ಕಾಮಸೂತ್ರ ಬರೆದ ಮಹರ್ಷಿ ವಾತ್ಸಾಯನ ಗಂಡು ಹೆಣ್ಣುಗಳ ವಿಧಗಳು ಮತ್ತು ಅವರು ಪರಸ್ಪರ ಮಿಲನವಾಗುವ ರೀತಿಯಲ್ಲಿ ಹಲವು ವಿಧಗಳನ್ನು ಗುರುತಿಸುತ್ತಾನೆ. ಅದರಲ್ಲಿ ಉತ್ತಮ- ಅಧಮ ಯಾವುದು ನೋಡೋಣ.
ಚಾಣಕ್ಯ ನೀತಿಯ ಥರವೇ, ಅದೇ ಕಾಲದಲ್ಲೇ ಭಾರತದಲ್ಲಿ ಬಂದ ಇನ್ನೊಂದು ಶಾಸ್ತ್ರ ಗ್ರಂಥ ಅಂದರೆ ವಾತ್ಸಾಯನನ ಕಾಮಸೂತ್ರ. ಇದು ಬರಿಯ ಸೆಕ್ಸ್ ಗೈಡ್ ಅಲ್ಲ. ಮನುಷ್ಯನ ಸ್ವಭಾವ ಮತ್ತು ಬದುಕಿನ ರೀತಿಯ ಬಗ್ಗೆಯೂ ಮಹತ್ವದ ಅಂಶಗಳನ್ನು ಹೇಳುತ್ತದೆ. ಗಂಡು ಹೆಣ್ಣು ಪರಸ್ಪರ ಆಕರ್ಷಣೆಗೆ ಒಳಗಾಗೋದು ಹೇಗೆ, ಯಾರು ಯಾರನ್ನು ಹೇಗೆ ಸೆಳೆಯಬಹುದು, ಉತ್ತಮ ದಾಂಪತ್ಯ ಚೆನ್ನಾಗಿರಬೇಕಾದರೆ ಸೆಕ್ಸ್ ಲೈಫ್ ಹೇಗಿರಬೇಕು, ಗಂಡು ಹೆಣ್ಣನ್ನು ಹೇಗೆ ಸಂತೃಪ್ತಿಪಡಿಸಬಹುದು ಮುಂತಾದ ಎಲ್ಲ ವಿಷಯಗಳೂ ಇಲ್ಲಿವೆ. ಇದೊಂಥರಾ ಆಧುನಿಕ ಫ್ಯಾಮಿಲಿ ಗೈಡ್ ಅನ್ನಬಹುದು.
ಅಂದಹಾಗೆ ಅವನು ಗಂಡು ಹೆಣ್ಣುಗಳ ವಿಧಗಳು ಮತ್ತು ಅವರು ಪರಸ್ಪರ ಮಿಲನವಾಗುವ ರೀತಿಯಲ್ಲಿ ಹಲವು ವಿಧಗಳನ್ನು ಗುರುತಿಸುತ್ತಾನೆ. ಅದರಲ್ಲಿ ಉತ್ತಮ- ಅಧಮ ಯಾವುದು ನೋಡೋಣ.
ವಾತ್ಸಾಯನ ಮಹರ್ಷಿ ಪುರುಷನನ್ನು ಮೂರು ವರ್ಗಗಳಾಗಿ ವಿಂಗಡಿಸುತ್ತಾನೆ. ಅದು ಆತನ ಲಿಂಗದ ಗಾತ್ರದ ಪ್ರಕಾರ. ಶಶಕ (ಮೊಲದಂತೆ ಶಿಶ್ನ), ಪುಂಗವ (ಗೂಳಿಯಂತೆ) ಅಶ್ವ (ಕುದುರೆಯಂತೆ). ಮಹಿಳೆಯರಲ್ಲಿ ಕೂಡ ಅವರ ಯೋನಿಯ ಆಕಾರ ಗಾತ್ರಕ್ಕೆ ಅನುಗುಣವಾಗಿ ಮೂರು ಪ್ರಕಾರಗಳನ್ನು ಮಾಡಿದ್ದಾನೆ. ಹರಿಣ (ಜಿಂಕೆಯಂಥ ಯೋನಿ ಹೊಂದಿರುವವಳು), ಅಶ್ವ (ಕುದುರೆಯಂತೆ) ಅಥವಾ ಕರಿ (ಆನೆಯಂತೆ).
ಈ ರೀತಿಯಾಗಿ ಅನುಗುಣವಾದ ಮೂರು- ಮೂರು ಆಯಾಮಗಳ ವ್ಯಕ್ತಿಗಳ ನಡುವೆ ಒಂಬತ್ತು ವಿಧದ ಸಂಯೋಗಗಳು ನಡೆಯಲು ಸಾಧ್ಯವಿವೆ. ಅದರಲ್ಲಿ ಮೂರು ಸಮಾನ ಬಗೆಯ ಕೂಟಗಳು. ಮತ್ತು ಆಯಾಮಗಳು ಹೊಂದಿಕೆಯಾಗದಿದ್ದಾಗ ಆರು ಅಸಮಾನ ಬಗೆಯ ಕೂಟ. ಒಟ್ಟಾರೆ ಒಂಬತ್ತು. ಅವು ಹೀಗೆ:
ಮೂರು ಸಮಾನ ಕೂಟಗಳು: ಮೊಲ- ಜಿಂಕೆ, ಗೂಳಿ- ಕುದುರೆ, ಅಶ್ವ- ಆನೆ
ಆರು ಅಸಮಾನ ಕೂಟಗಳು: ಮೊಲ- ಕುದುರೆ, ಮೊಲ- ಅನೆ, ಗೂಳಿ- ಜಿಂಕೆ, ಗೂಳಿ- ಆನೆ, ಕುದುರೆ- ಜಿಂಕೆ, ಕುದುರೆ- ಮೊಲ
ಈ ಅಸಮಾನ ಒಕ್ಕೂಟಗಳಲ್ಲಿ, ಪುರುಷನು ಗಾತ್ರದಲ್ಲಿ ಹೆಣ್ಣನ್ನು ಮೀರಿದಾಗ, ತನಗಿಂತ ಗಾತ್ರದಲ್ಲಿ ತಕ್ಷಣವೇ ಸಣ್ಣದಾಗಿರುವ ಮಹಿಳೆಯೊಂದಿಗೆ ಕೂಟ ನಡದಾಗ ಅದನ್ನು ಉನ್ನತ ಕೂಟ ಎಂದು ಕರೆಯಲಾಗುತ್ತದೆ. ತನ್ನ ಗಾತ್ರದಿಂದ ತುಂಬಾ ಕಡಿಮೆ ಗಾತ್ರದ ಮಹಿಳೆಯೊಂದಿಗೆ ಮಿಲನವಾದರೆ ಅದು ಅತ್ಯುನ್ನತ ಕೂಟ.
ಮತ್ತೊಂದೆಡೆ, ಹೆಣ್ಣು ಗಾತ್ರದಲ್ಲಿ ಪುರುಷನನ್ನು ಮೀರಿದಾಗ, ಗಾತ್ರದಲ್ಲಿ ತಕ್ಷಣವೇ ಅವಳಿಂತ ಕಡಿಮೆ ಗಾತ್ರದ ಪುರುಷನೊಂದಿಗಿನ ಅವಳ ಕೂಟವನ್ನು ಕಡಿಮೆ ಕೂಟ ಎಂದು ಕರೆಯಲಾಗುತ್ತದೆ. ಗಾತ್ರದಲ್ಲಿ ಅವಳಿಂದ ತುಂಬ ಕಡಿಮೆಯಾಗಿರುವ ಪುರುಷನೊಂದಿಗಿನ ಅವಳ ಕೂಟವನ್ನು ಅತ್ಯಂತ ಕಡಿಮೆ ಒಕ್ಕೂಟ ಎಂದು ಕರೆಯಲಾಗುತ್ತದೆ.
ಬೇರೆ ರೀತಿಯಲ್ಲಿ ಹೇಳುವುದಾದರೆ, ಕುದುರೆ ಮತ್ತು ಮೊಲ, ಗೂಳಿ ಮತ್ತು ಜಿಂಕೆಗಳು ಉನ್ನತ ಮಿಲನವನ್ನು ರೂಪಿಸುತ್ತವೆ, ಆದರೆ ಕುದುರೆ ಮತ್ತು ಜಿಂಕೆಗಳು ಅತ್ಯುನ್ನತ ಮಿಲನವನ್ನು ರೂಪಿಸುತ್ತವೆ. ಹೆಣ್ಣುಗಳಲ್ಲಿ ಆನೆ ಮತ್ತು ಗೂಳಿ, ಕುದುರೆ ಮತ್ತು ಮೊಲ, ಕಡಿಮೆ ಕೂಟಗಳನ್ನು ರೂಪಿಸುತ್ತವೆ. ಆದರೆ ಆನೆ ಮತ್ತು ಮೊಲ ಕಡಿಮೆ ಕೂಟಗಳನ್ನು ಮಾಡುತ್ತದೆ.
ನೀವು ಏನೇ ಮಾಡಿದ್ರೂ ಇಂಥ ಮಹಿಳೆಯರನ್ನು ಸಂತೋಷಪಡಿಸಲು ಸಾಧ್ಯವೇ ಇಲ್ಲ!
ಇದೆಲ್ಲದರ ಪ್ರಕಾರ ಒಟ್ಟಾರೆ ಒಂಬತ್ತು ಕೂಟಗಳು ಅಥವಾ ಒಂಬತ್ತು ಥರದ ಮಿಲನಗಳು. ಇವೆಲ್ಲವುಗಳಲ್ಲಿ, ಸಮಾನವಾದ ಒಕ್ಕೂಟಗಳು ಅತ್ಯುತ್ತಮವಾದವುಗಳು. ಅತ್ಯುನ್ನತವಾದ ಕೂಟಗಳು ಸಮಾಧಾನಕರ. ಕಡಿಮೆಯಾದವ ಅಸಂತೃಪ್ತಿಕರ. ಉನ್ನತ ಕೂಟಗಳು ಕೆಳಮಟ್ಟದವುಗಳಿಗಿಂತ ಉತ್ತಮವೆಂದು ಹೇಳಲಾಗುತ್ತದೆ. ಏಕೆಂದರೆ ಅದರಲ್ಲಿ ಪುರುಷನು ಹೆಣ್ಣನ್ನು ತೃಪ್ತಿಪಡಿಸಿ ತನ್ನ ಸ್ವಂತ ಉದ್ರೇಕವನ್ನು ತಣಿಸಿಕೊಳ್ಳಲು ಸಾಧ್ಯವಿದೆ. ಆದರೆ ಎರಡನೆಯದರಲ್ಲಿ ಹೆಣ್ಣನ್ನು ಯಾವುದೇ ವಿಧಾನದಿಂದ ತೃಪ್ತಿಪಡಿಸುವುದು ಕಷ್ಟ.
ಆಧುನಿಕ ಲೈಂಗಿಕ ವಿಜ್ಞಾನವು (Modern Sexual Science) ಇದನ್ನು ಪೂರ್ತಿಯಾಗಿ ಒಪ್ಪುವುದಿಲ್ಲ. ಅದು ಹೇಳುವ ಪ್ರಕಾರ ಶಿಶ್ನವು (Pennis) ಯೋನಿಯ (Vagina) ಗಾತ್ರಕ್ಕೆ ಹಾಗೂ ಯೋನಿಯು ಶಿಶ್ನದ ಗಾತ್ರಕ್ಕೆ ಹಿಗ್ಗುತ್ತದೆ ಅಥವಾ ಕುಗ್ಗುತ್ತದೆ. ಅಂದರೆ ಎರಡೂ ಪರಸ್ಪರ ಒಪ್ಪಂದ ಮಾಡಿಕೊಂಡು ಸುಖ ಕಾಣುತ್ತವೆ. ಆದರೆ ಊಹಿಸಿಕೊಳ್ಳಿ: ಅತಿ ಚಿಕ್ಕ ಯೋನಿಗೆ ಅತಿ ದೊಡ್ಡ ಶಿಶ್ನ ಅಥವಾ ಅತಿ ದೊಡ್ಡ ಯೋನಿಗೆ ಅತಿ ಚಿಕ್ಕ ಶಿಶ್ನ- ಯಾವತ್ತೂ ಅಸಮಾನವೇ ಆಗಿರುತ್ತದೆ. ಅದರಿಂದ ಹೆಣ್ಣಿಗೆ ತೃಪ್ತಿಯಾಗಲು ಸಾಧ್ಯವಿಲ್ಲ. ಗಂಡೇನೋ ಸ್ಖಲಿಸಿ ಆನಂದವನ್ನು ಹೊಂದಬಹುದು. ಆದರೆ ಹೆಣ್ಣಿಗೆ ಸುಖ ಸಿಗದು.
ಆದರೆ ವಾತ್ಸಾಯನ ಇನ್ನೊಂದು ಮಾತನ್ನೂ ಹೇಳುತ್ತಾನೆ. ಶಿಶ್ನ ಅಥವಾ ಯೋನಿಯ ಗಾತ್ರಕ್ಕಿಂತ ಮದನ ಕಲೆಯೇ ಮುಖ್ಯವಾದುದು ಎಂದು. ಅಂದರೆ ಗಂಡು ಶಿಶ್ನದ ಕೊರತೆಯಿದ್ದರೂ ತನ್ನ ಬೆರಳು ನಾಲಿಗೆ ಇತ್ಯಾದಿಗಳ ಮೂಲಕ ಹೆಣ್ಣನ್ನು ತೃಪ್ತಿಪಡಿಸಬಹುದು. ಇದು ಆಧುನಿಕ ವೈದ್ಯರ ಪ್ರಕಾರವೂ ನಿಜವೇ.
ಸೆಕ್ಸ್ ವೇಳೆ ಲಾಲಾರಸ ಬಳಕೆ ಎಷ್ಟು ಸೂಕ್ತ?