26 ಬಾರಿ ಮದ್ವೆಯಾಗಿದ್ದಾನೆ ಈ 60 ವರ್ಷದ ವ್ಯಕ್ತಿ, 100 ಬಾರಿ ಆಗೋದು ಗುರಿಯಂತೆ!

Published : Feb 22, 2023, 03:50 PM IST
26 ಬಾರಿ ಮದ್ವೆಯಾಗಿದ್ದಾನೆ ಈ 60 ವರ್ಷದ ವ್ಯಕ್ತಿ, 100 ಬಾರಿ ಆಗೋದು ಗುರಿಯಂತೆ!

ಸಾರಾಂಶ

ಜೀವನದಲ್ಲಿ ಒಬ್ಬ ವ್ಯಕ್ತಿ ಒಂದು ಬಾರಿ ಮದುವೆಯಾಗುವುದು ಸಾಮಾನ್ಯ ವಿಷಯ. ಆದರೆ ಕೆಲವೊಬ್ಬರು ಎರಡು, ಮೂರು ಬಾರಿ ಮದುವೆಯಾಗುವುದೂ ಇದೆ. ಆದರೆ ಇಲ್ಲೊಬ್ಬ 60 ವರ್ಷದ ವ್ಯಕ್ತಿ 26 ಬಾರಿ ಮದುವೆಯಾಗಿದ್ದಾನೆ. ಅದರಲ್ಲಿ 22 ಪತ್ನಿಯರಿಗೆ ವಿಚ್ಛೇದನ ನೀಡಲಾಗಿದೆ. 100 ಬಾರಿ ಮದುವೆಯಾಗುವುದು ಈತನ ಕನಸಂತೆ.

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಬಹಳ ಮುಖ್ಯವಾಗಿದೆ. ಹೊಸ ವ್ಯಕ್ತಿಯೊಬ್ಬರ ಆಗಮನ ಜೀವನವನ್ನು ಉಲ್ಲಸಿತಗೊಳಿಸುತ್ತದೆ. ಇಬ್ಬರು ವ್ಯಕ್ತಿಗಳು ಜೀವನದುದ್ದಕ್ಕೂ ಸುಖ-ದುಃಖವನ್ನು ಹಂಚಿಕೊಂಡು ಜೊತೆಯಾಗಿ ಸಾಗುವ ವಾಗ್ದಾನ ಮಾಡುತ್ತಾರೆ. ದಾಂಪತ್ಯ, ಕೌಟುಂಬಿಕ ಜೀವನಕ್ಕೆ ಹೊಸ ಅರ್ಥ ನೀಡುತ್ತದೆ. ಭಾರತೀಯ ಸಂಪ್ರದಾಯದ ಪ್ರಕಾರ, ಒಬ್ಬ ವ್ಯಕ್ತಿ ಒಂದು ಬಾರಿ ಮದುವೆಯಾಗುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಪತಿ ಅಥವಾ ಪತ್ನಿ ಸಾವನ್ನಪ್ಪಿದ್ದಾರೆ ಎರಡನೇ ಬಾರಿ ಮದುವೆಯಾಗುತ್ತಾರೆ. ಆದರೆ ಪಾಕಿಸ್ತಾನದಲ್ಲೊಬ್ಬ ವ್ಯಕ್ತಿ ಬರೋಬ್ಬರಿ 26 ಬಾರಿ ಮದುವೆಯಾಗಿದ್ದಾನೆ.

ಹೌದು, ಕೇಳೋಕೆ ಅಚ್ಚರಿ ಎನಿಸಿದರೂ ಇದು ನಿಜ. ಪಾಕಿಸ್ತಾನದಲ್ಲೊಬ್ಬ 60 ವರ್ಷದ ವ್ಯಕ್ತಿ ಒಂದಲ್ಲ..ಎರಡಲ್ಲ ಭರ್ತಿ 26 ಬಾರಿ ಮದುವೆ (Marriage)ಯಾಗಿದ್ದಾನೆ. ಇದರಲ್ಲಿ 22 ಪತ್ನಿಯರಿಗೆ ಈಗಾಗಲೇ ವಿಚ್ಛೇದನ (Divorce) ನೀಡಿದ್ದಾನಂತೆ. ಮಾತ್ರವಲ್ಲ, 100 ಬಾರಿ ಮದುವೆಯಾಗುವ ಗುರಿ ಇಟ್ಟುಕೊಂಡಿದ್ದಾನಂತೆ. 

ಮದುವೆಗೆ ಮೊದಲೇ ಮಕ್ಕಳನ್ನು ಹೆರಬೇಕು! ಬುಡಕಟ್ಟು ಜನಾಂಗದಲ್ಲಿದೆ ವಿಚಿತ್ರ ಸಂಪ್ರದಾಯ

ಮದುವೆಯಾಗಿ ಹೆಂಡತಿಯಿಂದ ಮಗುವಾದ ತಕ್ಷಣ ಆಕೆಗೆ ವಿಚ್ಛೇದನ
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ವ್ಯಕ್ತಿ ತಾನು 100 ಬಾರಿ ಮದುವೆಯಾಗಲು ಬಯಸುತ್ತೇನೆ ಎಂದು ಹೇಳುತ್ತಿರುವುದನ್ನು ನೋಡಬಹುದು. ಮಾತ್ರವಲ್ಲ, ಆತ ತನ್ನ ಪ್ರತಿಯೊಬ್ಬ ಹೆಂಡತಿ (Wife)ಯಿಂದ ಮಗುವನ್ನು ಬಯಸುವುದಾಗಿ ಹೇಳುತ್ತಾನೆ. ಮದುವೆಯಾಗಿರುವ ಹೆಂಡತಿಯಿಂದ ಮಗುವಾದ ತಕ್ಷಣ ಆಕೆಗೆ ವಿಚ್ಛೇದನ ಕೊಡುವುದಾಗಿ ಹೇಳುತ್ತಾನೆ. ಪುರುಷ ತನ್ನ ನಾಲ್ವರು ಪತ್ನಿಯರೊಂದಿಗೆ ಕುಳಿತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಅವರಲ್ಲಿ ಒಬ್ಬಳಿಗೆ ಕೇವಲ 19 ವರ್ಷ. ತಾನು ಮಕ್ಕಳನ್ನು ಹೊಂದಲು ಮಾತ್ರ ಮಹಿಳೆ (Women)ಯರನ್ನು ಮದುವೆಯಾಗುತ್ತೇನೆ ಎಂದು ವ್ಯಕ್ತಿ ತಿಳಿಸಿದ್ದಾನೆ. ತಮ್ಮ ಮಗುವನ್ನು ಹೆತ್ತ ನಂತರ ಅವರಿಗೆ ವಿಚ್ಛೇದನ ನೀಡುತ್ತೇನೆ ಎಂದಿದ್ದಾನೆ. ಆಶ್ಚರ್ಯದ ಸಂಗತಿಯೆಂದರೆ ಅವನು ಮದುವೆಯಾಗುವ ಮಹಿಳೆಯರು ಸಹ ಮಕ್ಕಳಾದ ಬಳಿಕ ವ್ಯಕ್ತಿ ವಿಚ್ಛೇದನ ನೀಡುತ್ತಾರೆ ಎಂಬುದನ್ನು ತಿಳಿದಿದ್ದಾರೆ.

ತಾನು ವಿಚ್ಛೇದನ ಪಡೆದ ಮಹಿಳೆಯರೊಂದಿಗೆ ತನಗೆ 22 ಮಕ್ಕಳಿದ್ದಾರೆ ಎಂದು ವ್ಯಕ್ತಿ ಹೇಳಿದ್ದಾನೆ. ವಿಚ್ಛೇದನದ ನಂತರ  ಮಾಜಿ ಪತ್ನಿಯರು ಮತ್ತು ಅವರ ಮಕ್ಕಳಿಗೆ ಸೌಲಭ್ಯ ಒದಗಿಸುತ್ತಿದ್ದೇನೆ ಎಂದು ವ್ಯಕ್ತಿ ಹೇಳಿದ್ದಾನೆ. 'ಮತ್ತೆ ಮತ್ತೆ ಮದುವೆಯಾಗುವುದು ನನ್ನ ಹವ್ಯಾಸ, ನಾನು 100 ಬಾರಿ ಮದುವೆಯಾಗಲು ಬಯಸುತ್ತೇನೆ' ಎಂದು ವ್ಯಕ್ತಿ ಹೇಳಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 13,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಇಲ್ಲಿ ಮದ್ವೆಯಾದ ನಂತ್ರ, ಹುಡುಗನ್ನು ಹೆಂಡ್ತಿ ಮನೆಗೆ ಕಳುಹಿಸ್ತಾರೆ!

ಹಿಮಾಚಲ ಪ್ರದೇಶದಲ್ಲಿ ಎಲ್ಲಾ ಸಹೋದರರು ಒಂದೇ ಹುಡುಗಿಯನ್ನು ಮದ್ವೆಯಾಗ್ತಾರೆ
ಭಾರತದಲ್ಲಿ ವಿವಿಧ ಜಾತಿಗಳು ಮತ್ತು ಬುಡಕಟ್ಟುಗಳು ಇರುವುದರಿಂದ ಅವರ ಸಂಪ್ರದಾಯಗಳು ಸಹ ವಿಭಿನ್ನವಾಗಿವೆ. ದೇಶದ ಮೂಲೆ ಮೂಲೆಯಲ್ಲೂ ಹಲವು ವಿಚಿತ್ರ ವಿವಾಹ ಪದ್ಧತಿಗಳಿದ್ದು, ಇಂದಿಗೂ ಅದನ್ನು ಅನುಸರಿಸಲಾಗುತ್ತಿದೆ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಒಂದು ಕುಟುಂಬದ (Family) ಎಲ್ಲಾ ಸಹೋದರರು ಒಂದೇ ಹುಡುಗಿಯನ್ನು ಮದುವೆ (Marriage)ಯಾಗುತ್ತಾರೆ. ಈ ಪದ್ಧತಿ ಬಹಳ ಹಳೆಯದಾಗಿದ್ದು, ಈ ಪದ್ಧತಿಯನ್ನು ಘೋಟುಲ್ ಆಚರಣೆ ಎಂದು ಕರೆಯಲಾಗುತ್ತದೆ. ಇದು ನಿನ್ನೆ ಮೊನ್ನೆಯ ಪದ್ಧತಿಯಲ್ಲ. ಹಿಮಾಚಲ ಪ್ರದೇಶ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಈ ರೀತಿಯ ಒಂದಷ್ಟು ವಿಚಿತ್ರ ಮದುವೆಯ ಸಂಪ್ರದಾಯಗಳು ಆಚರಣೆಯಲ್ಲಿವೆ. ಅದರಲ್ಲೂ ಭಾರತದ ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವಂತಹ ಈ ವಿಚಿತ್ರವಾದ ವಿವಾಹ ಪದ್ಧತಿ ಎಂಥವರಿಗಾದ್ರೂ ಗಾಬರಿ ಮೂಡಿಸುತ್ತೆ.

ಈ ಸಂಪ್ರದಾಯದ ಪ್ರಕಾರ, ಎಲ್ಲಾ ಸಹೋದರರು ಒಂದೇ ಹುಡುಗಿ (Girl)ಯನ್ನು ಮದುವೆಯಾಗುತ್ತಾರೆ. ಜನಪ್ರಿಯ ನಂಬಿಕೆಯ ಪ್ರಕಾರ, ಪಾಂಡವರು ತಮ್ಮ ಪತ್ನಿ ದ್ರೌಪದಿ ಮತ್ತು ತಾಯಿ ಕುಂತಿಯೊಂದಿಗೆ ಮಹಾಭಾರತದ ಅವಧಿಯಲ್ಲಿ ಕಿನ್ನೌರ್ ಜಿಲ್ಲೆಯ ಗುಹೆ (Cave)ಗಳಲ್ಲಿ ವಾಸಿಸುತ್ತಿದ್ದರು. ಅಂದಿನಿಂದ ಇಲ್ಲಿ ಈ ಪದ್ಧತಿ ನಡೆದುಕೊಂಡು ಬಂದಿದೆ ಎನ್ನಲಾಗಿದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?