ಇದ್ದು, ಇನ್ನೊಬ್ಬ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾನೆ. ಅಲ್ಲಿಂದಲೇ ಸೋಷಿಯಲ್​ ಮೀಡಿಯಾದಲ್ಲಿ ಆತ ಶುಭ ಕೋರಿದ್ದಾನೆ. ಆತ, ಮಗು ನಮ್ಮ ಜೀವನವನ್ನು ಪೂರ್ಣಗೊಳಿಸಿತು ಎಂದು ಬರೆದುಕೊಂಡಿದ್ದಾನೆ. ಮಗುವನ್ನು ಎತ್ತಿಕೊಂಡು ಪಿತೃತ್ವದ ಸಂತೋಷವನ್ನು ಅನುಭವಿಸಲು ಶೀಘ್ರದಲ್ಲೇ ಮನೆಗೆ ಮರಳಲು ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾನೆ. ಮನೆಗೆ ಮರಳಲು ಉತ್ಸುಕತೆ ಇರಲಿಲ್ಲ. ಆದರೆ ಈಗ ಕುಟುಂಬದೊಂದಿಗೆ ಅಮೂಲ್ಯ ಸಮಯವನ್ನು ಕಳೆಯಲು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದು, ಇದಕ್ಕೆ ಕಾರಣ ಏನು ಎನ್ನುವುದು ಸ್ಪಷ್ಟವಾಗಿಲ್ಲ.

ಏನಿದು ಪದ್ಧತಿ?

ಸಿರ್ಮೌರ್‌ನ ಕೆಲವು ಭಾಗಗಳಲ್ಲಿ ಇನ್ನೂ ಆಚರಣೆಯಲ್ಲಿರುವ "ಜೋಡಿದಾರ್" ಅಥವಾ ಬಹುಪತ್ನಿತ್ವ ಸಂಪ್ರದಾಯವು ಒಂದೇ ಕುಟುಂಬದ ಇಬ್ಬರು ಅಥವಾ ಹೆಚ್ಚಿನ ಸಹೋದರರು ಒಬ್ಬ ಮಹಿಳೆಯನ್ನು ಮದುವೆಯಾಗಲು ಅನುವು ಮಾಡಿಕೊಡುತ್ತದೆ. ಹಿಂದೆ ಇಂತಹ ಪದ್ಧತಿಗಳು ಹೆಚ್ಚು ಸಾಮಾನ್ಯವಾಗಿದ್ದರೂ, ದಂಪತಿಗಳ ಆಧುನಿಕ ಹಿನ್ನೆಲೆಯಿಂದಾಗಿ ಈ ನಿರ್ದಿಷ್ಟ ವಿವಾಹವು ಕಳೆದ ವರ್ಷ ವ್ಯಾಪಕ ಗಮನ ಸೆಳೆದಿತ್ತು. ಮಗುವಿನ ಜನನದೊಂದಿಗೆ, ಕುಟುಂಬದಲ್ಲಿ ಆಚರಣೆಗಳು ತೀವ್ರಗೊಂಡಿವೆ ಮತ್ತು ಸ್ಥಳೀಯರು ಹಾಗೂ ಸಾಮಾಜಿಕ ಮಾಧ್ಯಮ ಬಳಕೆದಾರರು ದಂಪತಿಗಳಿಗೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Friendship Day 2026: ಸ್ನೇಹಿತರ ಜೊತೆ ಫೋಟೋ ತೆಗೆಯಲು ಈ 7 ಟ್ರೆಂಡಿಂಗ್ ಪೋಸ್ ಟ್ರೈ ಮಾಡಿ!
5 ದೊಡ್ಡ ಪದವಿ, ಕೈತುಂಬಾ ಸಂಬಳವಿದ್ರೂ ಸಿಕ್ತಿಲ್ಲ ಹುಡುಗಿ: ವಿದ್ಯುತ್‌ ಕಂಬಗಳ ಮೊರೆ ಹೋದ ಪ್ರೊಫೆಸರ್​